- Home
- Entertainment
- Sandalwood
- ಡಾರ್ಲಿಂಗ್ ಕೃಷ್ಣರ 'ಲವ್ ಮಾಕ್ಟೇಲ್ 3' ಸ್ಕ್ರಿಪ್ಟ್ ರೆಡಿ: ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭ
ಡಾರ್ಲಿಂಗ್ ಕೃಷ್ಣರ 'ಲವ್ ಮಾಕ್ಟೇಲ್ 3' ಸ್ಕ್ರಿಪ್ಟ್ ರೆಡಿ: ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭ
ಕೃಷ್ಣ ನಿರ್ದೇಶನ, ನಟನೆಯಲ್ಲಿ ತೆರೆಕಂಡ ‘ಲವ್ ಮಾಕ್ಟೇಲ್’ ಸೀರೀಸ್‌ನ ಎರಡು ಚಿತ್ರಗಳೂ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದ್ದವು. ಇದೀಗ ಅವರು ಮೂರನೇ ಭಾಗಕ್ಕೆ ಶ್ರೀಕಾರ ಹಾಕಿದ್ದಾರೆ.

ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್ ಮಾಕ್ಟೇಲ್ 3’ ಸಿನಿಮಾದ ಸ್ಕ್ರಿಪ್ಟ್ ಕೆಲಸ ಸಂಪೂರ್ಣವಾಗಿದೆ. ಶೀಘ್ರ ಚಿತ್ರ ಸೆಟ್ಟೇರಲಿದೆ.
ಕೃಷ್ಣ ನಿರ್ದೇಶನ, ನಟನೆಯಲ್ಲಿ ತೆರೆಕಂಡ ‘ಲವ್ ಮಾಕ್ಟೇಲ್’ ಸೀರೀಸ್‌ನ ಎರಡು ಚಿತ್ರಗಳೂ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದ್ದವು. ಇದೀಗ ಅವರು ಮೂರನೇ ಭಾಗಕ್ಕೆ ಶ್ರೀಕಾರ ಹಾಕಿದ್ದಾರೆ.
ಈ ಸಿನಿಮಾಗಳಿಗೆ ಮಿಲನಾ ನಾಗರಾಜ್ ನಿರ್ಮಾಪಕಿ. ಈ ಹಿಂದಿನ ಎರಡೂ ಭಾಗಗಳಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು. ಇನ್ನೂ ವರ್ಷ ತುಂಬದ ಮಗುವಿನ ತಾಯಿಯಾಗಿರುವ ಕಾರಣ ಅವರು ಈ ಸಿನಿಮಾದಲ್ಲಿ ನಟಿಸುತ್ತಾರ ಎಂಬುದು ಸ್ಪಷ್ಟವಾಗಿಲ್ಲ.
ಸದ್ಯ ಕೃಷ್ಣ ಅವರು ‘ಫಾದರ್’ ಹಾಗೂ ‘ಬ್ರ್ಯಾಟ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ ‘ಲವ್ ಮಾಕ್ಟೇಲ್ 3’ ಸಿನಿಮಾ ಶೂಟಿಂಗ್ ಆರಂಭಿಸಲಿದ್ದಾರೆ.
ಇತ್ತೀಚೆಗೆ ಅಳೆದು ತೂಗಿ ನಾನು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ. 'ಫಾದರ್' ಹಾಗೂ 'ಬ್ರ್ಯಾಟ್' ಕಥೆಗಳು ಬಹಳ ಚೆನ್ನಾಗಿದೆ. ತಲಾ ಒಂದೊಂದು ಹಾಡು ಬಿಟ್ಟರೆ ಎರಡೂ ಸಿನಿಮಾಗಳ ಚಿತ್ರೀಕರಣ ಕಂಪ್ಲೀಟ್ ಆಗಿದೆ ಎಂದರು ಕೃಷ್ಣ.