Asianet Suvarna News Asianet Suvarna News

ಅಪ್ಪು ಮೌರ್ಯ ಚಿತ್ರಕ್ಕೂ ಲೈಗರ್‌ಗೂ ಸಂಬಂಧವಿಲ್ಲ: ವಿಜಯ್‌ ದೇವರಕೊಂಡ

ಪುರಿ ಜಗನ್ನಾಥ್‌ ಹಾಗೂ ವಿಜಯ್‌ ದೇವರಕೊಂಡ ಕಾಂಬಿನೇಶನ್‌ನ ‘ಲೈಗರ್‌’ ಸಿನಿಮಾ ಆ.25ಕ್ಕೆ ಬಿಡುಗಡೆಗೆ ಆಗುತ್ತಿದೆ. ಕನ್ನಡದಲ್ಲೂ ತೆರೆಗೆ ಬರುತ್ತಿರುವ ಈ ಚಿತ್ರವನ್ನು ನಿರ್ಮಾಪಕ ಬಿ ಕೆ ಗಂಗಾಧರ್‌ ವಿತರಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿದ್ದ ವಿಜಯ್‌ ದೇವರಕೊಂಡ ಜತೆಗಿನ ಮಾತುಗಳು ಇಲ್ಲಿವೆ.

Puneeth Rajkumar Maurya has no link with liger says vijay deverakonda vcs
Author
First Published Aug 26, 2022, 10:14 AM IST

ಆರ್‌. ಕೇಶವಮೂರ್ತಿ

ಬೇರೆ ಭಾಷೆಯ ನಟರೂ ತಮ್ಮ ಪಾತ್ರಗಳಿಗೆ ಅವರೇ ಕನ್ನಡದಲ್ಲಿ ಡಬ್‌ ಮಾಡುತ್ತಿದ್ದಾರೆ. ನೀವು ಯಾಕೆ ಮಾಡಿಲ್ಲ?

ಪ್ಯಾನ್‌ ಇಂಡಿಯಾ ಸಿನಿಮಾ ಎನ್ನುವ ಕಾರಣಕ್ಕೆ ಎಲ್ಲಾ ಭಾಷೆಗಳಲ್ಲಿ ನಾನೇ ಡಬ್‌ ಮಾಡಿ ಆ ಭಾಷೆಯನ್ನು ತಪ್ಪಾಗಿ ಮಾತನಾಡುವುದು ಬೇಡ. ‘ಆರ್‌ಆರ್‌ಆರ್‌’ ಚಿತ್ರದಲ್ಲಿ ಜೂ.ಎನ್‌ಟಿಆರ್‌ ಹಾಗೂ ರಾಮ್‌ಚರಣ್‌ ತೇಜ ತಮ್ಮ ಪಾತ್ರಗಳಿಗೇ ತಾವೇ ಕನ್ನಡದಲ್ಲೇ ಡಬ್‌ ಮಾಡಿದ್ದಾರೆ. ಅವರಂತೆ ನಾನು ಭಾಷೆ ಕಲಿತಿಲ್ಲ. ಮುಂದಿನ ದಿನಗಳಲ್ಲಿ ಭಾಷೆಯನ್ನು ಕಲಿತು ನಾನೇ ಡಬ್‌ ಮಾಡುತ್ತೇನೆ.

ಲೈಗರ್‌ ಎನ್ನುವ ಹೆಸರಿಗೂ ಕತೆಗೂ ಏನು ಲಿಂಕು?

