ನನಗೆ ಲವ್ ಫೇಲ್ಯೂರ್ ಆಗಿಲ್ಲ; ರವಿಚಂದ್ರನ್ ಪ್ರಶ್ನೆಗೆ ರಕ್ಷಿತ್ ಶೆಟ್ಟಿಯ ಉತ್ತರ

ರಕ್ಷಿತ್‌ಗೆ ಲವ್ ಫೇಲ್ಯೂರ್ ಪ್ರಶ್ನೆ ಎದುರಾಗಿದೆ. ಅಂದಹಾಗೆ ಈ ಪ್ರಶ್ನೆ ಮಾಡಿದ್ದು ಮತ್ಯಾರು ಅಲ್ಲ ಸ್ಯಾಂಡಲ್ ವುಡ್ ಕ್ರೇಜಿ ಸ್ಟಾರ್ ರವಿಚಂದ್ರನ್. ಹೌದು, ನಿರೂಪಕಿ ಅನುಶ್ರೀ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ರಕ್ಷಿತ್ ಮತ್ತು ರವಿಚಂದ್ರನ್(Ravichandran) ಅವರನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ರವಿಚಂದ್ರನ್, ರಕ್ಷಿತ್ ಅವರಿಗೆ ಲವ್ ಫೇಲ್ಯೂರ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

sandalwood Actor rakshith shetty answers to Ravichandran love failure question sgk

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಆಗಾಗ, ಪ್ರೀತಿ, ಮದುವೆ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸದ್ಯ ರಕ್ಷಿತ್ 777 ಚಾರ್ಲಿ ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಮಾಡಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಖುಷಿಯಲ್ಲಿರುವ ರಕ್ಷಿತ್‌ಗೆ ಲವ್ ಫೇಲ್ಯೂರ್ ಪ್ರಶ್ನೆ ಎದುರಾಗಿದೆ. ಅಂದಹಾಗೆ ಈ ಪ್ರಶ್ನೆ ಮಾಡಿದ್ದು ಮತ್ಯಾರು ಅಲ್ಲ ಸ್ಯಾಂಡಲ್ ವುಡ್ ಕ್ರೇಜಿ ಸ್ಟಾರ್ ರವಿಚಂದ್ರನ್. ಹೌದು, ನಿರೂಪಕಿ ಅನುಶ್ರೀ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ರಕ್ಷಿತ್ ಮತ್ತು ರವಿಚಂದ್ರನ್(Ravichandran) ಅವರನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ರವಿಚಂದ್ರನ್, ರಕ್ಷಿತ್ ಅವರಿಗೆ ಲವ್ ಫೇಲ್ಯೂರ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಸಂದರ್ಶನದಲ್ಲಿ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಚರ್ಚೆ ಮಾಡಲಾಗಿದೆ. ಇದರಲ್ಲಿ ಕ್ರೇಜಿ ಸ್ಟಾರ್, ರಕ್ಷಿತ್ ಅವರಿಗೆ 'ಲವ್ ಫೇಲ್ಯೂರ್ ಆಗಿದ್ರೆ ನಿಮಗೆ, ಅದಕ್ಕೆ ಇವತ್ತು ನೀವು ಸಕ್ಸಸ್ ಆಗಿರುವುದು' ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಕ್ಷಿತ್, 'ನನ್ನ ಪ್ರಕಾರ ನನಗೆ ಲವ್ ಫೇಲ್ಯೂರ್ ಆಗಿಲ್ಲ. ಆದರೆ ಜಗತ್ತು ಪೂರ್ತಿ ಅದನ್ನು ಲವ್ ಫೇಲ್ಯೂರ್ ಅಂತ ಅಂದ್ಕೊಂಡಿದೆ' ಎಂದು ಹೇಳಿದ್ದಾರೆ. ಈ ವೇಳೆ ನಿರೂಪಕಿ ಅನುಶ್ರೀ ಸೇರಿದಂತೆ ಅಲ್ಲಿ ಇದ್ದ ಪ್ರೇಕ್ಷಕರು ಸಹ ಜೋರಾಗಿ ನಕ್ಕಿದ್ದಾರೆ.

ಬಳಿಕ ತಕ್ಷಣ ರವಿಚಂದ್ರನ್ 'ಜಗತ್ತು ಹೆಣ್ಣಿನ ಋಣ ಕೊಟ್ಟ ಆದರೆ ಮಣ್ಣಿನ ಋಣ ಕೊಟ್ಟಿಲ್ಲ' ಎಂದು ರಕ್ಷಿತ್ ಕಾಲೆಳೆದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದ್ಯ ಸಂಪೂರ್ಣ ಸಂದರ್ಶನದ ಪ್ರೋಮೋ ಮಾತ್ರ ರಿಲೀಸ್ ಮಾಡಲಾಗಿದೆ. ಅಭಿಮಾನಿಗಳು ಸಂಪೂರ್ಣ ಸಂದರ್ಶನಕಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ರಕ್ಷಿತ್ ಅವರ ಲವ್ ಫೇಲ್ಯೂರ್ ಉತ್ತರ ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿದೆ.

