ಲಿವ್ ಇನ್ ಸಂಬಂಧದಲ್ಲಿದ್ದ 1350 ಜೋಡಿಗೆ ಏಕಕಾಲದಲ್ಲಿ ಮದುವೆ, ಪಾತ್ರೆ, ಬಟ್ಟೆ ಗಿಫ್ಟ್!

ಜಾರ್ಖಂಡ್ ರಾಜ್ಯದ ಕುಂತಿಯಲ್ಲಿ ನಡೆದ ಅಪರೂಪದ ಮದುವೆ

ಲಿವ್ ಇನ್ ಸಂಬಂಧದಲ್ಲಿದ್ದ 1350 ಜೋಡಿಗೆ ಏಕಕಾಲದಲ್ಲಿ ಮದುವೆ

ಬಿರ್ಸಾ ಮುಂಡಾ ಫುಟ್ ಬಾಲ್ ಸ್ಟೇಡಿಯಂ ನಲ್ಲಿ ನಡೆಯಿತು ಕಾರ್ಯಕ್ರಮ

1350 couples living in live-in relationship got married together in jarkhand san

ರಾಂಚಿ (ಮಾ. 6): ಜಾರ್ಖಂಡ್ (Jarkhand) ರಾಜ್ಯದ ಕುಂತಿ (Kunthi) ಭಾನುವಾರ ವಿಶೇಷ ಕಾರಣದಿಂದಾಗಿ ಸುದ್ದಿಯಾಯಿತು. ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದ (Live-in Relationship) ಬರೋಬ್ಬರಿ 1350 ಜೋಡಿಗೆ (Couples) ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ಮದುವೆ ಮಾಡಲಾಗಿದೆ. ಸಾಮಾನ್ಯವಾಗಿ ಒಂದೋ, ಎರಡೋ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದ ಜೋಡಿ ಏಕಕಾಲದಲ್ಲಿ ಮದುವೆಯಾಗುವುದನ್ನು ಕೇಳಿರುತ್ತೇವೆ. ಆದರೆ, ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದ ಸಾವಿರಕ್ಕೂ ಅಧಿಕ ಜೋಡಿಯ ವಿವಾಹ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ನಿಮಿತ್ ಎಜ್ ಜಿಓ (Nimit NGO) ಹಾಗೂ ಜಿಲ್ಲಾಡಳಿತದ (district administration) ವತಿಯಿಂದ ಈ ಕಾರ್ಯಕ್ರಮ ನಡೆಯಿತು.

ಕುಂತಿ ಜಿಲ್ಲೆಯ ಬಿರ್ಸಾ ಮುಂಡಾ ಫುಟ್ ಬಾಲ್ ಸ್ಟೇಡಿಯಂನಲ್ಲಿ (Birsa Munda Football Stadium) ಈ ಸಮಾರಂಭ ನಡೆದಿದ್ದು, ಎಲ್ಲಾ 1350 ಜೋಡಿಗಳು ಸಾಂಪ್ರದಾಯಿಕ ವಸ್ತ್ರದಲ್ಲಿ ಕಾಣಿಸಿಕೊಂಡರು. ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎನ್ಎನ್ ಸಿನ್ಹಾ (NN Sinha) ಕೂಡ ಈ ವೇಳೆ ಹಾಜರಿದ್ದರು. 

ಈ ಸಾಮೂಹಿಕ ವಿವಾಹ ಸಮಾರಂಭದ (mass marriage ceremony ) ಕುರಿತು ಮಾತನಾಡಿದದ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ (Rural Development Department Secretary) ಎನ್.ಎನ್.ಸಿನ್ಹಾ, ಈಗಿನ ಪರಿಸ್ಥಿತಿಯಲ್ಲಿ ಬಹುತೇಕ ಜನರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ಕಾರಣದಿಂದಾಗಿ ಹಲವರಿಗೆ ಮದುವೆಯಾಗಲು ಸಾಧ್ಯವಾಗುತ್ತಿಲ್ಲ. ಅದಲ್ಲದೆ, ಮದುವೆಗೆ ಆಗುವ ಖರ್ಚನ್ನು ಭರಿಸಲು ಸಹ ಈ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿರುವ ಇಂಥ ಪರಿಸ್ಥಿತಿಯಿಂದಾಗಿ ಈ ಎಲ್ಲಾ ಜೋಡಿಗಳು ಮದುವೆಯಾಗದೇ ಜೊತೆಯಲ್ಲಿ ಬಾಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು.