ಚಿತ್ರದ ಸಬ್‌ ಟೈಟಲ್‌ನಲ್ಲೇ ಒಂದು ಸಾಲು ಇದೆ. ನನ್ನ ಪಾತ್ರ ಬೀಸ್ಟ್‌ ಇದ್ದಂತೆ. ಅಂದರೆ ಲಯನ್‌ ಹಾಗೂ ಟೈಗರ್‌ ಸೇರಿದಾಗ ಹುಟ್ಟುವುದೇ ಲೈಗರ್‌. ನನ್ನ ತಾಯಿ ಪಾತ್ರ ಟೈಗರ್‌ನಂತೆ. ತಂದೆ ಲಯನ್‌. ಪೂರ್ತಿ ಹೆಸರು ಲಯನ್‌ ಬಲರಾಮ್‌. ಇವರ ಮಗನ ಕ್ಯಾರೆಕ್ಟರ್‌ ಲೈಗರ್‌. ತುಂಬಾ ಕುತೂಹಲಕಾರಿಯಾಗಿರುವ ಹೆಸರು ಇದು. ಕತೆಗೆ ಈ ಹೆಸರು ಸಂಬಂಧ ಇದೆ.

ಹೆಚ್ಚು ಸಂಭಾವನೆ ಪಡೆಯುವ ದೇವರಕೊಂಡ! ಲೈಗರ್‌ಗೆ ನಟನ ಫೀಸ್‌ ಎಷ್ಟು?

ಬಾಹುಬಲಿ ನಂತರ ರಮ್ಯಾಕೃಷ್ಣ ಸೂಪರ್‌ ವುಮನ್‌ ಆಗಿದ್ದಾರೆ. ಅವರು ತಾಯಿ ಪಾತ್ರಕ್ಕೆ ಹೇಗೆ ಸೂಕ್ತ ಆಗಿದ್ದಾರೆ?

ಕಣ್ಣೀರು ಹಾಕುವ ತಾಯಿ ಅಲ್ಲ. ಅಲ್ಲಿ ಶಿವಗಾಮಿ, ಇಲ್ಲಿ ಟೈಗರ್‌. ತುಂಬಾ ವ್ಯತ್ಯಾಸ ಏನು ಇಲ್ಲ. ರೆಬೆಲ್‌ ತಾಯಿ. ಟೈಗರ್‌ ರೀತಿ ಮಗನನ್ನು ಸಾಕಿ ಬೆಳೆಸುತ್ತಾಳೆ. ಆತ ಮುಂದೆ ಏನಾಗುತ್ತಾನೆ ಎಂಬುದು ಚಿತ್ರದ ಕತೆ.

ರಿಯಲ್‌ ಫೈಟರ್‌ ಟೈಸನ್‌ ಅವರದ್ದು ವಿಲನ್‌ ಪಾತ್ರವೇ?

ಆ ಬಗ್ಗೆ ನಾನು ಇಲ್ಲೇ ಹೇಳಿದರೆ ಕತೆ ಬಿಟ್ಟುಕೊಟ್ಟಂತೆ ಆಗುತ್ತದೆ. ಅದಕ್ಕೆ ಅವರ ದೃಶ್ಯಗಳನ್ನು ಟ್ರೇಲರ್‌ನಲ್ಲೂ ಹೆಚ್ಚು ತೋರಿಸಿಲ್ಲ. ನೀವು ಸಿನಿಮಾ ನೋಡಿ. ಅವರ ಪಾತ್ರವೇ ದೊಡ್ಡ ತಿರುವು.

ಪುರಿ ಜಗನ್ನಾಥ್‌ ಹೀರೋಗಳನ್ನು ನೆಗೆಟಿವ್‌ ಆಗಿ ತೋರಿಸುತ್ತಾರಲ್ಲ?

ಲೈಗರ್‌ ಕೂಡ ಪಕ್ಕಾ ಪುರಿ ಜಗನ್ನಾಥ್‌ ಸಿನಿಮಾ. ಅವರ ಎಲ್ಲ ಮೇಕಿಂಗ್‌ ಸಿಗ್ನೇಚರ್‌ಗಳು ಇಲ್ಲೂ ಇರುತ್ತವೆ. ಕ್ಯಾರೆಕ್ಟರ್‌ಗಳು ಒಂದೊಂದಕ್ಕೊಂದು ಭಿನ್ನವಾಗಿರುತ್ತವೆ. ಪ್ರತಿ ದೃಶ್ಯ ಕೂಡ ನೋಡುಗರಿಗೆ ಕ್ರೇಜ್‌ ಹುಟ್ಟಿಸುತ್ತದೆ. ಆ ಮಟ್ಟಿಗೆ ಕತೆ ಮತ್ತು ಪಾತ್ರಗಳನ್ನು ಕಟ್ಟಿದ್ದಾರೆ.

