ರಘು ಕೆಎಂ ನಿರ್ದೇಶನ, ಶಶಿಧರ್ ಕೆವಿ ನಿರ್ಮಾಣದ 'ಜಸ್ಟ್‌ ಪಾಸ್‌' ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಾಯಕ ಶ್ರೀ ಮಹಾದೇವ್ ಮಾತುಗಳು ಇಲ್ಲಿದೆ. 

ಆರ್‌.ಕೆ

ಈ ಚಿತ್ರದ ಕತೆ ಏನು?

ಜೀವನದಲ್ಲಿ ಸೋತವರಿಗೆ ಧೈರ್ಯ ತುಂಬೋ ಕತೆ. ಒಂದು ರೀತಿಯಲ್ಲಿ ಮೋಟಿವೇಷನಲ್‌ ಸಿನಿಮಾ. ಜಸ್ಟ್‌ ಪಾಸ್‌ ಆದವರು ಕೂಡ ಸಾಧನೆ ಮಾಡಬಹುದು ಎಂದು ಸಾರುವ ಚಿತ್ರವಿದು.

ಇಲ್ಲಿ ನಿಮ್ಮ ಪಾತ್ರ ಹೇಗಿದೆ?

ಜಸ್ಟ್‌ ಪಾಸ್‌ ಆಗಿರುವ ವಿದ್ಯಾರ್ಥಿ ಪಾತ್ರ ಮಾಡಿದ್ದೇನೆ. ನನ್ನಂತಹ ವಿದ್ಯಾರ್ಥಿಗಳಿಗಾಗಿಯೇ ಒಂದು ಕಾಲೇಜು ಸಿಕ್ಕಾಗ ಅಲ್ಲಿ ಏನೆಲ್ಲಾ ಮಾಡುತ್ತೇನೆ ಎಂಬುದನ್ನು ನನ್ನ ಪಾತ್ರದಲ್ಲಿ ನೋಡಬಹುದು. 

ಜೂನಿ ಚಿತ್ರದ ನಿರೂಪಣೆಯಲ್ಲೇ ಮ್ಯಾಜಿಕ್ ಇದೆ: ಪೃಥ್ವಿ ಅಂಬರ್‌

ಚಿತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವ ಅಂಶಗಳು ಏನಿವೆ?

ಚಿತ್ರದ ಟೈಟಲ್‌ನಿಂದಲೇ ಕನೆಕ್ಟ್‌ ಆಗುತ್ತದೆ. ಇದು ಎಲ್ಲರ ಲೈಫಿನಲ್ಲಿ ಆಗಿರುವ ಕತೆ. ಹೀಗಾಗಿ ಎಲ್ಲರಿಗೂ ಸಿನಿಮಾ ಕನೆಕ್ಟ್‌ ಆಗುತ್ತದೆ.

ಚಿತ್ರ ನೋಡಿದ ಪ್ರೇಕ್ಷಕರು ಕೂಡ ಜಸ್ಟ್‌ ಪಾಸ್‌ ಅಂದ್ರೆ ಹೇಗೆ?

ಸಿನಿಮಾ ನೋಡಿದ ಮೇಲೆ ಫಸ್ಟ್‌ ಕ್ಲಾಸ್‌ ಅಂತಾರೆ ಎನ್ನುವ ಭರವಸೆ ಇದೆ. ಜಸ್ಟ್‌ ಪಾಸ್‌ ಅನಿಸಿಕೊಂಡರೂ ಕೂಡ ಮೆಚ್ಚಿಕೊಳ್ಳುತ್ತಾರೆಂಬ ನಂಬಿಕೆ ಇದೆ.

ನಿಮ್ಮ ನಟನೆಯ ಬೇರೆ ಯಾವ ಚಿತ್ರಗಳು ತೆರೆಗೆ ಸಜ್ಜಾಗಿವೆ?

ಒಂದು ಸಿನಿಮಾ ಇರುವಾಗ ಮತ್ತೊಂದು ಚಿತ್ರ ನಾನು ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ನಾನು ಪ್ರತಿ ಚಿತ್ರಕ್ಕೂ ಗೆಟಪ್‌ಗಳನ್ನು ಬದಲಾಯಿಸುತ್ತಿರುತ್ತೇನೆ. ಈಗ ಹೊಸದಾಗಿ ಕತೆಗಳನ್ನು ಕೇಳುತ್ತಿದ್ದೇನೆ.

ನಾನು ತಮಿಳು, ನನ್ನ ಪತಿ ಮಲಯಾಳಿ ಆದರೆ ಮಗಳ ಜತೆಗೆ ಕನ್ನಡದಲ್ಲೇ ಮಾತನಾಡುತ್ತೇನೆ: ಶ್ರುತಿ ಹರಿಹನ್‌

ಯಾವ ರೀತಿಯ ಪಾತ್ರಗಳ ನಿರೀಕ್ಷೆಯಲ್ಲಿದ್ದೀರಿ?

ನನ್ನ ಇಲ್ಲಿಯವರೆಗೂ ಒಳ್ಳೆಯ ಹುಡುಗ, ಸಾಫ್ಟ್‌ ಬಾಯ್‌ ಅಂತಲೇ ನೋಡಿದ್ದಾರೆ. ನಾನೂ ಕೂಡ ಅಂತ ಪಾತ್ರಗಳಲ್ಲೇ ನಟಿಸಿದ್ದೇನೆ. ಈಗ ರಗ್ಡ್‌ ಆಗಿರುವ, ಮೇಕಪ್‌ ಇಲ್ಲದೆ, ನೋಡಿದ ಕೂಡಲೇ ಕಿಲಾಡಿ ಅನಿಸಿಕೊಳ್ಳುವಂತಹ ಪಾತ್ರವನ್ನು ಎದುರು ನೋಡುತ್ತಿದ್ದೇನೆ.

ಹಿರಿತೆರೆಯಲ್ಲಿ ನಿಮ್ಮ ನಿರೀಕ್ಷೆಯಂತೆ ಯಶಸ್ಸು ಸಿಗುತ್ತಿದೆಯೇ?

ಸಿಗುತ್ತಿದೆ. ಆರಂಭದಲ್ಲಿ ನಾನು ಚಿತ್ರದ ಪ್ರಚಾರಕ್ಕೆ ಹೊರಗೆ ಹೋದರೆ ಧಾರಾವಾಹಿ ಹೆಸರುಗಳನ್ನು ಹೇಳಿ ಕರೆಯುತ್ತಿದ್ದರು. ಈಗ ಸಿನಿಮಾ ಹೆಸರುಗಳನ್ನು ಹೇಳಿ ಕರೆಯುತ್ತಿದ್ದಾರೆ. ಪ್ರೇಕ್ಷಕರು ನಿಧಾನಕ್ಕೆ ನನ್ನ ಗುರುತಿಸುತ್ತಿದ್ದಾರೆ ಎನ್ನುವ ಖುಷಿ ಇದೆ.