mla mp leave policy : ಐಟಿ ಉದ್ಯೋಗಿಗಳು ಒಂದು ದಿನದ ರಜೆಗೂ ಪರದಾಡ್ತಾರೆ. ಮನೆಯಲ್ಲಿ ಸಾವಾದ್ರೂ ಆನ್ಲೈನ್ ನಲ್ಲಿ ಇರ್ಬೇಕಾದ ಸ್ಥಿತಿ ಅವರಿಗಿದೆ. ಹಾಗಿರುವಾಗ ನಮ್ಮನ್ನಾಳುವ ಎಂಎಲ್ ಎ, ಎಂಪಿಗಳ ಕಥೆ ಏನು? ಅವರಿಗೂ ರಜೆ ರೂಲ್ಸ್ ಅನ್ವಯವಾಗುತ್ತಾ?
ಕೆಲ್ಸ ಮಾಡುವ ಪ್ರತಿಯೊಬ್ಬ ಉದ್ಯೋಗಿ ರಜೆ ಬೇಕೆಂದ್ರೆ ತನ್ನ ಮೇಲಾಧಿಕಾರಿ ಅನುಮತಿ ಪಡೆಯಬೇಕಾಗುತ್ತೆ. ಮಕ್ಕಳು ಶಾಲೆಗೆ ರಜೆ ತೆಗೆದುಕೊಳ್ಬೇಕು ಅಂದ್ರೂ ಟೀಚರ್ಸ್ ಒಪ್ಪಿಗೆ ಪಡೆಯುತ್ತಾರೆ. ಅನಾರೋಗ್ಯದ ಕಾರಣ ಇರ್ಲಿ ಇಲ್ಲ ಬೇರೆ ಯಾವುದೇ ಕಾರಣ ಇರ್ಲಿ ರಜೆಗೆ ಅನುಮತಿ ಅಗತ್ಯ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ರಜೆ ವಿಷ್ಯ ಸಾಕಷ್ಟು ಸುದ್ದಿ ಮಾಡ್ತಿದೆ. ಭಾರತೀಯ ಮ್ಯಾನೇಜರ್ ರಜೆ ಕೇಳಿದ್ರೆ ಹೇಗೆ ವರ್ತನೆ ಮಾಡ್ತಾರೆ, ಬೇರೆ ದೇಶದವರು ಹೇಗೆ ವರ್ತಿಸ್ತಾರೆ, ಸಂಬಂಧಿಕರು ಸತ್ತಾಗ್ಲೂ ಮೇಲಾಧಿಕಾರಿಗಳು ರಜೆ ನೀಡಲು ಎಷ್ಟು ಕಾಡ್ತಾರೆ ಎನ್ನುವ ಪೋಸ್ಟ್ ಗಳು ಇತ್ತೀಚಿಗೆ ವೈರಲ್ ಆಗ್ತಿವೆ. ದೇಶ, ರಾಜ್ಯವನ್ನು ಆಳುವ ರಾಜಕಾರಣಿಗಳು ಯಾವಾಗ ರಜೆ ತೆಗೆದುಕೊಳ್ತಾರೆ, ಯಾವಾಗ ಡ್ಯೂಟಿಯಲ್ಲಿ ಇರ್ತಾರೆ ಅನ್ನೋದು ನಮಗೆ ತಿಳಿಯೋದಿಲ್ಲ. ಅವರ ರಜೆ ಪ್ರೊಸೆಸ್ ಹೇಗಿದೆ? ಅವ್ರು ಯಾರ ಒಪ್ಪಿಗೆ ಪಡೆಯಬೇಕು ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಎಂಎಲ್ಎ (MLA), ಎಂಪಿ (MP)ಗಳು ರಜೆ ಪಡೆಯೋದು ಹೇಗೆ? :
ರಾಜಕಾರಣಿ (Politician)ಗಳಾದ್ರೆ ಸಮಸ್ಯೆ ಇಲ್ಲ. ಯಾವ್ದೆ ಒಪ್ಪಿಗೆ ಇಲ್ದೆ ಆರಾಮವಾಗಿರಬಹುದು. ಅಲ್ಲಿ – ಇಲ್ಲಿ ಓಡಾಡ್ಬಹುದು. ಹುಷಾರಿಲ್ಲ ಅಂದ್ರೆ ಮನೆಯಲ್ಲಿರಬಹುದು ಅಂತ ನೀವು ಭಾವಿಸಿದ್ರೆ ಅದು ಸ್ವಲ್ಪ ಮಟ್ಟಿಗೆ ತಪ್ಪು. ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗ, ಶಾಸಕರು ಹಾಜರಾತಿ ತೆಗೆದುಕೊಳ್ಳಬೇಕಾಗುತ್ತದೆ. ವಿಧಿ 190 ರ ಷರತ್ತು (4) ರ ಪ್ರಕಾರ, ರಜೆ ತೆಗೆದುಕೊಳ್ಳಲು, ಶಾಸಕರು ಸ್ಪೀಕರ್ಗೆ ತಿಳಿಸಬೇಕು. ಸ್ಪೀಕರ್ ಮಾತ್ರ ರಜೆಯನ್ನು ಅನುಮೋದಿಸುವ ಅಧಿಕಾರ ಹೊಂದಿರುತ್ತಾರೆ. ಅಧಿವೇಶನದಲ್ಲಿ ಶಾಸಕರ ಹಾಜರಾತಿ ಬಹಳ ಮುಖ್ಯ. ಅವರು 15 ದಿನಗಳ ಕಾಲ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು. ಒಂದ್ಬೇಳೆ 15 ದಿನಗಳ ಕಾಲ ಅವರು ಅಧಿವೇಶನಕ್ಕೆ ಗೈರಾಗಿದ್ದರೆ ಸ್ಪೀಕರ್ ಗೆ ಉತ್ತರ ನೀಡಬೇಕಾಗುತ್ತದೆ. ಶಾಸಕರು ನೀಡುವ ಗೈರು ಹಾಜರಿಯ ಕಾರಣಕ್ಕೆ ಸ್ಪೀಕರ್ ತೃಪ್ತರಾದರೆ ಆಗ ಹಾಜರಿದ್ದಾರೆಂದು ಪರಿಗಣಿಸಲಾಗುತ್ತದೆ.
