ಐರನ್ ಲೆಗ್ ಅಂತ ಕೆಟ್ಟ ಪದಗಳಲ್ಲಿ ಬೈದಿದ್ದಾರೆ, ನಿಜವಾದ ಕೊಡಲಿಯಿಂದ ಪೆಟ್ಟುಬಿದ್ದಿದೆ: ಭಾವುಕರಾದ ಧನಂಜಯ್
ಕೆಂಪು ಕುರ್ಚಿ ಮೇಲೆ ಮಿಡಲ್ ಕ್ಲಾಸ್ ಹುಡುಗನ ಜರ್ನಿ. ಡಾಲಿ ಬಂದಿದ್ದು ನೋಡಿ ಫುಲ್ ಖುಷ್ ಆದ ವೀಕ್ಷಕರು...
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 5ರ 5ನೇ ಸಾಧಕರಾಗಿ ಡಾಲಿ ಧನಂಜಯ್ ಆಗಮಿಸಿದ್ದಾರೆ. ಚಂದನವನದ ನಟ ರಾಕ್ಷಸ ಎಂದು ಪರಿಚಯಿಸಿ ಕೊಡುವ ಮೂಲಕ ಧನು ಅವರನ್ನು ಬರ ಮಾಡಿಕೊಳ್ಳುತ್ತಾರೆ ನಟ ರಮೇಶ್ ಅರವಿಂದ್. ಕುರ್ಚಿ ಮೇಲೆ ಕೂರುತ್ತಿದ್ದಂತೆ 'ಇನ್ನು ಹೆಚ್ಚು ಸಾಧನೆ ಮಾಡಲು ಹಾಗೂ ಸಾಧನೆ ಮಾಡುವವರಿಗೆ ಸ್ಫೂರ್ತಿಯಾಗಲಿ ಎಂದು ಇಲ್ಲಿ ಕೂರಿಸುತ್ತಿದ್ದಾರೆ' ಎಂದು ಹೇಳುತ್ತಲೇ ಧನಂಜಯ್ ಕುಳಿತುಕೊಳ್ಳುತ್ತಾರೆ.
ಧನಂಜಯ್ ದೊಡ್ಡ ಕುಟುಂಬ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಸಹೋದರಿಯನ್ನು ಕಂಡು ಭಾವುಕರಾಗುವ ಧನಂಜಯ್ ಆಕೆ ನನ್ನ ಅಕ್ಕ ಅಲ್ಲ ದೇವರು ಕೊಟ್ಟಿರುವ ಗಿಫ್ಟ್ ಎನ್ನುತ್ತಾರೆ. ಧನು ನೆಚ್ಚಿನ ಟೀಚರ್ ಲಕ್ಷ್ಮಿ ಮೇಡಂ ವೇದಿಕೆ ಮೇಲೆ ಬರುವುದಾಗಿ ಹೇಳಿ ಒಂದು ವಿಡಿಯೋ ಕೂಡ ಮಾಡಿದ್ದರು ಆದರೆ ಎಲ್ಲರನ್ನು ಬಿಟ್ಟು ಅಗಲಿದ್ದಾರೆ. ಅವರ ಫೋಟೋ ಹಿಡಿದು ಕೆಲವು ನಿಮಿಷಗಳ ಕಾಲ ಮೌನವಾಗಿ ಧನು ನಿಂತು ಬಿಟ್ಟರು.
