Asianet Suvarna News Asianet Suvarna News

24ರ ಹರೆಯದಲ್ಲೇ ದುರಂತ ಅಂತ್ಯಕಂಡ ಗಾಯಕಿ ನಾಹೀ, ಕೊನೆಯ ಇನ್‌ಸ್ಟಾ ಪೋಸ್ಟ್ ವೈರಲ್!

ಕೆ ಪಾಪ್ ಸಿಂಗರ್, ಸಾಹಿತ್ಯದ ಮೂಲಕವೂ ಜನಪ್ರಿಯವಾಗಿರುವ 24ರ ಹರೆಯದ ನಾಹೀ ದುರಂತ ಅಂತ್ಯ ಕಂಡಿದ್ದಾರೆ. ನಾಹೀ ನಿಧನ ಸುದ್ದಿ ಸಂಗೀತ ಲೋಕವನ್ನೇ ಬೆಚ್ಚಿ ಬೀಳಿಸಿದೆ. ಇತ್ತ ನಾಹೀ ಕೊನೆಯ ಬಾರಿ ಮಾಡಿರುವ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್ ಆಗಿದೆ.

24 year old korean singer Nahee passes away final Instagram post goes viral ckm
Author
First Published Nov 10, 2023, 7:20 PM IST

ಕೊರಿಯಾ(ನ.10)  ಕೆ ಪಾಪ್ ಸಿಂಗರ್ ನಾಹೀ ಅತೀ ಕೀರಿಯ ವಯಸ್ಸಿನಲ್ಲೇ ವಿಶ್ವಾದ್ಯಂತ ಭಾರಿ ಜನಪ್ರೀಯತೆಗಳಿಸಿದ ತಾರೆ. ಆದರೆ ತನ್ನ 24ನೇ ವಯಸ್ಸಿನಲ್ಲೇ ನಾಹೀ ದುರಂತ ಅಂತ್ಯಕಂಡಿದ್ದಾಳೆ. ನಾಹೀ ದಿಢೀರ್ ಸಾವು ಸಂಗೀತ ಲೋಕವನ್ನೇ ಬೆಚ್ಚಿ ಬೀಳಿಸಿದೆ. ನಾಹೀ ಕೊನೆಯ ಬಾರಿಗೆ ಹಾಕಿರು ಇನ್‌ಸ್ಟಾಗ್ರಾಂ ಪೋಸ್ಟ್ ಇದೀಗ ವೈರಲ್ ಆಗಿದೆ. ನಿನ್ನೆ(ನವೆಂಬರ್ 8) ನಾಹೀ ನಿಧನರಾಗಿದ್ದಾರೆ. ಇಂದು ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಹಲವರಿಗೆ ಆಘಾತವಾಗಿದೆ. ಕಾರಣ ನವೆಂಬರ್ 7ರಂದು ಕೊನೆಯ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿರುವ ನಾಹೀ ಮೃತಪಟ್ಟಿರುವ ಸುದ್ದಿಯನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕೊರಿಯನ್ ಸಿಂಗರ್ ನಾಹೀ ಸಾವಿನ ಕಾರಣವನ್ನು ಕುಟುಂಬಸ್ಥರು, ಆಕೆಯ ಪಾಪ್ ಸಿಂಗಿಂಗ್ ಎಜೆನ್ಸಿ ಕೂಡ ಯಾವುದೇ ಮಾಹಿತಿ ನೀಡಿಲ್ಲ. ನಾಹೀ ಸಾವಿನ ಸುದ್ದಿ ಬಹಿರಂಗವಾಗುತ್ತದ್ದಂತ ಆಕೆಯ ಕೊನೆಯ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್‌ಗೆ ಯಾವುದೇ ವಿವರಣೆ ನೀಡಿಲ್ಲ. ಕ್ರೀಮ್ ಬಣ್ಣದ ಡ್ರೆಸ್‌ನಲ್ಲಿರು ಫೋಟೋ ಹಾಕಿರುವ ನಾಹೀ ಜೊತೆಗೆ ಇಳಿ ಸಂಜೆ ಹೊತ್ತಲ್ಲಿ ಪ್ರಯಾಣ ಮಾಡುತ್ತಿರುವಾಗ ತೆಗೆದ ವಿಡಿಯೋವೊಂದನ್ನು ಹಾಕಿದ್ದಾರೆ. ಈ ವಿಡಿಯೋದಲ್ಲಿ ಸುಂದರ ಕೆಂಬಣ್ಣದ ಸೂರ್ಯಾಸ್ತಮಾನದ ಆಕಾಶ, ಕಟ್ಟಡ, ತೀರ ಪ್ರದೇಶಗಳಿವೆ. ಇದರ ಜೊತೆಗೆ ತನ್ನ ಮುದ್ದಿನ ಸಾಕು ನಾಯಿ ಫೋಟೋ ಹಾಗೂ ವಿಡಿಯೋ ಹಾಕಿದ್ದಾರೆ.

ಸಿಧು ಮೂಸೆವಾಲ ಹತ್ಯೆಗೆ ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಆಮದು, ಸ್ಫೋಟಕ ರಹಸ್ಯ ಬಯಲು!

ಇದೀಗ ಅಭಿಮಾನಿಗಳು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದ್ಭುತ ಧ್ವನಿ, ಸುಂದರ ಹಾಡುಗಳಿಗೆ ನಾನು ಮರುಳಾಗಿದ್ದೇನೆ. ಆದರೆ ಈ ವಯಸ್ಸಿನಲ್ಲಿ ನೆಚ್ಚಿನ ಸಿಂಗರ್ ಇಲ್ಲ ಅನ್ನೋದು ಅರಿಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಪುಟ್ಟ ನಾಯಿ ಮರಿ ಅನಾಥವಾಗಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

 

 

2019ರಲ್ಲಿ ಸಿಂಗಲ್ ಬ್ಲೂ ಸಿಟಿ ಅನ್ನೋ ಹಾಡಿನ ಮೂಲಕ ಸಂಗೀತ ಲೋಕಕ್ಕೆ ಅದ್ಭುತವಾಗಿ ಎಂಟ್ರಿಕೊಟ್ಟ ನಾಹೀ, ಎಲ್ಲಾ ಸೂಪರ್ ಹಿಟ್ ಹಾಡುಗಳನ್ನು ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಲೂ ನೈಟ್, ಗ್ಲೂಮ್ ಡೇ ಸೇರಿದಂತೆ ಹಲವು ಆಲ್ಬಮ್ ಹಾಡುಗಳು ಭಾರಿ ಮೆಚ್ಚುಗೆ ಪಡೆದಿತ್ತು. ಇತ್ತ 4 ತಿಂಗಳ ಹಿಂದೆ ರೋಸ್ ಅನ್ನೋ ಆಲ್ಬಮ್ ಸಾಂಗ್ ಬಿಡುಗಡೆಯಾಗಿತ್ತು.

ಮೈಕೆಲ್‌ ಜಾಕ್ಸನ್‌ ಸೆಕ್ಸ್‌ಗಾಗಿ ಈ ಕೋರ್ಡ್‌ ಬಳಸಿ ಹೆಂಗಸರನ್ನು ಕರೀತಿದ್ನಂತೆ!

Follow Us:
Download App:
  • android
  • ios