ನನ್ನ ಮಕ್ಕಳಿಗಿಂತ ನೀವು ತುಂಬಾ ಇಷ್ಟ: ಪ್ರಧಾನಿ ಮೋದಿಗೆ ನಟ ಅನುಪಮ್ ಖೇರ್ ತಾಯಿಯ ಪ್ರೀತಿಯ ವಿಶ್

ನಟ ಅನುಪಮ್ ಖೇರ್ ಅವರ ತಾಯಿ ಕೂಡ ಪ್ರಧಾನಿ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.  ಇದರಲ್ಲಿ ಅನುಪಮ್ ಖೇರ್ ತಾಯಿ ತನ್ನ ಇಬ್ಬರು ಮಕ್ಕಳಿಗಿಂತ ಮೋದಿ ಅವರನ್ನು ತುಂಬಾ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.  

Anupam Kher mother says she likes PM Modi more than her sons sgk

ಪ್ರಧಾನಿ ನರೇಂದ್ರ ಮೋದಿ ನಿನ್ನೆ (ಸೆಪ್ಟಂಬರ್ 17) 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮೋದಿ ಹುಟ್ಟುಹಬ್ಬಕ್ಕೆ ಅನೇಕ ಗಣ್ಯರು ವಿಶ್ ಮಾಡಿ ಶುಭಹಾರೈಸಿದ್ದಾರೆ. ದೇಶ ವಿದೇಶಗಳಿಂದ ಶುಭಾಶಯಗಳ ಸುರಿಮಳೆ ಬಂದಿದೆ. ರಾಜಕೀಯ, ಸಿನಿಮಾರಂಗ, ಕ್ರೀಡೆ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಬಾಲಿವುಡ್ ಸ್ಟಾರ್ ಗಳಾದ ಕಿಂಗ್ ಖಾನ್ ಶಾರುಖ್ ಖಾನ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಪ್ರಧಾನಿ ಮೋದಿಗೆ ವಿಶ್ ಮಾಡಿದ್ದಾರೆ. ನಟ ಅನುಪಮ್ ಖೇರ್ ಅವರ ತಾಯಿ ಕೂಡ ಪ್ರಧಾನಿ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ. ಮೋದಿಗೆ ವಿಶ್ ಮಾಡಿರುವ ವಿಡಿಯೋವನ್ನು ಅನುಪಮ್ ಖೇರ್ ಶೇರ್ ಮಾಡಿದ್ದಾರೆ. ಇದರಲ್ಲಿ ಅನುಪಮ್ ಖೇರ್ ತಾಯಿ ತನ್ನ ಇಬ್ಬರು ಮಕ್ಕಳಿಗಿಂತ ಮೋದಿ ಅವರನ್ನು ತುಂಬಾ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.  

ವಿಡಿಯೋದಲ್ಲಿ ಅನುಪಮ್ ಖೇರ್ ತಾಯಿ ದುಲಾರಿ ಖೇರ್ ಅವರಿಗೆ ಪುತ್ರ ರಾಜು ಅವರು ಕೇಳುತ್ತಾರೆ. ಮೋದಿ ಅವರ ಹುಟ್ಟುಹಬ್ಬಕ್ಕೆ ಏನು ಸಂದೇಶ ಕಳುಹಿಸುತ್ತೀರಿ ಅಂತ. ಇದಕ್ಕೆ ಉತ್ತರಿಸಿದ ದುಲಾರಿ ಖೇರ್, ನಾನು ಸೇರಿದಂತೆ ಸಾವಿರಾರು ತಾಯಂದಿರ ಆಶೀರ್ವಾದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿದೆ' ಎಂದು ಹೇಳಿದರು. ಯಾಕಿಷ್ಟ
 ಅಂತ ಕೇಳಿದ್ದಕ್ಕೆ ಯಾಕೆ ಅಂತ ಗೊತ್ತಿಲ್ಲ. ಆದರೆ ನಿಮಗಿಂತ ಅವರ ಉತ್ತಮ, ತುಂಬಾ ಒಳ್ಳೆಯವರು' ಎಂದು ಹೇಳಿದರು. ನಾನು ಮುಂದಿನ ದಿನಗಳಲ್ಲಿ ಅವರನ್ನು ಭೇಟಿಯಾಗುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. 

