ಬಿಗ್ ಹಿಟ್ಟರ್ ಆಂಡ್ರೆ ರಸೆಲ್ ಕೈಬಿಟ್ಟು ವಿಚಿತ್ರ ತಂತ್ರಗಾರಿಕೆ ಮಾಡಿದ ಕೆಕೆಆರ್!
ಐಪಿಎಲ್ ಮಿನಿ ಹರಾಜಿಗಾಗಿ ಕೆಕೆಆರ್ 64.3 ಕೋಟಿ ರೂ.ಗಳ ದೊಡ್ಡ ಮೊತ್ತದೊಂದಿಗೆ ಸಿದ್ಧವಾಗಿದೆ. ಆಂಡ್ರೆ ರಸೆಲ್ ಅವರನ್ನು ಅನಿರೀಕ್ಷಿತವಾಗಿ ಬಿಡುಗಡೆ ಮಾಡಿದ್ದು, ತಂಡವು ಪ್ರಮುಖ ಸ್ಥಾನಗಳನ್ನು ತುಂಬಲು ಸಜ್ಜಾಗಿದೆ.

ಕೆಕೆಆರ್ ತಂಡದ ಬಳಿಯಿದೆ ಅತಿದೊಡ್ಡ ಪರ್ಸ್
ಐಪಿಎಲ್ 2026ರ ಮಿನಿ ಹರಾಜಿಗೆ ಕೆಕೆಆರ್ 64.3 ಕೋಟಿ ರೂ.ಗಳ ಬೃಹತ್ ಮೊತ್ತದೊಂದಿಗೆ ಸಿದ್ಧವಾಗಿದೆ. ಇತರ ತಂಡಗಳಿಗೆ ಹೋಲಿಸಿದರೆ, ಕೆಕೆಆರ್ ಬಳಿ ಸುಮಾರು 20 ಕೋಟಿ ರೂ. ಹೆಚ್ಚಿದ್ದು, ಇದು ಅವರಿಗೆ ಬಲ ನೀಡಲಿದೆ.
ರಸೆಲ್ ಕೈಬಿಟ್ಟು ಅಚ್ಚರಿ ತೀರ್ಮಾನ ತೆಗೆದುಕೊಂಡ ಕೆಕೆಆರ್
ಆಂಡ್ರೆ ರಸೆಲ್ ಅವರನ್ನು ಕೈಬಿಟ್ಟಿರುವುದು ಕೆಕೆಆರ್‌ನ ಅಚ್ಚರಿಯ ನಿರ್ಧಾರ. ದಶಕದಿಂದ ತಂಡದಲ್ಲಿದ್ದ ರಸೆಲ್, ಕೆಕೆಆರ್ ಜರ್ಸಿಯಲ್ಲೇ ನಿವೃತ್ತರಾಗುತ್ತಾರೆ ಎಂದು ಸಿಇಒ ಹೇಳಿದ್ದರು. ಆದರೂ ಅವರನ್ನು ಈಗ ಬಿಡುಗಡೆ ಮಾಡಲಾಗಿದೆ.
ನರೈನ್-ರೋವ್ಮನ್ ಪೊವೆಲ್ ಉಳಿಸಿಕೊಂಡ ಕೆಕೆಆರ್
ರಸೆಲ್ ಜೊತೆಗೆ, ಕೆಕೆಆರ್ ಹೆಚ್ಚಿನ ವಿದೇಶಿ ಆಟಗಾರರನ್ನು ಬಿಡುಗಡೆ ಮಾಡಿದೆ. ಸುನಿಲ್ ನರೈನ್ ಮತ್ತು ಪೊವೆಲ್ ಅವರನ್ನು ಮಾತ್ರ ಉಳಿಸಿಕೊಂಡಿದೆ. ಸದ್ಯಕ್ಕೆ, ಕೆಕೆಆರ್ 12 ಆಟಗಾರರನ್ನು (10 ದೇಶೀಯ, 2 ವಿದೇಶಿ) ಉಳಿಸಿಕೊಂಡಿದೆ.
ನರೈನ್ ಓಪನ್ನರ್?
ಸುನಿಲ್ ನರೈನ್ ಓಪನರ್ ಆಗಿ ಮುಂದುವರೆಯುವ ಸಾಧ್ಯತೆ ಇದೆ. ಎರಡನೇ ಓಪನರ್‌ಗಾಗಿ ವಿದೇಶಿ ವಿಕೆಟ್ ಕೀಪರ್-ಬ್ಯಾಟರ್‌ನನ್ನು ತಂಡವು ಮಿನಿ ಹರಾಜಿನಲ್ಲಿ ಟಾರ್ಗೆಟ್ ಮಾಡುವ ಸಾಧ್ಯತೆಯಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಹಾನೆ, ರಘುವಂಶಿ ಆಡಲಿದ್ದಾರೆ.
ರಸೆಲ್ ಸ್ಥಾನ ತುಂಬೋರು ಯಾರು?
ರಸೆಲ್ ಸ್ಥಾನಕ್ಕೆ ಕ್ಯಾಮರೋನ್ ಗ್ರೀನ್ ಬರಬಹುದು. ರಿಂಕು ಸಿಂಗ್, ರಮಣದೀಪ್ ಸಿಂಗ್ ಫಿನಿಶರ್‌ಗಳಾಗಿದ್ದಾರೆ. ಹರಾಜಿನಲ್ಲಿ ಕೆಕೆಆರ್ ಓಪನರ್, ಆಲ್‌ರೌಂಡರ್ ಮತ್ತು ವಿದೇಶಿ ವೇಗದ ಬೌಲರ್‌ಗಾಗಿ ಹುಡುಕಾಟ ನಡೆಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

