ಮಹಿಳೆಗೂ ಒಂದಕ್ಕಿಂತ ಹೆಚ್ಚು ಮದುವೆಯಾಗೋ ಹಕ್ಕು ಕೊಡಿ: ಮುಸಲ್ಮಾನ ವೈಯಕ್ತಿಕ ಕಾನೂನು ವಿರುದ್ಧ ಜಾವೇದ್ ಅಖ್ತರ್ ಕಿಡಿ
ಒಂದು ಬಾರಿಗೆ ಒಂದಕ್ಕಿಂತ ಹೆಚ್ಚು ಮದುವೆಗಳನ್ನು ಮಾಡುವುದು ದೇಶದ ಕಾನೂನು ಮತ್ತು ಸಂವಿಧಾನದ ನಿಯಮಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದುವುದು ಪುರುಷ ಮತ್ತು ಮಹಿಳೆಯ ನಡುವೆ ಸಮಾನತೆ ಉಂಟು ಮಾಡಲ್ಲ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.
ಜಾವೇದ್ ಅಖ್ತರ್ (Javed Akhtar) ಬಾಲಿವುಡ್‌ನ (Bollywood) ಅತ್ಯಂತ ಪ್ರಸಿದ್ಧ ಗೀತರಚನೆಕಾರ (Lyricist) ಮತ್ತು ಸಂಯೋಜಕರಲ್ಲಿ (Composer) ಒಬ್ಬರು. ಅವರು ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವಲ್ಲಿಯೂ ಕುಖ್ಯಾತಿ ಹೊಂದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ (Interview) , ಮುಸ್ಲಿಂ ಕಾನೂನುಗಳ (Muslim Personal Laws) ವಿರುದ್ಧ ಕಿಡಿ ಕಾರಿದ್ದು, ಇದು ಸಂಪೂರ್ಣವಾಗಿ ತಪ್ಪು ಎಂದು ಇವರು ಹೇಳಿದ್ದಾರೆ. ಮುಸ್ಲಿಂ ಕಾನೂನುಗಳು, ಸಮಾನತೆ (Equality) ಇತರೆ ವಿಚಾರಗಳ ಬಗ್ಗೆ ಸಂದರ್ಶನದಲ್ಲಿ ಮಾತನಾಡುವಾಗ ಗೀತರಚನೆಕಾರ ಜಾವೇದ್ ಅಖ್ತರ್ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮುಸ್ಲಿಂ ಗಂಡಂದಿರು ಏಕಕಾಲದಲ್ಲಿ 4 ಮದುವೆಗಳನ್ನು ಹೊಂದುವ ಹಕ್ಕನ್ನು ಹೊಂದಿದ್ದಾರೆ. ಇದೇ ರೀತಿ, ಮಹಿಳೆಯರು ಕೂಡ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದುವ ಹಕ್ಕನ್ನು ಹೊಂದಿರಬೇಕು ಎಂದು ಮುಸ್ಲಿಂ ಕಾನೂನುಗಳ ಬಗ್ಗೆ ಮಾತನಾಡುತ್ತಾ ಜಾವೇದ್ ಅಖ್ತರ್ ಹೇಳಿದ್ದಾರೆ. ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದುವುದು ಪುರುಷ ಮತ್ತು ಮಹಿಳೆಯ ನಡುವೆ ಸಮಾನತೆ ಉಂಟು ಮಾಡಲ್ಲ ಎಂದೂ ಅವರು ಹೇಳಿದರು.
ಇದನ್ನು ಓದಿ: ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಮದುವೆ ದಿನ ಆನೌನ್ಸ್ ಮಾಡಿದ ಜಾವೇದ್ ಅಖ್ತರ್ !
ಅಲ್ಲದೆ, ಒಂದು ಬಾರಿಗೆ ಒಂದಕ್ಕಿಂತ ಹೆಚ್ಚು ಮದುವೆಗಳನ್ನು ಮಾಡುವುದು ದೇಶದ ಕಾನೂನು ಮತ್ತು ಸಂವಿಧಾನದ ನಿಯಮಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದೂ ಜಾವೇದ್ ಅಖ್ತರ್ ಹೇಳಿದ್ದಾರೆ. ಹಾಗೂ, ಏಕರೂಪ ನಾಗರಿಕ ಸಂಹಿತೆ ಎಂದರೆ ಎಲ್ಲಾ ಸಮುದಾಯಗಳಿಗೆ ಒಂದೇ ಕಾನೂನು ಇರಬೇಕು ಎಂದು ಮಾತ್ರವಲ್ಲ. ಬದಲಿಗೆ ಇದು ಮಹಿಳೆ ಮತ್ತು ಪುರುಷರ ನಡುವಿನ ಸಮಾನತೆ ಎಂದೂ ಅರ್ಥ. ಇಬ್ಬರಿಗೂ ಒಂದೇ ಮಾನದಂಡ ಇರಬೇಕು ಎಂದೂ ಅವರು ಹೇಳಿದ್ದಾರೆ. ಹಾಗೂ, ಈಗಾಗಲೇ ಹಲವರು ಏಕರೂಪ ನಾಗರಿಕ ಸಂಹಿತೆ ಅನುಸರಿಸುತ್ತಿದ್ದಾರೆ. ಯಾರಿಗೆ ಪುರುಷ ಮತ್ತು ಮಹಿಳೆ ಸಮಾನತೆಯ ಕಲ್ಪನೆ ಇದೆಯೋ ಅವರು ಏಕರೂಪ ನಾಗರಿಕ ಸಂಹಿತೆಯಲ್ಲಿ ಬದುಕಬೇಕು ಎಂದು ಹೇಳಿದರು.
