ನಿರ್ಮಾಪಕರು ಸಿಗದೇ ಗೋಳಾಡ್ತಿದ್ದಾರಾ ಆಮೀರ್​ ಖಾನ್​? KRK ಹೇಳಿದ್ದೇನು?

ಒಂದರ ಮೇಲೊಂದರಂತೆ ಫ್ಲಾಪ್​ ಸಿನಿಮಾ ಕೊಡುತ್ತಿರುವ ನಟ ಆಮೀರ್​ ಖಾನ್​ಗೆ ನಿರ್ಮಾಪಕರು ಸಿಗ್ತಿಲ್ವೆ? ಆಗಿದ್ದೇನು? 
 

Aamir Khan Is Struggling To Get Producer On Board For Ghajini 2 and Sarfarosh 2

ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಅಸಹಿಷ್ಣುತೆಯಿಂದಾಗಿ ದೇಶ ಬಿಡುವಂತೆ ಪತ್ನಿ ಸೂಚಿಸಿದ್ದಳು ಎಂಬ ಬಾಲಿವುಡ್ ನಟ, ಆಮೀರ್​ ಖಾನ್​ (Aamir Khan) ಹೇಳಿದ್ದಾಗ ದೊಡ್ಡ ಹಂಗಾಮಾ ಸೃಷ್ಟಿಯಾಗಿತ್ತು.  'ಸತ್ಯಮೇವ ಜಯತೇ' ಟಿವಿ ಸರಣಿ ಮೂಲಕ ಖ್ಯಾತಿ ಗಳಿಸಿದ್ದ ಆಮಿರ್ ಖಾನ್ ಹೀಗೆ ಹೇಳಿದ್ದರಿಂದ  ದೇಶಾದ್ಯಂತ ಅವರ ವಿರುದ್ಧ ವಾಗ್ದಾಳಿ ನಡೆದಿತ್ತು. ಹಲವು ಕ್ಷೇತ್ರಗಳ ದಿಗ್ಗಜರು ಆಮೀರ್​ ವಿರುದ್ಧ ಕೆಂಡಾಮಂಡಲವಾಗಿದ್ದರು. ಇದಾದ ಬಳಿಕ ಒಂದು ವರ್ಗ ಮಾತ್ರ ಖುಷಿ ಪಟ್ಟುಕೊಂಡಿದ್ದರೆ, ತಮ್ಮ ಆರಾಧ್ಯ ದೈವ ಎಂದು ಆಮೀರ್​ ಖಾನ್​ರನ್ನು ಪೂಜಿಸುತ್ತಿದ್ದ ಹಲವು ಅಭಿಮಾನಿಗಳು ಇವರ ವಿರುದ್ಧ ತಿರುಗಿಬಿದ್ದಿದ್ದರು. ಇವರ ಮೇಲಿನ ಗೌರವ ತಗ್ಗಿದಂತೆ ತೋರಿತ್ತು. ತಮ್ಮ ಮಾತಿಗೆ ಸಮರ್ಥನೆ ಕೊಡಲು ಹಲವಾರು ವಿಷಯಗಳನ್ನು ಹೇಳಿದರೂ ಅವರ ಮಾತಿನಿಂದಲೇ ಅವರ ಚಿತ್ರಗಳ ಬೈಕಾಟ್​ ಟ್ರೆಂಡ್​ ಕೂಡ ಶುರುವಾಗಿತ್ತು. ಕಾಕತಾಳೀಯವೋ ಎನ್ನುವಂತೆ ಅದಾದ ಬಳಿಕ ನಟ ಆಮೀರ್​ ಖಾನ್​ ಅವರ ಚಿತ್ರಗಳೆಲ್ಲವೂ ಯಶಸ್ಸುಕಾಣಲೇ ಇಲ್ಲ. 
 
ಆಮೀರ್​ ಖಾನ್​ ಅವರು ಒಂದು ಕಾಲದಲ್ಲಿ ಬ್ಯಾಕ್​ ಟು ಬ್ಯಾಕ್​ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಅದೃಷ್ಟ ಕೈ ಕೊಟ್ಟಿದೆ. ಆಮಿರ್​ ಖಾನ್​ ಮಾಡಿದ ಸಿನಿಮಾಗಳೆಲ್ಲ ಸೋಲುತ್ತಿವೆ. ಕಳೆದ ವರ್ಷ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರ ತೆರೆಕಂಡು ಬಾಕ್ಸ್​ ಆಫೀಸ್​ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಲು ವಿಫಲವಾಗಿದೆ. ಅವರ  ಕೊನೆಯ ಫ್ಲಾಪ್ ಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್. ಇದಾದ  3 ವರ್ಷಗಳ ಬಳಿಕ ಬಿಡುಗಡೆಗೊಂಡ  ಲಾಲ್ ಸಿಂಗ್ ಚಡ್ಡಾ ಕೂಡ ಅಷ್ಟೇನು ಯಶಸ್ಸು ಕಾಣಲಿಲ್ಲ. ಇದರ ನಡುವೆಯೇ, 'ಚಾಂಪಿಯನ್ಸ್' ಎಂಬ ಹೆಸರಿನ ತಮ್ಮ ಮುಂದಿನ ಚಿತ್ರವನ್ನು ನಿರ್ಮಿಸುವುದಾಗಿ ಖಾನ್ ಘೋಷಿಸಿದ್ದರು. ಇದಾದ ಬಳಿಕ  ಚಲನಚಿತ್ರಗಳಲ್ಲಿ ನಟಿಸುವುದರಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿದ್ದರು.  

ಲವ್ ಬ್ರೇಕ್ ಅಪ್ ಆಗಿದ್ದಕ್ಕೆ ಆಮೀರ್ ತಲೆ ಬೋಳಿಸಿಕೊಂಡಿದ್ರಾ? ಏನಿದು ಘಟನೆ?

'ನಟನಾಗಿ ಚಿತ್ರ ಮಾಡುವಾಗ, ನಾನು ಅದರಲ್ಲಿ ತುಂಬಾ ಕಳೆದುಹೋಗುತ್ತೇನೆ ಮತ್ತು ನನ್ನ ಜೀವನದಲ್ಲಿ ಬೇರೆ ಏನೂ ಆಗುವುದಿಲ್ಲ. ಅದಕ್ಕಾಗಿಯೇ ನಾನು ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ನಾನು ನನ್ನ ಕುಟುಂಬದೊಂದಿಗೆ ಇರಲು ಬಯಸುತ್ತೇನೆ. ನನ್ನ ತಾಯಿಯೊಂದಿಗೆ, ನನ್ನ ಮಕ್ಕಳೊಂದಿಗೆ. ನಾನು 35 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇಷ್ಟು ವರ್ಷ  ನನ್ನ ಚಲನಚಿತ್ರಗಳ (Films) ಮೇಲೆ ಗಮನಹರಿಸಿದ್ದೇನೆ ಮತ್ತು ನನಗೆ ಹತ್ತಿರವಿರುವ ಜನರಿಗೆ ಇದು ನ್ಯಾಯಸಮ್ಮತವಲ್ಲ ಎಂದು ನಾನು ಭಾವಿಸುತ್ತೇನೆ'  ಆಮೀರ್​ ಹೇಳಿದ್ದಾರೆ. ಇದರ ಬೆನ್ನಲ್ಲೇ ನಟನೀಗ ಭಾರಿ  ಟ್ರೋಲ್​ಗೆ ಒಳಗಾಗುತ್ತಿದ್ದಾರೆ.

 ಬಾಲಿವುಡ್​ನ ಕಿರಿಕ್​ ವಿಮರ್ಶಕ ಎಂದೇ ಫೇಮಸ್​ ಆಗಿರುವ  ಕಮಾಲ್​ ಆರ್​. ಖಾನ್ (Kamaal R Khan-KRK) ಕೂಡ ಈಗ ಆಮೀರ್​ ಖಾನ್​ ಬಗ್ಗೆ ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ. ಆಗಾಗ  ವಿವಾದಾತ್ಮಕ ರೀತಿಯಲ್ಲಿ ಪೋಸ್ಟ್​ ಮಾಡಿ ಸುದ್ದಿ ಆಗುವ ಕೆಆರ್​ಕೆ, ಈಗ ಆಮೀರ್​ ಕುರಿತು ಮಾತನಾಡಿದ್ದಾರೆ. ಆಮಿರ್​ ಖಾನ್​ ಜೊತೆ ಸಿನಿಮಾ ಮಾಡಲು ಯಾವ ನಿರ್ಮಾಪಕರೂ ಮುಂದೆ ಬರುತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.   ‘ಘಜಿನಿ 2’ ಮತ್ತು ‘ಸರ್ಫರೋಷ್​ 2’ ಚಿತ್ರಗಳನ್ನು ಮಾಡಲು ಆಮೀರ್​ ಖಾನ್​ ನಿರ್ಮಾಪಕರನ್ನು ಹುಡುಕುತ್ತಿದ್ದಾರೆ. ಆದರೆ ಅವರ ಜೊತೆ ಸಿನಿಮಾ ಮಾಡಲು ಯಾವುದೇ ನಿರ್ಮಾಪಕರು ಮುಂದೆಬರುತ್ತಿಲ್ಲ. ಅವರು ಕಾಲ್​ ಮಾಡಿದರೆ ಆದಿತ್ಯ ಚೋಪ್ರಾ (Aditya Chopra) ರಿಸೀವ್​ ಮಾಡುತ್ತಿಲ್ಲ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ.

Karan v/s Priyanka: ಹಾಗ್ಯಾಕೆ ಕಾಲು ತಿಕ್ಕುತ್ತಾ ನುಲಿತೀರಿ... ನೀವೇನು ಅವ್ರಾ? ಎಂದಿದ್ದ ವಿಡಿಯೋ ವೈರಲ್!

ಅಂದಹಾಗೆ ಕೆಆರ್​ಕೆ ಅವರು ಹಿಂದಿ ಚಿತ್ರರಂಗದ ಬಹುತೇಕ ಎಲ್ಲ ಸೆಲೆಬ್ರಿಟಿಗಳನ್ನೂ   ಎದುರು ಹಾಕಿಕೊಂಡಿದ್ದಾರೆ. ಅದೇ ವಿಚಾರವಾಗಿ ಅವರು ಜೈಲು ಕೂಡ ಸೇರಿದ್ದು ಇದೆ.  ಅವರು  ತಮ್ಮದೇ ರೀತಿಯಲ್ಲಿ ಸಿನಿಮಾಗಳ ವಿಮರ್ಶೆ ಮಾಡುತ್ತಾರೆ. ಅದರಿಂದ ಅವರು ಟೀಕೆಗೂ ಒಳಗಾಗುತ್ತಾರೆ. ಆ ಬಗ್ಗೆಯೂ ಅವರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ‘ನಾನು ವಿಮರ್ಶೆ ಮಾಡಿದರೆ ನಿರ್ಮಾಪಕರಿಗೆ ದೊಡ್ಡ ಸಮಸ್ಯೆ ಆಗುತ್ತದೆ ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಟ್ವೀಟ್​ ಮತ್ತು ವಿಮರ್ಶೆಯಿಂದಾಗಿ ತಮಗೆ 100 ಕೋಟಿ (100 Crores) ರೂಪಾಯಿ ನಷ್ಟ ಆಯ್ತು ಎಂದು ಒಬ್ಬ ನಿರ್ಮಾಪಕರು ನ್ಯಾಯಾಲಯದಲ್ಲಿ ಹೇಳಿದ್ದರು. ಹಾಗಾಗಿ ನಾನು ಅವರ ಸಿನಿಮಾದ ವಿಮರ್ಶೆ ಮಾಡುವಂತಿಲ್ಲ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ.

Latest Videos
Follow Us:
Download App:
  • android
  • ios