ಶಾರುಖ್​ ಖಾನ್​ ನನ್ನ ಬೂಟು ನೆಕ್ಕುತ್ತಿದ್ದಾನೆ, ನಮ್ಮನು ನಾಯಿಗೆ ಅವನು ಹೆಸ್ರು ಇಟ್ಟಿದ್ದೆ ಎನ್ನುವ ಶಾಕಿಂಗ್​ ಹೇಳಿಕೆ ಕೊಟ್ಟಿದ್ದಾರೆ ನಟ ಆಮೀರ್​ ಖಾನ್​. ಅಷ್ಟಕ್ಕೂ ಆಗಿದ್ದೇನು? 

ಬಾಲಿವುಡ್​ ಖಾನ್​ ತ್ರಯರಾದ ಶಾರುಖ್​, ಆಮೀರ್​ ಮತ್ತು ಸಲ್ಮಾನ್​ ಚಿತ್ರರಂಗವನ್ನು ಬಹಳ ವರ್ಷಗಳಿಂದ ಆಳುತ್ತಲೇ ಬಂದಿದ್ದು, ಅವರು ಆತ್ಮೀಯರು ಹೌದು. ಅದು ಇಂದಿನ ಮಾತಾಯ್ತು. ಆದರೆ ಹಿಂದೊಮ್ಮೆ ಹಾಗೆ ಇರಲಿಲ್ಲ. ಶಾರುಖ್​ ಮತ್ತು ಆಮೀರ್​ ನಡುವೆ ಒಂದು ಸಮಯದಲ್ಲಿ ಭಾರಿ ದ್ವೇಷ ಉಂಟಾಗಿತ್ತು. ಅಷ್ಟಕ್ಕೂ ಸದ್ಯ ಆಮೀರ್ ಖಾನ್ ತಮ್ಮ 'ಸೀತಾರೆ ಜಮೀನ್ ಪರ್' ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಈ ಚಿತ್ರವನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದಾರೆ. ಈ ಚಿತ್ರದ ಜೊತೆಗೆ, ಆಮೀರ್ ಖಾನ್ ಅವರ ಸಂದರ್ಶನವೊಂದು ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ, ನಟ ತಮ್ಮ ಜೀವನದ ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದು, ಆ ಸಮಯದಲ್ಲಿ ಶಾರುಖ್​ ಜೊತೆ ಕೋಪದಿಂದ ತಾವು ಮಾಡಿದ್ದೇನು ಎನ್ನುವುದನ್ನು ಹೇಳಿದ್ದಾರೆ.

ದಿ ಲಲ್ಲಂಟಾಪ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಸಾಕು ನಾಯಿಗೆ ಶಾರುಖ್ ಖಾನ್ ಎಂದು ಹೆಸರಿಸುವ ಸುದ್ದಿಯ ಬಗ್ಗೆ ಆಮೀರ್​ ಹೇಳಿದ್ದಾರೆ. ಅದು ಬಾಲ್ಯದ ಅವಧಿಯಲ್ಲಿ ಇಬ್ಬರು ಜಗಳವಾಡಿಕೊಂಡ್ವಿ. ಆ ಕಾರಣಕ್ಕೆ ಸಿಟ್ಟಿನಿಂದ ನಮ್ಮನೆ ನಾಯಿಗೆ ಶಾರುಖ್​ ಎಂದು ಹೆಸರು ಇಟ್ಟಿದ್ದೆ ಎಂದಿದ್ದಾರೆ. ಶಾರುಖ್ ಮತ್ತು ನಾನು ಪರಸ್ಪರ ಬಹಳಷ್ಟು ವಿಷಯಗಳನ್ನು ಹೇಳಿಕೊಳ್ಳುತ್ತಿದ್ದ ಸಮಯವಿತ್ತು. ಆದರೆ, ಅದೊಮ್ಮೆ ಏನೋ ಆಗಿ ಜಗಳವಾಗಿತ್ತು. ಆಗ ಹೀಗೆ ಮಾಡಿದ್ದೆ ಎಂದಿದ್ದಾರೆ. ! ಈ ವಿಷಯ ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣ ಆಗಿತ್ತು. ಆಮೀರ್​ ಖಾನ್ ಅವರ ಈ ವರ್ತನೆಯಿಂದ ಶಾರುಖ್ ಖಾನ್ ಅವರ ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ತುಂಬಾ ನೋವಾಗಿತ್ತು. ಆ ಸಮಯದಲ್ಲಿ ಆಮೀರ್​ ಖಾನ್ ಮತ್ತು ಶಾರುಖ್ ಖಾನ್ ನಡುವೆ ಮುನಿಸು ಸೃಷ್ಟಿ ಆಗಿತ್ತು ಎಂದೂ ಹೇಳಿದ್ದಾರೆ.

2010ರ ಸಮಯದಲ್ಲಿ ಆಮೀರ್​ ಖಾನ್ ಅವರು ಬ್ಲಾಗ್ ಬರೆಯುತ್ತಿದ್ದರು. ‘ಶಾರುಖ್ ನನ್ನ ಕಾಲು ನೆಕ್ಕುತ್ತಿದ್ದಾನೆ. ನಾನು ಅವನಿಗೆ ಬಿಸ್ಕೆಟ್ ತಿನಿಸುತ್ತಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ನನಗೆ’ ಎಂದು ಆಮೀರ್​ ಖಾನ್ ಬರೆದುಕೊಂಡಿದ್ದರು. ಇದು ಭಾರಿ ವಿವಾದ ಸೃಷ್ಟಿಸಿತ್ತು. ಇಂಥ ವರ್ತನೆ ತೋರಿಸಿದಕ್ಕೆ ಅನೇಕರು ಅವರನ್ನು ಟೀಕೆ ಮಾಡಿದ್ದರು. ಬಳಿಕ ಆಮೀರ್​ ಖಾನ್​ಗೆ ತಮ್ಮ ತಪ್ಪಿನ ಅರಿವಾಗಿತ್ತು. ಇದರ ಬಗ್ಗೆಯೂ ನಟ ಉಲ್ಲೇಖಿಸಿದ್ದಾರೆ.

ನಂತರ ಈ ಕುರಿತು ‘ಆಪ್​ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಆಮೀರ್ ಖಾನ್ ಅವರು ಮಾತನಾಡಿದರು. ಆಮೀರ್​ ತಮ್ಮ ನಾಯಿಯನ್ನು ಬೇರೆಯವರಿಂದ ಖರೀದಿಸಿದ್ದರು. ಆ ಮಾಲಿಕರು ನಾಯಿಗೆ ಆ ರೀತಿ ಹೆಸರು ಇಟ್ಟಿದ್ದರು. ಈ ಎಲ್ಲ ಘಟನೆಯನ್ನು ಅವರು ತಮಾಷೆಯಾಗಿ ವಿವರಿಸಿದ್ದರು ಕೂಡ ಅಭಿಮಾನಿಗಳು ಗರಂ ಆಗಿದ್ದರು. ಆದ್ದರಿಂದ ಆಮೀರ್​ ಖಾನ್ ಅವರು ಶಾರುಖ್ ಖಾನ್ ಅವರನ್ನು ಭೇಟಿ ಮಾಡಿ ಕ್ಷಮೆ ಕೇಳಿದ್ದರು. ಅಲ್ಲದೇ ಶಾರುಖ್ ಮಕ್ಕಳಾದ ಆರ್ಯನ್ ಖಾನ್ ಹಾಗೂ ಸುಹಾನಾ ಖಾನ್ ಬಳಿಯೂ ಕ್ಷಮೆ ಕೇಳಿದ್ದರು.