DDLJ: ಕಾಜೋಲ್​ ಸ್ಕರ್ಟ್​ ನೋಡಿ ಕಣ್​ಕಣ್​ ಬಿಟ್ಟಿದ್ರಂತೆ ನಿರ್ದೇಶಕ, ಅಷ್ಟಕ್ಕೂ ಆಗಿದ್ದೇನು?

 DDLJ: ಕಾಜೋಲ್​ ಸ್ಕರ್ಟ್​ ನೋಡಿ ಕಣ್​ಕಣ್​ ಬಿಟ್ಟಿದ್ರಂತೆ ನಿರ್ದೇಶಕ! ಅಷ್ಟಕ್ಕೂ ಆಗಿದ್ದೇನು?
 

In DDLJ film When Kajol wore a short skirt in the shooting the director got nervous

ಶಾರುಖ್ ಖಾನ್ ಮತ್ತು ಕಾಜೋಲ್ ಅವರ ಬ್ಲಾಕ್ಬಸ್ಟರ್ 'ದಿಲ್​ವಾಲೆ  ದುಲ್ಹನಿಯಾ ಲೇ ಜಾಯೇಂಗೆ' (DDLJ) ಬಿಡುಗಡೆಯಾಗಿ 28 ವರ್ಷಗಳೇ ಕಳೆದಿವೆ. 1995ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಇಂದಿಗೂ ಜನಮಾನಸದಲ್ಲಿ ನೆನಪಿನಲ್ಲಿ ಉಳಿದಿದೆ. ಶಾರುಖ್​ ಮತ್ತು ಕಾಜೋಲ್​  ಅಭಿಮಾನಿಗಳು ಇದನ್ನು ಇನ್ನೂ ಪ್ರೀತಿಸುತ್ತಾರೆ. ಅವರ ಅಭಿಮಾನಿಗಳು ಇಂದಿಗೂ ಈ ಚಿತ್ರವನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಈ ಚಿತ್ರ ತೆರೆಗೆ ಬಂದಾಗ ಗಲ್ಲಾಪೆಟ್ಟಿಗೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿತ್ತು.  ರಾಜ್ ಮತ್ತು ಸಿಮ್ರನ್ ಪಾತ್ರ (Raj and Simran) ಜನರನ್ನು ಹುಚ್ಚರನ್ನಾಗಿ ಮಾಡಿತ್ತು.  ಈ ಚಿತ್ರವು ಬೆಳ್ಳಿ ಪರದೆಯನ್ನು ದೀರ್ಘಕಾಲ ಆಳಿತ್ತು.  ಅಂತಹ ಪರಿಸ್ಥಿತಿಯಲ್ಲಿ, ನೀವು ಚಿತ್ರದ ಕಥೆ ಮತ್ತು ಪಾತ್ರಗಳನ್ನು ಚೆನ್ನಾಗಿ ನೆನಪಿಸಿಕೊಳ್ಳುತ್ತೀರಿ ಅಲ್ಲವೆ? ಆದರೆ ಈ ಚಿತ್ರದ 'ಮೇರೆ ಖ್ವಾಬೊನ್ ಮೇ' ಹಾಡು ಹಲವರಿಗೆ ನೆನಪಿರಲಿಕ್ಕೆ ಸಾಕು.  ಹೌದು, ಅದೇ ಹಾಡಿನಲ್ಲಿ ಕಾಜೋಲ್ ಬಿಳಿ ಸ್ಕರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಆದರೆ  ಈ ಸ್ಕರ್ಟ್ ನೋಡಿ ಕಾಜೋಲ್ ನರ್ವಸ್ ಆಗಿದ್ದು ಗೊತ್ತಾ? ಯಾಕೆಂದರೆ ಆಕೆಗೆ ಅಂತಹ ಗಿಡ್ಡ ಉಡುಗೆ ತೊಡಲು ಇಷ್ಟವಿರಲಿಲ್ಲವಂತೆ.  ಆದರೆ ಯಾವುದೋ ಹಾಡಿನ ಬೇಡಿಕೆಯಿಂದಾಗಿ ಕಾಜೋಲ್ ಈ ಸ್ಕರ್ಟ್ ಧರಿಸಲು ಒತ್ತಾಯಿಸಲಾಯಿತು. ಇದರ ಹಿಂದಿದೆ ಇಂಟರೆಸ್ಟಿಂಗ್​ ಸ್ಟೋರಿ.