ವಿವಾಹದ ಹೊರತಾಗಿ ನಡೆಯುವ ಸಂಬಂಧಕ್ಕೆ ಸಮಾಜದಲ್ಲಿ(society) ಮನ್ನಣೆ ಸಿಗುತ್ತಿಲ್ಲ, ಇದರಿಂದ ಈ ಜೋಡಿಗಳು ಜೀವನದುದ್ದಕ್ಕೂ ಸಮಸ್ಯೆ ಎದುರಿಸಬೇಕಾಗುತ್ತವೆ. ಅದರಲ್ಲೂ ಗ್ರಾಮದ ಮಹಿಳೆಯರು, ಮಕ್ಕಳು ಹೆಚ್ಚಿನ ನಷ್ಟ ಅನುಭವಿಸುತ್ತಾರೆ. ಸರ್ಕಾರದ ಎಲ್ಲ ಯೋಜನೆಗಳಿಂದಲೂ ಇವರು ವಂಚಿತರಾಗಿದ್ದಾರೆ ಎಂದು ತಿಳಿಸಿದರು. ಈ ವೇಳೆ ಜಿಲ್ಲಾಧಿಕಾರಿ ಶಶಿರಂಜನ್  (Deputy Commissioner Shashi Ranjan) ಮಾತನಾಡಿ, ಈ ನವ ದಂಪತಿಗಳಿಗೆ ಎಲ್ಲಾ ಕಲ್ಯಾಣ ಯೋಜನೆಗಳೊಂದಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಪ್ರಯತ್ನ ನಡೆಯುತ್ತಿದೆ. ಇದರೊಂದಿಗೆ ಅವರ ವಿವಾಹ ನೋಂದಣಿಯನ್ನೂ ಖಾತ್ರಿಪಡಿಸಲಾಗುವುದು. ಮುಂದಿನ ದಿನಗಳಲ್ಲಿ ದಂಪತಿಗಳಿಗೆ ನೋಂದಾಯಿತ ವಿವಾಹ ಪ್ರಮಾಣಪತ್ರವೂ (Registered marriage certificate) ಲಭ್ಯವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿಮಿತ್ ಸಂಸ್ಥೆಯ ಕಾರ್ಯದರ್ಶಿ ನಿಕಿತಾ ಸಿನ್ಹಾ (Nikita Sinha, secretary of Nimit Sanstha) ಮಾತನಾಡಿ, ಸಾಮಾಜಿಕ ಉದ್ದೇಶದಿಂದ ಈ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಜಾರ್ಖಂಡ್‌ನ ದೂರದ ಹಳ್ಳಿಯಾಗಿರುವ ಧುಕುವಿನಲ್ಲಿ (Dhuku) ಮದುವೆಯಾಗಲು ಇಷ್ಟವಿರುವ ಜೋಡಿಗಳು, ಮದುವೆಯ ವೆಚ್ಚವನ್ನು ಭರಿಸಲಾಗದೇ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿ ಬದುಕಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಅದಲ್ಲದೆ, ಸಮಾಜದಿಂದ ದೂರ ಉಳಿಯುವ ಮೂಲಕ ಸಾಕಷ್ಟು ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಂಥ (Mukhyamantri Kanyadan Yojana) ಕಾರ್ಯಕ್ರಮಗಳ ಲಾಭವೂ ಇವರಿಗೆ ಸಿಗುತ್ತಿಲ್ಲ ಎಂದು ಹೇಳಿದರು. ಅಂತಹ ದಂಪತಿಗಳಿಗೆ ಸಾಮಾಜಿಕ ಮತ್ತು ಕಾನೂನು ಮಾನ್ಯತೆ ನೀಡುವ ಸಲುವಾಗಿ ಕಳೆದ ವರ್ಷಗಳಿಂದ ನಿಮಿತ್ (Nimitt) ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗುತ್ತಿದೆ. ಮದುವೆ ಸಮಾರಂಭದಲ್ಲಿ ನವ ಜೋಡಿಗಳಿಗೆ ಬಟ್ಟೆ( Clothes ), ಪಾತ್ರೆ ( utensils ) ಮತ್ತಿತರ ಉಡುಗೊರೆಗಳನ್ನು (Gift) ನೀಡಲಾಯಿತು.

Latest Videos
Follow Us:
Download App:
  • android
  • ios