‘ದಿಯಾ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರೋ ಖುಷಿ ರವಿ ಈಗ ಬಹುಭಾಷಾ ತಾರೆ. ‘ಸ್ಪೂಕಿ ಕಾಲೇಜು’ ಚಿತ್ರದ ನಾಯಕಿ. ತೆಲುಗಿನ ‘ರುದ್ರಂ’ ಸಿನಿಮಾದಲ್ಲಿ ಟ್ರಾನ್ಸ್‌ಜೆಂಡರ್‌ ಪಾತ್ರದಲ್ಲೂ ನಟಿಸುತ್ತಿದ್ದಾರೆ.

ಪ್ರಿಯಾ ಕೆರ್ವಾಶೆ

‘ದಿಯಾ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರೋ ಖುಷಿ ರವಿ ಈಗ ಬಹುಭಾಷಾ ತಾರೆ. ‘ಸ್ಪೂಕಿ ಕಾಲೇಜು’ ಚಿತ್ರದ ನಾಯಕಿ. ತೆಲುಗಿನ ‘ರುದ್ರಂ’ ಸಿನಿಮಾದಲ್ಲಿ ಟ್ರಾನ್ಸ್‌ಜೆಂಡರ್‌ ಪಾತ್ರದಲ್ಲೂ ನಟಿಸುತ್ತಿದ್ದಾರೆ.

* ಕನ್ನಡ ನಾಯಕಿಯರಿಗೆ ಭವಿಷ್ಯ ಇದೆಯಾ?
ಯೆಸ್‌ ಅಫ್‌ಕೋರ್ಸ್‌ ಖಂಡಿತವಾಗಿಯೂ ಇದೆ. ಈಗಂತೂ ಕನ್ನಡದಲ್ಲಿ ನಮ್ಮ ನೆಲದ ನಟಿಯರನ್ನೇ ಸಿನಿಮಾಗಳಿಗೆ ಹೆಚ್ಚೆಚ್ಚು ಆಯ್ಕೆ ಮಾಡಲಾಗುತ್ತದೆ. ಬೇರೆ ಭಾಷೆಯ ನಾಯಕಿಯರ ವಲಸೆ ಕಡಿಮೆ ಆಗ್ತಾ ಇದೆ. ರಾಷ್ಟ್ರ ಮಟ್ಟದಲ್ಲಿ ಮಿಂಚಿರುವ ‘ಕೆಜಿಎಫ್‌’, ‘ಕಾಂತಾರ’ದಂಥಾ ಸಿನಿಮಾಗಳಿಗೂ ಕನ್ನಡತಿಯರೇ ನಾಯಕಿಯರು. ದೊಡ್ಡ ಸಕ್ಸಸ್‌ ಕಂಡ ಸಿನಿಮಾಗಳನ್ನು ಮಾದರಿಯಾಗಿ ತೆಗೆದುಕೊಳ್ಳೋದು ರೂಢಿ. ಹೀಗಾಗಿ ಕನ್ನಡದ ಹುಡುಗಿಯರ ಭವಿಷ್ಯದ ಬಗ್ಗೆ ನನಗಂತೂ ಅನುಮಾನ ಇಲ್ಲ.

