ದೇಶು

ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರ ಒಪ್ಪಿಕೊಂಡಿದ್ದು ಯಾಕೆ?

ಅದಕ್ಕಿದ್ದಿದ್ದು ಎರಡು ಕಾರಣ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸಿನಿಮಾ. ಹಾಗೆಯೇ ಸಿನಿಮಾದ ಕತೆ. ಬಾಲ್ಯದಿಂದಲೇ ನಾನು ನಾಗತಿಹಳ್ಳಿ ಮೇಷ್ಟ್ರ ಸಿನಿಮಾ ನೋಡುತ್ತಾ ಬೆಳೆದವಳು. ಅಂತಹ ನಿರ್ದೇಶಕರ ಸಿನಿಮಾ ಗಳಲ್ಲಿ ಅವಕಾಶ ಸಿಕ್ಕರೆ ಅಭಿನಯಿ ಸಬೇಕು ಎನ್ನುವ ಆಸೆಯಿತ್ತು. ಅದೀಗ ಈಡೇರಿತು. ಕತೆ ಕೂಡ ಅದಕ್ಕೆ ಬಲವಾದ ಕಾರಣವಾಯಿತು.

ಈ ಸಿನಿಮಾದ ಕತೆಯಲ್ಲೇನಿದೆ ಅಂತಹ ವಿಶೇಷ?

ಅನೇಕ ಕಾರಣಕ್ಕೆ ಕತೆ ವಿಶೇಷತೆ ಹೊಂದಿದೆ. ಆ ದೃಷ್ಟಿಯಲ್ಲಿ ನನಗಿದು ಸ್ಪೆಷಲ್ ಸಿನಿಮಾ. ಈ ಚಿತ್ರದ ಕತೆ ಬರೆದಿದ್ದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಗಳು ಕನಸು. ಸಾಮಾನ್ಯವಾಗಿ ಮಹಿಳಾ ಬರಹಗಾರರ ಬಗ್ಗೆ ನನಗೆ ವಿಶೇಷ ಅಭಿಮಾನ. ಆಳವಾದ ಅಧ್ಯಯನದ ಮೂಲಕವೇ ಬರಹಗಾರ ರಾಗಿರುತ್ತಾರೆ ಎನ್ನುವ ನಂಬಿಕೆ ನನ್ನದು. ಹಾಗಾಗಿ ಅವರಲ್ಲಿ ಆಗಾಧವಾದ ಅಭಿಮಾನ ಮೂಡಿತು. ಈ ಸಿನಿಮಾ ಒಪ್ಪಿಕೊಳ್ಳಲು ಪ್ರೇರಣೆ ನೀಡಿತು.

'ಕೆಂಡಸಂಪಿಗೆ'ಯಲ್ಲಿ ಅರಳಿದ 'ಟಗರು' ಪುಟ್ಟಿ ಮಾನ್ವಿತಾ ಕಾಮತ್‌ ಏನ್‌ ಬಾಂಬ್ ಅಂತೀರಾ!

ಈ ಸಿನಿಮಾದಿಂದ ನೀವು ಕಲಿತಿದ್ದು ಏನು?

ಅನಂತನಾಗ್, ಪ್ರಕಾಶ್ ಬೆಳವಾಡಿ, ಸುಮಲತಾ ಮೇಡಂ ಅವರಂತಹ ದೊಡ್ಡ ಸ್ಟಾರ್ ಜತೆಗೆ ಕೆಲಸ ಮಾಡಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರಂತಹ ಹಿರಿಯ ನಿರ್ದೇಶಕರ ಜತೆಗೆ ಕೆಲಸ ಮಾಡುವಾಗ ಸಹಜವಾಗಿಯೇ ಕಲಿಯುವುದೇ ಇದ್ದೇ ಇರುತ್ತದೆ. ಆ ದೃಷ್ಟಿಯಲ್ಲಿ ಒಂದಷ್ಟು ಮೆಚ್ಯುರಿಟಿ ಬಂದಿದೆ ಎನ್ನುವುದು ನನ್ನ ಭಾವನೆ.

ಚಿತ್ರದಲ್ಲಿನ ನಿಮ್ಮ ಪಾತ್ರ, ಮತ್ತದರ ವಿಶೇಷತೆ ಬಗ್ಗೆ ಹೇಳಿ?

