5000 ವರ್ಷ ಹಿಂದಿನ ಕಥೆ ರಿಲೀಸ್‌ಗೆ 50 ದಿನ ಬಾಕಿ; ಸಿನಿಮಾದಲ್ಲಿ 10 ಸಾವಿರ ಕಲಾವಿದರಿಂದ ನಟನೆ
ಚಿತ್ರ ಬಿಡುಗಡೆಗೆ ಇನ್ನೂ 50 ದಿನಗಳು ಬಾಕಿಯಿದ್ದರೂ, ಟಿಕೆಟ್‌ಗಳು ಲಭ್ಯವಿದೆಯೇ ಎಂದು ಅಭಿಮಾನಿಗಳು ಈಗಾಗಲೇ ಆನ್‌ಲೈನ್‌ನಲ್ಲಿ ಹುಡುಕುತ್ತಿದ್ದಾರೆ. 5000 ವರ್ಷಗಳ ಹಿಂದಿನ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ 10,000 ಕ್ಕೂ ಹೆಚ್ಚು ಜನರು ಕೆಲಸ ಮಾಡಿದ್ದಾರೆ.
ಬೆಂಗಳೂರು: ಈ ವರ್ಷದ ನಿರೀಕ್ಷೆಯ ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. 2024ರ ಅತಿದೊಡ್ಡ ಸಿನಿಮಾ ಎಂದು ಇದು ಬಿಂಬಿತವಾಗಿದ್ದು, ಫಸ್ಟ್ ಲುಕ್, ಟೀಸರ್ ಮೂಲಕ ಸಿನಿಲೋಕದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಸಿನಿಮಾ ಬಿಡುಗಡೆಗೆ ಇನ್ನು 50 ದಿನಗಳಿದ್ದರೂ ಈಗಲೇ ಟಿಕೆಟ್ ಸಿಗುತ್ತಾ ಅಂತ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆ ಹೌಸ್ ಸ್ಟುಡಿಯೋ ಗ್ರೀನ್ ಸಿನಿಮಾ ಬಗ್ಗೆ ನೀಡಿರುವ ಮಹತ್ವದ ಅಪ್‌ಡೇಟ್ ಅಭಿಮಾನಿಗಳಲ್ಲಿನ ಕ್ರೇಜ್ ಹೆಚ್ಚು ಮಾಡಿದೆ. ಈ ಚಿತ್ರ 5000 ವರ್ಷಗಳ ಹಿಂದಿನ ಕಥೆಯನ್ನು ಹೊಂದಿದ್ದು, 10 ಸಾವಿರಕ್ಕೂ ಅಧಿಕ ಜನರು ಸಿನಿಮಾ ಕಾರ್ಯದಲ್ಲಿ ಕೆಲಸ ಮಾಡಿದ್ದಾರೆ.
ನಾವು ಹೇಳುತ್ತಿರೋದು ಕಂಗುವಾ ಸಿನಿಮಾ. ಹೌಸ್ ಸ್ಟುಡಿಯೋ ಗ್ರೀನ್ ಸಂಸ್ಥೆ ರಿಲೀಸ್ ಆಗಿರುವ ಟ್ರೈಲರ್‌ನ ಕೆಲ ದೃಶ್ಯಗಳ ಕ್ಲಿಪ್ ಶೇರ್ ಮಾಡಿಕೊಂಡಿದೆ. ಇದರಲ್ಲಿ ಅದ್ಧೂರಿ ಆಕ್ಷನ್ ಮತ್ತು ಜಬರ್‌ದಸ್ತ್ ವಿಷುಯಲ್ ತೋರಿಸಲಾಗಿದೆ. ಈ ಪೋಸ್ಟ್ ಜೊತೆಯಲ್ಲಿ ಸಿಂಹಾಸನ ಸಿದ್ಧವಾಗಿದ್ದು, ದಂತಕತೆ ಹೊರಬರಲು ಕೇವಲ 50 ದಿನಗಳು ಉಳಿದಿವೆ. ಕಂಗುವಾ ಸಿನಿಮಾ ಇದೇ ವರ್ಷ 2024ರ ನವೆಂಬರ್ 14ರಂದು (#KanguvaFromNov14) ಬಿಡುಗಡೆಯಾಗಲಿದೆ ಎಂದು ದಿನಾಂಕವನ್ನು ಪ್ರಕಟಿಸಲಾಗಿದೆ. ನಿರ್ಮಾಣ ಸಂಸ್ಥೆಯ ಶೇರ್ ಮಾಡಿಕೊಂಡಿರುವ ಕ್ಲಿಪ್ ಅಭಿಮಾನಿಗಳಲ್ಲಿ ಹಬ್ಬದ ಉತ್ಸಾಹವನ್ನು ಹೆಚ್ಚಿಸಿದೆ.
