ನಟಿ ಆಲಿಯಾ ಭಟ್​ ವಿಭಿನ್ನ ರೀತಿಯಲ್ಲಿ ಪೋಸ್​ ಕೊಟ್ಟಿರುವ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ಫ್ಯಾನ್ಸ್​ ಫುಲ್​ ಶಾಕ್​ ಆಗಿದ್ದಾರೆ.  

ಚಿತ್ರ ತಾರೆಯರು ಫಿಟ್​ ಆಗಿರಬೇಕು ಎನ್ನುವ ಕಾರಣಕ್ಕೆ, ಅವರು ವರ್ಕ್​ಔಟ್​ ಮಾಡುವುದು ಸಹಜ. ಇದೇ ಕಾರಣಕ್ಕೆ ಹೆಚ್ಚಿನ ತಾರೆಯರು ಬಳಕುವ ಬಳ್ಳಿಯಂತೆಯೇ ಇರುತ್ತಾರೆ. ಜೀರೋ ಸೈಜ್​ ಇಲ್ಲವೆಂದರೆ ಅವರಿಗೆ ಸಿನಿಮಾದಲ್ಲಿ ಚಾನ್ಸ್​ ಸಿಗುವುದು ಕಮ್ಮಿಯೇ. ಅದರಂತೆಯೇ ಆಲಿಯಾ ಭಟ್​ ಕೂಡ ಸಾಕಷ್ಟು ವರ್ಕ್​ಔಟ್​ ಮಾಡುತ್ತಾರೆ. ಒಂದು ಮಗುವಿನ ಅಮ್ಮನಾದ ಮೇಲೂ ಆಲಿಯಾ ಇಂದಿಗೂ ತಮ್ಮ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಂಡಿದ್ದು, ಇದಕ್ಕಾಗಿ ಸಕತ್​ ಟ್ರೈ ಕೂಡ ಮಾಡುತ್ತಾರೆ. ಪ್ರತಿದಿನ ಡಯೆಟ್​ ಪಾಲನೆ ಮಾಡುತ್ತಾರೆ, ಜೊತೆಗೆ ಹಲವಾರು ರೀತಿಯಲ್ಲಿ ವರ್ಕ್​ ಔಟ್​ ಮಾಡುತ್ತಾರೆ. ಆದರೆ ಇದೀಗ ವೈರಲ್​ ಆಗಿರುವ ಆಲಿಯಾ ಭಟ್​ ವಿಡಿಯೋ ನೋಡಿ ಮಾತ್ರ ನೆಟ್ಟಿಗರು ಮೂಗಿನ ಮೇಲೆ ಬೆರಳು ಇಟ್ಟಿದ್ದಾರೆ. ಏಕೆಂದರೆ ಇದರಲ್ಲಿ ಒಂದಕ್ಕಿಂದ ಒಂದು ಭಯಾನಕ ಪೋಸ್​ಗಳನ್ನು ನಟಿ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಹೌದು. ಇದೀಗ ವೈರಲ್​ ಆಗಿರುವ ವಿಡಿಯೋದಲ್ಲಿ ನಟಿ ವಿಭಿನ್ನ ಪೋಸ್​ಗಳನ್ನು ನೀಡಿದ್ದಾರೆ. ಕೈಯನ್ನು ತಿರುವು ಮುರುವು ಮಾಡಿದ್ದಾರೆ. ಕಾಲನ್ನು ಸೊಟ್ಟಗೆ ಮಾಡಿದ್ದಾರೆ. ಈ ಪೋಸ್​ಗಳನ್ನು ನೋಡಿ ನಟ ಶಾರುಖ್​ ಖಾನ್​ ಸೇರಿದಂತೆ ಅಲ್ಲಿದ್ದವರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಕಪಿಲ್​ ಶರ್ಮಾ ಅವರ ಕಾಮಿಡಿ ಷೋನಲ್ಲಿ ಆಲಿಯಾ ಭಟ್​ ಕಾಣಿಸಿಕೊಂಡಿರುವ ಸಮಯದಲ್ಲಿ ಈ ಪೋಸ್​ಗಳನ್ನು ಮಾಡಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾರೆ. ಇವರ ಈ ಪೋಸ್​ಗಳಿಗೆ ಶಾರುಖ್​ ಖಾನ್​ ನೋಡಲಾಗದೆ ಕಣ್ಣನ್ನೂ ಮುಚ್ಚಿಕೊಂಡಿದ್ದಾರೆ. ಬಾಯಿ ತೆರೆದು ಅಬ್ಬಬ್ಬಾ ಎಂದಿದ್ದಾರೆ. ನಟಿ ಆಲಿಯಾ ಅವರ ಈ ಹೊಸ ಅವತಾರಕ್ಕೆ ನೆಟ್ಟಿಗರಂತೂ ಫಿದಾ ಆಗಿಬಿಟ್ಟಿದ್ದಾರೆ. ನಿಮಗೆ ನಮೋ ನಮಃ ಎನ್ನುತ್ತಿದ್ದಾರೆ. 