ಕನ್ನಡ ಮಾತನಾಡಿದ ಬೆನ್ನಲ್ಲೇ ರಕ್ಷಿತ್ ಶೆಟ್ಟಿಗೆ ಸಾಥ್ ನೀಡಿದ ನಟಿ ಸಾಯಿ ಪಲ್ಲವಿ

ರಶ್ಮಿಕಾ ಜೊತೆ ನಿಶ್ಚಿತಾರ್ಥ, ಬ್ರೇಕಪ್

ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಪ್ರೀತಿ, ನಿಶ್ಚಿತಾರ್ಥ ಬ್ರೇಕಪ್ ವಿಚಾರ ಎಲ್ಲರಿಗೂ ಗೊತ್ತಿರುವುದೆ. ತಮ್ಮದೇ ಕಿರಿಕ್ ಪಾರ್ಟಿ ಸಿನಿಮಾದ ಹೀರೋಯಿನ್ ರಶ್ಮಿಕಾ ಮಂದಣ್ಣ ಅವರನ್ನು ರಕ್ಷಿತ್ ಪ್ರೀತಿಸಿ, ನಿಶ್ಚಿತಾರ್ಥ ಮಾಡಿಕೊಂಡು ನಂತರ ದೂರ ದೂರ ಆದರು. ಇಬ್ಬರ ಬ್ರೇಕಪ್ ವಿಚಾರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಅಭಿಮಾನಿಗಳು ರಕ್ಷಿತ್ ಶೆಟ್ಟಿ ಪರ ನಿಂತು, ಧೈರ್ಯ ತುಂಬಿದರು. ಆ ಸಮಯದಲ್ಲಿ ರಕ್ಷಿತ್ ಸಾಮಾಜಿಕ ಜಾಲತಾಣದಿಂದನೂ ದೂರ ಸರಿದಿದ್ದರು. ನಂತರ ಅವನೇ ಶ್ರೀಮನ್ನಾರಾಯಣ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು.

ಮತ್ತೆ ರಮ್ಯಾ ಹೆಸರು ಹೇಳಿದ ರಕ್ಷಿತ್

ಇದೇ ಸಂದರ್ಭದಲ್ಲಿ ರಕ್ಷಿತ್ ಮತ್ತೆ ರಮ್ಯಾ ಬಗ್ಗೆ ಮಾತನಾಡಿದ್ದಾರೆ. ಅನುಶ್ರೀ ಕನ್ನಡ ಸಿನಿಮಾರಂಗದ ಹಾಟೆಸ್ಟ್ ನಾಯಕಿ ಯಾರು ಎಂದು ಕೇಳಿದ ಪ್ರಶ್ನೆಗೆ ರಕ್ಷಿತ್ ರಮ್ಯಾ ಎಂದು ಉತ್ತರ ನೀಡಿದ್ದಾರೆ. ಮೊನ್ನೆಯಷ್ಟೇ ರಮ್ಯಾ ಮೇಲೆ ಕ್ರಶ್ ಆಗಿತ್ತು ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೆ ರಮ್ಯಾ ಹೆಸರು ಹೇಳಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಹೆಸರು ಸದ್ಯ ಸಿಕ್ಕಾಪಟ್ಟೆ ಓಡುತ್ತಿದೆ. 777 ಚಾರ್ಲಿ ಟ್ರೈಲರ್ ಈವೆಂಟ್ ನಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿ ರಕ್ಷಿತ್, ರಮ್ಯಾ ಅವರನ್ನು ಮದುವೆಯಾಗಲ್ಲ ಎಂದು ಸ್ಪಷ್ಟಣೆ ನೀಡಿದ್ದರು. ಆದರೂ ಇಬ್ಬರ ಹೆಸರು ಜೋರಾಗಿ ಸದ್ದು ಮಾಡುತ್ತಿದೆ.

777 Charlie; ಪ್ರೇಕ್ಷಕರ ಹೃದಯಗೆದ್ದಿರುವ ಚಾರ್ಲಿ ಬಗ್ಗೆ ಟ್ರೇನರ್ ಪ್ರಮೋದ್ ಹೇಳಿದ್ದೇನು?

ರಕ್ಷಿತ್ ಶೆಟ್ಟಿ ಸದ್ಯ 777 ಚಾರ್ಲಿ ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಈ ಸಿನಿಮಾ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಬಹುಭಾಷೆಯಲ್ಲಿ ಬರ್ತಿರುವ ಚಾರ್ಲಿಯನ್ನು ನೋಡಲು ಅಭಿಮಾನಿಗಳು ಕುತೂಹದಿಂದ ಕಾಯುತ್ತಿದ್ದಾರೆ.

 

Latest Videos
Follow Us:
Download App:
  • android
  • ios