ರಜೆ ಹಾಕಿ ಜನ್ಮದಿನ ಆನಂದಿಸಿ; ಪ್ರಧಾನಿ ಮೋದಿಗೆ ಶಾರುಖ್ ಖಾನ್ ಸಲಹೆ

ಅನುಪಮ್ ಖೇರ್ ಅವರ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ನಟ ಕಂಗನಾ ರಣಾವತ್, ಯವಾಗಲೂ ನನ್ನ ಮುಖದ ಮೇಲೆ ನಗು ಮೂಡಿಸುತ್ತಾರೆ ಎಂದು ಹೇಳಿದ್ದಾರೆ. 'ಅವರು ಯಾವಾಗಲೂ ನನ್ನ ಮುಖದ ಮೇಲೆ ನಗುವನ್ನು ತರಿಸುತ್ತಾರೆ. ದೇವರು ಅವರಿಗೆ ದೀರ್ಘಾಯುಷ್ಯ ನೀಡಲಿ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕಂಗನಾ ಮಾತಿಗೆ ಅನುಪಮ್ ಖೇರ್ ಧನ್ಯವಾದ ತಿಳಿಸಿದ್ದಾರೆ. 

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ವಿಶ್ ಮಾಡಿ, 'ನಮ್ಮ ದೇಶದ ಕಲ್ಯಾಣಕ್ಕಾಗಿ ನಿಮ್ಮ ಬದ್ಧತೆಗೆ ಇಡೀ ದೇಶದ ಜನತೆ ನಿಮ್ಮನ್ನು ಪ್ರಶಂಸಿಸುತ್ತಿದೆ. ನಿಮ್ಮ ಎಲ್ಲಾ ಗುರಿಗಳನ್ನು ಸಾಧಿಸಲು ಹೆಚ್ಚು ಶಕ್ತಿ ಮತ್ತು ಆರೋಗ್ಯ ಸಿಗಲಿ. ಇವತ್ತು ಒಂದು ದಿನ ರಜೆ ಹಾಕಿ  ಜನ್ಮದಿನವನ್ನು ಆನಂದಿಸಿ. ಹುಟ್ಟುಹಬ್ಬದ ಶುಭಾಶಯಗಳು ಪ್ರಧಾನಿ ನರೇಂದ್ರ ಮೋದಿ' ಎಂದು ಹೇಳಿದ್ದರು.

 
 
 
 
 
 
 
 
 
 
 
 
 
 
 

A post shared by Anupam Kher (@anupampkher)

ಸೌತ್‌ನವರು ಕಥೆ ಹೇಳಿದ್ರೆ ಹಿಂದಿಯವರು ಹೀರೋಗಳನ್ನು ಸೇಲ್ ಮಾಡ್ತಿದ್ದಾರೆ; ನಟ ಅನುಪಮ್ ಖೇರ್

ನಟ ಅಕ್ಷಯ್ ಕುಮಾರ್ ವಿಶ್ ಮಾಡಿ ನೀವು ನನಗೆ ಅನೇಕ ವಿಚಾರಗಳಿಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ನಿಮ್ಮ ದೂರದೃಷ್ಟಿ, ನಿಮ್ಮ ಸಾಮರ್ಥ್ಯ ನನಗೆ ಸ್ಫೂರ್ತಿ. ಹುಟ್ಟುಹಬ್ಬದ ಶುಭಾಶಯಗಳು ನರೇಂದ್ರ ಮೋದಿ. ಆರೋಗ್ಯ, ಸಂತೋಷ ಸಿಗಲಿ ಎಂದು ಬಯಸುತ್ತೇನೆ' ಎಂದು ಹೇಳಿದರು. ಇನ್ನು ಅನೇಕ ಬಾಲಿವುಡ್ ಸ್ಟಾರ್ಸ್ ವಿಶ್ ಮಾಡಿದ್ದಾರೆ. ಅಜಯ್ ದೇವಗನ್, ಕರಣ್ ಜೋಹರ್, ವಿವೇಕ್ ಹೋಗ್ನಿಹೋತ್ರಿ ಸೇರಿದಂತೆ ಅನೇಕರು ಶುಭಾಶಯ ತಿಳಿಸಿದ್ದಾರೆ.   

Latest Videos
Follow Us:
Download App:
  • android
  • ios