Asianet Suvarna News Asianet Suvarna News

ಇದು ಹೊಸ ಟಿನೇಜ್‌ ಲವ್‌ ಸ್ಟೋರಿ ಸಿನಿಮಾ: ಪೃಥ್ವಿ ಶಾಮನೂರು

ಹರಿಪ್ರಸಾದ್‌ ಜಯಣ್ಣ ನಿರ್ದೇಶಿಸಿ, ಯೋಗರಾಜ್‌ ಭಟ್‌ ಹಾಗೂ ರವಿ ಶಾಮನೂರು ನಿರ್ಮಾಣದ ‘ಪದವಿ ಪೂರ್ವ’ ಸಿನಿಮಾ ಇದೇ ಡಿ.30ಕ್ಕೆ ಬಿಡುಗಡೆ. ಈ ಸಂದರ್ಭದಲ್ಲಿ ಚಿತ್ರದ ನಾಯಕ ಪೃಥ್ವಿ ಶಾಮನೂರು ಅವರ ಮಾತು.

Padavi Poorva Starrer Pruthvi Shamanur Exclusive Interview gvd
Author
First Published Dec 28, 2022, 7:22 AM IST

ಹರಿಪ್ರಸಾದ್‌ ಜಯಣ್ಣ ನಿರ್ದೇಶಿಸಿ, ಯೋಗರಾಜ್‌ ಭಟ್‌ ಹಾಗೂ ರವಿ ಶಾಮನೂರು ನಿರ್ಮಾಣದ ‘ಪದವಿ ಪೂರ್ವ’ ಸಿನಿಮಾ ಇದೇ ಡಿ.30ಕ್ಕೆ ಬಿಡುಗಡೆ. ಈ ಸಂದರ್ಭದಲ್ಲಿ ಚಿತ್ರದ ನಾಯಕ ಪೃಥ್ವಿ ಶಾಮನೂರು ಅವರ ಮಾತು.

* ಮೊದಲ ಸಿನಿಮಾ ಬಿಡುಗಡೆ?
ಪರೀಕ್ಷೆ ಬರೆದು ರಿಸಲ್ಟ್‌ಗೆ ಕಾಯುತ್ತಿರುವ ವಿದ್ಯಾರ್ಥಿ ಅನುಭವಿಸುವ ತಳಮಳಗಳು ಆಗುತ್ತಿವೆ. ಭಯ ಇದೆ.

* ಮೊದಲ ಚಿತ್ರದಲ್ಲೇ ದೊಡ್ಡ ಮಟ್ಟದಲ್ಲಿ ಲಾಂಚ್‌ ಆಗಿದ್ದೀರಿ?
ನಾನು ಅದೃಷ್ಟವಂತ. ಯೋಗರಾಜ್‌ ಸಿನಿಮಾಸ್‌ ಬ್ಯಾನರ್‌ನಲ್ಲಿ ಹೀರೋ ಆಗಿ ಬರುತ್ತಿದ್ದೇನೆ.

Exclusive Interview: ಕನ್ನಡ ನಾಯಕಿಯರಿಗೆ ಬೇಡಿಕೆ ಹೆಚ್ಚಾಗ್ತಿದೆ: ಖುಷಿ ರವಿ

* ಚಿತ್ರದ ಕತೆ ಏನು?
ಇದು ಪಿಯುಸಿ ಹುಡುಗ- ಹುಡುಗಿಯರ ಸ್ಟೋರಿ. ಈ ಜನರೇಷನ್‌ ಕಾಲೇಜು ಮಕ್ಕಳ ಕತೆ ಅಲ್ಲ. 1993 ಕಾಲದ ವಿದ್ಯಾರ್ಥಿಗಳ ಕತೆ. ಆ ದಿನಗಳ ಹೊಸ ಟಿನೇಜ್‌ ಪ್ರೇಮ ಕತೆ.

* ನಿಮ್ಮ ಪಾತ್ರ ಹೇಗಿರುತ್ತದೆ?
ಚಿತ್ರದಲ್ಲಿ ನನ್ನ ಪಾತ್ರದ ಹೆಸರು ನವೀನ್‌. ನನ್ನ ಸುತ್ತ ನಡೆಯುವ ಘಟನೆ, ಸನ್ನಿವೇಶಗಳ ಮೂಲಕ ನನ್ನ ಪಾತ್ರ ಕೂಡ ಸಾಗುತ್ತದೆ.

* ನಿಮಗೆ ಆಸಕ್ತಿ ಹುಟ್ಟಿಸಿದ್ದೇನು?
ನಿರ್ದೇಶಕರು ಕತೆ ಹೇಳುತ್ತಿದ್ದಾಗ ನನ್ನದೇ ಲೈಫಿನ ಕತೆ ನನಗೇ ವಾಪಸ್ಸು ಹೇಳುತ್ತಿದ್ದಾರೆ ಅನಿಸಿತು. ಕತೆಯ ಮುಖ್ಯ ತಿರುಳು ಸ್ನೇಹದ ನೆರಳು. ನಿಜ ಜೀವನದಲ್ಲೂ ನನಗೆ ತುಂಬಾ ಜನ ಸ್ನೇಹಿತರು ಇದ್ದಾರೆ.

Exclusive Interview: ಕಲಾವಿದರ ಕಣ್ಣು ಮಾತಾಡ್ಬೇಕು, ಅದೇ ಬ್ಯೂಟಿ: ಅಂಕಿತಾ ಅಮರ್‌

* ನಿಮ್ಮ ತಂದೆ ನಿರ್ಮಾಣ ಮಾಡದಿದ್ದರೆ?
ಖಂಡಿತ ಕಷ್ಟಆಗುತ್ತಿತ್ತು. ನನ್ನ ತಂದೆ ರವಿ ಶಾಮನೂರು ಅವರ ಆಶೀರ್ವಾದ, ಬೆಂಬಲದಿಂದ ನಾನು ಹೀರೋ ಆದೆ. ಮುಂದೆ ನಾನು ಗೆಲ್ಲಬೇಕು ಎಂದರೆ ಪ್ರತಿಭೆ ಬೇಕು. ಒಳ್ಳೆಯ ಕತೆಗಳಲ್ಲಿ ನಟಿಸಬೇಕು.

Follow Us:
Download App:
  • android
  • ios