ನಿರ್ಮಾಪಕ, ನಿರ್ದೇಶಕರ ಬಳಿಕ ಸಲ್ಮಾನ್ ಸಿನಿಮಾದಿಂದ ಹೊರ ನಡೆದ ತಂಗಿಯ ಗಂಡ; ಆಯುಷ್ ಜೊತೆ ದಬಂಗ್ ಸ್ಟಾರ್ ಕಿರಿಕ್?
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರ ಹೊಸ ಸಿನಿಮಾ ಕಭಿ ಈದ್ ಕಭಿ ದಿವಾಳಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಸಿನಿಮಾ ಹೆಚ್ಚಾಗಿ ಕಲಾವಿದರ ಆಯ್ಕೆ ವಿಚಾರವಾಗಿ ಸುದ್ದಿಯಾಗುತ್ತಿದ್ದು ಬಾಲಿವುಡ್‌ನ ಹಾಟ್ ಟಾಪಿಕ್ ಆಗಿದೆ. ಈ ಸಿನಿಮಾದಿಂದ ನಿರ್ಮಾಪಕ, ನಿರ್ದೇಶಕ ಹೊರ ನಡೆದ ಬಳಿಕ ಮತ್ತೋರ್ವ ಪ್ರಮುಖ ನಟ ಔಟ್ ಆಗಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್(Salman Khan) ಅವರ ಹೊಸ ಸಿನಿಮಾ ಕಭಿ ಈದ್ ಕಭಿ ದಿವಾಳಿ(Kabhi Eid Kabhi Diwali)ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಸಿನಿಮಾ ಹೆಚ್ಚಾಗಿ ಕಲಾವಿದರ ಆಯ್ಕೆ ವಿಚಾರವಾಗಿ ಸುದ್ದಿಯಾಗುತ್ತಿದ್ದು ಬಾಲಿವುಡ್‌ನ ಹಾಟ್ ಟಾಪಿಕ್ ಆಗಿದೆ. ಇತ್ತೀಚಿಗಷ್ಟೆ ಈ ಸಿನಿಮಾದಿಂದ ನಿರ್ಮಾಪಕ ಸಾಜಿದ್ ನಾದಿಯಾವಾಲಾ ಈ ಸಿನಿಮಾದ ಭಾಗವಾಗಿರುವುದಿಲ್ಲ ಎಂದು ಹೇಳಿ ಚಿತ್ರದಿಂದ ಹೊರ ನಡೆದಿದ್ದರು. ಬಳಿಕ ಸಲ್ಮಾನ್ ಖಾನ್ ಅವರ ಸಿನಿಮಾಗೆ ಸಲ್ಮಾನ್ ಖಾನ್‌ನೇ ನಿರ್ಮಾಪಕನಾಗಿ ಎಂಟ್ರಿ ಕೊಟ್ಟಿದ್ದರು. ಈ ಸುದ್ದಿ ಬೆನ್ನಲ್ಲೇ ನಿರ್ದೇಶಕ ಫರ್ಹಾದ್ ಸಾಮ್ಜಿ ಕೂಡ ಸಿನಿಮಾದಿಂದ ಹೊರನಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ನಿರ್ದೇಶಕ ಫರ್ಹಾದ್ ಚಿತ್ರೀಕರಣ ಪ್ರಾರಂಭವಾದರೂ ಸೆಟ್‌ಗೆ ಬಂದಿಲ್ಲ ಎನ್ನಲಾಗಿದೆ. ಹಾಗಾಗಿ ಸಹಾಯಕ ನಿರ್ದೇಶಕರೇ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ನಿರ್ಮಾಪಕ, ನಿರ್ದೇಶಕ ಸಿನಿಮಾದಿಂದ ಹೊರ ನಡೆದ ಬೆನ್ನಲ್ಲೇ ಚಿತ್ರದಿಂದ ಮತ್ತೋರ್ವ ನಟ ಹೊರ ಹೋಗಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಈ ಸಿನಿಮಾದಲ್ಲಿ ದೊಡ್ಡ ತಾರಾಬಳವಿದೆ. ಅಯುಷ್ ಶರ್ಮಾ, ಪೂಜಾ ಹೆಗ್ಡೆ, ಜಹೀರ್ ಇಕ್ಬಾಲ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ವರ್ಷದ ಡಿಸೆಂಬರ್ ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಮಾಡಿ ಚಿತ್ರೀಕರಣ ಪ್ರಾರಂಭಮಾಡಲಾಗಿತ್ತು. ಆದರೀಗ ನಟ ಆಯುಷ್ ಶರ್ಮ(Aayush Sharma), ಸಲ್ಮಾನ್ ಖಾನ್ ತಂಗಿಯ ಗಂಡ ಭಿನ್ನಾಭಿಪ್ರಾಯದಿಂದ ಹೊರನಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಪೂಜಾ ಹೆಗ್ಡೆ ಕೈಯಲ್ಲಿ ಸಲ್ಮಾನ್ ಖಾನ್ ಸಿಗ್ನೇಚರ್ ಬ್ರೇಸ್ಲೆಟ್; ಫೋಟೋ ವೈರಲ್
ಬಾಲಿವುಡ್ ಹಂಗಾಮ ವರದಿ ಮಾಡಿರುವ ಪ್ರಕಾರ, ಹತ್ತಿರದ ಮೂಲವೊಂದು ಈ ಬಗ್ಗೆ ಬಹಿರಂಗ ಪಡಿಸಿದೆ. 'ಕಭಿ ಈದ್ ಕಭಿ ದಿವಾಳಿ ಸಿನಿಮಾತಂಡ ಚಿತ್ರೀಕರಣ ಪ್ರಾರಂಭ ಮಾಡಿದೆ. ಆದರೆ ಆಯುಷ್ ಸಿನಿಮಾದಿಂದ ಹೊರನಡೆದಿದ್ದಾರೆ. ಸಿನಿಮಾತಂಡದ ಮತ್ತು ಆಯುಷ್ ನಡುವೆ ನಡುವೆ ಸೃಜನಾತ್ಮಕ ವ್ಯತ್ಯಾಸಗಳ ಕಾರಣದಿಂದ ಈ ಯೋಜನೆಯಿಂದ ಸಂಪೂರ್ಣ ಹೊರನಡೆದಿದ್ದಾರೆ. ಆದರೆ ನಿಜಕ್ಕೂ ಏನಾಯಿತು ಎನ್ನುವುದು ಹಿರಂಗವಾಗಿಲ್ಲ' ಎಂದು ವರದಿ ಮಾಡಿದೆ.
ಇನ್ಮುಂದೆ ನಾನು ಏಕಾಂಗಿ ಎಂದು ಯಾವತ್ತೂ ಹೇಳಲ್ಲ; ಸಲ್ಮಾನ್ ಮಾತಿಗೆ ಕಂಗನಾ ಪ್ರತಿಕ್ರಿಯೆ
ಆಯುಷ್ ಶರ್ಮಾ ತನ್ನ ಭಾಗದ ಚಿತ್ರೀಕರಣ ಪ್ರಾರಂಭ ಮಾಡಿದ್ದರು. ತನ್ನ ಭಾಗದ ಶೂಟಿಂಗ್ ಅನ್ನು ಬಹುತೇಕ ಪೂರ್ತಿ ಮಾಡಿದ್ದರು. ಆದರೆ ನಿರ್ಮಾಣ ಸಂಸ್ಥೆಯ ಜೊತೆಗಿನ ಭಿನ್ನಾಭಿಪ್ರಾಯದಿಂದ ಅವರು ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಆಯುಷ್ ಶರ್ಮಾ ಹೊರನಡೆಯುತ್ತಿದ್ದಂತೆ ಈ ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆಯಾಗತುತ್ತಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದೀಗ ಸಿನಿಮಾ ನಿರ್ಮಾಪಕರು ಆಯುಷ್ ಪಾತ್ರಕ್ಕೆ ಹೊಸ ನಾಯಕನನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಇನ್ನಷ್ಟು ಸಮಯ ಹಿಡಿಯುವ ಸಾಧ್ಯತೆ ಇದೆ. ಹಾಗಾಗಿ ಡಿಸೆಂಬರ್ 30ಕ್ಕೆ ಸಿನಿಮಾ ರಿಲೀಸ್ ಆಗುವುದು ಅನುಮಾನ ಮೂಡಿಸಿದೆ. ಅಂದಹಾಗೆ ಆಯುಷ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕು.