Asianet Suvarna News Asianet Suvarna News

ಆಮೀರ್​ ಖಾನ್​ ಚಿತ್ರ ಹಿಟ್​ ಆಗಿದ್ರೆ ಅಕ್ಷಯ್​ ಕುಮಾರ್​ ಮದ್ವೆನೇ ಆಗ್ತಿರಲಿಲ್ಲ, ಯಾಕೆ ಗೊತ್ತಾ?

ಆಮೀರ್​ ಖಾನ್​ ಟ್ವಿಂಕಲ್​ ಖನ್ನಾ ಅಭಿನಯದ ಮೇಲಾ ಚಿತ್ರ ಹಿಟ್​ ಆಗಿದ್ದರೆ ಅಕ್ಷಯ್​ಕುಮಾರ್​ ಮದ್ವೆ ಆಗೋದು ಡೌಟ್​ ಆಗಿತ್ತು. ಇದ್ಯಾಕೆ ಅಂತೀರಾ?
 

If Aamir Khan flop movie Mela became hit Akshay Kumar would cant  marriage with Twinkle Khanna
Author
First Published Apr 16, 2023, 5:47 PM IST

ಆಮೀರ್ ಖಾನ್ (Amir Khan) ಮತ್ತು ಟ್ವಿಂಕಲ್ ಖನ್ನಾ ಅಭಿನಯದ 'ಮೇಲಾ' ಚಿತ್ರವು ಫ್ಲಾಪ್ ಆಗಿರಬಹುದು ಆದರೆ 2000 ರ ಪ್ರಸಿದ್ಧ ಚಲನಚಿತ್ರಗಳಲ್ಲಿ ಒಂದಾಗಿದೆ. ಅದು ಚರ್ಚೆಗೆ ಬರುವುದರ ಹಿಂದೆ ಹಲವು ಕಾರಣಗಳಿವೆ. ಇದು ಅಮೀರ್ ಟ್ವಿಂಕಲ್ ಜೋಡಿ ಮೊದಲ ಬಾರಿಗೆ ಕಾಣಿಸಿಕೊಂಡ ಚಿತ್ರ. ಇದರೊಂದಿಗೆ, ಟ್ವಿಂಕಲ್ ಖನ್ನಾ ಅಕ್ಷಯ್ ಕುಮಾರ್ ಅವರೊಂದಿಗಿನ ಸಂಬಂಧಕ್ಕಾಗಿ ಸುದ್ದಿ ಮಾಡುತ್ತಿದ್ದರು. 'ಮೇಲಾ' ಚಿತ್ರ ಹಿಟ್ ಆಗಿದ್ದರೆ ಬಹುಶಃ ಟ್ವಿಂಕಲ್ ಖನ್ನಾ ಅಕ್ಷಯ್ ಕುಮಾರ್ ಎಂದಿಗೂ ಒಂದಾಗುತ್ತಿರಲಿಲ್ಲ, ಇಂದು ಅವರ ನಡುವಿನ ಸಂಬಂಧವು ರೂಪುಗೊಳ್ಳುತ್ತಿರಲಿಲ್ಲ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ‘ಮೇಲಾ’ ಚಿತ್ರ ಬಿಡುಗಡೆಯಾಗಿ 23 ವರ್ಷಗಳಾಗಿದ್ದು, ಈ ಚಿತ್ರವನ್ನು ಧರ್ಮೇಶ್ ದರ್ಶನ್ ನಿರ್ದೇಶಿಸಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಫ್ಲಾಪ್ (Superflop) ಎಂದು ಸಾಬೀತಾಯಿತು. ಈ ಚಿತ್ರ ವಿಫಲವಾದ ತಕ್ಷಣ, ಟ್ವಿಂಕಲ್ ಖನ್ನಾ ಅವರು ಅಕ್ಷಯ್ ಕುಮಾರ್​ ಅವರನ್ನು ಮದುವೆಯಾದರು.  ಈ ಚಿತ್ರ ಹಿಟ್ ಆಗಿದ್ದರೆ ಏನಾಗುತ್ತಿತ್ತು ಎಂದು ನೀವು ಊಹಿಸುವುದೂ ಕಷ್ಟ. ಏನಾಗುತ್ತಿತ್ತು ಎಂದರೆ,  ಟ್ವಿಂಕಲ್- ಅಕ್ಷಯ್ ಒಂದಾಗುತ್ತಿರಲಿಲ್ಲ. ಏಕೆಂದರೆ  ಟ್ವಿಂಕಲ್ ಅವರು ಅಕ್ಷಯ್ ಜೊತೆ ಮಾಡಿಕೊಂಡಿದ್ದ ಕಂಡೀಷನ್ ಹಾಗಾಗಿತ್ತು. ಹಾಗಿದ್ದರೆ ಅದೇನು ಎಂದು ತಿಳಿಯುವ ಕುತೂಹಲ ಅಲ್ಲವೆ? 