ರಮ್ಯಾ ಇಂಗ್ಲಿಷ್, ಪ್ರಭುದೇವ್ ಚಾಮರಾಜನಗರ ಕನ್ನಡ ಬಗ್ಗೆ ವೈರಲ್ ಪೋಸ್ಟ್; ರಮೇಶ್ ಅರವಿಂದ್ ಪ್ರತಿಕ್ರಿಯೆ ವೈರಲ್
'ಧನಂಜಯ್ ಐರನ್ ಲೆಗ್ ಅವನನ್ನು ಹಾಕೋಂಡು ಸಿನಿಮಾ ಮಾಡಿದರೆ ಜನ ಬರಲ್ಲ ಅಂತ ಹೇಳುತ್ತಿದ್ದರು..ಎಲ್ಲಾ ತೆಗೆದುಕೊಂಡು ಧನಂಜಯ್ ಮೇಲೆ ಹಾಕಿದ್ರೆ ಹೇಗೆ? ಎಲ್ಲರ ಎದುರು ಕೆಟ್ಟ ಪದಗಳಲ್ಲಿ ಒಂದು ಮಾತು ಹೇಳಿಬಿಟ್ರೆ ಹೇಗಾಗುತ್ತೆ? ಸಿನಿಮಾ ಒಂದರಲ್ಲಿ ಫೈಟರ್ ಹೊಡೆಯಬೇಕು ನಿಜವಾದ ಕೊಡಲಿ ಕೊಟ್ಟಿದ್ದಾರೆ ಜೋರಾಗಿ ಪೆಟ್ಟು ಬೀಳುತ್ತೆ....ಯಾಕೆ ನೀವು ನಿಮ್ಮ ಹೀರೋನಾ ಹೀರೋ ರೀತಿ ನೋಡಿಕೊಳ್ಳಲ್ಲ ನಾನು ಸಿನಿಮಾ ಕಲಿತುಕೊಂಡು ಬಂದಿದ್ದೀನಿ ಅಲ್ವಾ? ಹೀಗಾಗಿ ಕೋಪ ಎಲ್ಲಾ ತೆಗೆದು ಡಾಲಿ ಮೇಲೆ ಹಾಕಿ ಪಾತ್ರ ಮಾಡಿದಕ್ಕೆ ನಿಂತುಕೊಂಡೆ' ಎಂದು ಧನಂಜಯ್ ಹೇಳಿದ್ದಾರೆ.
ಧನಂಜಯ್ ಜೊತೆ ಕೆಲಸ ಮಾಡುವುದಕ್ಕೆ ಖುಷಿ ಇದೆ. ಅವರಲ್ಲಿ ಸದಾ ಜೋಶ್ ಇರುತ್ತೆ. ನನ್ನ ಪ್ರೀತಿ ಮತ್ತು ವಿಶ್ ಸದಾ ನಿಮ್ಮ ಜೊತೆ ಇರುತ್ತದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ವಿಡಿಯೋ ಮೂಲಕ ಮಾತನಾಡಿದ್ದಾರೆ. ಶಿವಣ್ಣ ಅವರ ಜೊತೆ ನಾನು ಎಮೋಷನಲ್ ಅಗಿ ಕನೆಕ್ಟ್ ಆಗುತ್ತೀನಿ ನನ್ನನ್ನು ಮಗನ ರೀತಿ ನೋಡಿಕೊಂಡಿದ್ದಾರೆ. ಮತ್ತೊಂದು ಖುಷಿ ಏನೆಂದರೆ ಅಪ್ಪು ಸರ್ ಜೊತೆ ಸ್ಕ್ರೀನ್ ಶೇರ್ ಮಾಡಿರುವುದು, ನೆನಪುಗಳು ಅಷ್ಟೇ ನಮ್ಮ ಜೀವನದಲ್ಲಿ ದೊಡ್ಡ ಕಲೆಕ್ಷನ್ ಆಗಿ ಉಳಿಯುವುದು. ಏನ್ ಏನ್ ಕೊಡಬೇಕು ಪ್ರತಿಯೊಂದನ್ನು ತುಂಬಾ ಪ್ರೀತಿಯಿಂದ ಕೊಟ್ಟಿದ್ದಾರೆ ಎಂದು ಧನು ಮಾತನಾಡಿದ್ದಾರೆ.
ಕೊನೆಗೂ ಮೌನ ಮುರಿದ ದತ್ತಣ್ಣ; ಮದುವೆ ಬೇಡ ಅನ್ನೋದು ಈ ಕಾರಣಕ್ಕಂತೆ!
ಏಪ್ರಿಲ್ 14 ಮತ್ತು 15ರಂದು ಧನಂಜಯ್ ಅವರ ಎಪಿಸೋಡ್ ರಾತ್ರಿ 9 ಕ್ಕೆ ಪ್ರಸಾರವಾಗಲಿದೆ. ಈ ಸೀಸನ್ ವಿಶೇಷ ಅತಿಥಿಗಳಾಗಿ ಮೋಹಕ ತಾರೆ ರಮ್ಯಾ, ಡ್ಯಾನ್ಸರ್ ಪ್ರಭುದೇವ್, ಡಾಕ್ಟರ್ ಮಂಜುನಾಥ್ ಮತ್ತು ಹಿರಿಯ ನಟ ದತ್ತಣ್ಣ ಆಗಮಿಸಿದ್ದರು.