* ನೀವು ಬೇರೆ ಭಾಷೆಗಳಲ್ಲೂ ನಟಿಸುತ್ತಿರುವವರು. ನಾಯಕಿಯನ್ನು ಟ್ರೀಟ್‌ ಮಾಡುವ ರೀತಿಯಲ್ಲಿ ಇಲ್ಲಿಗೂ ಅಲ್ಲಿಗೂ ಭಿನ್ನತೆ ಕಂಡಿರಾ?
ಭಿನ್ನತೆ ಇದ್ದೇ ಇರುತ್ತೆ. ಆದರೆ ಬೇರೆ ಭಾಷೆಯ ನಟಿಯೊಬ್ಬಳು ಹಿಟ್‌ ಸಿನಿಮಾದ ಮೂಲಕ ಗುರುತಿಸಿಕೊಂಡು ಬಂದಾಗ ಗೌರವ, ನೋಡೋ ರೀತಿ ಭಿನ್ನವಾಗಿಯೇ ಇರುತ್ತೆ. ಆ ಭಾಷೆಗೆ ಹೊಸತಾಗಿ ಬರುವ ನಾಯಕಿ ಬಗ್ಗೆ ಕುತೂಹಲ, ಆಕೆ ಅಲ್ಲಿನ ಸಿನಿಮಾದಲ್ಲಿ ಏನ್‌ ಚೆನ್ನಾಗಿ ನಟಿಸಿದ್ದಾಳೆ ಅನ್ನೋ ಮೆಚ್ಚುಗೆ ಎಲ್ಲ ಇರುತ್ತೆ. ಹಾಗಂತ ನಮ್ಮ ನೆಲದಲ್ಲಿ ನಾಯಕಿಯರನ್ನು ಮೂಲೆ ಗುಂಪು ಮಾಡ್ತಾರೆ ಅನ್ನೋದಕ್ಕಾಗಲ್ಲ. ನಮ್ಮ ಮನೆಯಲ್ಲಿ ನಮಗೆ ಪ್ರೀತಿ ಯಾವತ್ತೂ ಇರುತ್ತೆ. ಪಕ್ಕದ ಮನೆಗೆ ಹೋದಾಗ ಉಪಚಾರ ಚೆನ್ನಾಗಿರುತ್ತೆ.

Exclusive Interview: ಕಲಾವಿದರ ಕಣ್ಣು ಮಾತಾಡ್ಬೇಕು, ಅದೇ ಬ್ಯೂಟಿ: ಅಂಕಿತಾ ಅಮರ್‌

* ಮೊದಲ ಸಿನಿಮಾದಲ್ಲಿ ಆಕ್ಟಿಂಗ್‌ನಲ್ಲಿ ಸಿಕ್ಸರ್‌ ಹೊಡೆದವರು, ಈ ಏಳು ವರ್ಷಗಳಲ್ಲಿ ನಿಮ್ಮಲ್ಲಾದ ಬದಲಾವಣೆ?
ಮೊದಲನೆಯದಾಗಿ ಆತ್ಮವಿಶ್ವಾಸ ಹೆಚ್ಚಿದೆ. ಹಿಂದೆ ಮಾಧ್ಯಮದ ಪ್ರಶ್ನೆಗೆ ಭಯ ಪಡುತ್ತಿದ್ದೆ. ಸಿನಿಮಾ ರಂಗದವರ ಜೊತೆಗೆ ಸಂಕೋಚ ಇರುತ್ತಿತ್ತು. ಆದರೆ ಈಗ ಯಾರ ಜೊತೆ ಬೇಕಾದರೂ ಕಾನ್ಫಿಡೆಂಟ್‌ ಆಗಿ ಮಾತನಾಡಬಲ್ಲೆ. ಭಯ ಇಲ್ವೇ ಇಲ್ಲ.

* ಲಂಡನ್‌ ಶೂಟಿಂಗ್‌ ಅನುಭವ ಹೇಗಿತ್ತು?
ಆರ್‌ ಜೆ ರೋಹಿತ್‌ ಜೊತೆಗೆ ಇನ್ನೂ ಹೆಸರಿಡದ ಸಿನಿಮಾ ಶೂಟಿಂಗ್‌ ಲಂಡನ್‌ನಲ್ಲಿ ನಡೆಯಿತು. ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಲಂಡನ್‌ನಲ್ಲಿ ಚಳಿ, ಚಳಿ. ಇಲ್ಲಿ ಬಂದ ಮೇಲೆ ಈ ಸಿನಿಮಾದ ಸ್ಕ್ರಿಪ್ಟ್‌ ಕಂಪ್ಲೀಟ್‌ ಬದಲಾಗಿತ್ತು. ಅದಕ್ಕೆ ಹೊಸತಾಗಿ ರೆಡಿ ಆಗ್ಬೇಕಿತ್ತು.

