ನಮ್ಮನೆ ನಾಯಿಯನ್ನು ಇಂಜೆಕ್ಷನ್ ಕೊಟ್ಟು ಸಾಯಿಸಿದ್ರು; ನೋವಿನ ಘಟನೆ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ
ನಟ ರಕ್ಷಿತ್ ಶೆಟ್ಟಿ ಅವರ ಮನೆಯಲ್ಲಿದ್ದ ನಾಯಿಯ ಬಗ್ಗೆ ಮಾತನಾಡಿ, ನಮ್ಮ ಮನೆಯಲ್ಲಿ ಒಂದು ನಾಯಿಗಳು ಇತ್ತು. ಪಮೋರಿಯನ್ ನಾಯಿ ಮಿಕ್ಕಿ ಅಂತ. ಅದು ಎಲ್ಲರಿಗೂ ಕಚ್ಚೋಕೆ ಸ್ಟಾರ್ಟ್ ಮಾಡಿತ್ತು ಆಗ ಡಾಕ್ಟರ್ ಇಂಜೆಕ್ಷನ್ ಕೊಟ್ಟು ಅದನ್ನ ಸಾಯಿಸಿದ್ರು ಎಂದು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಸದ್ಯ 777 ಚಾರ್ಲಿ(777 Charlie) ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಸದ್ಯ ಸಿನಿಮಾತಂಡ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದು ದೇಶದಾದ್ಯಂತ ಸಂಚರಿಸುತ್ತಿದೆ. ಚಾರ್ಲಿ ಈಗಾಗಲೇ ಟ್ರೈಲರ್ ಮೂಲಕ ಭಾರಿ ಹೈಪ್ ಕ್ರಿಯೇಟ್ ಮಾಡಿದ್ದು ಬಿಡುಗಡೆಗೆ ದಿನಗಣಗೆ ಪ್ರಾರಂಭವಾಗಿದೆ. ಮನುಷ್ಯ ಮತ್ತು ನಾಯಿಯ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ ಚಾರ್ಲಿಯನ್ನು ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇಂದು (ಜೂನ್ 6) ಬೆಂಗಳೂರಿನಲ್ಲಿ 777 ಚಾರ್ಲಿ ತಂಡ ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು. ಇಂದು ರಕ್ಷಿತ್ ಶೆಟ್ಟಿಗೆ ತುಂಬಾ ವಿಶೇಷವಾದ ದಿನ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಕ್ಷಿತ್‌ಗೆ ಚಾರ್ಲಿಯೇ ದೊಡ್ಡ ಗಿಫ್ಟ್ ಆಗಿದೆ. ಈಗಾಗಲೇ ಎಲ್ಲಾ ಕಡೆ ಪ್ರೀಮಿಯರ್ ಶೋ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರಕ್ಕೆ ದೇಶದಾದ್ಯಂತ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ ಸಿನಿಮಾತಂಡ ಫುಲ್ ಆಗಿದೆ.
ಈ ಬಗ್ಗೆ ರಕ್ಷಿತ್ ಶೆಟ್ಟಿ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ್ದಾರೆ. 'ತುಂಬಾ ಖುಷಿ ಆಗ್ತಿದೆ. ಬರ್ತಡೇ ಸಮಯಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಫಸ್ಟ್ ಟೈಂ ಜೂನ್‌ನಲ್ಲಿ ನನ್ನ ಸಿನಿಮಾ ರಿಲೀಸ್ ಆಗ್ತಿರೋದು. ಕಿರಿಕ್ ಪಾರ್ಟಿ ನಂತರ ಪರಂವ ಸ್ಟುಡಿಯೋದಿಂದ ಬರ್ತಿರೋ ಸಿನಿಮಾ. ದೇಶದಾದ್ಯಂತ ಸಿನಿಮಾ ರಿಲೀಸ್ ಮಾಡುತ್ತಿದ್ದೀವು. ಸ್ಕ್ರೀಪ್ಟ್ ಟೈಂನಲ್ಲೇ ಗೊತ್ತಿತ್ತು, ಅಳು ನಗು ಇದ್ದೆ ಇರತ್ತೆ ಅಂತ. ಈಗ ಅದೇ ರಿಯಾಕ್ಷನ್ ಬಂದಾಗ ಖುಷಿ ಆಗತ್ತೆ ಎಂದಿದ್ದಾರೆ.
Rakshith Shetty Birthday; ಸಿಂಪಲ್ ಸ್ಟಾರ್‌ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ಸಿನಿಮಾ ನೋಡಿ ಮೇನಕಾ ಗಾಂಧಿ ಹೇಳಿದ್ದೇನು?