ಪಾತ್ರದ ಹೆಸರು ಮೇದಿನಿ. ಆಕೆ ಮುಗ್ಧೆ. ಆಕೆಯ ಆ ಮುಗ್ಧತೆಯಲ್ಲೂ ದೇಶಾಭಿಮಾನವಿದೆ. ಅದು ಅವರ ತಾತನಿಂದ ಬಂದ ಪ್ರೇರಣೆ. ಹಾಗಂತ ಆಕೆ ದೊಡ್ಡ ದೇಶ ಭಕ್ತೆಯೇನು ಅಲ್ಲ. ಹೀಗಿದ್ದ ಹುಡುಗಿ, ತನ್ನ ಬಾಯ್ ಫ್ರೆಂಡ್ ಜತೆಗೆ ಫಸ್ಟ್ ಟೈಮ್ ವಿದೇಶಕ್ಕೆ ಹೋಗುವ ಸಂದರ್ಭ ಬರುತ್ತೆ. ಅಲ್ಲಿ ಆಕೆಗೆ ಏನೆಲ್ಲ ಸಮಸ್ಯೆಗಳು, ಪ್ರಶ್ನೆಗಳು ಶುರುವಾಗುತ್ತವೆ ಎನ್ನುವುದೇ ಕತೆ.

ಚಿತ್ರೀಕರಣದ ಅನುಭವ ಹೇಗಿತ್ತು?

ಸಿನಿಮಾ ಚಿತ್ರೀಕರಣ, ಸೆಟ್, ಲೊಕೇಷನ್ ಎನ್ನುವುದೇನು ನನಗೆ ಹೊಸದಲ್ಲ. ಆದ್ರೆ ಶೂಟಿಂಗ್ ಅಂತ ಲಂಡನ್ ಹೋಗಿದ್ದು ಅದೇ ಮೊದಲು. ಆ ಅನುಭವವೇ ತುಂಬಾ ಚೆನ್ನಾಗಿತ್ತು. ಮೊದಲ ಸಲ ಲಂಡನ್ ನೋಡುವುದೇ ಒಂದು ಮುದ್ದಾದ ಅನುಭವ. ಅದರಲ್ಲೂ 45 ದಿವಸಗಳ ಚಿತ್ರೀಕರಣದ ಅವಧಿ. ಸುತ್ತಾಡಿದ ಜಾಗಗಳು, ನೋಡಬೇಕಿದ್ದ ತಾಣಗಳು ಎಲ್ಲಾ ಕಡೆಗೂ ಚಿತ್ರೀಕರಣದನೆಪದಲ್ಲಿ ಹೋಗಿ ಬಂದೆವು.

ಕ್ಯಾಮೆರಾ ಮುಂದೆ ಕೆಂಪಾದಳು ಕೆಂಡಸಂಪಿಗೆ ಚೆಲುವೆ

ಶೂಟಿಂಗ್ ವೇಳೆ ಹೀರೋ ವಸಿಷ್ಠ ಅವರಿಗೆ ಸಾಕಷ್ಟು ಗೈಡ್ ಮಾಡಿದ್ರಂತೆ, ಹೌದೇ?

ಗೈಡ್ ಅಂತೇನಿಲ್ಲ. ಅವರೊಬ್ಬ ಪ್ರಬುದ್ಧ ನಟ. ಆದ್ರೆ ಹೀರೋ ಅಂತ ಆಗಿದ್ದು ಅದೇ ಮೊದಲು. ಆ ದೃಷ್ಟಿಯಲ್ಲಿ ನಾವೆಲ್ಲ ಹಾಗಲ್ಲ, ಹೀಗೆ ಅಂತ ಸೆಟ್‌ನಲ್ಲಿ ಚರ್ಚಿಸುತ್ತಿದ್ದೆವು. ಇಡೀ ಚಿತ್ರೀಕರಣದ ಉದ್ದಕ್ಕೂ ಅದೇ ವಾತಾವರಣ ಇತ್ತು. ಹೀರೋ-ಹೀರೋಯಿನ್ ನಡುವೆ ಕಂಫರ್ಟ್ ಜೋನ್ ಇದ್ದಾಗಲೇ ಸಿನಿಮಾದ ಔಟ್‌ಪುಟ್ ಚೆನ್ನಾಗಿ ಬರಲು ಸಾಧ್ಯ. ಇದು ಎಲ್ಲಾ ಸಿನಿಮಾಗಳಲ್ಲೂ ಹೊಸಬರ ಜತೆಗೂ ಕೆಲಸ ಮಾಡುವಾಗ ಇದ್ದೇ ಇರುತ್ತೆ.

