ಪ್ರಚಾರಕ್ಕಾಗಿ ಅತಿರೇಕದ ವರ್ತನೆಗಳು ಹೆಚ್ಚುತ್ತಿವೆ. ಜೀವಕ್ಕೆ ಅಪಾಯ ತರುವ ರೀಲ್ಸ್‌ಗಳಿಂದ ಸಾವುಗಳು ಸಂಭವಿಸಿವೆ. ನಟಿ ತಾನಿಯಾ ಚಟರ್ಜಿ ಪ್ರಚಾರಕ್ಕಾಗಿ ಪಾಪರಾಜಿಗಳ ಮುಂದೆ ಬಟ್ಟೆ ಬಿಚ್ಚಿ ಟೀಕೆಗೆ ಗುರಿಯಾಗಿದ್ದಾರೆ. ಈ "ಪ್ರಚಾರದ ಸಾಹಸ" ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ರೀಲ್ಸ್​ನಲ್ಲಿ ಲೈಕ್​, ಕಮೆಂಟ್ಸ್​ ಹಾಗೂ ಪ್ರಚಾರ ಪಡೆಯಲು ಜೀವ ಬೇಕಾದ್ರೆ ಬಿಡ್ತಾರೆ ಎನ್ನುವಂತೆ ಅತಿರೇಕದ ವರ್ತನೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಕೆಲವರು ಇದಾಗಲೇ ರೀಲ್ಸ್​ ಹುಚ್ಚಿನಲ್ಲಿ ಜೀವ ಕೂಡ ಕಳೆದುಕೊಂಡಿದ್ದಾರೆ. ಸೆಲ್ಫಿ, ರೀಲ್ಸ್​ ಮಾಡಲು ಹಳಿಗಳ ಮೇಲೆ ನಿಂತು ಟ್ರೇನ್​ ಅಡಿ ಆದವರು ಅದೆಷ್ಟೋ ಮಂದಿ. ಬೆಟ್ಟದ ತುದಿಯಲ್ಲಿ, ನದಿಯ ನಡುವೆ, ಜಲಪಾತದ ಬಳಿ... ಹೀಗೆ ರೀಲ್ಸ್​ ಹುಚ್ಚಿನಲ್ಲಿ ಪ್ರಾಣ ಕಳೆದುಕೊಂಡವರಿಗೂ ಲೆಕ್ಕವೇ ಇಲ್ಲ. ಅವರು ಅಂದುಕೊಂಡಂತೆ ಆ ರೀಲ್ಸ್​ ಹೆಚ್ಚು ಓಡುತ್ತದೆ ನಿಜ. ಆದರೆ, ಆ ಓಡುವ ರೀಲ್ಸ್​ ನೋಡಲು ರೀಲ್ಸ್​ ಮಾಡಿದವರು ಜೀವಂತ ಇರುವುದಿಲ್ಲ ಅಷ್ಟೇ ಎನ್ನುವ ಸ್ಥಿತಿ ಇಂದಿನದ್ದು. ಇವೆಲ್ಲವೂ ಅತಿರೇಕದ ಪರಮಾವಧಿಯಾಗಿದೆ. ಅದೇ ಇನ್ನೊಂದೆಡೆ, ಪ್ರಚಾರಕ್ಕಾಗಿ ಮಾನ-ಮರ್ಯಾದೆ ಬಿಡುವವರೂ ಇದ್ದಾರೆ ಎನ್ನುವುದು ಕೂಡ ಗುಟ್ಟಾಗೇನೂ ಉಳಿದಿಲ್ಲ.

ಇದೀಗ ಅದೇ ಸಾಲಿಗೆ ಸೇರಿದ್ದಾಳೆ ನಟಿ ತಾನಿಯಾ ಚಟರ್ಜಿ. ಏನು ಮಾಡಿದರೂ ಫೇಮಸ್​ ಆಗ್ತಿಲ್ಲಾ ಎಂದು ನೊಂದುಕೊಂಡಿರೋ ನಟಿ, ಈಗ ಪಾಪರಾಜಿಗಳ ಎದುರೇ ಬಟ್ಟೆ ಬಿಚ್ಚಿ ನಿಂತುಕೊಂಡಿದ್ದಾಳೆ! ಪಾಪರಾಜಿಗಳಿಗೆ ಹಬ್ಬವೋ ಹಬ್ಬ. ಸಿಕ್ಕಿದ್ದೇ ಚಾನ್ಸ್​ ಎಂದು ಫೋಟೋ, ವಿಡಿಯೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ನಟಿಯ ಆಸೆಯೂ ಈಡೇರಿದೆ, ಪಾಪರಾಜಿಗಳಿಗೂ ಲೈಕ್ಸ್​, ಕಮೆಂಟ್ಸ್​ ಸುರಿಮಳೆಯಾಗಿದೆ.

