ಸೈಫ್ ಅಲಿ ಖಾನ್‌ರ 5000 ಕೋಟಿ ಆಸ್ತಿಯಲ್ಲಿ ಮಕ್ಕಳಿಗೆ ಒಂದೂ ಬಿಡಿಗಾಸೂ ಸಿಗೋಲ್ವಂತೆ!
ಪಟೌಡಿ ಕುಟುಂಬದ 10ನೇ ನವಾಬನಾಗಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಅವರಿಗೆ 52 ವರ್ಷ ತುಂಬಿದೆ. ಸೈಫ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಕಾರಣದಿಂದ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಇದರ ಜೊತೆಗೆ ಅವರು ತಮ್ಮ 5000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಲ್ಲಿ ಒಂದು ಪೈಸೆಯನ್ನೂ ಮಕ್ಕಳಿಗೆ ನೀಡಲು ಸಾಧ್ಯವಿಲ್ಲ ಅಥವಾ ಅವರ ಆಸ್ತಿ ಮೇಲೆ ಅವರ ಮಕ್ಕಳು ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬ ಅಂಶಕ್ಕಾಗಿ ಅವರು ಸದಾ ಸುದ್ದಿಯಲ್ಲಿರುತ್ತಾರೆ. ವಾಸ್ತವವಾಗಿ, ಕಾನೂನಿನ ಸಮಸ್ಯೆಯಿಂದ ಅವರು ತಮ್ಮ ಆಸ್ತಿ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹರಿಯಾಣದ ಪಟೌಡಿ ಅರಮನೆಯ ಹೊರತಾಗಿ, ಸೈಫ್‌ನ ಅನೇಕ ಆಸ್ತಿಗಳು ಭೋಪಾಲ್‌ನಲ್ಲಿವೆ. ಸೈಫ್ ತನ್ನ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿಯಿಂದ ಈ ಆಸ್ತಿಯನ್ನು ಪಡೆದಿದ್ದಾರೆ. ಸೈಫ್ ತನ್ನ ನಾಲ್ಕು ಮಕ್ಕಳು ಅಂದರೆ ಮಗಳು ಸಾರಾ ಅಲಿ ಖಾನ್ ಮತ್ತು ಪುತ್ರರಾದ ಇಬ್ರಾಹಿಂ ಅಲಿ ಖಾನ್, ಸೈಫ್ ಅಲಿ ಖಾನ್, ಜೆಹ್ ಅಲಿ ಖಾನ್ ಹೆಸರಿಗೆ ಆಸ್ತಿಯನ್ನು ಏಕೆ ನೀಡಲು ಸಾಧ್ಯವಿಲ್ಲ ಎಂಬುದಕ್ಕೆ ಕಾರಣ ಇಲ್ಲಿದೆ.
ಸೈಫ್ ಅಲಿ ಖಾನ್ ಅವರ ಪಟೌಡಿ ಅರಮನೆಯನ್ನು ಹೊರತುಪಡಿಸಿ, ಅವರು ಹೊಂದಿರುವ ಇತರ ಯಾವುದೇ ಆಸ್ತಿಯು ಭಾರತ ಸರ್ಕಾರದ ಎನಿಮಿ ಡಿಸ್ಪ್ಯೂಟ್ ಆ್ಯಕ್ಟ್ ಆಡಿ ಬರುತ್ತದೆ. ಈ ಕಾಯ್ದೆ ಅಡಿಯಲ್ಲಿ, ಆಸ್ತಿಯ ಮೇಲೆ ಯಾರೂ ತಮ್ಮ ಹಕ್ಕನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.
ಸೈಫ್ ಅಲಿ ಖಾನ್ ಅವರ ಮಕ್ಕಳು 5000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಮೇಲೆ ಹಕ್ಕು ಪಡೆಯಲು ಬಯಸಿದರೆ, ಅವರು ಮೊದಲು ಹೈಕೋರ್ಟ್‌ಗೆ ಹೋಗಬೇಕಾಗುತ್ತದೆ. ಅಲ್ಲಿ ಸೋತರೆ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕು. ಇದಾದ ಬಳಿಕ ದೇಶದ ರಾಷ್ಟ್ರಪತಿ ಬಳಿ ಹೋಗುವ ಅವಕಾಶವೂ ಅವರಿಗಿದೆ.