'ಮೇಲಾ' ಚಿತ್ರೀಕರಣ ನಡೆಯುತ್ತಿರುವಾಗ, ಅಕ್ಷಯ್ ಮತ್ತು ಟ್ವಿಂಕಲ್ (Twinkle Khanna) ಅವರ ಪ್ರೇಮಕಥೆಯು ಬಹಳಷ್ಟು ಸುದ್ದಿಗಳನ್ನು ಮಾಡುತ್ತಿತ್ತು.  ಆ ದಿನಗಳಲ್ಲಿ ನಟಿ ರವೀನಾ ಟಂಡನ್ ಜೊತೆಗೆ ಅಕ್ಷಯ್ ಹೆಸರು ಹೆಚ್ಚಾಗಿ ಕೇಳಿ ಬರುತ್ತಿತ್ತು. ಅಕ್ಷಯ್ ಕುಮಾರ್ ರವೀನಾಳನ್ನು ಮಾತ್ರ ಮದುವೆಯಾಗುತ್ತಾರೆ ಎಂದು ಮೊದಲಿಗೆ ಜನರು ಭಾವಿಸಿದ್ದರು, ಆದರೆ ಅದು ನಡೆಯಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, 2000 ರ ಸಮಯದಲ್ಲಿ, ಟ್ವಿಂಟಲ್ ಅವರ ವೃತ್ತಿಜೀವನವು ಅವನತಿ ಹೊಂದಿತ್ತು ಮತ್ತು ಅಕ್ಷಯ್ ಕುಮಾರ್ ಸೂಪರ್​ಹಿಟ್​ ಆಗಿದ್ದರು. ಆದರೂ, ಅವರು ಟ್ವಿಂಕಲ್‌ರನ್ನು ಮದುವೆಯಾಗಲು ಬಯಸಿದ್ದರು. ಅಕ್ಷಯ್​, ಟ್ವಿಂಕಲ್​  ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಆದರೆ ಟ್ವಿಂಕಲ್ ಅಕ್ಷಯ್ ಜೊತೆ ಪ್ರೀತಿಯಲ್ಲಿದ್ದರೂ ತಮ್ಮ ವೃತ್ತಿಜೀವನದತ್ತ ಗಮನ ಹರಿಸಲು ಬಯಸಿದ್ದರು. 

Akshay Kumar: ಥೂ ನಿಮ್ಗೆ ನಾಚಿಕೆ ಆಗಲ್ವಾ ಎಂದು ನಟ ಅಕ್ಷಯ್​ ಕುಮಾರ್​ಗೆ ನೆಟ್ಟಿಗರಿಂದ ತರಾಟೆ!