ಮೇನಕಾ ಗಾಂಧಿ ಸಿನಿಮಾ ನೋಡಿ ಒಂದು ಮಾತು ಹೇಳಿದ್ರು. ಸಾಮಾನ್ಯವಾಗಿ ಅವರು ನಾಯಿ ಸಿನಿಮಾ ನೋಡುವಾಗ ಅರ್ಧಕ್ಕೆ ನಿಲ್ಲಿಸ್ತಾರಂತೆ. ಆದರೆ ಈ ಸಿನಿಮಾ ಪೂರ್ತಿ ನೋಡಿದ್ದಾರೆ. ಈ ಸಿನಿಮಾದಲ್ಲಿ ತಪ್ಪುಗಳನ್ನೇ ಹುಡುಕಲು ಕೂತಿದ್ದೆ ಆದ್ರೆ ಸಿನಿಮಾ ಇಷ್ಟ ಆಯ್ತು ಅಂದ ಹೇಳಿದ್ರು. ಶೂಟಿಂಗ್ ಸ್ಪಾಟ್ ನಲ್ಲಿ ಯಾವಾಗಲೂ ಸ್ವಿಮ್ಮಿಂಗ್ ಪೂಲ್ ಇರ್ತಿತ್ತು. ಕ್ಯಾರವಾನ್ ಇರ್ತಿತ್ತು ಅದನ್ನ ಕೇಳಿ ಅವ್ರಿಗೆ ತುಂಬಾ ಖುಷಿ ಆಯ್ತು ಎಂದರು.
80 ಟೇಕ್ ಕೂಡ ತಗೊಂಡಿದ್ದೀವಿ
ಚಾರ್ಲಿಯಲ್ಲಿ 40 ಟೇಕ್ ಗಿಂತ ಕಡಿಮೆ ಟೇಕ್ ತಗೊಂಡಿದ್ದೆ ಇಲ್ಲ ಕೆಲವೊಮ್ಮೆ 80 ಟೇಕ್ ಕೂಡ ತಗೊಂಡಿದ್ದೀವಿ. ಒಂದೊಂದು ದಿನ ಒಂದೇ ಶಾಟ್ ತೆಗೆದಿರೋದು ಇದೆ. ಲಾಕ್ ಡೌನ್ ಟೈಂ ನಲ್ಲಿ ನಾನು ತುಂಬಾ ಮಿಸ್ ಮಾಡ್ಕೊತಿದ್ದೆ. ಮೈಸೂರಿಂದ ಕರ್ಕೊಂಡ್ ಬನ್ನಿ ನಾನು ಅದರ ಜೊತೆ ಸಮಯ ಕಳಿಬೇಕು ಅಂತ ಕೇಳ್ತಿದ್ದೆ. ಬೇಸಿಕಲಿ ನಾನು ಆ ತರ ಎಮೋಷನಲಿ ಡಿಟ್ಯಾಚ್ ಅಲ್ಲ ನಾನು.
777 Charlie; ಚೆನ್ನೈನಲ್ಲಿ ಕುಳಿತ ಚಾರ್ಲಿ ನೋಡಿ ಬೆರಗಾದ ಫ್ಯಾನ್ಸ್, ಫೋಟೋ ವೈರಲ್
ಇಂಜೆಕ್ಷನ್ ಕೊಟ್ಟು ನಮ್ಮನೆ ನಾಯಿ ಸಾಯಿಸಿದ್ರು
ನಮ್ಮ ಮನೆಯಲ್ಲಿ ಒಂದು ನಾಯಿಗಳು ಇತ್ತು. ಪಮೋರಿಯನ್ ನಾಯಿ ಮಿಕ್ಕಿ ಅಂತ. ಅದು ಎಲ್ಲರಿಗೂ ಕಚ್ಚೋಕೆ ಸ್ಟಾರ್ಟ್ ಮಾಡಿತ್ತು ಆಗ ಡಾಕ್ಟರ್ ಇಂಜೆಕ್ಷನ್ ಕೊಟ್ಟು ಅದನ್ನ ಸಾಯಿಸಿದ್ರು. ಆದು ನನಗೆ ಸಖತ್ ಬೇಜಾರಿತ್ತು. ಚಾರ್ಲಿ ಸಿನಿಮಾಗೆ ವರ್ಕ್ ಶಾಪ್ ಬೇಕೆ ಬೇಕಿತ್ತು ಎಂದು ಹೇಳಿದ್ದಾರೆ.