10 ವರ್ಷದ ಹೋರಾಟದ ಬಳಿಕ ವಿವಾಹ: ಖುಷಿಯಿಂದ ಮೊದಲ ರಾತ್ರಿ ವಿಡಿಯೋ ಹರಿಬಿಟ್ಟ ಫುಡ್​ ವ್ಲಾಗರ್​!

ಅಂದಹಾಗೆ ತಾನಿಯಾ, ಭಾರತೀಯ ನಟಿ ಮತ್ತು ರೂಪದರ್ಶಿ. ಮುಖ್ಯವಾಗಿ ಹಿಂದಿ ವೆಬ್ ಸರಣಿಗಳಲ್ಲಿ ತಮ್ಮ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಗಮನಾರ್ಹ ಯೋಜನೆಗಳಲ್ಲಿ ತಮ್ಮ ಅಭಿನಯದ ಮೂಲಕ ಅವರು ಹೆಸರು ಮಾಡಿದ್ದಾರೆ. ರ್ಯಾಬಿಟ್ ಮೂವೀಸ್ ನಿರ್ಮಿಸಿದ ಜನಪ್ರಿಯ ಹಿಂದಿ ವೆಬ್ ಸರಣಿ "ರಾಜನೀತಿ ಅಧ್ಯಾಯ 4" ನಲ್ಲಿ ತಾನಿಯಾ ಚಟರ್ಜಿ ಪ್ರಮುಖ ಪಾತ್ರ ವಹಿಸಿದ್ದರು. ಮೂರೂ ಬಿಟ್ಟವರು ದೇಶಕ್ಕೇ ದೊಡ್ಡವರು ಎನ್ನುವ ರೀತಿಯಲ್ಲಿ ತಾನಿಯಾ ಈಗ ಪಾಪ್‌ಗಳ ಮುಂದೆ ಬಟ್ಟೆ ಬದಲಾಯಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೂ ಗುರಿಯಾಗುತ್ತಿದ್ದಾರೆ.

ನಟಿ ವಿಹಾರದಲ್ಲಿದ್ದಾಗ ಪಾಪ್‌ಗಳ ಹೊರಗೆ ನಿಂತಿರುವುದನ್ನು ನೋಡಿ ಕ್ಲಿಕ್‌ಗಳಿಗೆ ಪೋಸ್ ನೀಡಲು ನಿರ್ಧರಿಸಿದರು. ಆದರೆ ಹಾಗೆ ಮಾಡುವ ಮೊದಲು, ಅವರು ತಮ್ಮ ಕಟ್-ಔಟ್ ಉಡುಪನ್ನು ಪ್ರದರ್ಶಿಸಲು ತಮ್ಮ ಜಾಕೆಟ್ ಅನ್ನು ತೆಗೆದರು. ಅವರ ಕೃತ್ಯಕ್ಕಾಗಿ ಸಕತ್​ ಟ್ರೋಲ್ ಮಾಡಲಾಗುತ್ತಿದೆ. ಟ್ರೋಲ್​ ಮಾಡುತ್ತಲೇ ಇದನ್ನು ಹಲವರು ಎಂಜಾಯ್​ ಕೂಡ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿ ಬಂದಿರುವ ಕಮೆಂಟ್ಸ್​ ಸಾಕ್ಷಿಯಅಗಿದೆ. ಇದನ್ನು 'ಪ್ರಚಾರದ ಸಾಹಸ' ಎಂದು ಕರೆಯುತ್ತಲೇ ಪ್ರಚಾರ ಮಾಡುತ್ತಿದ್ದಾರೆ ನೆಟ್ಟಿಗರು. ತಾನಿಯಾ ಚಟರ್ಜಿ ಮೊದಲು ಕ್ಯಾಮೆರಾದ ವಿರುದ್ಧ ಬೆನ್ನು ತಿರುಗಿಸಿ, ತನ್ನ ಜಾಕೆಟ್ ಅನ್ನು ತೆಗೆದರು. ಕೊನೆಗೆ ಒಳಗಿರುವ ಬಟ್ಟೆಗಳನ್ನೂ ತೆಗೆದು ಪೋಸ್​ ಕೊಟ್ಟಿದ್ದಾರೆ ನೋಡಿ! 

ದುಡಿವ ಹೆಣ್ಣುಮಕ್ಕಳಿಗೆ ಅಪ್ಪ-ಅಮ್ಮನೇ ವಿಲನ್​? ಛಿದ್ರವಾಗ್ತಿದೆ ಮದುವೆಯ ಕನಸು...

View post on Instagram