ಪೌಡರ್ ಮತ್ತು ಹಾರ್ಮೋನಲ್ ಟ್ಯಾಬ್ಲೆಟ್ ಬಳಸಿಲ್ಲ; ಸಿಕ್ಸ್ ಪ್ಯಾಕ್ ಮಾಡಿದ ಸಂಗೀತ ಶೃಂಗೇರಿ ಸ್ಪಷ್ಟನೆ
777 ಚಾರ್ಲಿ ಸಿನಿಮಾದಲ್ಲಿ ನಟಿಸಿರುವ ಸಂಗೀತಾ ಶೃಂಗೇರಿ 6 ಪ್ಯಾಕ್ಸ್ ಮಾಡಿದ್ದಾರೆ. ಅವರ ಫಿಟ್ನೆಸ್ ಜರ್ನಿ ಸಂದರ್ಶನ ಇಲ್ಲಿದೆ...
ಪ್ರಿಯಾ ಕೆರ್ವಾಶೆ
ನಿಮ್ಮ ಅಧ್ಯಾತ್ಮ ಒಲವಿನ ಬಗ್ಗೆ ಗೊತ್ತಿತ್ತು, ಈ ಥರ ಸಿಕ್ಸ್ ಪ್ಯಾಕ್ ಮಾಡಿದ್ದು ಸರ್ಪ್ರೈಸಿಂಗ್..
ಸಿಕ್ಸ್ ಪ್ಯಾಕ್ ಮಾಡೋದು ನನ್ನ ಬಾಲ್ಯದ ಕನಸು. ಮೂಲತಃ ನಾನು ಕ್ರೀಡಾಪಟು. ಖೋಖೋ ಕ್ರೀಡೆಯಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದೆ. ಕಾಲೇಜು ದಿನಗಳು, ಆಮೇಲಿನ ನಟನೆ ಜರ್ನಿಯಲ್ಲಿ ಸಿಕ್ಸ್‌ಪ್ಯಾಕ್ ಕನಸಾಗಿಯೇ ಉಳಿಯಿತು. ಕೋವಿಡ್ ನಂತರ ಸ್ವಲ್ಪ ಆರೋಗ್ಯ ಸಮಸ್ಯೆ ಇತ್ತು. ಆಗ ಪರಿಚಯ ಆದ ಫಿಟ್‌ನೆಸ್ ಗುರು ಸವಿನ್ ಮೂಲಕ ಇದೀಗ ಸಿಕ್ಸ್ ಪ್ಯಾಕ್ ಕನಸು ನನಸಾಗಿದೆ. ಅವರು ಯಾವತ್ತೂ ನಂಗೆ ಆರೋಗ್ಯಕ್ಕೆ ಹಾನಿಕರವಾದ ಪೌಡರ್‌ಗಳು, ಹಾರ್ಮೋನಲ್ ಟ್ಯಾಬ್ಲೆಟ್ ಇತ್ಯಾದಿಗಳನ್ನೆಲ್ಲ ಕೊಟ್ಟಿಲ್ಲ. ಆರೋಗ್ಯಕರ ಆಹಾರದ ಮೂಲಕವೇ ಸಿಕ್ಸ್‌ಪ್ಯಾಕ್ ಮಾಡೋ ಹಾಗೆ ಮಾಡಿದ್ದಾರೆ.
ಹೇಗಿತ್ತು ಈ ಫಿಟ್‌ನೆಸ್ ಜರ್ನಿ?
ಶುರುವಲ್ಲಿ ಕಷ್ಟ ಆಗ್ತಿತ್ತು. ಯಲಹಂಕದಿಂದ ಜಯನಗರದಲ್ಲಿರುವ ಸವಿನ್ ಜಿಮ್‌ಗೆ 26 ಕಿಮೀ ದೂರ. 3 ತಿಂಗಳು ದಿನಾ ಹೋಗಿ ಬರುತ್ತಿದ್ದೆ. ಕಾರನ್ನು ಪೀಣ್ಯದಲ್ಲಿ ನಿಲ್ಲಿಸಿ ಅಲ್ಲಿಂದ ಮೆಟ್ರೋ ಹತ್ತಿ ಜಯನಗರದಲ್ಲಿ ಇಳಿದು ನಡ್ಕೊಂಡು ಹೋಗ್ತಿದ್ದೆ. ಬೆಳಗಿನ ಜಾವ ಮಾಸ್ಕ್ ಹಾಕ್ಕೊಂಡು ಹೋಗ್ತಿದ್ದೆ. ಆದರೂ ಜನ ಗುರುತು ಹಿಡಿದು ಮಾತಾಡಿಸ್ತಿದ್ರು. ಖುಷಿ ಆಗ್ತಿತ್ತು. ಪ್ರತಿದಿನ ಒಂದೂವರೆ ಗಂಟೆ ವರ್ಕೌಟ್ ಮಾಡ್ತಿದ್ದೆ.
