Asianet Suvarna News Asianet Suvarna News

ನಾನು ತಮಿಳು, ನನ್ನ ಪತಿ ಮಲಯಾಳಿ ಆದರೆ ಮಗಳ ಜತೆಗೆ ಕನ್ನಡದಲ್ಲೇ ಮಾತನಾಡುತ್ತೇನೆ: ಶ್ರುತಿ ಹರಿಹನ್‌

ನಾನು ತಮಿಳು, ನನ್ನ ಪತಿ ಮಲಯಾಳಿ ಆದರೆ ಮಗಳ ಜತೆಗೆ ಕನ್ನಡದಲ್ಲೇ ಮಾತನಾಡುತ್ತೇನೆ

Im in bengaluru ready to begin film shootings says Sruthi Hariharan vcs
Author
First Published Feb 2, 2024, 10:17 AM IST

ಆರ್‌ ಕೇಶವಮೂರ್ತಿ

ಸಾರಾಂಶ’ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದಿದ್ದೀರಲ್ಲ?

ನಾನು ಚಿತ್ರರಂಗದಿಂದ ದೂರ ಆಗಿಲ್ಲ. ಚಿತ್ರರಂಗದಲ್ಲೇ ಇದ್ದೇನೆ. ನಟನೆ ಮುಂದುವರಿಸಿದ್ದೇನೆ. ಹೀಗಾಗಿ ಮತ್ತೆ ಬಂದಿದ್ದೇನೆ ಎನ್ನುವ ಮಾತೇ ಇಲ್ಲ.

ನಿಮ್ಮ ನಟನೆಯ ಚಿತ್ರಗಳು ಕಡಿಮೆ ಆಗಿವೆಯಲ್ಲ?

ಅರ್ಜುನ್‌ ಲೂಯಿಸ್‌ ನಿರ್ದೇಶನ, ರಕ್ಷಿತ್‌ ಶೆಟ್ಟಿ ಅವರ ಪರಂವಃ ಸ್ಟುಡಿಯೋ ನಿರ್ಮಾಣದ ‘ಸ್ಟ್ರಾಬರಿ’ ಚಿತ್ರ ಮಾಡಿದ್ದೇನೆ. ಇದರ ನಡುವೆ ತಮಿಳಿನಲ್ಲಿ ‘ವಧಮ್‌’ ಎನ್ನುವ ವೆಬ್‌ ಸರಣಿ ಮಾಡಿದ್ದೇನೆ. ಎನ್‌ ಎಸ್‌ ಶಂಕರ್‌ ನಿರ್ದೇಶನದ ‘ಈಗ’ ಚಿತ್ರದಲ್ಲಿ ನಟಿಸಿದ್ದೇನೆ. ಸೂರ್ಯ ವಸಿಷ್ಠ ನಿರ್ದೇಶನದ ‘ಸಾರಾಂಶ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಎರಡು ಓಟಿಟಿಗಳ ಜತೆಗೆ ಸಿನಿಮಾ ಮಾತುಕತೆ ನಡೆಯುತ್ತಿದೆ.

ನನ್ನ ಗಂಡ ಒಬ್ರು ಡ್ಯಾನ್ಸ್‌ ಟೀಚರ್‌ನ ಡೇಟ್ ಮಾಡ್ತಿದ್ರು; ಶ್ರುತಿ ಹರಿಹರನ್ ಲವ್ ಸ್ಟೋರಿ ಕೇಳಿ ನೆಟ್ಟಿಗರು ಶಾಕ್!

ಈ ಹಿಂದೆ ನಡೆದ ವಿವಾದ, ನಂತರದ ಮದುವೆ ವಿಷಯಗಳ ಕಾರಣಕ್ಕೆ ಸಿನಿಮಾಗಳು ಕಡಿಮೆ ಆಯಿತಾ?

ನಾನು ಯಾವುದೂ ವಿವಾದ ಮಾಡಿಕೊಂಡಿಲ್ಲ. ಮದುವೆ ಅನ್ನೋದು ವೈಯಕ್ತಿಕ ವಿಷಯ. ಈ ಕಾರಣಕ್ಕೆ ಸಿನಿಮಾಗಳು ಕಡಿಮೆ ಆಯಿತಾ ಎಂಬುದು ನನಗೆ ಗೊತ್ತಿಲ್ಲ. ಆದರೆ, ನನಗೆ ಒಪ್ಪುವಂಥ ಕತೆಗಳು ಬಂದರೆ ನಾನು ಮಾಡಲು ರೆಡಿ ಇದ್ದೇನೆ.

ಆದರೂ ಚಿತ್ರರಂಗದ ಜತೆಗೆ ಮೊದಲಿನಷ್ಟು ಸಂಪರ್ಕ ಇಲ್ಲ ಅನಿಸುತ್ತಿದೆಯಲ್ಲ?

ಹಾಗೇನೂ ಇಲ್ಲ. ನನ್ನ ಮನೆ ಬೆಂಗಳೂರಿನಲ್ಲೇ ಇದೆ. ಬೆಂಗಳೂರು ಬಿಟ್ಟು ನಾನು ಹೊರಗೆ ಹೋಗಿಲ್ಲ. ಯಾರು ಬೇಕಾದರೂ ಬಂದು ನನಗೆ ಕತೆ ಹೇಳಬಹುದು. ಒಳ್ಳೆಯ ನಟಿ, ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸುವವರು ಬೇಕು ಎನಿಸಿದರೆ ಖಂಡಿತಾ ನಾನಿದ್ದೇನೆ ಅಂತ ಹೇಳುತ್ತೇನೆ.

