Radhika Apte : ವಯಸ್ಸಾದಂತೆ ಆಫರ್ ಸಿಗೋದು ಕಷ್ಟ. ಅದ್ರಲ್ಲೂ ನಟಿಯರಿಗೆ ಸೌಂದರ್ಯ ಕಾಪಾಡೋದು ದೊಡ್ಡ ಸವಾಲು. ತೂಕದಿಂದ ಹೇಗೆ ಸಿನಿಮಾ ಕೈತಪ್ಪಿಹೋಯ್ತು ಎಂಬುದನ್ನು ರಾಧಿಕಾ ಆಪ್ಟೆ ಹೇಳಿದ್ದಾರೆ.

ಬಾಲಿವುಡ್ ನಟಿ ರಾಧಿಕಾ ಆಪ್ಟೆ (Radhika Apte) ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿ, ಆಕ್ಟಿಂಗ್ ನಲ್ಲಿ ಸೈ ಎನ್ನಿಸಿಕೊಂಡಿದ್ದಾರೆ. ಇತ್ತೀಚಿಗೆ ರಾಧಿಕಾ ಆಪ್ಟೆ ಸಾಲಿ ಮೊಹಮ್ಮದ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರ ಲುಕ್ ಗಿಂತ ಆಕ್ಟಿಂಗ್ ಗೆ ಹೆಚ್ಚು ಆಧ್ಯತೆ ನೀಡಲಾಗಿದೆ. ತಮ್ಮ ಲುಕ್ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ರಾಧಿಕಾ ಆಪ್ಟೆ, ತೂಕದಿಂದ ಸಿನಿಮಾ ಕೈಬಿಟ್ಟು ಹೋಗಿದ್ದು ಹೇಗೆ ಎನ್ನುವ ವಿಷ್ಯವನ್ನು ಹೇಳಿದ್ದಾರೆ.

ದಪ್ಪವಾಗಿದ್ದಕ್ಕೆ ಕೈ ತಪ್ಪಿದ ಸಿನಿಮಾ

ರಾಧಿಕಾ ಆಪ್ಟೆ, ತಮ್ಮ ತೂಕ ಹೆಚ್ಚಳ, ಸೌಂದರ್ಯದ ಬಗ್ಗೆ ಮಾತನಾಡಿದ್ದಾರೆ. ಅವರ ಬದುಕು ಬದಲಿಸಬಲ್ಲ ರೋಲ್ ಒಂದು ಅವರ ಕೈತಪ್ಪಿ ಹೋಗಿತ್ತು. ಇದಕ್ಕೆ ಕಾರಣವಾಗಿದ್ದು ಅವರ ತೂಕ. ರಾಧಿಕಾ ಸಂದರ್ಶನದಲ್ಲಿ ಈ ವಿಷ್ಯವನ್ನು ಹೇಳಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ, ರಾಧಿಕಾ ಆಪ್ಟೆ ಮನಸ್ಸಿನಲ್ಲಿಟ್ಟುಕೊಂಡು ಕಥೆಯೊಂದನ್ನು ಬರೆಯಲಾಗಿತ್ತು. ಈ ಬಗ್ಗೆ ಮಾತುಕತೆ ನಡೆದು ಅಂತಿಮ ಹಂತಕ್ಕೆ ತಲುಪಿತ್ತು. ಟ್ರಿಪ್ ಪ್ಲಾನ್ ಮಾಡಿದ್ದ ರಾಧಿಕಾ ಆಪ್ಟೆ, ಟ್ರಿಪ್ ಮುಗಿಸಿ ಬಂದ್ಮೇಲೆ ಶೂಟಿಂಗ್ ಪ್ಲಾನ್ ಹಾಕಿದ್ದರು. ಟ್ರಿಪ್ ನಲ್ಲಿ ಯಾವುದೇ ಡಯಟ್ ಮಾಡೋದಿಲ್ಲ, ತೂಕ ಹೆಚ್ಚಾಗ್ಬಹುದು, ಆದ್ರೆ ಡಾನ್ಸ್, ಫಿಟ್ನೆಸ್ ಗೆ ವಾಪಸ್ ಬಂದ್ಮೇಲೆ ಹೆಚ್ಚು ಗಮನ ನೀಡೋದ್ರಿಂದ ತೂಕ ಕಡಿಮೆ ಆಗುತ್ತೆ ಎನ್ನುವ ಕಾನ್ಫಿಡೆನ್ಸ್ ನಲ್ಲಿ ರಾಧಿಕಾ ಆಪ್ಟೆ ಇದ್ರು. ಟ್ರಿಪ್ ಮುಗಿಸಿ ಬಂದಾಗ ಎಲ್ಲ ಉಲ್ಟಾ ಆಗಿತ್ತು. ರಾಧಿಕಾ ಹೆಚ್ಚೇನೂ ದಪ್ಪ ಆಗಿರಲಿಲ್ಲ. ನಾಲ್ಕು ಕೆ.ಜಿ ಏರಿಕೆಯಾಗಿದ್ರು. ತೂಕ ಇಳಿಸಿಕೊಳ್ತೇನೆ ಎನ್ನುವ ಭರವಸೆ ಕೂಡ ನೀಡಿದ್ದರು. ಈ ಮಧ್ಯೆ ಫೋಟೋಶೂಟ್ ನಡೆದಿದೆ. ಫೋಟೋ ನೋಡಿದವರು ದಪ್ಪಗಿದ್ದೀರಿ ಅಂತ ರಿಜೆಕ್ಟ್ ಮಾಡಿದ್ದಾರೆ. ಬೇರೆ ನಟಿಯನ್ನು ಹಾಕಿಕೊಂಡು ಸಿನಿಮಾ ಮಾಡಲಾಗಿತ್ತು. ಆ ಸಿನಿಮಾ ಹಿಟ್ ಆಗಿದ್ದಲ್ದೆ, ನಟಿ ದೊಡ್ಡ ಹೀರೋಯಿನ್ ಆದ್ರು ಅಂತ ರಾಧಿಕಾ ಆಪ್ಟೆ ಹೇಳಿದ್ದಾರೆ.

