ಎಲ್ಲರೆದರೂ ಐಶ್ವರ್ಯಳನ್ನು ಒಂಟಿಯಾಗಿ ಬಿಟ್ಟು, ನಿಮ್ರಿತ್ ಪಕ್ಕ ಕುಳಿತ ಅಭಿಷೇಕ್! ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್
ಎಲ್ಲರೆದರೂ ಐಶ್ವರ್ಯಳನ್ನು ಒಂಟಿಯಾಗಿ ಬಿಟ್ಟು, ನಿಮ್ರಿತ್ ಪಕ್ಕ ಕುಳಿತ ಅಭಿಷೇಕ್! ಅಭಿಷೇಕ್ ಉದ್ದೇಶ ಏನಿತ್ತು? ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್
ಕೆಲ ತಿಂಗಳಿನಿಂದ ಬಿ-ಟೌನ್ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ಸುದ್ದಿ. ಅಭಿಷೇಕ್ ಬಚ್ಚನ್ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿತ್ತು. ನಂತರ ಸಿನಿಮೀಯ ರೀತಿಯಲ್ಲಿ ಒಂದೊಂದು ಘಟನೆಗಳು ಥಳಕು ಹಾಕಿಕೊಂಡವು. ಅಲ್ಲಿಂದ ಶುರುವಾಗಿರುವ ಐಶ್-ಅಭಿಷೇಕ್ ಬಚ್ಚನ್ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಏಕೆಂದರೆ ಬಚ್ಚನ್ ಕುಟುಂಬ ಈ ಸುದ್ದಿಯನ್ನು ತಣ್ಣಗೆ ಮಾಡಲು ಬಿಡುತ್ತಲೇ ಇಲ್ಲ. ಇವರಿಬ್ಬರ ಡಿವೋರ್ಸ್ ವಿಷಯ ತಣ್ಣಗಾಗುತ್ತಿದೆ ಎಂದು ಅನಿಸಿದಾಗ, ಒಂದೋ ಅಭಿಷೇಕ್ ಇಲ್ಲವೇ ಐಶ್ವರ್ಯ ಅದೂ ಇಲ್ಲದಿದ್ರೆ ಅಮಿತಾಭ್ ಸೋಷಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ಪೋಸ್ಟ್ ಹಾಕುವ ಮೂಲಕ ಇವರಿಬ್ಬರೂ ಡಿವೋರ್ಸ್ ಪಡೆಯುತ್ತಾರೆ ಎಂಬಂತೆ ಹೇಳುತ್ತಿದ್ದಾರೆ. ಇದು ಭಾರಿ ಸುದ್ದಿಯಾಗುತ್ತಲೇ, ದಂಪತಿ ಒಂದಾಗಿರುವ ಫೋಟೋ ಶೇರ್ ಮಾಡಿಕೊಳ್ಳುತ್ತಾರೆ. ಕೆಲ ತಿಂಗಳಿನಿಂದ ಬಚ್ಚನ್ ಕುಟುಂಬದ ಆಟ ಮುಂದುವರೆದಿದೆ. ಇದರಲ್ಲಿ ಬಿಗ್ ಬಿ ಎಂದೇ ಕರೆಸಿಕೊಳ್ಳುವ ಅಮಿತಾಭ್ ಕೂಡ ಸಾಕಷ್ಟು ಪಾತ್ರ ವಹಿಸುತ್ತಿದ್ದಾರೆ. ಹಿಂದೊಮ್ಮೆ ಕೂಡ ಈ ಫ್ಯಾಮಿಲಿಗೆ ಪ್ರಚಾರದ ಹುಚ್ಚು ಜಾಸ್ತಿಯಾಗಿದೆ ಎಂದೇ ನೆಟ್ಟಿಗರು ಹೇಳುತ್ತಿದ್ದರು. ಮದುವೆಯೆಂಬ ಸಂಬಂಧವನ್ನು ಈ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಾಕಷ್ಟು ಟ್ರೋಲ್ ಕೂಡ ಆಗಿತ್ತು.