ಇದು... ಇದು ಚೆನ್ನಾಗಿರೋದು; ಇದ್ದಕ್ಕಿದ್ದಂತೆ ಸಣ್ಣಗಾದ ಶ್ರುತಿ ಹರಿಹರನ್‌ನ ನೋಡಿ ಬೆಂಕಿ ಎಂದ ನೆಟ್ಟಿಗರು!

ಯಾವ ರೀತಿಯ ಕತೆ, ಪಾತ್ರಗಳನ್ನು ನಿರೀಕ್ಷೆ ಮಾಡುತ್ತಿದ್ದೀರಿ?

ಈಗ ನನಗೆ ಮಗಳು ಇದ್ದಾಳೆ. ನನ್ನ ವಯಸ್ಸಿಗೆ ತಕ್ಕಂತೆ ಇರುವ ಪಾತ್ರ, ಒಳ್ಳೆಯ ಕತೆ ಇರಬೇಕು. ರೆಗ್ಯೂಲರ್‌ ಪ್ರೀತಿ-ಪ್ರೇಮದ ಕತೆ, ಕಾಲೇಜು ಓದುವ ಹುಡುಗಿ, ಹೀರೋ ಹಿಂದೆ ಸುತ್ತುವ ನಾಯಕಿ ಇತ್ಯಾದಿ ಇಮೇಜ್‌ಗಳಿಂದ ಆಚೆ ಇರುವ ಪಾತ್ರಗಳನ್ನೇ ನೋಡುತ್ತಿದ್ದೇನೆ.

ಈಗ ನಿಮ್ಮ ಆಯ್ಕೆಗಳು ಬದಲಾಗಿದೆ ಅನಿಸುತ್ತದೆ?

ಖಂಡಿತಾ ಬದಲಾಗಿದೆ. ಒಳ್ಳೆಯ ರೀತಿಯಲ್ಲಿ ಬದಲಾಗಿದೆ. ಈ ನಾಲ್ಕು ವರ್ಷಗಳ ಬಿಡುವಿನಲ್ಲಿ ತುಂಬಾ ಯೋಚನೆ ಮಾಡಕ್ಕೆ ಅವಕಾಶ ಸಿಕ್ಕಿತು. ಈ ಹಂತದಲ್ಲಿ ಯೋಚನೆ, ನಿಲುವು, ತಿಳುವಳಿಕೆ ಇವು ನಮ್ಮ ಆಯ್ಕೆಗಳನ್ನು ಬದಲಾಯಿಸಿವೆ.

ನಟನೆ ಜತೆಗೆ ಬೇರೆ ಏನು ಮಾಡುತ್ತಿದ್ದೀರಿ?

ಸಂಗೀತ ಕಲಿಯುತ್ತಿದ್ದೇನೆ. ಸಿನಿಮಾ ಕತೆ ಬರೆಯುತ್ತಿದ್ದೇನೆ. ನಿರ್ದೇಶನಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಐದು ಮಂದಿ ನಿರ್ದೇಶಕರು ಸೇರಿ ಮಾಡುತ್ತಿರುವ ಸಿನಿಮಾ ಇದು. ನಾನು ಒಂದು ಕತೆ ಮಾಡುತ್ತಿದ್ದೇನೆ. ಮುಂದೆ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಹೇಳುತ್ತೇವೆ. ನಟನೆ ಜತೆಗೆ ನಿರ್ದೇಶನ, ರೈಟಿಂಗ್‌ ಮಾಡುತ್ತಿರುವುದು ಸದ್ಯ ಹೊಸದು.

ನಟಿ ಶುತಿ ಹರಿಹರನ್ ಮತ್ತೆ ಪ್ರೆಗ್ನೆಂಟ್?; ಸರೋಗೆಸಿ ಬಗ್ಗೆ ನಟಿ ಹೇಳಿಕೆ ವೈರಲ್

ಮದುವೆ, ಜೀವನ ಹೇಗಿದೆ?

ತುಂಬಾ ಚೆನ್ನಾಗಿದೆ. ಮಗಳಿಂದ ಪ್ರತಿ ದಿನ ಹೊಸದನ್ನು ಕಲಿಯುತ್ತಾ, ಕಲಿಸುತ್ತಾ ಖುಷಿಯಾಗಿದ್ದೇನೆ. ನಾನು ಮತ್ತು ನನ್ನ ಗಂಡ ಪ್ರತಿ ದಿನ ಅವಳಿಗೆ ಕತೆ ಹೇಳುತ್ತೇವೆ. ನಾವು ಯಾವ ಕತೆ ಹೇಳಿದರೂ ಅದರಲ್ಲಿ ಟೈಗರ್‌ ಮತ್ತು ಗೋಟ್‌ ಇರಲೇಬೇಕು. ನಾನು ತಮಿಳು, ನನ್ನ ಪತಿ ಮಲಯಾಳಿ. ಆದರೆ, ಮಗಳ ಜತೆಗೆ ಕನ್ನಡದಲ್ಲೇ ಮಾತನಾಡುತ್ತೇವೆ.

Follow Us:
Download App:
  • android
  • ios