1 ಲಕ್ಷ ಸಂಬಳ ಕೊಟ್ಟು ಹೋಮ್ ಮ್ಯಾನೇಜರ್ ಇಟ್ಕೊಂಡ ಟೆಕ್ಕಿ, ಏನು ಕೆಲಸ ಮಾಡ್ತಾರೆ?
ಯಾರಾದರೂ 60 ದಿನಗಳವರೆಗೆ ಸದನಕ್ಕೆ ಹಾಜರಾಗಲು ವಿಫಲರಾದರೆ ಅಥವಾ ತಿಳಿಸದೆ ಗೈರುಹಾಜರಾದರೆ, ಅವರ ಸದಸ್ಯತ್ವ ಅಪಾಯದಲ್ಲಿದೆ ಎಂದರ್ಥ. ಭಾರತೀಯ ಸಂವಿಧಾನ 101 (4)ನೇ ವಿಧಿ ಪ್ರಕಾರ, ಸ್ಪೀಕರ್ ಆ ಸ್ಥಾನ ಖಾಲಿಯಾಗಿದೆ ಎಂದು ಘೋಷಿಸಬಹುದು. ಆದ್ರೆ ಹಾಗೆಯೇ ಘೋಷಣೆ ಸಾಧ್ಯವಿಲ್ಲ. ಸದನ ನಿರ್ಣಯ ಅಂಗೀಕರಿಸಬೇಕು. ಸದನವನ್ನು ಮುಂದೂಡಿದ ದಿನವನ್ನು ಇದರಲ್ಲಿ ಲೆಕ್ಕ ಹಾಕಲಾಗುವುದಿಲ್ಲ. ಶಾಸಕರ ರಜೆಯ ವಿವರಗಳನ್ನು ನಿರ್ವಹಿಸುವ ಜವಾಬ್ದಾರಿ ಪ್ರಧಾನ ಕಾರ್ಯದರ್ಶಿಯ ಮೇಲಿದೆ. ರಜೆಯನ್ನು ಅನುಮೋದಿಸಿದಾಗ ಶಾಸಕರಿಗೆ ತಿಳಿಸುವ ಜವಾಬ್ದಾರಿಯೂ ಅವರ ಮೇಲಿದೆ.
ಶಾಸಕರು ದೀರ್ಘ ರಜೆ ತೆಗೆದುಕೊಳ್ಳುವವರಿದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವುದು ಅಗತ್ಯ. ದೀರ್ಘ ರಜೆಗೆ ಕಾರಣವನ್ನು ಹೇಳಬೇಕು. ಅನಾರೋಗ್ಯ, ಗಾಯ, ಜೈಲು ಶಿಕ್ಷೆ ಸಂದರ್ಭದಲ್ಲಿ ದೀರ್ಘ ರಜೆ ಪಡೆಯಬಹುದು. ನಿಯಮಗಳ ಪ್ರಕಾರ, ಒಂದು ಸಮಯದಲ್ಲಿ ಗರಿಷ್ಠ 59 ದಿನಗಳ ರಜೆಯನ್ನು ನೀಡಲಾಗುತ್ತದೆ. ನಿಮಗೆ ಹೆಚ್ಚಿನ ಸಮಯ ಅಗತ್ಯವಿದ್ದಲ್ಲಿ ನೀವು ಹೊಸದಾಗಿ ರಜೆ ಅರ್ಜಿ ಸಲ್ಲಿಸಿ, ಒಪ್ಪಿಗೆ ಪಡೆಯಬೇಕಾಗುತ್ತದೆ.
Viral Post: ಸಾವು ಸಾವೇ, Toxic Boss ಗೆ ಖಡಕ್ ಉತ್ತರ ನೀಡಿದ Gen Z ಉದ್ಯೋಗಿ , ಪೋಸ್ಟ್ ವೈರಲ್
ಸದನ ನಡೆಯುವಾಗ ಮಾತ್ರ ಈ ನಿಯಮ ಜಾರಿಯಲ್ಲಿರುತ್ತದೆ. ಸದನವಿಲ್ಲದ ಟೈಂನಲ್ಲಿ ಯಾವುದೇ ನಿಯಮ ಅನ್ವಯವಾಗುವುದಿಲ್ಲ. ಶಾಸಕರು, ಸಂಸದರು ರಜೆ ತೆಗೆದುಕೊಳ್ಳುವ ಅಗತ್ಯವಿಲ್ಲ. ರಜೆ ಅರ್ಜಿ ಬರೆಯಬೇಕಾಗಿಲ್ಲ. ಯಾರ ಒಪ್ಪಿಗೆಯ ಅಗತ್ಯವೂ ಇರುವುದಿಲ್ಲ.