ನಾನು ಕೂಡ ಮುಂದೆ ತನ್ನ ಮಗ ಹಾಗೂ ಮಗಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ನೀಡುವುದಾಗಿಯೂ ಜಾವೇದ್ ಅಖ್ತರ್ ಹೇಳಿದರು. ನನ್ನ ಸಂಪತ್ತನ್ನು ಗಂಡು-ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಾಡದೆ ಸಮಾನವಾಗಿ ಹಂಚುತ್ತೇನೆ. ಅಲ್ಲದೆ, ವಿಚ್ಛೇದನದ ಸಂದರ್ಭದಲ್ಲಿ ಹೆಂಡತಿ ಮತ್ತು ಮಕ್ಕಳ ಜೀವನಾಂಶವನ್ನು ಪಾವತಿಸುವುದನ್ನು ಈ ಕಾಯ್ದೆಯು ಕಡ್ಡಾಯಗೊಳಿಸದಿರುವುದು ಕೂಡ ತಪ್ಪು ಎಂದೂ ಅವರು ಹೇಳಿದರು.
ಇದನ್ನೂ ಓದಿ: RSSನ್ನು ತಾಲಿಬಾನ್‌ಗೆ ಹೋಲಿಕೆ: ಜಾವೆದ್ ಅಖ್ತರ್‌ಗೆ ಕಂಟಕ!
ಅಲ್ಲದೆ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಒಂದೇ ಕಾನೂನನ್ನು ಜಾರಿಗೆ ತರಬಹುದೇ ಎಂಬುದು ಚರ್ಚೆಯ ವಿಷಯವಾಗಿದೆ. ಆದರೆ ನಾನು ವೈಯಕ್ತಿಕ ಕಾನೂನು ಮತ್ತು ಸಂವಿಧಾನದ ನಡುವೆ ಆಯ್ಕೆ ಮಾಡಬೇಕಾದರೆ, ನಾನು ಯಾವಾಗಲೂ ಸಂವಿಧಾನವನ್ನು ಆರಿಸಿಕೊಳ್ಳುತ್ತೇನೆ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.
ಇನ್ನು, ಇಂದು ದೇಶದ ಸಮಸ್ಯೆ ಎಂದರೆ ದೇಶವನ್ನು ಸರ್ಕಾರ ಮತ್ತು ಸರ್ಕಾರವನ್ನು ದೇಶ ಎಂದು ಪರಿಗಣಿಸಲಾಗುತ್ತಿದೆ. ಸರ್ಕಾರಗಳು ಬರುತ್ತವೆ ಹೋಗುತ್ತವೆ, ಆದರೆ ದೇಶ ಯಾವಾಗಲೂ ಇರುತ್ತದೆ. ಯಾರಾದರೂ ಸರ್ಕಾರವನ್ನು ವಿರೋಧಿಸಿದರೆ ಅವರನ್ನು ದೇಶದ್ರೋಹಿ ಎಂದು ಘೋಷಿಸಲಾಗುತ್ತದೆ. ಆದರೆ ಈ ರೀತಿ ಆಗಬಾರದು ಎಂದೂ ಜಾವೇದ್ ಅಖ್ತರ್ ಹೇಳಿದ್ದಾರೆ.
ಇದನ್ನೂ ಓದಿ: ಕೈಜೋಡಿಸಿ ಕ್ಷಮೆ ಕೇಳುವವರೆಗೆ ಜಾವೇದ್ ಅಕ್ತರ್ ಸಿನಿಮಾ ಬ್ಯಾನ್; ಗುಡುಗಿದ ಬಿಜೆಪಿ ನಾಯಕ!
ಈ ಮಧ್ಯೆ, ಉದಾರವಾದದ ಬಗ್ಗೆ ಮಾತನಾಡಿದ ಬಾಲಿವುಡ್‌ನ ಖ್ಯಾತ ಗೀತ ರಚನೆಕಾರ ಜಾವೇದ್ ಅಖ್ತರ್, ದೇಶದ ಮನಸ್ಥಿತಿ ಹಿಂದಿನಿಂದಲೂ ಪ್ರಜಾಪ್ರಭುತ್ವವಾಗಿದೆ. ಸಾವಿರಾರು ವರ್ಷಗಳಿಂದ ದೇಶದ ಜನರ ಚಿತ್ತ ಉದಾರವಾಗಿದೆ. ಅವರು ಎಂದಿಗೂ ಮೂಲಭೂತವಾದಿಯಾಗಿರಲಿಲ್ಲ. ಇಂದು ಮತಾಂಧತೆಯನ್ನು ಪ್ರಚಾರ ಮಾಡುತ್ತಿರುವ ರೀತಿಯಲ್ಲಿ ಭಾರತದ ಮನಸ್ಥಿತಿ ಇಲ್ಲ ಎಂದೂ ಜಾವೇದ್ ಅಖ್ತರ್ ಅಭಿಪ್ರಾಯ ಪಟ್ಟಿದ್ದಾರೆ.