ಆದರೆ, ಇದೀಗ ಬಂದಿರುವ ಹೊಸ ಸುದ್ದಿ ಎಂದರೆ, ಇವರ ಸಂಬಂಧ ಹಳಸಲು ಕಾರಣ ನಟಿ ನಿಮ್ರತ್ ಕೌರ್ ಎನ್ನುವ ವಿಷಯ ಭಾರಿ ಸದ್ದು ಮಾಡುತ್ತಿದೆ. ದಸ್ವಿ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಲವ್ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಐಶ್ ಮತ್ತು ಅಭಿ ದಾಂಪತ್ಯದ ಬಿರುಕಿಗೆ ಇವರೇ ಕಾರಣ ಎಂದೂ ಹೇಳಲಾಗುತ್ತಿದೆ. ಆದರೆ ಇದುವರೆಗೂ ಅಭಿಷೇಕ್ ಬಚ್ಚನ್ ಆಗಲಿ ಐಶ್ವರ್ಯ ರೈ ಆಗಲಿ, ಅಥವಾ ಆರೋಪ ಹೊತ್ತಿರುವ ನಿಮ್ರತ್ ಕೌರ ಆಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ. ನಿಮ್ರತ್ ಕೌರ್ ಇವರ ಜೀವನದಲ್ಲಿ ಹುಳಿ ಹಿಂಡಿದ್ದು ನಿಜಾ ಎಂದು ಅಭಿಪ್ರಾಯ ವ್ಯಕ್ತವಾಗ್ತಿರೋ ಬೆನ್ನಲ್ಲೇ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.
ಐಶ್ವರ್ಯ ಪ್ರೀತಿಯಿಂದ ಅಪ್ಪಿಕೊಂಡ್ರೆ ಹೀಗೆ ಹೇಳೋದಾ ಅಮಿತಾಭ್? ಕುಡಿದದ್ದು ಜಾಸ್ತಿಯಾಯ್ತು ಎಂದ ಟ್ರೋಲಿಗರು!
ಕಪಿಲ್ ಶರ್ಮಾ ಷೋನಲ್ಲಿ ಅಭಿಷೇಕ್ ಬಚ್ಚನ್ ಮತ್ತು ನಿಮ್ರಿತ್ ಕೌರ್ ಆಗಮಿಸಿದ್ದರು. ಆರಂಭದಲ್ಲಿ ಇಬ್ಬರೂ ದೂರ ದೂರು ಕುಳಿತಿದ್ದರು. ಆದರೆ ಮಾತನಾಡುತ್ತಾ, ಮಾತನಾಡುತ್ತಾ ಅಭಿಷೇಕ್ ಅವರು ನಿಮ್ರಿತ್ ಸಮೀಪ ಬಂದು ಕೂತು ಜೋಕ್ಸ್ ಮಾಡಿದರು. ಇದನ್ನು ಕೇಳಿ ನಿಮ್ರಿತ್ ಜೋರಾಗಿ ನಕ್ಕರು. ಇದನ್ನು ನೋಡಿ ಅಲ್ಲಿಯೇ ಇದ್ದ ಕಪಿಲ್ ಶರ್ಮಾ ಕೂಡ ಅರೆಕ್ಷಣ ವಿಚಲಿತರಾದಂತೆ ಕಂಡು ಬಂದರು. ಅದೇ ಇನ್ನೊಂದೆಡೆ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಹೋಗಿದ್ದರು. ಜೋಡಿ ಫೋಟೋಗೆ ಪೋಸ್ ಕೊಡುತ್ತಿದ್ದ ಸಂದರ್ಭದಲ್ಲಿ ಅಭಿಷೇಕ್ಗೆ ಏನಾಯಿತೋ ಗೊತ್ತಿಲ್ಲ. ಐಶ್ವರ್ಯ ಅವರನ್ನು ವೇದಿಕೆ ಮೇಲೆ ಅರ್ಧಕ್ಕೆ ಬಿಟ್ಟು ಹೋದರು. ಐಶ್ವರ್ಯ ಪತಿಯನ್ನು ಕರೆಯುತ್ತಿದ್ದರೂ ಸಿಟ್ಟಿಗೆದ್ದವರಂತೆ ಹೋದರು. ಐಶ್ವರ್ಯ ರೈಗೆ ತುಂಬಾ ನೋವಾದರೂ ಕ್ಯಾಮೆರಾ ಎದುರು ಅದನ್ನು ತೋರಿಸದೇ ನಗುಮೊಗ ಹೊತ್ತು ನಾಟಕ ಮಾಡಿದ್ದನ್ನು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು.