ಅಪ್ಪು ಮೆಚ್ಚಿದ ಸ್ಕ್ರಿಪ್ಟ್ ಆಚಾರ್ ಆ್ಯಂಡ್ ಕೋ; ಇಂಟ್ರೆಸ್ಟಿಂಗ್ ವಿಚಾರ ತೆರೆದಿಟ್ಟ ಸಿಂಧೂ ಶ್ರೀನಿವಾಸಮೂರ್ತಿ
ಉಪವಾಸ ಮಾಡ್ತಿದ್ರಾ?
ಇಲ್ಲ, ತುಂಬ ತಿನ್ನಬೇಕಿತ್ತು. ಮೂರು ಗಂಟೆಗೆ ಒಮ್ಮೆಯಂತೆ ದಿನಕ್ಕೆ ಏಳು ಬಾರಿ ತಿನ್ನಬೇಕಿತ್ತು. ಇಡೀ ದಿನ ಫಿಶ್, ಚಿಕನ್ ಐಟಂಗಳಲ್ಲೇ ಡಯೆಟ್ ಮೇಂಟೇನ್ ಮಾಡಬೇಕಿತ್ತು. ಈ ವಿಷಯದಲ್ಲಿ ನನ್ನ ಅತ್ತಿಗೆ ಸುಚಿತ್ರಾಗೆ ಥ್ಯಾಂಕ್ಸ್ ಹೇಳಬೇಕು. ಅವರು ನನಗಾಗಿ ನಾಲ್ಕೈದು ಬಾರಿ ಅಡುಗೆ ಮಾಡಿ ಕೊಡ್ತಿದ್ದರು.
ಆರೋಗ್ಯ ಸಮಸ್ಯೆ ಸರಿಹೋಯ್ತಾ?
ಹೌದು. ಆರೋಗ್ಯ ಸಮಸ್ಯೆ ಪೂರ್ತಿ ಸರಿಹೋಯ್ತು. ಆರಂಭದಿಂದಲೂ ನನಗೆ ಪಿಸಿಓಡಿ ಸಮಸ್ಯೆ ಇತ್ತು. ಶುರುವಲ್ಲಿ ಈ ಪ್ರಾಬ್ಲಮ್ ಇರೋದೇ ಖುಷಿ ಅನಿಸ್ತಿತ್ತು. ಕಾಟ ಕೊಡೋ ಪೀರಿಯೆಡ್ಸ್ ಅಪರೂಪಕ್ಕೆ ಬರ್ತಿತ್ತು. ಮದುವೆ, ಮಕ್ಕಳ ಬಗ್ಗೆ ಎಲ್ಲ ಯಾವತ್ತೂ ತಲೆಕೆಡಿಸಿಕೊಂಡವಳಲ್ಲ. ಹಾಯಾಗಿದ್ದೆ. ನಮ್ಮ ಫಿಟ್‌ನೆಸ್ ಗುರುಗಳಿಗೂ ಅದನ್ನೇ ಹೇಳಿದ್ದೆ. ಆದರೆ ಅವರು ನನಗೆ ಒಬ್ಬ ನಟಿಯಾಗಿ ಪೀರಿಯೆಡ್ಸ್ ನಿಯಮಿತವಾಗಿ ಆರೋದು ಎಷ್ಟು ಮುಖ್ಯ ಅನ್ನೋದನ್ನು ಮನದಟ್ಟು ಮಾಡಿದರು. ಆ ಬಳಿಕ ಅವರು ಹೇಳಿದ ರೂಲ್ಸ್ ಫಾಲೋ ಮಾಡತೊಡಗಿದೆ. ಹೀಗಾಗಿ ಅದರಿಂದ ಹೊರಬರೋದು ಸಾಧ್ಯ ಆಯ್ತು.
ಗರಡಿಗೆ ಬಂದ ಕೌರವ; ಮದಕರಿ ನಾಯಕ ಕಾದಂಬರಿ ಓದುತ್ತಿದ್ದೇನೆ: ಬಿ.ಸಿ. ಪಾಟೀಲ್
ಮುಂದಿನ ಸಿನಿಮಾ?
ಯಾವುದೂ ಒಪ್ಪಿಕೊಂಡಿಲ್ಲ. ಇಲ್ಲೀವರೆಗೆ ನಟಿಸಿದ ಸಿನಿಮಾಗಳೆಲ್ಲ ಸಕ್ಸಸ್ ಆಗಿವೆ. ಈ ಗ್ರಾಫ್ ಹೀಗೇ ಮುಂದುವರಿಯಬೇಕು ಅನ್ನೋದು ನನ್ನ ಆಸೆ.