ರವಿಚಂದ್ರನ್ ಜೊತೆ ನಟಿಸಿದ ಈಕೆ 15 ವರ್ಷದಿಂದ ಸಿನಿಮಾ ಮಾಡದಿದ್ದರೂ ದೇಶದ ಶ್ರೀಮಂತ

ನನ್ನ ವೃತ್ತಿ ಬದುಕನ್ನು ಉತ್ತುಂಗಕ್ಕೆ ಏರಿಸ್ತಿದ್ದ ಆಫರ್ ಕೈತಪ್ಪಿ ಹೋಯ್ತು. ವಾಸ್ತವ ಅರಿಯಲು ನನಗೆ ವರ್ಷಗಟ್ಟಲೆ ಬೇಕಾಯ್ತು. ಇದ್ರಿಂದ ಹೊರಗೆ ಬರಲು ನಾನು ಥೆರಪಿ ಪಡೆಯಬೇಕಾಯ್ತು ಎಂದು ರಾಧಿಕಾ ಹೇಳಿಕೊಂಡಿದ್ದಾರೆ. ಹಿಂದಿ ತಮ್ಮ ತೂಕಕ್ಕೆ ಹೆಚ್ಚು ಆದ್ಯತೆ ನೀಡ್ತಿದ್ದ ರಾಧಿಕಾ, ತೂಕ ಮೆಂಟೇನ್ ಮಾಡೋ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ತಿದ್ದರು. ಆದ್ರೆ ಈ ಘಟನೆ ನಡೆದ ಮೇಲೆ ರಾಧಿಕಾ ಬದಲಾಗಿದ್ದಾರೆ.

ಆ ಘಟನೆ ನನಗೆ ಸಿಕ್ಕ ಒಂದು ಆಶೀರ್ವಾದ ಅಂತ ರಾಧಿಕಾ ಹೇಳಿದ್ದಾರೆ. ಇದಾದ್ಮೇಲೆ ನಾನು ಸೌಂದರ್ಯಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳೋದಿಲ್ಲ. ನಿಮಗಾಗಿ ನನ್ನ ತೂಕ ಬದಲಿಸಿಕೊಳ್ಳೋದಿಲ್ಲ. ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದಿದ್ದಾರೆ. ಮಾತು ಮುಂದಿವರೆಸಿದ ರಾಧಿಕಾ, ಹೆರಿಗೆಯಾದ ಮೂರೇ ತಿಂಗಳಿಗೆ ರಾಧಿಕಾ ಕೆಲ್ಸಕ್ಕೆ ವಾಪಸ್ ಆಗಿದ್ದರು. ಎರಡು ಸಿನಿಮಾ ಮಾಡಿದ ರಾಧಿಕಾ, ತೂಕದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆಗ ನನ್ನ ತೂಕ ಹೆಚ್ಚಾಗಿತ್ತು. ಆದ್ರೆ ತೂಕದ ಬಗ್ಗೆ ಚಿಂತೆ ಮಾಡ್ಬಾರದು, ಕ್ಯಾಮರಾ ಮುಂದೆ ಧೈರ್ಯವಾಗಿ ಹೋಗಿ ಆಕ್ಟಿಂಗ್ ಮಾಡ್ಬೇಕು ಅಂದ್ಕೊಂಡಿದ್ದೆ ಆಯ್ತು. ಸೌಂದರ್ಯದ ಬಗ್ಗೆ ಅತಿಯಾದ ಗೀಳು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.

ನಟನೆಗಿಂತ ಜಾಸ್ತಿ ಡೈಪರ್‌ ಬದಲಾಯಿಸೋದ್ರಲ್ಲಿ ನನಗೆ ಪರಿಣಿತಿ ಬಂದಿದೆ: Actor Vicky Kaushal

ವಯಸ್ಸಿನ ವಿಷ್ಯದಲ್ಲೂ ಪುರುಷ ಹಾಗೂ ಮಹಿಳೆ ಮಧ್ಯೆ ಭೇದ ಭಾವವಿದೆ ಎಂದು ಆಪ್ಟೆ ಹೇಳಿದ್ದಾರೆ. ಪುರುಷರಿಗೆ ವಯಸ್ಸಾದ್ರೆ ಅದು ವಯಸ್ಸಾದಂತಲ್ಲ. ಅದೇ ಮಹಿಳೆಗೆ ವಯಸ್ಸಾದ್ರೆ ವಯಸ್ಸಾದಂತೆ. ಅದ್ರಲ್ಲೂ ಸಿನಿಮಾ ಕ್ಷೇತ್ರದಲ್ಲಿ ಈ ಭೇದಭಾವ ಹೆಚ್ಚಿದೆ ಎಂದಿದ್ದಾರೆ.