ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಾಯಕತ್ವದ 'ಧುರಂಧರ್ 2' ಚಿತ್ರದ ಬಗ್ಗೆ ವಿವಾದ ಸೃಷ್ಟಿಯಾಗಿದೆ. 'ಶಿವಸೇನೆ (ಶಿಂಧೆ ಬಣ) ಮತ್ತು ಮಹಾರಾಷ್ಟ್ರ ಸಿಖ್ ಸಂಘಟನೆಯ ಅಧ್ಯಕ್ಷ ಗುರ್ಜ್ಯೋತ್ ಸಿಂಗ್ ಕೀರ್, ಆರ್ ಮಾಧವನ್ ನಿರ್ವಹಿಸಿದ ಪಾತ್ರವೊಂದು ಸಿಗರೇಟ್ ಸೇದುತ್ತಾ ಗುರು ಗೋಬಿಂದ್ ಸಿಂಗ್ ಬರೆದ ದಸಮ್ ಗ್ರಂಥದ ಪವಿತ್ರ ಶ್ಲೋಕವನ್ನು ಪಠಿಸುತ್ತಿದೆ' ಎಂದು ಆರೋಪಿಸಿದ್ದಾರೆ.

ಏನಿದು ಧುರಂಧರ್ ವಿವಾದ?

ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟಿಸಿದ 'ಧುರಂಧರ್ 2' (Dhurandhar 2) ಚಿತ್ರದಲ್ಲಿ ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ದೃಶ್ಯವಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಈ ಬಗ್ಗೆ ವಿವಾದ ಸೃಷ್ಟಿಯಾಗಿದೆ. 'ಶಿವಸೇನೆ (ಶಿಂಧೆ ಬಣ) ಮತ್ತು ಮಹಾರಾಷ್ಟ್ರ ಸಿಖ್ ಸಂಘಟನೆಯ ಅಧ್ಯಕ್ಷ ಗುರ್ಜ್ಯೋತ್ ಸಿಂಗ್ ಕೀರ್, ಆರ್ ಮಾಧವನ್ ನಿರ್ವಹಿಸಿದ ಪಾತ್ರವೊಂದು ಸಿಗರೇಟ್ ಸೇದುತ್ತಾ ಗುರು ಗೋವಿಂದ್ ಸಿಂಗ್ ಬರೆದ ದಸಮ್ ಗ್ರಂಥದ ಪವಿತ್ರ ಶ್ಲೋಕವನ್ನು ಪಠಿಸುತ್ತಿದೆ' ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಚಿತ್ರದ ನಟ ಆರ್ ಮಾಧವನ್ (R Madhavan) ಈಗ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮತ್ತು, ಇದಕ್ಕೆ ಸಂಬಂಧಿಸಿ 'ನಾನು ಆ ಸಾಲುಗಳನ್ನು ಹೇಳುವಾಗ ಧೂಮಪಾನ ಮಾಡುತ್ತಿರಲಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್

ಸಿಕ್ಕ ಮಾಹಿತಿ ಪ್ರಕಾರ, ಘಟನಾ ಸ್ಥಳಕ್ಕೆ ಸಂಬಂಧಿಸಿದಂತೆ ಮುಲುಂಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಗುರ್ಜ್ಯೋತ್ ಸಿಂಗ್ ಕೀರ್ ಈ ಬಗ್ಗೆ ದೂರು ದಾಖಲಿಸಿದ್ದು, ಇದರಲ್ಲಿ ಆರ್. ಮಾಧವನ್, ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಗುರ್ಜ್ಯೋತ್ ವೀಡಿಯೊದೊಂದಿಗೆ, ವಿವರವಾದ ಹೇಳಿಕೆಯನ್ನು ಸಹ ಪೋಸ್ಟ್ ಮಾಡಿದ್ದಾರೆ. "ಧುರಂಧರ್ 2' ನಿರ್ಮಾಪಕರು ಗುರ್ಬಾನಿಗೆ ತೋರಿಸಿದ ಅಗೌರವವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಗುರ್ಬಾನಿ ಕೇವಲ ಸಂಭಾಷಣೆಯಲ್ಲ, ಇದು ದೈವಿಕ, ಪವಿತ್ರ ಮತ್ತು ಸಿಖ್ ಸಮುದಾಯದಲ್ಲಿ ಅಪಾರ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಇದನ್ನು ಅರ್ಥ ಮಾಡಿಕೊಳ್ಳಲಾಗಿಲ್ಲ.

