2 ಕೋಟಿ ಬಜೆಟ್‌ನ ಸಿನಿಮಾಗೆ 15 ದಿನವಾದ್ರೂ ಟಿಕೆಟ್ ಸಿಕ್ಕಿರಲಿಲ್ಲ; ಗಳಿಕೆ ಎಷ್ಟಿರಬಹುದು?
36 ವರ್ಷಗಳ ಹಿಂದೆ ಬಿಡುಗಡೆಯಾದ ಒಂದು ಸಿನಿಮಾವು ಅಭೂತಪೂರ್ವ ಯಶಸ್ಸನ್ನು ಕಂಡಿತು, 15 ದಿನಗಳ ಕಾಲ ಟಿಕೆಟ್ ಸಿಗದಷ್ಟು ಜನಪ್ರಿಯತೆ ಗಳಿಸಿತ್ತು. ಈ ಲೇಖನದಲ್ಲಿ ಆ ಸಿನಿಮಾ ಯಾವುದು, ಅದರ ವಿಶೇಷತೆ ಏನು ಎಂಬುದನ್ನು ತಿಳಿದುಕೊಳ್ಳೋಣ.
ಮುಂಬೈ: ಇಂದು ಯಾವುದೇ ಸಿನಿಮಾ ಬಿಡುಗಡೆಯಾದ್ರೂ 15 ದಿನದಲ್ಲಿಯೇ ಓಟಿಟಿಯಲ್ಲಿ ಬರುತ್ತದೆ. ಈ ಕಾರಣದಿಂದ ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಣೆ ಮಾಡುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 80-90ರ ದಶಕದಲ್ಲಿ ಒಂದೊಂದು ಸಿನಿಮಾಗಳು 200 ರಿಂದ 300 ದಿನಗಳವರೆಗೆ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುತ್ತಿದ್ದವು. ಇಂದು ಕಾಲ ಬದಲಾಗಿದ್ದು, ಬಿಡುಗಡೆಯಾದ ಮೊದಲ ದಿನವೇ ಸಿನಿಮಾಗಳು ಕೋಟಿ ಕ್ಲಬ್ ಸೇರುತ್ತವೆ. ಆದ್ರೆ ಇಂದೂ ಸಹ ಕೆಲ ಸೂಪರ್ ಸ್ಟಾರ್‌ಗಳ ಸಿನಿಮಾಗಳಿಗಾಗಿ ಜನರು ರಾತ್ರಿಯೇ ಥಿಯೇಟರ್ ಮುಂದೆ ಕುಳಿತುಕೊಳ್ಳುತ್ತಾರೆ. ಇಂದು ನಾವು ಹೇಳುತ್ತಿರುವ ಈ ಚಿತ್ರ 36 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಸುಮಾರು 15 ದಿನಗಳವರೆಗೆ ಜನರಿಗೆ ಸಿನಿಮಾ ಟಿಕೆಟ್ ಸಿಕ್ಕಿರಲಿಲ್ಲ. ಅಂದಿನ ಕಾಲದಲ್ಲಿ ಇದು ಬರೋಬ್ಬರಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು.
ತಮ್ಮ ನೆಚ್ಚಿನ ಕಲಾವಿದರ ಸಿನಿಮಾ ನೋಡಲು ಅಭಿಮಾನಿಗಳು ಕಾತುರರಾಗಿರುತ್ತಾರೆ. ಇಂದು ಸಹ ಆನ್‌ಲೈನ್ ಬುಕ್ಕಿಂಗ್ ಇಲ್ಲದ ಥಿಯೇಟರ್ ಮುಂದೆ ಜನರು ಟಿಕೆಟ್ ಕೌಂಟರ್ ಮುಂದೆ ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಕೌಂಟರ್ ಓಪನ್ ಆದ ಅರ್ಧ ಗಂಟೆಯಲ್ಲಿಯೇ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿ ಥಿಯೇಟರ್ ಮುಂದೆ ಹೌಸ್‌ಫುಲ್ ಬೋರ್ಡ್ ಬೀಳುತ್ತದೆ. ಇಂದು ನಾವು ಹೇಳುತ್ತಿರುವ ಸಿನಿಮಾ ಇಂತಹುವುದೇ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಬಾಲಿವುಡ್ ಅಂಗಳದ ಬಹು ತಾರಾಗಣ ಹೊಂದಿದ್ದ ಈ ಚಿತ್ರ 36 ವರ್ಷಗಳ ಹಿಂದೆ ಅಂದ್ರೆ 1988ರಲ್ಲಿ ತೆರೆಕಂಡಿತ್ತು.
