ತಮಿಳಿನ ಖ್ಯಾತ ನಟ ವಿನಯ್ ರೈ ಮದುವೆ ಸಂಭ್ರಮದಲ್ಲಿದ್ದಾರೆ. ಇದೀಗ ವಿನಯ್ ಮದುವೆ ಸುದ್ದಿ ವೈರಲ್ ಆಗಿದೆ. 42 ವರ್ಷದ ನಟ ವಿನಯ್ 40 ವರ್ಷದ ನಟಿ ವಿಮಲಾ ರಾಮನ್ ಅವರನ್ನು ವರಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.
ತಮಿಳಿನ ಖ್ಯಾತ ನಟ ವಿನಯ್ ರೈ(Vinay Rai) ಮದುವೆ ಸಂಭ್ರಮದಲ್ಲಿದ್ದಾರೆ. ನಾಯಕ ನಟನಾಗಿ ಸಿನಿಮಾರಂಗ ಪ್ರವೇಶ ಮಾಡಿದ ವಿನಯ್ ಸದ್ಯ ಖಳನಟನಾಗಿ ಪ್ರಸಿದ್ಧಿ ಪಡೆದಿದ್ದಾರೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಡಾಕ್ಟರ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ವಿನಯ್ ವಿಲನ್ ಆಗಿ ಅಬ್ಬರಿಸಿದ್ದರು. ಇದೀಗ ವಿನಯ್ ಮದುವೆ ಸುದ್ದಿ ವೈರಲ್ ಆಗಿದೆ. 42 ವರ್ಷದ ನಟ ವಿನಯ್ 40 ವರ್ಷದ ನಟಿ ವಿಮಲಾ ರಾಮನ್(Actress Vimala Raman ) ಅವರನ್ನು ವರಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.
ಕಳೆದ ಕೆಲವು ವರ್ಷಗಳಿಂದ ನಟಿ ವಿಮಲಾ ರಾಮನ್ ಜೊತೆ ಡೇಟಿಂಗ್ ನಲ್ಲಿದ್ದ ವಿನಯ್ ರೈ ಇದೀಗ ಅವರ ಜೊತೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮಾಲ್ಡೀವ್ಸ್ ಪ್ರವಾಸದ ಫೋಟೋಗಳನ್ನು ಶೇರ್ ಮಾಡಿ ಪ್ರೀತಿ ವಿಚಾರ ಬಹಿರಂಗಪಡಿಸಿದ್ದ ಈ ಜೋಡಿ ಇದೀಗ ಮದುವೆ ಆಗಲು ನಿರ್ಧರಿಸಿದೆ. ಕಾಲಿವುಡ್ ನ ಈ ಪ್ರಣಯ ಪಕ್ಷಿಗಳ ಮಾಲ್ಡೀವ್ಸ್ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದೀಗ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದು ಸದ್ಯದಲ್ಲೇ ವಿವಾಹದ ದಿನಾಂಕ ಬಹಿರಂಗ ಪಡಿಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ಹಂಚಿಕೊಂಡಿದ್ದಾರೆ. ಇವರ ಪ್ರೀತಿಗೆ ಇಬ್ಬರು ಕುಟುಂಬದವರು ಒಪ್ಪಿಕೊಂಡಿದ್ದು ಗ್ರೀನ್ ಸಿಗ್ನಲ್ ನೀಡಿದ ಬಳಿಕವೇ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ವಿಮಲಾ ರಾಮನ್ ಯಾರು?
