ಮದುವೆಯ ಪ್ಲಾನರ್ ರಶ್ಮಿಕಾ ಮತ್ತು ವಿಜಯ್ ಅವರನ್ನು 'ಸೂಪರ್ ಕ್ರಿಯೇಟಿವ್ ಕಪಲ್' ಎಂದು ಬಣ್ಣಿಸಿದ್ದಾರೆ. ಮದುವೆಯ ಅಲಂಕಾರದಿಂದ ಹಿಡಿದು ಪ್ರತಿ ಸಣ್ಣ ವಿಧಿವಿಧಾನಗಳವರೆಗೂ ಈ ಜೋಡಿಗೆ ಸ್ಪಷ್ಟವಾದ ವಿಷನ್ ಇತ್ತು. ತಮಗೆ ಏನು ಬೇಕು ಎಂಬುದು ಅವರಿಗೆ ಮೊದಲೇ ತಿಳಿದಿತ್ತು, ನಮ್ಮ ತಂಡ ಕೇವಲ ಅವರ ಕನಸನ್ನು ನನಸು ಮಾಡಿತು ಎಂದು ಅವರು ಹೇಳಿದ್ದಾರೆ.

ವಿರೋಶ್ ಬಗ್ಗೆ ವೆಡ್ಡಿಂಗ್‌ ಪ್ಲಾನರ್ ಅಂದಿದ್ದೇನು?

ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ಕ್ಯೂಟ್ ಕಪಲ್ ಎಂದೇ ಖ್ಯಾತರಾಗಿರುವ 'ನ್ಯಾಷನಲ್ ಕ್ರಷ್' ರಶ್ಮಿಕಾ ಮಂದಣ್ಣ (Rashmika Mandanna) ಮತ್ತು 'ರೌಡಿ ಸ್ಟಾರ್' ವಿಜಯ್ ದೇವರಕೊಂಡ (Vijay Deverakonda) ಅವರ ಮದುವೆಯ ಸಂಭ್ರಮ ಇನ್ನೂ ಅಭಿಮಾನಿಗಳ ಕಣ್ಣಮುಂದೆ ಹಸಿರಾಗಿದೆ. ಕಳೆದ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಅದ್ಧೂರಿಯಾಗಿ ಹಾಗೂ ಅಷ್ಟೇ ಆಪ್ತವಾಗಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಇದೀಗ ಈ ಸ್ಟಾರ್ ದಂಪತಿಯ ಮದುವೆಯ ಸುಂದರ ಕ್ಷಣಗಳ ಬಗ್ಗೆ ವೆಡ್ಡಿಂಗ್ ಪ್ಲಾನರ್ ಕೆಲವು ಅಚ್ಚರಿಯ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಮದುವೆಯ ಪ್ಲಾನರ್ ಹಂಚಿಕೊಂಡ ಅಪರೂಪದ ಕ್ಷಣಗಳು:

ರಶ್ಮಿಕಾ ಮತ್ತು ವಿಜಯ್ ಮದುವೆಯ ಜವಾಬ್ದಾರಿಯನ್ನು ಹೊತ್ತಿದ್ದ ವೆಡ್ಡಿಂಗ್ ಪ್ಲಾನರ್, ಮದುವೆಯ ನಂತರದ ಕೆಲವು ದಿನಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಇದು ಕೇವಲ ಇಬ್ಬರು ಸೆಲೆಬ್ರಿಟಿಗಳ ಮದುವೆಯಾಗಿರಲಿಲ್ಲ, ಬದಲಿಗೆ ನಮ್ಮ ತಂಡಕ್ಕೆ ಇದೊಂದು ಅತ್ಯಂತ ಆಪ್ತವಾದ ಮತ್ತು ಭಾವನಾತ್ಮಕವಾದ ಅನುಭವವಾಗಿತ್ತು" ಎಂದು ಅವರು ಬರೆದುಕೊಂಡಿದ್ದಾರೆ. ಈ ಜೋಡಿ ಪರಸ್ಪರ ಗಾಢವಾಗಿ ಪ್ರೀತಿಸುತ್ತಿರುವುದು ಮದುವೆಯ ಪ್ರತಿ ಕ್ಷಣದಲ್ಲೂ ಎದ್ದು ಕಾಣುತ್ತಿತ್ತು ಎಂದು ಅವರು ಸ್ಮರಿಸಿದ್ದಾರೆ.

ಸೂಪರ್ ಕ್ರಿಯೇಟಿವ್ ಕಪಲ್!

ಮದುವೆಯ ಪ್ಲಾನರ್ ರಶ್ಮಿಕಾ ಮತ್ತು ವಿಜಯ್ ಅವರನ್ನು 'ಸೂಪರ್ ಕ್ರಿಯೇಟಿವ್ ಕಪಲ್' ಎಂದು ಬಣ್ಣಿಸಿದ್ದಾರೆ. ಮದುವೆಯ ಅಲಂಕಾರದಿಂದ ಹಿಡಿದು ಪ್ರತಿ ಸಣ್ಣ ವಿಧಿವಿಧಾನಗಳವರೆಗೂ ಈ ಜೋಡಿಗೆ ಸ್ಪಷ್ಟವಾದ ವಿಷನ್ ಇತ್ತು. ತಮಗೆ ಏನು ಬೇಕು ಎಂಬುದು ಅವರಿಗೆ ಮೊದಲೇ ತಿಳಿದಿತ್ತು, ನಮ್ಮ ತಂಡ ಕೇವಲ ಅವರ ಕನಸನ್ನು ನನಸು ಮಾಡಿತು ಎಂದು ಅವರು ಹೇಳಿದ್ದಾರೆ. ಮದುವೆಯ ಸಂಭ್ರಮದಲ್ಲಿ ರಶ್ಮಿಕಾ ಮತ್ತು ವಿಜಯ್ ಅವರು ವೆಡ್ಡಿಂಗ್ ಪ್ಲಾನರ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡಿರುವ ಫೋಟೋಗಳು ಈಗ ವೈರಲ್ ಆಗುತ್ತಿವೆ.