1988ರಲ್ಲಿ ಬಿಡುಗಡೆಯಾಗಿದ್ದ ಈ ಯಶಸ್ವಿ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ, ಗೋವಿಂದಾ ಮತ್ತು ಸಂಜಯ್ ದತ್ ನಟಿಸಿದ್ದರು. ಮೂರು ಸ್ಟಾರ್ ನಟರನ್ನು ಹೊಂದಿರುವ ಕಾರಣ ಸಿನಿಮಾ ನೋಡಲು ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತಿದ್ದರು. ಮುಂಬೈ ಸೇರಿದಂತೆ ಹಲವು ಮಹಾನಗರಗಳಲ್ಲಿ 15 ದಿನಗಳವರೆಗೆ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಕೆಲವೇ ದಿನಗಳಲ್ಲಿ ನಾಲ್ಕು ಪಟ್ಟು ಅಂದ್ರೆ 8 ಕೋಟಿ ರೂಪಾಯಿಯನ್ನು ತನ್ನ ಬೊಕ್ಕಸಕ್ಕೆ ತುಂಬಿಸಿಕೊಂಡಿತ್ತು. ಮಿಥುನ್ ಚಕ್ರವರ್ತಿ, ಗೋವಿಂದಾ ಮತ್ತು ಸಂಜಯ್ ದತ್ ಜೊತೆಯಾಗಿ ನಟಿಸಿದ ಸಿನಿಮಾ ಹೆಸರು "ಜೀತೇ ಹೈ, ಶಾನ್ ಸೇ".
ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ, ಮುಸ್ಲಿಂ ಹೀರೋ ಎಂಬ ಕಾರಣಕ್ಕೆ ಥಿಯೇಟರ್‌ಗೆ ಬರಲಿಲ್ಲ ಜನರು...1083 ಕೋಟಿ ಲಾಸ್!
ಜೀತೇ ಹೈ, ಶಾನ್ ಸೇ ಸಿನಿಮಾದಲ್ಲಿ ಸ್ಟಾರ್ ನಟರ ಜೊತೆಯಲ್ಲಿ ನಟಿಯರಾದ ಮಂದಾಕಿನಿ ಮತ್ತು ವಿಜೇತಾ ಪಂಡಿತ್ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಡ್ಯಾನಿ ಡ್ಯಾಂಗ್ಜಾಂಗ್ಪಾ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ "ಜೂಲಿ ಜೂಲಿ ಜಾನಿ ಕಾ ದಿಲ್ ತುಮ್ ಪರ್ ಆಯಾ ಜೂಲಿ" ಹಾಡು ಇಂದಿಗೂ ಫೇಮಸ್ ಆಗಿದೆ. ಈ ಹಾಡಿನಲ್ಲಿಯ "ತೋ ಕೌನ್ ಮಾಂಗ್ ಥಾ" ಡೈಲಾಗ್‌ನ್ನು ಟ್ರೋಲಿಗರು ಬಳಸುತ್ತಿರುತ್ತಾರೆ.
ಕುಮಾರ್ ಸಾನು ಮತ್ತು ಕವಿತಾ ಕೃಷ್ಣಮೂರ್ತಿ ಹಾಡು ಹಾಡಿದ್ದರು. ಹಾಡಿನಲ್ಲಿ ಮಿಥುನ್ ಚಕ್ರವರ್ತಿ ಮತ್ತು ಮಂದಾಕಿನಿ ಜೊತೆಯಾಗಿ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದ್ದರು. ಜೂಲಿ ಜೂಲಿ ಹಾಡು ಇಂದು ಡ್ಯಾನ್ಸಿಂಗ್ ರಿಯಾಲಿಟಿ ಶೋ
ಮೂವರು ಗೆಳೆಯರು ಸಮಾಜ ಸೇವೆ ಮಾಡಲು ಮುಂದಾಗುತ್ತಾರೆ. ಆದ್ರೆ ಸಮಾಜ ಸೇವೆ ಸಲ್ಲಿಸುವ ವೇಳೆ ಮೂವರು ಗೆಳೆಯರ ನಡುವೆ ಮನಸ್ತಾಪ ಉಂಟಾಗುತ್ತದೆ. ಈ ಮೂವರ ಜಗಳದ ಲಾಭ ಪಡೆಯಲು ಸಮಾಜ ವಿರೋಧಿಗಳು ಯತ್ನಿಸುತ್ತಾರೆ ಇದು ಚಿತ್ರದ ಒನ್ ಲೈನ್ ಸ್ಟೋರಿ.
70 ಕೋಟಿ ಬಜೆಟ್, 400 ಕೋಟಿ ಗಳಿಕೆ; 2 ಗಂಟೆ 33 ನಿಮಿಷದ ಚಿತ್ರ ಭಾರತಕ್ಕೆ ಬರಲು 2 ವರ್ಷ ತೊಗೊಂಡಿದ್ಯಾಕೆ?