ಕರೀನಾ ಕಪೂರ್ ವರ್ಕ್‌ಔಟ್ ವೀಡಿಯೋ ವೈರಲ್; ಇನ್ನು ಕರಗಲ್ಲ ಬಿಡಿ ಆಂಟಿ ಎಂದ ನೆಟ್ಟಿಗರು
ಕರೀನಾ ಕಪೂರ್ ಕಪೂರ್ ವರ್ಕೌಟ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಆ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಬಾಲಿವುಡ್ ನಟಿ ಕರೀನಾ ಕಪೂರ್ ಎರಡು ಮಕ್ಕಳ ತಾಯಿಯಾದ ಮೇಲು ಬೇಡಿಗೆ ಕಮ್ಮಿಯಾಗಿಲ್ಲ. ಬಾಲಿವುಡ್‌ನ ಟಾಪ್ ನಟಿಯರ ಸಾಲಲ್ಲಿರುವ ಕರೀನಾ ಕಪೂರ್ ಮತ್ತೆ ಬಣ್ಣ ಹಚ್ಚಲು ತಯಾರಿ ನಡೆಸುತ್ತಿದ್ದಾರೆ. ನಟಿಮಣಿಯರಿಗೆ ಫಿಟ್ನೆಸ್ ತುಂಬಾ ಮುಖ್ಯ. ಸ್ವಲ್ಪ ದಪ್ಪ ಅಥವಾ ಸಣ್ಣ ಆದರೂ ತೆರೆಮೇಲೆ ಸುಂದರಾವಗಿ ಕಾಣಸಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಸದಾ ಫಿಟ್ನೆಸ್ ಅಂತ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರುತ್ತಾರೆ. ಆ ವಿಚಾರದಲ್ಲಿ ಕರೀನಾ ಕಪೂರ್ ಏನು ಹೊರತಾಗಿಲ್ಲ. ಎರಡು ಮಕ್ಕಳಿಗೆ ಜನ್ಮ ನೀಡಿದ ಬಳಿಕ ಕರೀನಾ ಕೊಂಚ ದಪ್ಪ ಆಗಿದ್ದಾರೆ. ಹಾಗಾಗಿ ಮತ್ತೆ ಟ್ರ್ಯಾಕ್ಗೆ ಮರಳಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ವರ್ಕೌಟ್, ಯೋಗ, ಡಯಟ್ ಅಂತ ಪ್ರಾರಂಭ ಮಾಡಿದ್ದಾರೆ.
ಕರೀನಾ ಕಪೂರ್ ವರ್ಕೌಟ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಸದ್ಯ ಕರೀನಾ ಟ್ರೆಡ್‌ಮಿಲ್ ವರ್ಕೌಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಕರೀನಾ ಕಾಲೆಳೆದರೆ ಇನ್ನು ಕೆಲವರು ಕರೀನಾ ಕಠಿಣ ಶ್ರಮಕ್ಕೆ ಬೇಶ್ ಎನ್ನುತ್ತಿದ್ದಾರೆ. ಹೌದು, ಟ್ರೆಡ್‌ಮಿಲ್ ಮೇಲೆ ಬೆವರಿಳಿಸುತ್ತಿರುವ ಕರೀನಾ ನೋಡಿ ನೆಟ್ಟಿಗರು ಇನ್ನು ಕರಗಲ್ಲ ಬಿಡಿ ಆಂಟಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಬೇಬಿ ನಂ.3ಗೆ ಸಿದ್ಧತೆನಾ ಎಂದು ಪ್ರಶ್ನೆ ಮಾಡಿದ್ದಾರೆ.
ಆದರೆ ಕರೀನಾ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ಕಠಿಣ ಶ್ರಮ ಎಂದು ಕಾಮೆಂಟ್ ಮಾಡಿದ್ರೆ, ಮತ್ತೋರ್ವ ಕಾಮೆಂಟ್ ಮಾಡಿ ಜಿಮ್‌ಗೆ ಹೋಗಲ್ಲ ಮನೆಯಲ್ಲೇ ಯೋಗ, ವರ್ಕೌಟ್ ಗ್ರೇಟ್ ಎಂದು ಹೇಳಿದ್ದಾರೆ. ಟ್ರೋಲ್‌ಗಳಿಗೆ ಕರೀನಾ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ತನ್ನ ಪಾಡಿಗೆ ವರ್ಕೌಟ್, ಸಿನಿಮಾ ಮತ್ತು ಕುಟುಂಬ ಅಂತ ಬ್ಯುಸಿಯಾಗಿದ್ದಾರೆ.
ಸೈಫ್ ಅಲಿ ಖಾನ್‌ರ 5000 ಕೋಟಿ ಆಸ್ತಿಯಲ್ಲಿ ಮಕ್ಕಳಿಗೆ ಒಂದೂ ಬಿಡಿಗಾಸೂ ಸಿಗೋಲ್ವಂತೆ!
ಅಂದಹಾಗೆ ಕರೀನಾ ಎರಡು ಮಕ್ಕಳ ತಾಯಿಯಾಗಿದ್ದರೂ ಸಹ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಈಗಲೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿದ್ದಾರೆ. ಸದ್ಯ ಮತ್ತೆ ಕಮ್ ಬ್ಯಾಕ್ ಮಾಡಲು ಸಿದ್ಧತೆ ನಡೆಸುತ್ತಿರುವ ಕರೀನಾ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ವರ್ಕೌಟ್ ಜೊತೆಗೆ ಕರೀನಾ ಇಬ್ಬರು ಮುದ್ದಾದ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಮಕ್ಕಳ ಜೊತೆ ಇರುವ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ.
ಲಾಲ್ ಸಿಂಗ್ ಚಡ್ಡಾ ಗಳಿಸಿದ್ದು ಕೇವಲ ಆಮೀರ್ ಖಾನ್ ಸಂಭಾವನೆ ಮಾತ್ರ!
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ಕರೀನಾ ಕಪೂರ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆಮೀರ್ ಖಾನ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲ ಹೀನಾಯ ಸೋಲು ಕಂಡಿದೆ. 100 ಕೋಟಿ ರೂಪಾಯಿ ನಷ್ಟವಾಗಿದ್ದು ಸೋಲಿನ ಹೊಣೆಯನ್ನು ಆಮೀರ್ ಖಾನ್ ಅವರೇ ಹೊತ್ತುಕೊಂಡಿದ್ದಾರೆ.