Asianet Suvarna News Asianet Suvarna News

ಸಿಧು ಮೂಸೆವಾಲ ಹತ್ಯೆಗೆ ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಆಮದು, ಸ್ಫೋಟಕ ರಹಸ್ಯ ಬಯಲು!

ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣದ ತನಿಖೆಯಿಂದ ಹೊಸ ಮಾಹಿತಿಗಳು ಬಹಿರಂಗವಾಗಿದೆ. ಸಿಧೂ ಹತ್ಯೆಗೆ ಆರೋಪಿಗಳು ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿರುವ ವಿಚಾರ ಬಹಿರಂಗವಾಗಿದೆ. ಭಾರತದ ವಿರುದ್ಧ ಯಾವುದೇ ರೀತಿಯ ಷಡ್ಯಂತ್ರಕ್ಕೆ ಪಾಕ್ ತುದಿಗಾಲಲ್ಲಿ ನಿಂತಿರುವ ಮಾಹಿತಿಯೂ ಬಹಿರಂಗವಾಗಿದೆ.

Sidhu Moose Wala Murder case weapon imported from pakistan says Prob report ckm
Author
First Published Aug 19, 2023, 7:29 PM IST

ಜಲಂಧರ್(ಆ.19) ಸಿಂಗರ್ ಸಿಧು ಮೂಸೆವಾಲ ಹತ್ಯೆ ತನಿಖೆ ಹೊಸ ಹೊಸ ವಿಚಾರಗಳನ್ನು ಬಯಲಿಗೆಳೆಯುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಸಿಧು ಮೂಸೆವಾಲ ಹತ್ಯೆ ನಡೆದಿತ್ತು. ಕಾರಿನಲ್ಲಿ ತೆರಳುತ್ತಿದ್ದ ಸಿಧು ಮೇಲೆ ದುಷ್ಕರ್ಮಿಗಳು ಸತತ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಇದೀಗ  ಈ ಹತ್ಯೆ ಪ್ಲಾನ್ ಉತ್ತರ ಪ್ರದೇಶದಲ್ಲಿ ಮಾಡಲಾಗಿತ್ತು ಅನ್ನೋ ಮಾಹಿತಿ ಬಹಿರಂಗಗೊಂಡಿದೆ. ಇನ್ನು ಹತ್ಯೆಗಾಗಿ ಬಳಸಿದ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳಲಾಗಿದೆ.

ಉತ್ತರ ಪ್ರದೇಶದ ಲಖನೌ ಹಾಗೂ ಆಯೋಧ್ಯೆಯಲ್ಲಿ ಈ ಹತ್ಯೆಗೆ ಪ್ಲಾನ್ ಮಾಡಲಾಗಿತ್ತು. ಗ್ಯಾಂಗ್‌ಸ್ಟರ್ ಬಿಶ್ನೋಯ್ ಗ್ಯಾಂಗ್ ಈ ಹತ್ಯೆಗೆ ಸ್ಕೆಚ್ ರೆಡಿ ಮಾಡಿತ್ತು. ಸಿಧು ಮೂಸೆವಾಲ ಹತ್ಯೆಗೂ ಮೊದಲು ಉತ್ತರ ಪ್ರದೇಶದಲ್ಲಿ ಬೇರೊಂದು ಹತ್ಯೆಗೆ ಮೆಘಾ ಪ್ಲಾನ್ ರೆಡಿ ಮಾಡಲಾಗಿತ್ತು. ಆದರೆ ಹತ್ಯೆಗೆ ಸಾಕಷ್ಟು ಅಡೆತಡೆ ಎದುರಾದ ಕಾರಣ ಈ ಪ್ಲಾನ್ ಕೈಬಿಟ್ಟು, ಮುಂದಿನ ಟಾರ್ಗೆಟ್ ಸಿಧು ಮೂಸೆವಾಲ ಹತ್ಯೆ ಮಾಡಲಾಗಿತ್ತು ಅನ್ನೋದು ತನಿಖೆಯಿಂದ ಬಹಿರಂಗಗೊಂಡಿದೆ. 

 

ಪಂಜಾಬ್ ಸರ್ಕಾರ ವ್ಯರ್ಥ, ಮಾಫಿಯಾ ವಿರುದ್ಧ ಯೋಗಿ ನಡೆ ಮೆಚ್ಚಿದ ಮೂಸೆವಾಲ ತಂದೆ!

