ಶೂಟಿಂಗ್ ಸ್ಪಾಟ್‌ನಲ್ಲಿ ಜಮಾಲಿಗುಡ್ಡ; ನಿರ್ದೇಶಕ Kushal Gowda ಸಂದರ್ಶನ!
ಈ ಹಿಂದೆ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದ ಮೂಲಕ ಗಮನ ಸೆಳೆದ ಪ್ರತಿಭಾವಂತ ನಿರ್ದೇಶಕ ಕುಶಾಲ್ ಗೌಡ. ಈಗ ಶ್ರೀಹರಿ ರೆಡ್ಡಿ ನಿರ್ಮಾಣದಲ್ಲಿ ಒನ್‌ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರೀಕರಣದ ಸ್ಪಾಟ್‌ನಿಂದಲೇ ಚಿತ್ರದ ಕುರಿತು ಕುಶಾಲ್ ಶೂಟಿಂಗ್ ಸಾ ಗೌಡ ಮಾತನಾಡಿದ್ದಾರೆ.
ಆರ್.ಕೇಶವಮೂರ್ತಿ
ಚಿತ್ರದ ಟೈಟಲ್ ಉದ್ದ ಆಗಿಲ್ಲವೇ?
ಹಾಗೇನು ಇಲ್ಲ. ಚಿತ್ರದ ಸಬ್ ಟೈಟಲ್ ಸೇರಿಸಿ ‘ವನ್‌ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಎಂದು ಓದಿಕೊಂಡರೆ ಉದ್ದ ಅನಿಸುತ್ತದೆ. ಆದರೆ, ಮುಖ್ಯ ಕತೆ ನಡೆಯುವುದು ಜಮಾಲಿಗುಡ್ಡದಲ್ಲಿ. ಒಂದಾನೊಂದು ಕಾಲದಲ್ಲಿ ಅಲ್ಲಿ ಏನು ನಡೆಯಿತು ಎಂಬುದನ್ನು ಹೇಳುವ ಕತೆಗೆ ಈ ಶೀರ್ಷಿಕೆ ಬೇಕಿತ್ತು. ಕತೆಗೆ ಪೂರಕವಾದ ಹೆಸರು.
ಈ ಚಿತ್ರದ ಮೂಲಕ ನೀವು ಹೇಳುತ್ತಿರುವುದು ಏನು?
ಇದು ಯಾವ ಜಾನರ್ ಸಿನಿಮಾ, ಈ ಚಿತ್ರದಲ್ಲಿ ಏನಿದೆ ಎಂದು ಹೇಳಿದರೆ ಸಿನಿಮಾ ಗುಟ್ಟು ರಟ್ಟಾಗುತ್ತದೆ. ಯಾಕೆಂದರೆ ಇದು 90ರ ದಶಕದ ಕತೆ. ಒಂದು ಎಳೆ ಬಿಟ್ಟು ಕೊಟ್ಟರೂ ಕತೆ
ಗೊತ್ತಾಗುತ್ತದೆ.
ಹಾಗಾದರೆ ಜಮಾಲಿಗುಡ್ಡ ಎನ್ನುವ ಜಾಗ ಉಂಟಾ?
ಇಲ್ಲ. ಒಂದು ಕಾಲ್ಪನಿಕ ಜಾಗಕ್ಕೆ ನಾವು ಇಟ್ಟುಕೊಂಡಿರುವ ಹೆಸರು. ಈ ಕಾಲ್ಪನಿಕ ಜಾಗದಲ್ಲಿ ರೆಟೊ್ರೀ ಕತೆ ಹೇಳುತ್ತಿದ್ದೇವೆ. ಲವ್, ಆ್ಯಕ್ಷನ್, ಮನರಂಜನೆ ಎಲ್ಲವೂ ಚಿತ್ರದಲ್ಲಿದೆ.
ಚಿತ್ರದ ಮೇಕಿಂಗ್ ಹೇಗಿರುತ್ತದೆ?
ತುಂಬಾ ರೀ ಕ್ರಿಯೇಟ್ ಮಾಡುತ್ತಿದ್ದೇವೆ. ಅದ್ದೂರಿಯಾಗಿ ಚಿತ್ರ ಮೂಡಿ ಬರಲು ನಿರ್ಮಾಪಕ ಶ್ರೀಹರಿ ರೆಡ್ಡಿ ಅವರು ಯಾವುದಕ್ಕೂ ಕೊರತೆ ಮಾಡಿಲ್ಲ. ಹೀಗಾಗಿ ಚಿತ್ರದ ಮೇಕಿಂಗ್‌ನಲ್ಲಿ ನಾವು ಸೋಲಲ್ಲ ಎನ್ನುವ ಭರವಸೆ ಇದೆ. ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಭಾವನಾ, ಪ್ರಕಾಶ್ ಬೆಳವಾಡಿ, ನಂದಗೋಪಾಲ್, ಯಶ್ ಶೆಟ್ಟಿ, ಟಗರು ಸರೋಜ ಮುಂತಾದವರು ನಟಿಸುತ್ತಿದ್ದಾರೆ. ಕೊರೋನಾ ಸಂಕಷ್ಟದಲ್ಲೂ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ನಿರ್ಮಾಪಕರು ಸಹಕಾರ ನೀಡುತ್ತಿದ್ದಾರೆ.
- ಅದ್ದೂರಿ ಮೇಕಿಂಗ್‌ನಲ್ಲಿ ಡಾಲಿ ಧನಂಜಯ್ ನಟನೆಯ ಜಮಾಲಿಗುಡ್ಡ.
- ತುಂಬಾ ದಿನಗಳ ನಂತರ ಕನ್ನಡದಲ್ಲಿ ಸೆಟ್ಟೇರಿರುವ ರೆಟೊ್ರೀ ಸ್ಟೈಲಿನ ಕತೆ. ಕೊರೋನಾ ಸಂಕಷ್ಟದಲ್ಲೂ ನಿಲ್ಲದ ಚಿತ್ರೀಕರಣ.
- ಬೆಂಗಳೂರು, ಚಿಕ್ಕಮಂಗಳೂರಿನಲ್ಲಿ 45 ದಿನ ಚಿತ್ರೀಕರಣ, ಈಗ ಶಿವಮೊಗ್ಗದಲ್ಲಿ ಶೂಟಿಂಗ್. ಕುಶಾಲ್ ಗೌಡ ನಿರ್ದೇಶನ, ಶ್ರೀಹರಿ ರೆಡ್ಡಿ ನಿರ್ಮಾಣದ ಬಹುತಾರಾಗಣದ ಚಿತ್ರವಿದು.
ಈಗ ಎಷ್ಟು ದಿನ, ಎಲ್ಲೆಲ್ಲಿ ಶೂಟಿಂಗ್ ಆಗಿದೆ?
ಬೆಂಗಳೂರು, ಚಿಕ್ಕಮಗಳೂರಿನಲ್ಲಿ 45 ದಿನ ಶೂಟಿಂಗ್ ಆಗಿದೆ. ಶೇ.65 ಭಾಗ ಚಿತ್ರೀಕರಣ ಮುಗಿಸಿದ್ದೇವೆ. ಇನ್ನೂ 20 ರಿಂದ 25 ದಿನ ಶೂಟಿಂಗ್ ನಡೆಯಬೇಕಿದೆ. ಸದ್ಯಕ್ಕೆ ಶಿವಮೊಗ್ಗದಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ. ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.