ಚಿತ್ರದಲ್ಲಿ ಇಂತಹ ಬೇಜವಾಬ್ದಾರಿ ಚಿತ್ರಣವು ಅಜ್ಞಾನ ಮತ್ತು ನಮ್ಮ ನಂಬಿಕೆಯ ಬಗ್ಗೆ ಸೂಕ್ಷ್ಮತೆಯ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ಇಡೀ ಸಿಖ್ ಸಮುದಾಯವು ಒಗ್ಗಟ್ಟಿನಿಂದ ನಿಂತು ಈ ಅವಮಾನವನ್ನು ಶಾಂತಿಯುತವಾಗಿ ಪ್ರತಿಭಟಿಸಲು ನಾನು ಒತ್ತಾಯಿಸುತ್ತೇನೆ. ಜವಾಬ್ದಾರಿಯುತರಾದ ಆದಿತ್ಯ ಧರ್, ಆರ್. ಮಾಧವನ್ ಮತ್ತು ರಣವೀರ್ ಸಿಂಗ್ - ಅವರು ಎಲ್ಲೇ ಕಾಣಿಸಿಕೊಂಡರೂ, ಅವರು SGPC ಮತ್ತು ಸಿಖ್ ಸಮುದಾಯಕ್ಕೆ ಪ್ರಾಮಾಣಿಕ ಕ್ಷಮೆಯಾಚಿಸಬೇಕು."ಎಂದು ಹೇಳಿಕೊಂಡಿದ್ದಾರೆ.

ನಟ ಮಾಧವನ್ ಕೊಟ್ಟ ಸ್ಪಷ್ಟನೆ:

ಈ ವಿವಾದದ ಬಳಿಕ ನಟ ಆರ್ ಮಾಧವನ್ ವೀಡಿಯೊವನ್ನು ಹಂಚಿಕೊಂಡು ತಾವು ಆ ಸಾಲುಗಳನ್ನು ಹೇಳುವಾಗ ಅವರು ಧೂಮಪಾನ ಮಾಡುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ಚಿತ್ರದ ಒಂದು ದೃಶ್ಯದಲ್ಲಿ ಗುರು ಗೋಬಿಂದ್ ಸಿಂಗ್ ಅವರ ದಾಸಮ್ ಗ್ರಂಥದ ಸಾಲುಗಳನ್ನು ಹೇಳುವಾಗ ನಾನು ಸಿಗರೇಟ್ ಸೇದುತ್ತಿದ್ದೆ, ಮತ್ತು ಇದು ಅವರಿಗೆ ನೋವುಂಟು ಮಾಡಿದೆ' ಎಂದು ಹೇಳಲಾಗಿದೆ. ಆದರೆ ಇದು ನಿಜವಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದರಲ್ಲಿ ತಪ್ಪು ತಿಳುವಳಿಕೆ ಇದೆ. ಏಕೆಂದರೆ ನಾನು ಸಾಲುಗಳನ್ನು ಹೇಳುವ ಮೊದಲು, ಆದಿತ್ಯ ಧರ್ ಸಾಲುಗಳನ್ನು ಹೇಳಿಸುವ ಮೊದಲು, 'ಸಿಗರೇಟ್ ನಂದಿಸಿ, ಆಗ ನಿಮ್ಮ ಬಾಯಿಂದ ಹೊಗೆ ಬರುವುದಿಲ್ಲ, ಮತ್ತು ದೃಶ್ಯದ ಸಮಯದಲ್ಲಿ ಪರದೆಯ ಮೇಲೆ ಹೊಗೆ ಬರುವುದಿಲ್ಲ ಎಂದು ಹೇಳಿದ್ದರು. ಏಕೆಂದರೆ ಅದು ಅವರಿಗೆ ತುಂಬಾ ಪವಿತ್ರ . ಹಾಗಾಗಿ, ನಾನು ಸಿಗರೇಟ್ ನಂದಿಸಿದ್ದೇನೆ."

ನಿರ್ದೇಶಕ ಆದಿತ್ಯ ಧರ್ ಅವರು ಯಾರನ್ನೂ ನೋಯಿಸಲು ಬಯಸುವುದಿಲ್ಲ. ಅವರು ಸಿಖ್ ಸಮುದಾಯದೊಂದಿಗಿದ್ದಾರೆ ಮತ್ತು ಅವರನ್ನು ತುಂಬಾ ಗೌರವಿಸುತ್ತಾರೆ' ತಮ್ಮ ಚಲನಚಿತ್ರಗಳ ಬಿಡುಗಡೆಗೆ ಮೊದಲು, ಅವರು ಯಾವಾಗಲೂ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುತ್ತಾರೆ' ಎಂದು ನಟ ಹೇಳಿದ್ದಾರೆ.

ಆದರೂ ಕೂಡ, ನಾವು ಯಾರನ್ನಾದರೂ ತಿಳಿದೋ ಅಥವಾ ತಿಳಿಯದೆಯೋ ನೋಯಿಸಿದ್ದರೆ, ದಯವಿಟ್ಟು ನಮ್ಮನ್ನು ಕ್ಷಮಿಸಿ" ಎಂದು ಹೇಳಿಕೊಂಡಿದ್ದಾರೆ ನಟ ಆರ್ ಮಾಧವನ್. ಮುಂದೇನು ತಿರುವು ಪಡೆಯಲಿದೆ ಎಂಬ ಕುತೂಹಲ ಸಹಜವಾಗಿ ಹಲವರಲ್ಲಿದೆ. 

ವಿಡಿಯೋ ನೊಡಿ

View post on Instagram