ಹೀಗಿರುವಾಗ ಅಕ್ಷಯ್ ಕುಮಾರ್ ಅವರು ಮೇಲಾ  ಚಿತ್ರ ಬಿಡುಗಡೆಗೂ ಮುನ್ನವೇ ಟ್ವಿಂಕಲ್ ಖನ್ನಾ ಅವರ ಬಳಿ ಮದುವೆ ಪ್ರಸ್ತಾಪ ಇಟ್ಟಾಗ,  ಟ್ವಿಂಕಲ್ ಅವರು ಒಂದು ಕಂಡೀಷನ್​ ಹಾಕಿದ್ದರು. ಅದೇನೆಂದರೆ,  ಟ್ವಿಂಕಲ್ ಅವರ ಮೇಲಾ ಫ್ಲಾಪ್​ ಆದರೆ ಮದುವೆಯಾಗುವೆ, ಇಲ್ಲದಿದ್ದರೆ ನನ್ನ ವೃತ್ತಿ ಜೀವನದ ಕಡೆಗೆ ಗಮನ ಹರಿಸುವೆ ಎಂದು.  ಟ್ವಿಂಕಲ್‌ಗೆ ಹೀಗೆ ಹೇಳುವುದು ಸುಲಭವಾಗಬಹುದು, ಆದರೆ ಅಕ್ಷಯ್ ಕುಮಾರ್ ಯಾವಾಗಲೂ ಈ ಚಿತ್ರದ ಬಗ್ಗೆ ಸಂದಿಗ್ಧತೆಯಲ್ಲಿಯೇ ಇದ್ದರು. ಸೂಪರ್​ಹಿಟ್​ ಆಗಿಬಿಟ್ಟರೆ ತಮ್ಮ ಗತಿ ಏನು ಎಂದು ಚಿಂತಿಸುತ್ತಿದ್ದರು.  ಕೊನೆಗೆ ಅಕ್ಷಯ್​ ಕುಮಾರ್​ ವಿನ್​ ಆದ್ರು,  'ಮೇಲಾ' (Mela) ಫ್ಲಾಪ್​ ಆಯಿತು.  18 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 25 ಕೋಟಿ ಗಳಿಸಲು ಸಾಧ್ಯವಾಯಿತು. ಅದು ಫ್ಲಾಪ್​ ಆದರೂ ಅಕ್ಷಯ್​ ಕುಮಾರ್​ ಸಕ್ಸಸ್​ ಆದರು.

ಆದಾಯ ತೆರಿಗೆ ಪಾವತಿಯ ಗುಟ್ಟು ರಟ್ಟು ಮಾಡಿದ ನಟ Akshay Kumar

ಈ ಬಗ್ಗೆ ಸ್ವತಃ ಅಕ್ಷಯ್ ಫಿಲ್ಮ್‌ಫೇರ್ (Filmfare) ಸಂಭಾಷಣೆಯಲ್ಲಿ ಹೇಳಿದ್ದಾರೆ.  ವರದಿಗಳ  ಪ್ರಕಾರ, ಟ್ವಿಂಕಲ್ ಅವರನ್ನು ಮದುವೆಯಾಗಲು ಒಪ್ಪಿದಾಗ, ನಟಿಯ ತಾಯಿ ಡಿಂಪಲ್ ಕಪಾಡಿಯಾ,  ಅಕ್ಷಯ್ ಕುಮಾರ್ ಜೊತೆ ಒಂದು ವರ್ಷವಾದರೂ ಲಿವ್​ ಇನ್​ನಲ್ಲಿ ಇರಲು ಹೇಳಿದ್ದರಂತೆ. ಆ ಸಮಯದಲ್ಲಿ ಇಬ್ಬರ ನಡುವೆ ಬಾಂಧವ್ಯ ವೃದ್ಧಿಯಾದ ಮೇಲೆ ಮದುವೆಗೆ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ.  17 ಜನವರಿ 2001 ರಂದು ಇಬ್ಬರೂ ವಿವಾಹವಾದರು. 22 ವರ್ಷಗಳ ಈ ದಾಂಪತ್ಯದಲ್ಲಿ, ದಂಪತಿಗಳು ಮಗ ಆರವ್ ಮತ್ತು ಮಗಳು ನಿತಾರಾಗೆ ಪೋಷಕರಾಗಿದ್ದಾರೆ. ಅಕ್ಷಯ್ ಇನ್ನೂ ಸಿನಿಮಾಗಳಲ್ಲಿ ಸಕ್ರಿಯವಾಗಿರುವಾಗಲೇ ಟ್ವಿಂಕಲ್ ಈಗ ಬಾಲಿವುಡ್‌ನಿಂದ ದೂರವಾಗಿದ್ದಾರೆ. 

Follow Us:
Download App:
  • android
  • ios