ಇತ್ತೀಚೆಗೆ  ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ಸ್ಟರ್‌ ಸಚಿನ್‌ ಬಿಷ್ಣೋಯಿಯನ್ನು ಅಜರ್‌ಬೈಜಾನ್‌ನಿಂದ ಗಡಿಪಾರು ಮಾಡಲಾಗಿದೆ. ಅಜರ್‌ಬೈಜಾನ್‌ ರಾಜಧಾನಿ ಬಾಕುವಿನಿಂದ ಸಚಿನ್‌ನನ್ನು ಕರೆತರಲಾಗಿದ್ದು ನ್ಯಾಯಾಲಯವು ಸಚಿನ್‌ನನ್ನು 10 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಿ ಆದೇಶಿಸಿದೆ ಎಂದು ದೆಹಲಿ ಪೊಲೀಸರು ಸೂಚಿಸಿತ್ತು. 2022ರ ಮೇ.29 ರಂದು ಸಿಧುರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದರ ಹಿಂದೆ ಪಂಜಾಬಿ ಗ್ಯಾಂಗ್‌ಸ್ಟರ್‌ಗಳ ಕೈವಾಡ ಇದೆ ಎಂದು ತನಿಖೆ ವೇಳೆ ಗೊತ್ತಾಗಿತ್ತು.

ಇನ್ನು ಮೂಸೆವಾಲ ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ ಇಬ್ಬರು ಜೈಲಿನಲ್ಲಿ ಕೈದಿಗಳ ನಡುವೆ ಸಂಭವಿಸಿದ ಹೊಡೆದಾಟದಲ್ಲಿ ಮೃತರಾಗಿದ್ದರು. ಮನದೀಪ್‌ ಸಿಂಗ್‌ ಹಾಗೂ ಮನಮೋಹನ ಸಿಂಗ್‌ ಎಂಬ ಇಬ್ಬರನ್ನು ಪಂಜಾಬಿನ ತರಣ್‌ ತಾರಣ್‌ ಜಿಲ್ಲೆಯ ಗೋಯಿಂದ್‌ವಾಲ್‌ ಸಾಹಿಬ್‌ ಕೇಂದ್ರ ಕಾರಾಗೃಹದಲ್ಲಿ ಬಂಧಿಸಿಡಲಾಗಿತ್ತು. ಕೈದಿಗಳ ಸಂಭವಿಸಿದ್ದ ಜಗಳವು ತೀವ್ರಗೊಂಡು ತಟ್ಟೆ, ಕಬ್ಬಿಣದ ಸರಳಿನಿಂದ ಹೊಡೆದಾಡಿಕೊಂಡಿದ್ದರು. ನಂತರ ಇಬ್ಬರು ಜಗಳದಲ್ಲೇ ಸಾವನ್ನಪ್ಪಿದರು. ಮತ್ತೊರ್ವ ಗಾಯಗೊಂಡಿದ್ದ. 

ಸಿಧೂ ಮೂಸೆವಾಲ ರೀತಿಯಲ್ಲೇ ನನ್ನ ಹತ್ಯೆ, ಬೆದರಿಕೆ ಪತ್ರ ಬಹಿರಂಗ ಪಡಿಸಿದ ತಂದೆ!

ಮೂಸೆವಾಲಾ ಹತ್ಯೆ ಕೇಸಿನ ಆರೋಪಿ ದೀಪಕ್‌ ಟಿನು ಪೊಲೀಸ್‌ ವಶದಿಂದ ಪರಾರಿಯಾಗಿದ್ದ.ಬೇರೆಂದು ಪ್ರಕರಣದ ವಿಚಾರಣೆಗಾಗಿ ದೀಪಕ್‌ನನ್ನು ಮೆಹ್ಸಾನಾ ಜಿಲ್ಲೆಗೆ ಕರೆತಂದಿದ್ದ ವೇಳೆ ಆತ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಘಟನೆ ಸಂಬಂಧ ಓರ್ವ ಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಪಾತಕಿ ಲಾರೆನ್ಸ್‌ ಬಿಷ್ಣೋಯ್‌ನ ಸಹವರ್ತಿಯಾದ ಟಿನು ಸೇರಿದಂತೆ 6 ಜನರ ತಂಡ ಮೇ 29 ರಂದು ಸಿಧು ಜೀಪಿನಲ್ಲಿ ತನ್ನ ಸ್ನೇಹಿತರೊಂದಿಗೆ ತೆರಳುತ್ತಿದ್ದಾಗ ವಾಹನದ ಮೇಲೆ ದಾಳಿ ಮಾಡಿ ಗುಂಡು ಹಾರಿಸಿ ಹತ್ಯೆಗೈದಿತ್ತು.
 

Follow Us:
Download App:
  • android
  • ios