ವಾಸ್ತವವಾಗಿ, 'ದಿಲ್​ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರದ 'ಮೇರೆ ಖ್ವಾಬೋನ್ ಮೇ ಜೋ ಆಯೆ' ಹಾಡು ಸಾಕಷ್ಟು ಜನಪ್ರಿಯವಾಯಿತು. ಈ ಹಾಡಿನ ಒಂದು ದೃಶ್ಯದಲ್ಲಿ, ಕಾಜೋಲ್ ಬಿಳಿ ಬಣ್ಣದ ಶಾರ್ಟ್ ಸ್ಕರ್ಟ್ ಧರಿಸಿ ಮಳೆಯಲ್ಲಿ ಮೈ ಚಳಿ ಬಿಟ್ಟು ನೃತ್ಯ ಮಾಡಿದ್ದಾರೆ.  ಆದರೆ ಈ ಹಾಡಿನ ಚಿತ್ರೀಕರಣದ ಮೊದಲು, ಕಾಜೋಲ್ ಅವರ ಸ್ಕರ್ಟ್ ಅನ್ನು ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ತುಂಬಾ ಚಿಕ್ಕದಾಗಿ ಕತ್ತರಿಸಿದ್ದರಂತೆ.   ನಿರ್ದೇಶಕ ಆದಿತ್ಯ ಚೋಪ್ರಾ ಕೂಡ ಅದನ್ನು ನೋಡಿರಲಿಲ್ಲ. ನಂತರ ಕಾಜೋಲ್​ (Kajol) ಅದನ್ನು ಧರಿಸಿದಾಗ ಅವರಿಗೆ ಅಚ್ಚರಿಯಾಯಿತಂತೆ! ಈ ಡ್ರೆಸ್​ ನೋಡಿ ಸ್ವತಃ ಕಾಜೋಲ್ ಕೂಡ ತುಂಬಾ ಬೇಸರಗೊಂಡಿದ್ದರು. ಆದರೆ ಅವರಿಗೆ ಬೇರೆ ದಾರಿಯೇ ಇರಲಿಲ್ಲ, ಹಾಗಾಗಿ ಕಾಜೋಲ್ ಬಲವಂತದ ಮೇರೆಗೆ ಅದೇ ಸ್ಕರ್ಟ್ ಧರಿಸಬೇಕಾಯಿತು. ಇದನ್ನು ಮನೀಷ್ ಮಲ್ಹೋತ್ರಾ ಅವರೇ ಒಮ್ಮೆ ಜೂಮ್ ಜೊತೆ ಮಾತನಾಡುವಾಗ ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ನಂತರ ಈ ಲುಕ್ ಮತ್ತು ಕಾಜೋಲ್ ಅವರ ಹಾಡು ಎರಡೂ ತುಂಬಾ ಇಷ್ಟವಾಯಿತು ಎಂದಿದ್ದಾರೆ. 

Virat Kohli: ಅನುಷ್ಕಾಗೂ ಮೊದಲು ಕೊಹ್ಲಿ ಲೈಫ್​ಗೆ ಎಂಟ್ರಿ ಕೊಟ್ಟ ಐವರು ಲಲನೆಯರು ಇವರು

'ದಿಲ್​ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರ ಬಿಡುಗಡೆಯಾದಾಗ ಬಾಕ್ಸ್ ಆಫೀಸ್ ನಲ್ಲಿ ಅಲ್ಲೋಲಕಲ್ಲೋಲ ಎದ್ದಿತ್ತು. ಶಾರುಖ್ ಖಾನ್ ಮತ್ತು ಕಾಜೋಲ್ ಜೋಡಿಯ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರದಲ್ಲಿ ಇವರಿಬ್ಬರ ಪ್ರೇಮಕಥೆ ಇಂದಿಗೂ ಜನಮಾನಸದಲ್ಲಿ ಉಳಿದಿದೆ.  ಇಂದಿಗೂ ಈ ಚಿತ್ರ ಎಲ್ಲರ ಅದರಲ್ಲೂ ಯುವಕರ ನೆಚ್ಚಿನ ಚಿತ್ರವಾಗಿ ಉಳಿದಿದೆ.  ಚಿತ್ರದ ಎಷ್ಟೋ ಡೈಲಾಗ್‌ಗಳು ಜನರ ಬಾಯಲ್ಲಿ ಇನ್ನೂ ಇವೆಯೋ ಗೊತ್ತಿಲ್ಲ. 1995 ರಲ್ಲಿ ಬಂದ ಈ ಚಿತ್ರವು ಶಾರುಖ್ ಖಾನ್ ಅವರನ್ನು ಎತ್ತರದ ಆಕಾಶದಲ್ಲಿ ಕೂರುವಂತೆ ಮಾಡಿತು ಮತ್ತು ಬಾಲಿವುಡ್‌ಗೆ ರಾಜ್ ಮತ್ತು ಸಿಮ್ರನ್ ಅಂದರೆ ಶಾರುಖ್ (Shah Rukh Khan) ಮತ್ತು ಕಾಜೋಲ್ ಅವರ ಹಿಟ್ ಮತ್ತು ಐಕಾನಿಕ್ ಜೋಡಿಯನ್ನು ಸಹ ನೀಡಿತು.

ಶಾರುಖ್ ಖಾನ್ ಅವರ ವೃತ್ತಿಜೀವನದ ಆರಂಭದಿಂದಲೂ ಚಿತ್ರಗಳಲ್ಲಿ ರೊಮ್ಯಾಂಟಿಕ್ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲೂ ಅವರು ರೊಮ್ಯಾಂಟಿಕ್ ಹೀರೋ (Romantic Hero) ಆಗಿ ಕಾಣಿಸಿಕೊಂಡಿದ್ದು ಇಂದಿಗೂ ಆ ಟ್ರೆಂಡ್ ಮುಂದುವರಿದಿದೆ. ಇಂದಿಗೂ ಬಾಲಿವುಡ್‌ನಲ್ಲಿ ಶಾರುಖ್ ಖಾನ್‌ಗಿಂತ ರೊಮ್ಯಾಂಟಿಕ್ ಹೀರೋ ಇಲ್ಲ.

Priyanka Chopra: ಅಂಡರ್​ವೇರ್​ ಕಳಚಿ ಎಂದಿದ್ದ ಆ ನಿರ್ದೇಶಕ: ಕರಾಳ ದಿನದ ಕುರಿತು ಮೌನ ಮುರಿದ ನಟಿ

Latest Videos
Follow Us:
Download App:
  • android
  • ios