Asianet Suvarna News Asianet Suvarna News

ಒಂದು ಸಿನಿಮ್ಯಾಟಿಕ್‌ ಅನುಭವ ದೂರದರ್ಶನ: ಸುಕೇಶ್‌ ಶೆಟ್ಟಿ

ಪೃಥ್ವಿ ಅಂಬರ್‌, ಅಯನಾ, ಉಗ್ರಂ ಮಂಜು ನಟನೆಯ ‘ದೂರದರ್ಶನ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ರಾಜೇಶ್‌ ಭಟ್‌ ನಿರ್ಮಾಣವಿದೆ. ಸುಕೇಶ್‌ ಶೆಟ್ಟಿಅವರ ನಿರ್ದೇಶನದ ಕನಸು ಈ ಚಿತ್ರದ ಮೂಲಕ ನನಸಾಗುತ್ತಿದೆ. ಸಿನಿಮಾ, ನಿರ್ದೇಶನದ ಅನುಭವಗಳ ಬಗ್ಗೆ ಅವರಿಲ್ಲಿ ಮಾತಾಡಿದ್ದಾರೆ.

Pruthvi Ambaar Ugram Manju Dooradarshana director Sukesh shetty exclusive interview vcs
Author
First Published Mar 3, 2023, 8:40 AM IST

ಪ್ರಿಯಾ ಕೆರ್ವಾಶೆ

- ಈ ಸಿನಿಮಾ ನಿರ್ದೇಶನಕ್ಕೂ ಮೊದಲು ಸುಕೇಶ್‌ ಶೆಟ್ಟಿಅವ್ರು ಎಲ್ಲಿದ್ರು?

ಕಾರ್ಪೊರೇಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಸಿನಿಮಾ ಪ್ರೀತಿ ಬಾಲ್ಯದಿಂದಲೇ ಇತ್ತು. ತುಂಬ ಸಣ್ಣ ವಯಸ್ಸಲ್ಲಿ ನಟಿಸೋ ಕನಸಿತ್ತು. ಏಳನೇ ಕ್ಲಾಸಿಗೆ ಬರುವಷ್ಟುಹೊತ್ತಿಗೆ ನಿರ್ದೇಶನದ ಹುಚ್ಚು ಹತ್ತಿಕೊಂಡಿತು. ಥಿಯೇಟರ್‌ನ ಕತ್ತಲು, ತೆರೆಯ ಮೇಲಿನ ಬೆಳಕು ವಿಸ್ಮಯ ಮೂಡಿಸುತ್ತಿತ್ತು. ಆ ವಿಸ್ಮಯವೇ ನನ್ನ ಇಲ್ಲಿಯವರೆಗೆ ಎಳೆದು ತಂದಿದೆ. ಮುಂದೆ ಕನ್ನಡ, ತುಳು ರಂಗಭೂಮಿಯಲ್ಲಿ, ಶಾರ್ಚ್‌ಫಿಲಂ, ಸಿನಿಮಾ ರೈಟಿಂಗ್‌, ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದೆ. ಒಂದು ಹಂತದಲ್ಲಿ ನಿರ್ದೇಶನ ಮಾಡುವ ಆತ್ಮವಿಶ್ವಾಸ ಬಂತು. ಅದೃಷ್ಟವಶಾತ್‌ ಆಮೇಲಿನ ಹಾದಿ ಕಷ್ಟಆಗಲಿಲ್ಲ.

- ದೂರದರ್ಶನದ ಸಿನಿಮಾ ಮಾಡೋ ಐಡಿಯಾ ಹೇಗೆ ಬಂತು?

