ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧರಿಸಿ ಶಶಾಂತ್‌ ಸೋಗಲ್‌ ನಿರ್ದೇಶಿಸಿರುವ ಚಿತ್ರ ‘ಡೇರ್‌ ಡೆವಿಲ್‌ ಮುಸ್ತಾಫಾ’ವನ್ನು ಅರ್ಪಿಸಿರುವ ಡಾಲಿ ಧನಂಜಯ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಪ್ರಿಯಾ ಕೆರ್ವಾಶೆ

ಡೇರ್‌ ಡೆವಿಲ್‌ ಮುಸ್ತಾಫ ಸಿನಿಮಾದಲ್ಲಿ ನಿಮ್ಮನ್ನು ಆಕರ್ಷಿಸಿದ್ದು ಏನು?

ಪೂರ್ಣಚಂದ್ರ ತೇಜಸ್ವಿ ಅವರ ಕತೆ. ಇವತ್ತಿಗೆ ಯಾವತ್ತಿಗೂ ಅವರ ಸಾಹಿತ್ಯ ಪ್ರಸ್ತುತ. ನಾವು ರೀಡಿಂಗ್‌ ಶುರು ಮಾಡಿದ್ದೇ ಅವರ ಪುಸ್ತಕಗಳ ಮೂಲಕ. ತೇಜಸ್ವಿ ಅವರ ಸಣ್ಣಕತೆಯನ್ನು ಸಿನಿಮಾ ಮಾಡೋದು ತುಂಬ ಕಷ್ಟ. ಅದನ್ನು ಬಹಳ ಅದ್ಭುತವಾಗಿ ಶಶಾಂಕ್‌ ಮತ್ತು ತಂಡ ಸಿನಿಮಾ ಮಾಡಿದ್ದಾರೆ. ಇದು ಇವತ್ತಿಗೆ ಹೇಳಬೇಕಿರುವ ಕತೆ ಅನಿಸ್ತು. ಒಳ್ಳೊಳ್ಳೆ ಸಿನಿಮಾಗಳು, ಹೊಸ ಪ್ರತಿಭೆಗಳು ಬಂದಾಗ ಅವರನ್ನು ಜನರಿಗೆ ತಲುಪಿಸೋ ಪ್ರಯತ್ನ ಇದು ಅಷ್ಟೇ.

ಕೇರಳ ಸ್ಟೋರಿ, ಕಾಶ್ಮೀರ ಫೈಲ್ಸ್‌ನಂಥಾ ಸಿನಿಮಾಗಳು ಗಳಿಕೆಯಲ್ಲಿ ಮುಂದಿವೆ. ಅವುಗಳ ನಡುವೆ ಇಂಥಾ ಸೌಹಾರ್ದ ಅಂಶದ ಸಿನಿಮಾ ಯಶಸ್ವಿ ಆಗುತ್ತೆ ಅನಿಸುತ್ತಾ?

ನಾವು ನಮಗೆ ಒಳ್ಳೆಯದು ಅನಿಸಿದ್ದರೆ ಬಗ್ಗೆ ಮಾತಾಡ್ತೀವಿ. ಆ ಥರದ ಸಿನಿಮಾಗಳು ಬಂದಾಗ ಅದನ್ನು ರೀಚ್‌ ಮಾಡಿಸುವ ಪ್ರಯತ್ನ ಮಾಡ್ತೀವಿ. ಇನ್ನುಳಿದ ಸಿನಿಮಾಗಳ ಬಗ್ಗೆ ನಾನು ಮಾತಾಡೋಕೆ ಇಷ್ಟಪಡಲ್ಲ. ಅಷ್ಟೊಂದು ಬುದ್ಧಿವಂತನೂ ಅಲ್ಲ. ಎಲ್ಲ ಬಗೆಯ ಸಿನಿಮಾಗಳೂ ಬರ್ತಾ ಇರುತ್ತವೆ. ಎಲ್ಲರೂ ಎಲ್ಲ ಥರದ ಕಥೆ ಹೇಳಬಹುದು. ಇದು ನಮ್ಮ ಎಕ್ಸ್‌ಪ್ರೆಶನ್‌ ಅಷ್ಟೇ.