ಮದ್ವೆಯಾದ 7 ತಿಂಗಳಿಗೇ ಅಮ್ಮನಾದ ಆಲಿಯಾ ಭಟ್​ ಕುರಿತ ಇಂಟರೆಸ್ಟಿಂಗ್​ ವಿಷ್ಯ ಇದೀಗ ರಿವೀಲ್​!

ಅಷ್ಟಕ್ಕೂ ನಿನ್ನೆ ಮಾರ್ಚ್​ 15ರಂದು ನಟಿ ಆಲಿಯಾ ಭಟ್​ 31 ನೇ ವರ್ಷಕ್ಕೆ ಕಾಲಿಟ್ಟರು. ಈ ಸಮಯದಲ್ಲಿ ಅವರ ವರ್ಕ್​ಔಟ್​ ವಿಚಾರವಾಗಿಯೂ ಕೆಲವೊಂದು ರಹಸ್ಯಗಳು ಹೊರಬಂದಿವೆ. ವರ್ಕೌಟ್‌ ಎಂದರೆ ಕೇವಲ ಮೈಮಾಟ ರೂಪುಗೊಳ್ಳುವ ಪ್ರಕ್ರಿಯೆಯಲ್ಲ. ಅದು ನಮ್ಮ ರೋಗ ನಿರೋಧಕತೆ ಮತ್ತು ಶಕ್ತಿಯನ್ನು ಹೆಚ್ಚಿಸುವಂತೆ ಇರಬೇಕು. ನಾವು ಮಾಡುವ ವರ್ಕೌಟ್‌ ಆರೋಗ್ಯಕರವಾಗಿರಬೇಕು. ಅನಾರೋಗ್ಯಕರ ಡಯೆಟ್‌ ಮಾಡಬೇಡಿ ಎಂದು ತಮ್ಮ ಸಂದರ್ಶನವೊಂದರಲ್ಲಿ ನಟಿ ಹೇಳಿದ್ದರು. ಅಷ್ಟಕ್ಕೂ ನಟಿ ಬಾಲಿವುಡ್​ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದ್ದು ಕರಣ್​ ಜೋಹರ್​ ಅವರ ಸ್ಟುಡೆಂಟ್​ ಆಫ್​ ದಿ ಇಯರ್​ ಮೂಲಕ. ಈ ಸಿನಿಮಾದಲ್ಲಿ ನಟಿಸಬೇಕಾದ ಸಂದರ್ಭದಲ್ಲಿ ಇವರು 68 ಕೆಜಿ ತೂಕ ಹೊಂದಿದ್ದರು. ಅವರ ವಯಸ್ಸು ಮತ್ತು ಎತ್ತರಕ್ಕೆ ಹೋಲಿಸಿದರೆ ಅವರ ತೂಕ 20 ಕೆಜಿ ಹೆಚ್ಚಿತ್ತು. ಅವರು ಸೂಪರ್‌ ಹೆಲ್ದಿ ವರ್ಕೌಟ್‌ ಮೂಲಕ ಇವರು ತೂಕ ಇಳಿಸುವಲ್ಲಿ ಸಫಲರಾದರು. 16 ಕೆ.ಜಿ ತೂಕ ಇಳಿಸಿದ್ದರು. 

ಸಾವಯವ ಮತ್ತು ಆರೋಗ್ಯಕರ ಆಹಾರ ತಮ್ಮ ಅವರ ಡಯೆಟ್‌ ಪ್ಲ್ಯಾನ್‌ನಲ್ಲಿ ಇರುತ್ತದೆ ಎಂದು ಈ ಹಿಂದೆ ನೀಡಿದ ಸಂದರ್ಶನದಲ್ಲಿ ನಟಿ ಹೇಳಿದ್ದರು. ನನಗೆ ಈಕೆಗೆ ಸಿಹಿ ತಿನ್ನುವುದು ಇಷ್ಟ. ಸಿಹಿ ಸಿಕ್ಕಾಗ ಬಿಡುತ್ತಲೇ ಇರಲಿಲ್ಲ. ಆದರೆ ನನಗೆ ಪರ್ಸನಲ್‌ ಟ್ರೈನರ್‌ ದೊರಕಿದಾಗ ನನ್ನ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಾಯಿತು. ನಾನು ತರಕಾರಿ ಮತ್ತು ಚಿಕನ್‌ ತಿನ್ನುತ್ತೇನೆ. ನನಗೆ ಇಷ್ಟವಾಗಿರುವ ಎಲ್ಲಾ ಆಹಾರಗಳನ್ನು ತ್ಯಜಿಸಬೇಕಾಯಿತು ಎಂದಿದ್ದಾರೆ. 

ಆಲಿಯಾಗೆ ಹುಟ್ಟುಹಬ್ಬದ ಸಂಭ್ರಮ: 30 ವರ್ಷಕ್ಕೇ 550 ಕೋಟಿ ರೂ. ಒಡತಿಯ ಇಂಟರೆಸ್ಟಿಂಗ್​ ಕಹಾನಿ....

View post on Instagram