ಸೈಫ್ ಅಲಿ ಖಾನ್ ಅವರ ಮುತ್ತಜ್ಜ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ತಂದೆ ಹಮೀದುಲ್ಲಾ ಖಾನ್ ಬ್ರಿಟಿಷ್ ಆಳ್ವಿಕೆಯಲ್ಲಿ ನವಾಬರಾಗಿದ್ದರು. ಅವರು ತನ್ನ ಆಸ್ತಿಗಾಗಿ ವಿಲ್ ಮಾಡರಲೇ ಇಲ್ಲ.
ಈ ಕಾರಣಕ್ಕಾಗಿ, ಯಾರಾದರೂ ಈ ಆಸ್ತಿಯನ್ನು ಕ್ಲೈಮ್ ಮಾಡಿದರೆ, ಪಾಕಿಸ್ತಾನದಲ್ಲಿ ವಾಸಿಸುವ ಅವರ ಕುಟುಂಬ ಸದಸ್ಯರು ಅದರ ಬಗ್ಗೆ ವಿವಾದ ಮಾಡಬಹುದು. ಸೈಫ್ ಅಲಿ ಖಾನ್ ಪಟೌಡಿ ಕುಟುಂಬಕ್ಕೆ ಸೇರಿದವರು. ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.
ಸೈಫ್ ತನಗಿಂತ 13 ವರ್ಷ ದೊಡ್ಡವರಾಗಿದ್ದ ಅಮೃತಾ ಸಿಂಗ್ ಅವರನ್ನು 21ನೇ ವಯಸ್ಸಿನಲ್ಲಿ ವಿವಾಹವಾದರು. ದಂಪತಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿವೆ.
ಅಮೃತಾ ಸಿಂಗ್‌ಗೆ ವಿಚ್ಛೇದನ ನೀಡಿದ ನಂತರ, ಸೈಫ್ ಅಲಿ ಖಾನ್ ತಮಗಿಂತ ಸುಮಾರು 11 ವರ್ಷ ಚಿಕ್ಕವರಾದ ಕರೀನಾ ಕಪೂರ್ ಅವರನ್ನು ವಿವಾಹವಾದರು. ದಂಪತಿಗೆ ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿವೆ. ಸೈಫ್ 4 ಮಕ್ಕಳ ತಂದೆ ಮತ್ತು ಅವರು ನಾಲ್ವರಿಗೂ ಸಮಾನ ಗಮನ ನೀಡುತ್ತಾರೆ.
ಸೈಫ್ ಅಲಿ ಖಾನ್ 1993ರ ಪರಂಪರಾ ಚಿತ್ರದೊಂದಿಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು, ಅದು ಫ್ಲಾಪ್ ಆಗಿತ್ತು. ಆದಾಗ್ಯೂ, ಅವರು ತಮ್ಮ ವೃತ್ತಿ ಜೀವನದಲ್ಲಿ ಆಶಿಕ್ ಆವಾರಾ, ಮೈನ್ ಖಿಲಾಡಿ ತು ಅನಾರಿ, ಓಂಕಾರ, ಹಮ್ ತುಮ್, ರೇಸ್, ರೇಸ್ 2, ಲವ್ ಆಜ್ ಕಲ್, ಯೇ ದಿಲ್ಲಗಿಯಂತಹ ಅನೇಕ ಹಿಟ್‌ಗಳನ್ನು ನೀಡಿದ್ದಾರೆ. ಅವರ ಮುಂಬರುವ ಚಿತ್ರಗಳು ವಿಕ್ರಮ್ ವೇದ ಮತ್ತು ಆದಿಪುರುಷ.