ಐರನ್ ಲೆಗ್‌ ಅಂತ ಕೆಟ್ಟ ಪದಗಳಲ್ಲಿ ಬೈದಿದ್ದಾರೆ, ನಿಜವಾದ ಕೊಡಲಿಯಿಂದ ಪೆಟ್ಟುಬಿದ್ದಿದೆ: ಭಾವುಕರಾದ ಧನಂಜಯ್

ಒಂದು ರುಪಾಯಿಗೆ ಟಿಕೆಟು, ಕ್ಯಾಶ್‌ಬ್ಯಾಕ್‌, ಕನ್ನಡ ಅಧ್ಯಾಪಕರಿಗೆ ಉಚಿತ ಪ್ರದರ್ಶನದಂಥಾ ಕಾನ್ಸೆಪ್‌್ಟಬಗ್ಗೆ ಹೇಳೋದಾದ್ರೆ?

ಅದು ಇವತ್ತಿನ ಅವಶ್ಯಕತೆ ಅನಿಸ್ತು. ರೆಗ್ಯುಲರ್‌ ಪ್ರಮೋಶನ್‌ಗಳು ಅಷ್ಟಾಗಿ ಪರಿಣಾಮ ಬೀರ್ತಿಲ್ಲ. ಜನ ಬರದೆ ಥಿಯೇಟರ್‌ಗಳೂ ಮುಚ್ಚಿ ಹೋಗೋ ಸ್ಥಿತಿಯಲ್ಲಿವೆ. ಪ್ರೇಕ್ಷಕರು ಥಿಯೇಟರ್‌ ಕಡೆ ಬರಲಿ ಅನ್ನೋ ಉದ್ದೇಶದಿಂದ ಮಾತ್ರ ಈ ಪ್ರಯತ್ನ ಮಾಡಿದ್ದು. ಕ್ರಿಯೇಟಿವ್‌ ಆಗಿ ಏನಾದ್ರೂ ಮಾಡಿದ್ರೆ ಮಾತ್ರ ಅವರನ್ನು ಸೆಳೆಯಲು ಸಾಧ್ಯ ಅಲ್ವಾ.

ಗಳಿಕೆಗಿಂತಲೂ ಜಾಸ್ತಿ ಜನ ನೋಡಲಿ ಅನ್ನೋ ಉದ್ದೇಶ ಇದ್ದಂತಿತ್ತು?

ಹೌದು. ಈ ಥರದ ಸಿನಿಮಾವನ್ನು ಬಹಳ ಒದ್ದಾಟದಲ್ಲಿ ಮಾಡಿರ್ತಾರೆ. ಸಿನಿಮಾ ಚೆನ್ನಾಗಿ ಬಂದಿರುತ್ತೆ. ದೊಡ್ಡ ಸಿನಿಮಾ ಪ್ರಮೋಶನ್‌ಗಳು ಬೇರೆ ಥರ ಸೌಂಡ್‌ ಮಾಡ್ತವೆ. ಈ ಥರದ ಸಿನಿಮಾಕ್ಕೆ ಹೆಚ್ಚು ರಿಸ್‌್ಕ ತಗೊಳಕ್ಕಾಗಲ್ಲ. ಇಂಡಸ್ಟ್ರಿಯಲ್ಲಿ ಸ್ಥಿರತೆ ಇರಬೇಕು ಅಂದರೆ ಹೊಸ ಪ್ರತಿಭೆ ಬರ್ಬೇಕು. ಹೀಗಾಗಿ ಬ್ಯುಸಿನೆಸ್‌ಗಿಂತಲೂ ಸಿನಿಮಾ ಜನರನ್ನು ತಲುಪಲಿ, ಹೊಸ ಪ್ರತಿಭೆಗಳು ಬೆಳಕಿಗೆ ಬರಲಿ ಅನ್ನೋದೆ ಪ್ರಮುಖ ಉದ್ದೇಶ. ಒಳ್ಳೆಯ ರೈಟರ್ಸ್‌, ನಿರ್ದೇಶಕರು ಸಿಕ್ಕಾಗಲೇ ನಾವೆಲ್ಲ ಒಂದು ಹೆಜ್ಜೆ ಮುಂದೆ ಬಂದಿರೋದು. ಹಾಗೆ ಒಂದಿಷ್ಟುಆಯ್ಕೆಗಳು ಸೃಷ್ಟಿಆಗಬೇಕು. ಈ ನಿರ್ದೇಶಕರು ದೊಡ್ಡ ಬಜೆಟ್‌ ಸಿನಿಮಾ ಮಾಡೋ ಹಾಗೆ ಆಗ್ಬೇಕು.