ಸಿನಿಮಾದ ವಿಶೇಷತೆ ಬಗ್ಗೆ ಹೇಳೋದಾದ್ರೆ...

ಅನೇಕ ಕಾರಣಕ್ಕೆ ಕೆಲವು ಸಿನಿಮಾಗಳು ಯಾವುದೋ ಒಂದೊಂದು ವರ್ಗಕ್ಕೆ ಸೀಮಿತವಾಗುವುದು ಸಹಜ. ಅದು ಆ ಸಿನಿಮಾಗಳ ಕತೆ, ಜಾನರ್, ಮೇಕಿಂಗ್ ಮೇಲೆ ನಿಂತಿರುತ್ತೆ. ಹಾಗಾಗಿಯೇ ನಾವು ಕ್ಲಾಸ್, ಮಾಸ್ ಎನ್ನುವ ಪಟ್ಟ ಕಟ್ಟಿ ಬಿಡುತ್ತೇವೆ. ಆದ್ರೆ ಈ ಸಿನಿಮಾ ಅಂತಹ ಯಾವುದೇ ಮಿತಿಗೆ ನಿಲುಕುವುದಿಲ್ಲ. ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾ. ಕುಟುಂಬದ ಎಲ್ಲರೂ ಸೇರಿ ನೋಡಬಹುದಾದ ಸಿನಿಮಾ.

ಜೈಸಲ್ಮೇರ್‌ನಲ್ಲಿ ಮಾನ್ವಿತಾ ಹರೀಶ್‌ !

ಪ್ರೀಮಿಯರ್ ಶೋಗಳಲ್ಲಿ ಸಿನಿಮಾ ನೋಡಿದವರಿಂದ ಬಂದ ಅಭಿಪ್ರಾಯ ಹೇಗಿತ್ತು?

ಲಂಡನ್ ಹಾಗೂ ಕಾರ್ಡಿಪಾದಲ್ಲಿ ಪ್ರೀಮಿಯರ್ ಶೋ ನಡೆದವು. ಅಲ್ಲಿ ಸಿನಿಮಾ ನೋಡಿದವರಿಗೆಲ್ಲ ನನ್ನ ಮತ್ತು ಅನಂತನಾಗ್ ಕೆಮಿಸ್ಟ್ರಿ ತುಂಬಾ ಇಷ್ಟವಾಯಿತು. ಇಲ್ಲಿ ಅನಂತನಾಗ್ ಸರ್ ನನಗೆ ತಾತ. ನಾನು ಮೊದಲ ಬಾರಿಗೆ ದೇಶ ಬಿಟ್ಟು ಇನ್ನೊಂದು ದೇಶಕ್ಕೆ ಬರುವ ಸಂದರ್ಭದಲ್ಲಿ ತಾತ ಮತ್ತು ಮೊಮ್ಮಗಳ ಆ ಬಾಂಧವ್ಯ ಹೇಗೆ ನೋಡುಗರನ್ನು ಕಾಡಿಸುತ್ತದೆ ಎನ್ನುವುದರ ಬಗ್ಗೆ ತುಂಬಾ ಮಾತನಾಡಿದರು. ಅದು ನನಗೂ ಇಷ್ಟವಾಯಿತು.

ಈ ಸಿನಿಮಾದಿಂದ ನೀವು ಕಲಿತಿದ್ದು ಏನು?

ಅನಂತನಾಗ್, ಪ್ರಕಾಶ್ ಬೆಳವಾಡಿ, ಸುಮಲತಾ ಮೇಡಂ ಅವರಂತಹ ದೊಡ್ಡ ಸ್ಟಾರ್ ಜತೆಗೆ ಕೆಲಸ ಮಾಡಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರಂತಹ ಹಿರಿಯ ನಿರ್ದೇಶಕರ ಜತೆಗೆ ಕೆಲಸ ಮಾಡುವಾಗ ಸಹಜವಾಗಿಯೇ ಕಲಿಯುವುದೇ ಇದ್ದೇ ಇರುತ್ತದೆ. ಆ ದೃಷ್ಟಿಯಲ್ಲಿ ಒಂದಷ್ಟು ಮೆಚ್ಯುರಿಟಿ ಬಂದಿದೆ ಎನ್ನುವುದು ನನ್ನ ಭಾವನೆ.