ಈಗಿನ ದಿನಗಳಲ್ಲಿ ಮನೆ ಕೆಲ್ಸ ಮಾಡೋರಿಗೆ ಡಿಮ್ಯಾಂಡ್ ಹೆಚ್ಚಾಗ್ತಿದೆ. ಮನೆ ಕೆಲ್ಸ ಮಾಡೋರೇ ಸಿಗ್ತಿಲ್ಲ. ಇಂಥ ಟೈಂನಲ್ಲಿ ಇಡೀ ಮನೆ ನೋಡ್ಕೊಳ್ಳೋ ಹೋಮ್ ಮ್ಯಾನೇಜರ್ ಗೆ ಐಐಟಿ ಗ್ರ್ಯಾಜ್ಯುವೆಟ್ 1 ಲಕ್ಷ ಸಂಬಳ ನೀಡ್ತಿದ್ದಾರೆ.
ಬೆಂಗಳೂರಿನಲ್ಲಿ ಮನೆ ಕೆಲ್ಸದಾಕೆಗೆ 45 ಸಾವಿರ ತಿಂಗಳ ಸಂಬಳ ನೀಡ್ತಿದ್ದ ಸುದ್ದಿಯೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ನಾನಿಗೆ ಇಷ್ಟೊಂದು ಸಂಬಳವ ಅಂತ ಜನ ಹುಬ್ಬೇರಿಸಿದ್ದರು. ಆದ್ರೀಗ ಮತ್ತೊಂದು ಸುದ್ದಿ ಎಲ್ಲರನ್ನು ದಂಗುಗೊಳಿಸಿದೆ. ಮನೆ ಕೆಲ್ಸಕ್ಕೆ ಮ್ಯಾನೇಜರ್ ನೇಮಕ ಮಾಡ್ಕೊಂಡಿರುವ ದಂಪತಿ ಪ್ರತಿ ತಿಂಗಳು 1 ಲಕ್ಷ ಸಂಬಳ ನೀಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮನೆ ಮಾಲೀಕನೇ ಈ ವಿಷ್ಯವನ್ನು ಹಂಚಿಕೊಂಡಿದ್ದಾರೆ.
ಹೋಮ್ ಮ್ಯಾನೇಜರ್ ಗೆ 1 ಲಕ್ಷ ಸಂಬಳ ! :
ಐಐಟಿ ಬಾಂಬೆಯ ಪದವೀಧರರಾದ ಅಮನ್ ಗೋಯಲ್ ಮತ್ತು ಐಐಟಿ ಕಾನ್ಪುರ ಪದವೀಧರರಾದ ಅವರ ಪತ್ನಿ ಹರ್ಷಿತಾ, ತಮ್ಮ ಮನೆಯ ಎಲ್ಲ ಕೆಲ್ಸ ನೋಡಿಕೊಳ್ಳಲು ಹೋಮ್ ಮ್ಯಾನೇಜರ್ ನೇಮಕ ಮಾಡ್ಕೊಂಡಿದ್ದಾರೆ. ಅವರ ಸಂಬಳ ತಿಂಗಳಿಗೆ 1 ಲಕ್ಷ ರೂಪಾಯಿ. ಗ್ರೇಲ್ಯಾಬ್ಸ್ ಎಐನ ಸಂಸ್ಥಾಪಕ ಮತ್ತು ಸಿಇಒ ಗೋಯಲ್, ನನ್ನ ಪತ್ನಿ ಹರ್ಷಿತಾ ಮತ್ತು ನಾನು ಇಬ್ಬರೂ ಕೆಲಸ ಮಾಡುತ್ತಿದ್ದೇವೆ. ಮನೆಯ ಕೆಲ್ಸಗಳನ್ನು ಸಂಭಾಳಿಸೋದು ಸವಾಲಿನದ್ದಾಗಿತ್ತು. ಅದಕ್ಕಾಗಿಯೇ ನಾವು ಹೋಮ್ ಮ್ಯಾನೇಜರ್ ನೇಮಿಸಿಕೊಂಡಿದ್ದೇವೆ ಎಂದಿದ್ದಾರೆ.
Viral Post: ಸಾವು ಸಾವೇ, Toxic Boss ಗೆ ಖಡಕ್ ಉತ್ತರ ನೀಡಿದ Gen Z ಉದ್ಯೋಗಿ , ಪೋಸ್ಟ್ ವೈರಲ್
ಏನೆಲ್ಲ ಕೆಲ್ಸ ಮಾಡ್ತಾರೆ ಹೋಮ್ ಮ್ಯಾನೇಜರ್? :
ಅಮನ್ ಗೋಯಲ್ ಪ್ರಕಾರ, ಹೋಮ್ ಮ್ಯಾನೇಜರ್ ಮನೆಯ ಎಲ್ಲ ಕೆಲ್ಸವನ್ನು ಮಾಡ್ತಾರೆ ಹಾಗೇ ಮಾಡಿಸ್ತಾರೆ. ಅಡುಗೆ, ಕ್ಲೀನಿಂಗ್, ರಿಪೇರಿ, ಬಿಲ್ ಪಾವತಿ, ದಿನಸಿ ವಸ್ತುಗಳ ಖರೀದಿ ಸೇರಿದಂತೆ ಅನೇಕ ಮನೆಕೆಲಸಗಳನ್ನು ಅವರು ಮಾಡ್ತಾರೆ. ಮನೆಯ ಇತರ ಕೆಲಸಗಾರರನ್ನು ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಎಂದು ಗೋಯಲ್ ಹೇಳಿದ್ದಾರೆ.