ಲವ್ ಬ್ರೇಕಪ್ ಮಾಡ್ಕೊಂಡ್ರೆ ಸ್ಟೇಟ್ಸ್‌ ಹಾಕೋದು; ಜನರೇಷನ್‌ ಗ್ಯಾಪ್‌ ಬಗ್ಗೆ ಮಾತನಾಡಿದ ಧನಂಜಯ್

ಹೊಸ ಟೀಮ್‌ ಬಗ್ಗೆ ಹೇಳೋದಾದ್ರೆ?

ಅದ್ಭುತ ಟೀಮ್‌. ಸಿನಿಮಾ ಬಹಳ ಫ್ರೆಶ್‌ ಆಗಿದೆ. ಶಶಾಂಕ್‌ ಪ್ರತಿಭೆಯನ್ನು ಕಾಲೇಜು ದಿನಗಳಿಂದಲೇ ನೋಡಿದ್ದೆ. ಆತ ನನ್ನ ಜೂನಿಯರ್‌. ಶಾರ್ಚ್‌ಫಿಲಂ ಮಾಡ್ತಿದ್ದ. ‘ಫಟಿಂಗ’ ಅನ್ನೋ ಶಾರ್ಚ್‌ಫಿಲಂ ಸೂಪರ್‌ ಹಿಟ್‌ ಆಗಿತ್ತು. ಎಲ್ಲ ಸಿನಿಮಾಗಳನ್ನೂ ನಾವು ಪ್ರಾಜೆಕ್ಟ್ ಮಾಡೋಕ್ಕಾಗಲ್ಲ. ಆದರೆ ಕಷ್ಟಪಟ್ಟು ಕಲಿತು ತುಂಬ ಚೆನ್ನಾಗಿ ಒಂದು ಸಿನಿಮಾ ಕಟ್ಟಿದಾಗ ಜನರಿಗೂ ಅದನ್ನು ನೋಡಬೇಕು ಅನಿಸುತ್ತೆ. ಶಶಾಂತ್‌ ಆ ಥರದ ಟ್ಯಾಲೆಂಟ್‌. 100 ಪ್ಲಸ್‌ ಸಮಾನ ಮನಸ್ಕ ನಿರ್ಮಾಪಕರನ್ನು ಸೇರಿಸಿ ಸಿನಿಮಾ ಮಾಡೋದು ಸಣ್ಣ ಕೆಲಸ ಅಲ್ಲ. ಚಾಲೆಂಜ್‌ ತಗೊಂಡು ತುಂಬ ಚೆನ್ನಾಗಿ ಮಾಡಿರೋ ಸಿನಿಮಾ. ಪ್ರತಿಯೊಬ್ಬರ ಅಭಿನಯವೂ ಒಬ್ಬರನ್ನೊಬ್ಬರು ಮೀರಿಸೋ ಹಾಗಿದೆ.