ಅಂದಹಾಗೆ ನಟಿ ವಿಮಲಾ ಆಸ್ಟ್ರೇಲಿಯದಲ್ಲಿ ಜನಿಸಿ, ತಮಿಳು ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದವರು. ತಮಿಳಿನ ಪೊಯ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಈ ಸಿನಿಮಾಗೆ ಲೆಜೆಂಡರಿ ನಿರ್ದೇಶಕ ಕೆ ಬಾಲಚಂದಿರನ್ ಆಕ್ಷನ್ ಕಟ್ ಹೇಳಿದ್ದರು. ಇದು ಬಾಲಚಂದಿರನ್ ಅವರ 100ನೇ ಸಿನಿಮಾವಾಗಿತ್ತು. ಈ ಸಿನಿಮಾ ಬಳಿಕ ವಿಮಲಾ ರಾಮನ್ ತೇಡಿಯ ಸೀತೈನಲ್ಲಿ ನಟಿಸಿದರು. ಈ ಸಿನಿಮಾ ವಿಮಲಾ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಅನೇಕ ಸಿನಿಮಾಗಳಲ್ಲಿ ನಟಿಸಿರುವ ವಿಮಲಾ ಕೊನೆಯದಾಗಿ ಇರುಟ್ಟು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಮಲಯಾಳಂನ ಗ್ರಾಂಡ್ ಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸೋನಿಯಾ ಆಗರ್ವಾಲ್ ಮತ್ತು ಮಾಲಾ ಪಾರ್ವತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಲಿವ್ ಇನ್ ಸಂಬಂಧದಲ್ಲಿದ್ದ 1350 ಜೋಡಿಗೆ ಏಕಕಾಲದಲ್ಲಿ ಮದುವೆ, ಪಾತ್ರೆ, ಬಟ್ಟೆ ಗಿಫ್ಟ್!
ವಿನಯ್ ರೈ ಬಗ್ಗೆ
ಇನ್ನು ವಿನಯ್ ರೈ ಬಗ್ಗೆ ಹೇಳುವುದಾದರೆ ಉನ್ನಲೆ ಉನ್ನಲೆ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಪಡೆದರು. ಚಾಕೊಲೇಟ್ ಬಾಯ್ ಲುಕ್ ನಲ್ಲಿ ಕಾಣಿಸಿಕಂಡಿದ್ದ ವಿನಯ್ ಅಪಾರ ಸಂಖ್ಯೆಯ ಮಹಿಳಾ ಅಭಿಮಾನಿ ಬಳಗ ಸಂಪಾದಿಸಿದ್ದರು. ಬಳಿಕ ಜಯಂ ಕೊಂಡನ್, ಎಂದ್ರೆಂಡ್ರುಮ್ ಪುನ್ನಗೈ ನಂತಹ ಕೆಲವು ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಸಿನಿಮಾರಂಗದಿಂದ ಬ್ರೇಕ್ ಪಡೆದಿದ್ದ ವಿನಯ್ ಬಳಿಕ ಖಳನಟನಾಗಿ ಎಂಟ್ರಿ ಕೊಟ್ಟರು.
BFಗಿಂತ ಮೊದಲು ಮರದ ಜೊತೆ ಮದುವೆ ಆಗ್ತಾರಂತೆ ನಟಿ ನಯನತಾರಾ!
2017ರಲ್ಲಿ ವಿಶಾಲ್ ನಟನೆಯ ತುಪ್ಪರಿವಾಲನ್ ಸಿನಿಮಾದಲ್ಲಿ ವಿನಯ್ ಖಳನಟನಾಗಿ ಮಿಂಚಿದ್ದರು. ಈ ಸಿನಿಮಾ ದೊಡ್ಡ ಮಟ್ಟದ ಬ್ರೇಕ್ ನೀಡಿತು. ಬಳಿಕ ಶಿವಕಾರ್ತಿಕೇಯನ್ ನಟನೆಯ ಡಾಕ್ಟರ್, ಸೂರ್ಯ ಜೊತೆ ನಟಿಸುವ ಅವಕಾಶ ಸಿಕ್ಕಿತು. ಸದ್ಯ ಸೂರ್ಯ ನಿರ್ಮಾಣದ ಓ ಮೈ ಡಾಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಜೊತೆಗೆ ಮದುವೆಗೂ ತಯಾರಿ ನಡೆಯುತ್ತಿರುವ ವಿನಯ್ ವಿವಾಹ ದಿನಾಂಕ ಇನ್ನು ಬಹಿರಂಗ ಪಡಿಸಿಲ್ಲ. ಸದ್ಯದಲ್ಲೇ ಮದುವೆ ದಿನಾಂಕ ಬಹಿರಂಗ ಪಡಿಸುವ ಸಾಧ್ಯತೆ ಇದೆ.