ಬಿಡುಗಡೆಯಾದ ಟ್ರೈಲರ್‌ನಲ್ಲಿ ನಟ ಸೂರ್ಯ ಅತ್ಯಂತ ಶಕ್ತಿಶಾಲಿಯ ಪಾತ್ರದಲ್ಲಿ ತೋರಿಸಲಾಗಿದೆ. ಬಾಲಿವುಡ್ ನಟ ಬಾಬಿ ಡಿಯೋಲ್ ಸಹ ಹೊಸ ಲುಕ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಟ್ರೈಲರ್ ನೋಡಿದ ಅಭಿಮಾನಿಗಳು, ಸಿನ್ಮಾಟೊಗ್ರಾಫಿ ಮತ್ತು ಆಕ್ಷನ್ ಸ್ವೀಕೆನ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಕಂಗುವಾ ಅಭಿಮಾನಿಗಳಿಗೆ ನಿರಾಸೆ ಮಾಡಲ್ಲ ಎಂಬ ಭರವಸೆಯನ್ನು ಮೂಡಿಸಿದೆ.
ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ, ಮುಸ್ಲಿಂ ಹೀರೋ ಎಂಬ ಕಾರಣಕ್ಕೆ ಥಿಯೇಟರ್‌ಗೆ ಬರಲಿಲ್ಲ ಜನರು...1083 ಕೋಟಿ ಲಾಸ್!
ನಿರ್ದೇಶಕ ಶಿವ ಕಂಗುವ ಸಿನಿಮಾದಲ್ಲಿ ಸೂರ್ಯ ನಟನೆಯ ಪಾತ್ರವನ್ನು ಧೈರ್ಯಶಾಲಿ ಮತ್ತು ನಿರ್ಭೀತವಾಗಿ ತೋರಿಸಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಿಕೊಂಡಿರುವ ಸೂರ್ಯ ಅಭಿನಯ ಕಂಡರೆ ಮೂಕವಿಸ್ಮಿತರಾಗೋದು ಫಿಕ್ಸ್ ಎಂಬ ಮಾತನ್ನು ಚಿತ್ರತಂಡ ಹೇಳಿದೆ. ಇನ್ನು ಬಾಬಿ ಡಿಯೋಲ್ ಚಿತ್ರದಲ್ಲಿ ಯಾವ ರೋಲ್ ಮಾಡಿದ್ದಾರೆ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.
ಈ ವರ್ಷದ ಅತಿ ದೊಡ್ಡ ಮತ್ತು ದುಬಾರಿ ಚಿತ್ರವಾಗಿರುವ ಕಂಗುವ ನಿರ್ಮಾಣಕ್ಕೆ 350 ಕೋಟಿ ರೂಪಾಯಿ ಬಂಡವಾಳ ಹಾಕಲಾಗಿದೆ. ಈ ಚಿತ್ರದ ವಿಶೇಷವೆಂದ್ರೆ ನಿರ್ದೇಶಕರು 5000 ವರ್ಷಗಳ ಹಿಂದಿನ ಕಾಲಘಟ್ಟದ ದೃಶ್ಯಗಳನ್ನು ಮರುಸೃಷ್ಟಿಸಿದ್ದು, 7 ದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಚಿತ್ರಕ್ಕಾಗಿ ಹಾಲಿವುಡ್ ತಾಂತ್ರಿಕ ತಜ್ಞರ ನೆರವು ಪಡೆಯಲಾಗಿದ್ದು, ಆ್ಯಕ್ಷನ್ ಮತ್ತು ಸಿನಿಮಾಟೋಗ್ರಫಿಯಲ್ಲಿ ಸಹಾಯ ಪಡೆದುಕೊಳ್ಳಲಾಗಿದೆ. 10 ಸಾವಿರಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ. ಚಿತ್ರದಲ್ಲಿ ಅತಿದೊಡ್ಡ ಯುದ್ಧದ ಸನ್ನಿವೇಶಗಳನ್ನು ಹೊಂದಿರುವ ಹೆಚ್ಚು ಕಲಾವಿದರನ್ನು ಬಳಕೆ ಮಾಡಿಕೊಳ್ಳಲಾಗಿದೆ.
2 ಕೋಟಿ ಬಜೆಟ್‌ನ ಸಿನಿಮಾಗೆ 15 ದಿನವಾದ್ರೂ ಟಿಕೆಟ್ ಸಿಕ್ಕಿರಲಿಲ್ಲ; ಗಳಿಕೆ ಎಷ್ಟಿರಬಹುದು?