ನನಗೆ ಎಲ್ಲರಿಗೂ ಕನೆಕ್ಟ್ ಆಗುವ ಸ್ಟೋರಿ ಮಾಡ್ಬೇಕು ಅಂತಿತ್ತು. ಆ ಯೋಚನೆಯಲ್ಲೇ ಇದ್ದಾಗ ಹೊಳೆದದ್ದು ದೂರದರ್ಶನ. ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತೆ, ನಾಸ್ಟಾಲ್ಜಿಯಾಕ್ಕೆ ಒಯ್ಯುತ್ತೆ. ಈ ಸಬ್ಜೆಕ್ಟ್ ಕ್ರಮೇಣ ನನ್ನನ್ನು ಆವರಿಸುತ್ತಾ ಹೋಯ್ತು. ದೂರದರ್ಶನ ಬಂದ ಕಾಲ, ಆಗಿನ ಜನರ ಮನಸ್ಥಿತಿ, ಪ್ರೇಮ, ಫ್ರೆಂಡ್‌ಶಿಪ್‌, ಜಗಳ, ದ್ವೇಷ ಎಲ್ಲ ಕಥೆಯಾಗುತ್ತಾ ಹೋಯ್ತು.

ಸಂಭ್ರಮಕ್ಕಿಂತ ಭಯನೇ ಜಾಸ್ತಿ,6 ವರ್ಷಗಳ ನಂತರ ಜನರ ಬೆಂಬಲ ಸಿಗುತ್ತಾ: ಶ್ರೀನಗರ ಕಿಟ್ಟಿ

- ನಿಮ್ಮ ಲವ್‌ಸ್ಟೋರಿ ಹೇಳ್ತಿದ್ದೀರ?

ಅಯ್ಯೋ ಹಾಗಲ್ಲ. ಆದ್ರೆ ನನ್ನ ಒಂದಿಷ್ಟುಅನುಭವಗಳು ಇವೆ. ಆಕಾಶವಾಣಿಗೆ ಅವಳ ಹೆಸರಲ್ಲಿ ಕೋರಿಕೆ ಕಳಿಸುತ್ತಿದ್ದದ್ದು, ಒಂದಿಷ್ಟುತರಲೆ, ತುಂಟಾಟಗಳು.. ಆ ಕಾಲದ ಹೆಣ್ಣುಮಕ್ಕಳು ಎಂಥಾ ಗಟ್ಟಿಗಿತ್ತಿಯರು ಅಂತ ಈಗ ಅನಿಸುತ್ತೆ. ಆದರೆ ಅವರ ಗಟ್ಟಿತನ ಗೊತ್ತಾಗ್ತಿರಲಿಲ್ಲ. ಆದರೆ ಪ್ರೀತಿ, ಕುಟುಂಬದ ವಿಷಯ ಬಂದರೆ ಬಹಳ ಗಟ್ಟಿ, ಬಹಳ ಸ್ಟ್ರಾಂಗ್‌.

- ನಿಮ್ಮ ಸಿನಿಮಾ ಹೆಣ್ಣುಮಕ್ಕಳೂ ಸ್ಟ್ರಾಂಗಾ?

ಹೌದು, ನಮ್ಮ ಸಿನಿಮಾದ ನಾಯಕಿ ಬಹಳ ಸ್ಟ್ರಾಂಗ್‌. ಆ ಪಾತ್ರವೂ ಸೇರಿದಂತೆ ನಮ್ಮ ಸಿನಿಮಾದ ಪಾತ್ರಗಳನ್ನೆಲ್ಲ ರಿಯಲಿಸ್ಟಿಕ್‌ ಆಗಿಯೇ ಕಟ್ಟಿಕೊಟ್ಟಿದ್ದೇವೆ. ನಾನು ಕಂಡ, ನನಗೆ ಯುನಿಕ್‌ ಅನಿಸಿದ ವ್ಯಕ್ತಿಗಳೇ ಇಲ್ಲಿ ಪಾತ್ರವಾಗಿದ್ದಾರೆ. ಜೊತೆಗೆ ಆ ಕಾಲದ ಪ್ರೇಮ ಹೇಗಿತ್ತು, ಬತ್‌ರ್‍ಡೇ ಸ್ಟೇಟಸ್‌ ಹಾಕದ ಕಾರಣಕ್ಕೆ ಮಾತು ಬಿಡುವ ಈ ಕಾಲದಲ್ಲಿ ನಿಂತು ಫೋನು, ಟಿವಿಗಳೇ ಬಹಳ ಅಪರೂಪವಾದ ಆ ಕಾಲದಲ್ಲಿ ಇಂಥಾ ಫೀಲಿಂಗ್‌ಗಳನ್ನು ಹೇಗೆ ದಾಟಿಸುತ್ತಿದ್ದರು ಅನ್ನೋದೆಲ್ಲ ಈ ಸಿನಿಮಾದಲ್ಲಿದೆ.