'ಲೈಗರ್​' ಸಿನಿಮಾ ನಿಮ್ಮ ಜೀವನ ಬದಲಿಸುತ್ತೆ : ವಿಷ್ಣು ರೆಡ್ಡಿ

ನಿಮ್ಮ ಪ್ರಕಾರ ‘ಲೈಗರ್‌’ ಅಂದರೆ ಏನು?

ಪುರಿ ಜಗನ್ನಾಥ್‌ ಅವರ ಮಾಸ್‌, ಮಸಾಲ ಪ್ಯಾನ್‌ ಇಂಡಿಯಾ ಸಿನಿಮಾ ಅಷ್ಟೇ.

ಈ ಹಿಂದೆ ಬಂದ ಪುನೀತ್‌ ರಾಜ್‌ಕುಮಾರ್‌ ಅವರ ‘ಮೌರ್ಯ’ ಚಿತ್ರಕ್ಕೂ ‘ಲೈಗರ್‌’ಗೂ ಸಂಬಂಧ ಇದ್ದಂತೆ ಇದಿಯಲ್ಲ?

ಎರಡೂ ಚಿತ್ರಗಳಲ್ಲಿ ಬಾಕ್ಸಿಂಗ್‌ ಕಾಮನ್‌ ಪಾಯಿಂಟ್‌. ಜತೆಗೆ ತಾಯಿ ಮತ್ತು ತಂದೆ ಸೆಂಟಿಮೆಂಟ್‌ ಇದೆ. ಅಲ್ಲದೆ ‘ಮೌರ್ಯ ’ಚಿತ್ರಕ್ಕೂ ಪುರಿ ಅವರದ್ದೇ ಕತೆ. ಆ ಕಾರಣಕ್ಕೆ ಸೋಷಿಯಲ್‌ ಮೀಡಿಯಾಗಳಲ್ಲಿ ‘ಮೌರ್ಯ’ ಹಾಗೂ ‘ಲೈಗರ್‌’ ಒಂದೇ ಎನ್ನುತ್ತಿದ್ದಾರೆ. ಆದರೆ, ಎರಡೂ ಚಿತ್ರಗಳ ಕತೆ ಬೇರೆ.

ಹಿಂದೆ ನೀವು ಪುನೀತ್‌ ರಾಜ್‌ಕುಮಾರ್‌ ಅವರನ್ನು ಭೇಟಿ ಆಗಿದ್ರಾ?

ನನ್ನ ನಟನೆಯ ‘ಅರ್ಜುನ್‌ ರೆಡ್ಡಿ’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ನೋಡಿ ಮೆಚ್ಚಿಕೊಂಡು ಅವರೇ ಫೋನ್‌ ಮಾಡಿ ಮಾತನಾಡಿಸಿದ್ದರು. ಒಂದು ಸಲ ಮಾತನಾಡಿದ ಮೇಲೆ ತುಂಬಾ ಹಳೆಯ ಸ್ನೇಹಿತರಂತೆ ನಮ್ಮ ನಂಟು ಇತ್ತು. ಆದರೆ, ಪುನೀತ್‌ ಯಾವಾಗಲೂ ನಮ್ಮ ಜತೆಗೆ ಇರುತ್ತಾರೆ. ಅವರ ನಗು ನಮ್ಮನ್ನು ಬಿಟ್ಟು ಎಲ್ಲೂ ಹೋಗಲ್ಲ.

Follow Us:
Download App:
  • android
  • ios