ವಿಜಯ್ ತಾಯಿ ಮತ್ತು ರಶ್ಮಿಕಾ ಪೋಷಕರ ಪಾತ್ರ:

ಈ ಮದುವೆಯ ಯಶಸ್ಸಿನ ಹಿಂದೆ ಎರಡೂ ಕುಟುಂಬಗಳ ದೊಡ್ಡ ಸಹಕಾರವಿತ್ತು. ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ಅವರು ಮದುವೆಯ ಪ್ರತಿ ಹಂತದಲ್ಲೂ ಭಾಗಿಯಾಗಿದ್ದರು. ತಮ್ಮ ಮಗನ ಮದುವೆ ಹೀಗೆಯೇ ನಡೆಯಬೇಕು ಎಂಬ ಸ್ಪಷ್ಟವಾದ ಕನಸನ್ನು ಅವರು ಹೊಂದಿದ್ದರು. ಮದುವೆ ಮುಗಿದ ನಂತರ ಅವರು ನೀಡಿದ ಸಕಾರಾತ್ಮಕ ಪ್ರತಿಕ್ರಿಯೆ ನನ್ನ ತಂಡಕ್ಕೆ ದೊರೆತ ದೊಡ್ಡ ಪ್ರಶಸ್ತಿ ಎಂದು ಪ್ಲಾನರ್ ಖುಷಿ ಹಂಚಿಕೊಂಡಿದ್ದಾರೆ. ಇನ್ನು ರಶ್ಮಿಕಾ ಪೋಷಕರು ತೋರಿದ ಆತಿಥ್ಯವನ್ನು ಅವರು ಮರೆತಿಲ್ಲ.

ಕೊಡಗಿನ ಸಂಪ್ರದಾಯದ ಬಗ್ಗೆ ವಿಶೇಷ ಕಾಳಜಿ:

ಮದುವೆಗೂ ಮುನ್ನ ವೆಡ್ಡಿಂಗ್ ಪ್ಲಾನರ್ ಕೊಡಗಿಗೆ ಭೇಟಿ ನೀಡಿದ್ದರು. ರಶ್ಮಿಕಾ ಅವರ ಸಂಪ್ರದಾಯ ಮತ್ತು ವಿಧಿವಿಧಾನಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಭೇಟಿ ನೆರವಾಗಿತ್ತು. ಕೊಡಗಿನ ಮನೆಯಲ್ಲಿ ರಶ್ಮಿಕಾ ಪೋಷಕರು ನಮ್ಮನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಕಂಡರು. ಅಲ್ಲಿನ ಆತಿಥ್ಯವು ಕೇವಲ ವೃತ್ತಿಪರ ಸಂಬಂಧವಾಗಿರದೆ, ಅತ್ಯಂತ ವೈಯಕ್ತಿಕವಾಗಿತ್ತು ಎಂದು ಅವರು ಭಾವುಕರಾಗಿ ಬರೆದಿದ್ದಾರೆ. ಅಲ್ಲದೆ ವಿಜಯ್ ಸಹೋದರ ಆನಂದ್ ದೇವರಕೊಂಡ ಮತ್ತು ರಶ್ಮಿಕಾ ಸಹೋದರಿ ಶಿಮನ್ ಮಂದಣ್ಣ ಕೂಡ ಮದುವೆಯಲ್ಲಿ ತುಂಬಾ ಕ್ರಿಯಾಶೀಲರಾಗಿದ್ದರು.

ಈ ಸುಂದರ ಜೋಡಿಯನ್ನು ಪ್ಲಾನರ್ ಪ್ರೀತಿಯಿಂದ ‘ವಿರೋಷ್’ (Virosh) ಎಂದು ಕರೆದಿದ್ದಾರೆ. ವೃತ್ತಿಜೀವನದ ವಿಚಾರಕ್ಕೆ ಬಂದರೆ, ರಶ್ಮಿಕಾ ಮಂದಣ್ಣ ಸದ್ಯ ‘ಮೈಸ’ (Mysaa) ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ, ವಿಜಯ್ ದೇವರಕೊಂಡ ‘ರೌಡಿ ಜನಾರ್ದನ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವೆಂದರೆ, ಇವರಿಬ್ಬರೂ ಮುಂದೆ ‘ರಣಬಾಲಿ’ ಎಂಬ ಪಿರಿಯಡ್ ಡ್ರಾಮಾದಲ್ಲಿ ಒಟ್ಟಾಗಿ ತೆರೆ ಹಂಚಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಈ ನವಜೋಡಿಯ ಸಂಸಾರ ಸುಖವಾಗಿರಲಿ ಎಂಬುದು ಅಭಿಮಾನಿಗಳ ಹಾರೈಕೆ.

View post on Instagram