ಶರಣ್, ಶ್ರುತಿ ಕೃಷ್ಣ ಆದ್ಮೇಲೆ ಸೋದರಿ ಪುತ್ರಿ ಕೀರ್ತಿ ಎಂಟ್ರಿ; ಡೊಡ್ಡಮ್ಮ, ಮಾವನೇ ಸ್ಫೂರ್ತಿ ಎಂದ ಸುಂದರಿ

- ಮೋರ್‌ ರೀಜನಲ್‌ ಮೋರ್‌ ಯುನಿವರ್ಸಲ್‌ ಅಂತ ರಿಷಬ್‌ ಹೇಳ್ತಿರ್ತಾರೆ. ನಿಮ್ಮ ಸಿನಿಮಾವೂ ಮೋರ್‌ ರೀಜನಲ್ಲಾ?

ಈ ಮಾತು ಶೇ.100 ನಿಜ. ನನ್ನ ಸಿನಿಮಾದಲ್ಲಿ ಪ್ರಾದೇಶಿಕ ಅಂಶಗಳು, ಆ ಡೀಟೇಲ್‌ಗಳು ದಟ್ಟವಾಗಿ ಬರುತ್ತವೆ. ಆ ಬಗ್ಗೆ ನನ್ನ ತಲೆಯಲ್ಲಿ ಮೊದಲೇ ಒಂದು ಇಮೇಜ್‌ ಇತ್ತು. ಅದೇ ಇಮೇಜ್‌, ಡೀಟೇಲ್‌ಗಳನ್ನಿಟ್ಟು ಹೆಚ್ಚು ಗಾಢವಾಗಿ ಈ ಸಿನಿಮಾ ಮಾಡಿದ್ದೇವೆ.

- ಪ್ರೇಕ್ಷಕನನ್ನು ಥಿಯೇಟರ್‌ಗೆ ಕರೆತರುವ ಅಂಶಗಳು?

ಇದೊಂದು ವಿಸ್ಮಯ ಮೂಡಿಸುವ ನಾಸ್ಟಾಲ್ಜಿಯಾಗೆ ಕರೆದೊಯ್ಯುವ ಸಿನಿಮ್ಯಾಟಿಕ್‌ ಅನುಭವ. ಈ ಕಾಲದವರಿಗೂ ಆ ಕಾಲದವರಿಗೂ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತೆ.

EXCLUSIVE INTERVIEW ಬೇರೆ ಭಾಷೆ ಸದ್ಯ ನನ್ನ ಆದ್ಯತೆ ಅಲ್ಲ: ನವೀನ್‌ ಶಂಕರ್‌

- ಮೊದಲ ನಿರ್ದೇಶನದ ರಿಲೀಸ್‌, ಟೆನ್ಶನ್‌ ಬಿಟ್ಟು ಕೂಲಾಗಿದ್ದೀರಿ?

ಈಗ ಕೂಲಾಗಿರಬೇಕು ಅಂತಲೇ ಇಷ್ಟುದಿನ ರಾತ್ರಿ ಹಗಲು ಕಷ್ಟಪಟ್ಟಿದ್ದೀವಿ. ನಮ್ಮ ಪ್ರೀಮಿಯರ್‌ ಶೋಗೆ ಸಿಕ್ಕಿರೋ ರೆಸ್ಪಾನ್ಸ್‌ ನೋಡಿ ಕಾಲ್‌ ಮಾಡಿ ನಮ್ಮ ಸಿನಿಮಾ ತರಿಸಿಕೊಂಡಿದ್ದಾರೆ. ಒಟ್ಟು 150ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್‌ ಆಗುತ್ತೆ. ಮನಃಪೂರ್ವಕವಾಗಿ ಕೆಲಸ ಮಾಡಿದ ತೃಪ್ತಿ ಇದೆ. ಹೀಗಾಗಿ ಟೆನ್ಶನ್‌ಗಿಂತಲೂ ಆತ್ಮವಿಶ್ವಾಸ ಹೆಚ್ಚಿದೆ.

 

Follow Us:
Download App:
  • android
  • ios