ಗೋಯಲ್ ಅವರ ಅಪ್ಪ – ಅಮ್ಮನ ಜೊತೆ ವಾಸವಾಗಿದ್ದಾರೆ. ಮನೆ ಹಾಗೂ ಪಾಲಕರನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದ ಕಾರಣ ಫುಲ್ ಟೈಂ ಹೋಮ್ ಮ್ಯಾನೇಜರ್ ನೇಮಕ ಮಾಡ್ಕೊಂಡಿದ್ದಾರೆ. ಈ ಟೈಂನಲ್ಲಿ ಅವರು ಗ್ರೇಲ್ಯಾಬ್ಸ್ AI ಸುಧಾರಿಸಲು ಬಳಸ್ತಾರಂತೆ. ಈಗ ಗೋಯಲ್ ಮನೆಗೆ ಬಂದಿರುವ ಹೋಮ್ ಮ್ಯಾನೇಜರ್ ಹಿಂದೆ ದೊಡ್ಡ ಹೊಟೇಲ್ ನಲ್ಲಿ ಕೆಲ್ಸ ಮಾಡ್ತಿದ್ದರು. ನಾವು ಅವರಿಗೆ ತಿಂಗಳಿಗೆ 1 ಲಕ್ಷ ರೂಪಾಯಿಗಳನ್ನು ಪಾವತಿಸುತ್ತೇವೆ. ಇದು ಬಹುಶಃ ತುಂಬಾ ದುಬಾರಿಯಾಗಿದೆ. ಆದರೆ ನಾವು ನಮ್ಮ ಸಮಯವನ್ನು ಗೌರವಿಸುತ್ತೇವೆ ಮತ್ತು ಹೋಮ್ ಮ್ಯಾನೇಜರ್ ಗೆ ತಿಂಗಳಿಗೆ 1 ಲಕ್ಷ ರೂಪಾಯಿಗಳನ್ನು ನೀಡಲು ಶಕ್ತರಾಗಿದ್ದೇವೆ. ಅದಕ್ಕಾಗಿಯೇ ನಾವು ಅವರನ್ನು ನೇಮಿಸಿಕೊಂಡಿದ್ದೇವೆ ಎಂದು ಗೋಯಲ್ ಬರೆದಿದ್ದಾರೆ.
ಕೆಲಸದಿಂದ ವಜಾಗೊಳಿಸುತ್ತಿರುವ ಟಿಸಿಎಸ್‌ಗೆ ಬಿಗ್ ಶಾಕ್: ಉದ್ಯೋಗಿಗಳ ದೂರಿನನ್ವಯ ಕಾರ್ಮಿಕ ಇಲಾಖೆಯಿಂದ ಸಮನ್ಸ್
ಗೋಯಲ್ ಪೋಸ್ಟ್ ತೀವ್ರ ಟೀಕೆಗೆ ಗುರಿಯಾಗಿದೆ. ಗೋಯಲ್ ಪೋಸ್ಟ್ಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೋಮ್ ಮ್ಯಾನೇಜರ್ ಗೆ ಇಷ್ಟ ಸಂಬಳ ನೀಡಬೇಡಿ. ಹೂಡಿಕೆದಾರರ ಹಣವನ್ನು ಹಾಳು ಮಾಡಬೇಡಿ ಅಂತ ಕಮೆಂಟ್ ಮಾಡಿದ್ದಾರೆ. ಹೂಡಿಕೆದಾರರ ಹಣವನ್ನು ವ್ಯರ್ಥ ಮಾಡ್ತಿಲ್ಲ, ಹಿಂದಿನ ವ್ಯವಹಾರದ ಮಾರಾಟದಿಂದ ಬಂದ ಹಣವನ್ನು ಹೋಮ್ ಮ್ಯಾನೇಜರ್ ಗೆ ನೀಡ್ತಿದ್ದೇವೆ ಎಂದು ಗೋಯಲ್ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಗೋಯಲ್ ಕೆಲ್ಸವನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ಮತ್ತು ಅವರ ಪತ್ನಿ ಹರ್ಷಿತಾ ತಮ್ಮ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಮತ್ತು ಅವರ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಲು ಸರಾಸರಿ ಸಂಬಳಕ್ಕಿಂತ ಹೆಚ್ಚಿನ ಸಂಬಳವನ್ನು ಪಾವತಿಸಿ, ಹೋಮ್ ಮ್ಯಾನೇಜರ್ ನೇಮಕ ಮಾಡ್ಕೊಂಡಿದ್ದಾರೆ. ಇದು ಒಳ್ಳೆಯ ನಡೆ ಎಂದಿದ್ದಾರೆ.