* ಪ್ರಯೋಗಶೀಲರಾ ನೀವು? ಪಾತ್ರಕ್ಕೆ ಹೇಗೆ ರೆಡಿ ಆಗ್ತೀರಿ?
ಪ್ರಯೋಗ ಮಾಡೋದರಲ್ಲಿ ಖುಷಿ ಇದೆ. ಪಾತ್ರಕ್ಕೆ ತಕ್ಕಂತೆ ಮ್ಯಾನರಿಸಂ ಮೈಗೂಡಿಸಿಕೊಳ್ಳೋದೂ ಗೊತ್ತಿದೆ. ‘ದಿಯಾ’ದ ನಾಯಕಿ ಹೇಗಿದ್ದಾಳೋ ಸರೀ ಉಲ್ಟಾಸ್ವಭಾವ ನನ್ನದು. ಪಾತ್ರಕ್ಕಾಗಿ ಕಂಪ್ಲೀಟ್‌ ಬದಲಾಗಿದ್ದೆ. ಪಾತ್ರ ಒಪ್ಪಿಕೊಂಡ ಮೇಲೆ ಆ ಜಾನರ್‌ನಲ್ಲಿ ಬಂದಿರುವ ಬೇರೆ ಬೇರೆ ಸಿನಿಮಾ, ಅಲ್ಲಿನ ಪಾತ್ರಗಳನ್ನು ಗಮನಿಸುತ್ತೀನಿ. ಹೋಂ ವರ್ಕ್ ಮಾಡ್ತೀನಿ. ಈಗ ತೆಲುಗಿನಲ್ಲಿ ‘ರುದ್ರ’ ಅನ್ನೋ ಸಿನಿಮಾದಲ್ಲಿ ಮಾಡ್ತಿದ್ದೀನಿ. ಅದರಲ್ಲಿ ನನ್ನದು ಟ್ರಾನ್ಸ್‌ಜೆಂಡರ್‌ ಪಾತ್ರ. ಇದಕ್ಕಾಗಿ ಸಾಕಷ್ಟುಜನ ಲೈಂಗಿಕ ಅಲ್ಪಸಂಖ್ಯಾತರನ್ನು ಭೇಟಿ ಮಾಡಿದ್ದೇನೆ. ಈ ಸಬ್ಜೆಕ್ಟ್ನಲ್ಲಿ ಬಂದಿರೋ ಸಿನಿಮಾಗಳನ್ನೂ ನೋಡಿದ್ದೀನಿ.

Dooradarshana: 80ರ ದಶಕದಲ್ಲಿ ಬದುಕಿದ ಅನುಭವ ಸಿಕ್ಕಿತು: ಅಯನಾ

* ಇಷ್ಟೆಲ್ಲ ಮಾಡಿದ್ರೂ ನಾಯಕಿಗೆ ದ್ವಿತೀಯ ಸ್ಥಾನ, ಹೀರೋಗೆ ಪ್ರಾಶಸ್ತ್ಯ ನೀಡ್ತಿದ್ದಾರೆ ಅನಿಸೋದಿಲ್ವಾ?
ಅದು ಎಷ್ಟೋ ಕಾಲದಿಂದ ಇದೆ. ಹಾಲಿವುಡ್‌ನಲ್ಲೂ ಇದೆ. ಅದನ್ನು ನಾವು ಪ್ರಶ್ನೆ ಮಾಡೋದಕ್ಕಾಗಲ್ಲ. ಸ್ಟಾರ್‌ ನಟರಿರುವಾಗ ಅವರಷ್ಟುಅನುಭವ ಇಲ್ಲದ ನನಗೆ ಅವರ ನಂತರದ ಸ್ಥಾನ ಸಿಕ್ಕಿರಬಹುದು. ಆದರೆ ಹೊಸಬರ ಚಿತ್ರದಲ್ಲಿ ನಾಯಕನಿಗಿಂತ ನನಗೇ ಹೆಚ್ಚು ಪ್ರಾಶಸ್ತ್ಯ ಸಿಗುತ್ತೆ.