ಇವೆರಡೂ ವಿಡಿಯೋ ಜೊತೆಯಾಗಿ ವೈರಲ್ ಆಗುತ್ತಿದೆ. ಇತ್ತ ಐಶ್ವರ್ಯ ಅವರನ್ನು ಒಂಟಿಯಾಗಿ ಬಿಟ್ಟು ಹೋದರೆ, ಅತ್ತ ನಿಮ್ರಿತ್ ಪಕ್ಕದಲ್ಲಿಯೇ ಬಂದು ಕೂತು ಬಹಳ ಖುಷಿಯಿಂದ ಅಭಿಷೇಕ್ ಕಾಣಿಸಿಕೊಂಡಿರುವುದು ಹಲವು ವರ್ಷಗಳ ಹಿಂದೆಯೇ ಇವೆಲ್ಲಾ ಶುರುವಾಗಿತ್ತಾ ಎನ್ನುವ ಸಂದೇಹ ಕಾಡುತ್ತಿದೆ. ಅಭಿಷೇಕ್ ಮತ್ತು ಐಶ್ವರ್ಯ ನಡುವೆ ಬ್ರೇಕಪ್ ಬಹುತೇಕ ಫಿಕ್ಸ್ ಆದಂತಿದೆ. ಈ ಸುದ್ದಿಯನ್ನು ಅಲ್ಲಗಳೆಯಲು ಹಾಗೂ ಪ್ಯಾಚಪ್ ಎಂಬಂತೆ ಆಗೀಗ ಈ ಜೋಡಿ ಜೊತೆಯಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಈಗ ನಡೆಯುತ್ತಿರುವ ಹಲವಾರು ಘಟನೆಗಳನ್ನು ನೋಡಿದರೆ ಜೋಡಿ ಬ್ರೇಕಪ್ ಆಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಇದರ ನಡುವೆಯೇ, ಐಶ್ವರ್ಯ ರೈ, ತಮಗೆ ಸಲ್ಮಾನ್ ಮೇಲೆ ಇದ್ದ ಪ್ರೀತಿ ಎಷ್ಟು ಎಂಬುದರ ಬಗ್ಗೆ ಈ ಹಿಂದೆ ಹೇಳಿದ್ದ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ. ಸಿಮಿ ಗ್ರೇವಾಲ್ ಅವರ ಪಾಡ್ಕಾಸ್ಟ್ನಲ್ಲಿ ಐಶ್ವರ್ಯ ರೈ ಸಲ್ಮಾನ್ ಖಾನ್ ಮೇಲಿನ ಪ್ರೀತಿಯನ್ನು ಹೇಳಿದ್ದರು. ಒಟ್ಟಿನಲ್ಲಿ ಬಚ್ಚನ್ ಫ್ಯಾಮಿಲಿಯ ಗುಟ್ಟು ಸದ್ಯ ಗುಟ್ಟಾಗಿಯೇ ಉಳಿದಿದೆ.
ಮದುವೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಆಗ್ಲೇ ವ್ಯಂಗವಾಡಿದ್ದ ನಿಮ್ರತ್ ಕೌರ್! ಹಳೆಯ ವಿಡಿಯೋ ವೈರಲ್