Asianet Suvarna News Asianet Suvarna News

Dhananjay: ರತ್ನಾಕರನ ಜೊತೆ 'ಜಮಾಲಿಗುಡ್ಡ'ಕ್ಕೆ ಬಂದ ಅದಿತಿ ಪ್ರಭುದೇವ

ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಎಂಬ ಹೊಸ ಚಿತ್ರವನ್ನು ಧನಂಜಯ್ ಹಾಗೂ ಅದಿತಿ ಪ್ರಭುದೇವ ಒಪ್ಪಿಕೊಂಡಿದ್ದು, ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ. ಕುಶಾಲ್ ಗೌಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

once upon a time in jamaligudda movie title launch starrer Dhananjay Aditi Prabhudeva gvd
Author
Bangalore, First Published Nov 24, 2021, 6:55 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ನ ಬೇಡಿಕೆಯ ಕಲಾವಿದರಲ್ಲಿ ಡಾಲಿ ಧನಂಜಯ್ (Dhananjay) ಹಾಗೂ ಅದಿತಿ ಪ್ರಭುದೇವ (Aditi Prabhudeva) ಮುಂಚೂಣಿಯಲ್ಲಿದ್ದಾರೆ.  ಡಾಲಿ ಧನಂಜಯ್ 'ಟಗರು' (Tagaru) ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದು, ಸಾಲು ಸಾಲು ಚಿತ್ರಗಳು ಅವರ ಕೈಯಲ್ಲಿದ್ದು, ತೆಲುಗು, ತಮಿಳು, ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಹಾಗೂ ಅದಿತಿ ಪ್ರಭುದೇವ ಕೂಡಾ ಕನ್ನಡ ಚಿತ್ರರಂಗದಲ್ಲಿ ಬಹಳ ಬ್ಯುಸಿ ನಟಿಯಾಗಿದ್ದು, ಆಕೆ ಕೂಡಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ 'ತೋತಾಪುರಿ' (Totapuri) ಚಿತ್ರದ ನಂತರ ಧನಂಜಯ್ ಹಾಗೂ ಅದಿತಿ ಪ್ರಭುದೇವ ಮತ್ತೊಂದು ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ.

ಹೌದು! 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' (Once Upon a Time in Jamaligudda) ಎಂಬ ಹೊಸ ಚಿತ್ರವನ್ನು ಧನಂಜಯ್ ಹಾಗೂ ಅದಿತಿ ಪ್ರಭುದೇವ ಒಪ್ಪಿಕೊಂಡಿದ್ದು, ಚಿತ್ರದ ಟೈಟಲ್ ಪೋಸ್ಟರ್ (Title Poster) ರಿಲೀಸ್ ಆಗಿದೆ. ಬಿಡುಗಡೆಯಾಗಿರುವ ಟೈಟಲ್ ಪೋಸ್ಟರ್ ವಿಭಿನ್ನವಾಗಿದ್ದು, ನೀರಿನ ದಡದಲ್ಲಿ ಧನಂಜಯ್ ಒಂದು ಹೆಣ್ಣು ಮಗುವಿನೊಂದಿಗೆ ಕುಳಿತು ಏನೋ ಯೋಚನೆ ಮಾಡುತ್ತಾ ಕುಳಿತಿರುವ ದೃಶ್ಯ ಪೋಸ್ಟರ್‌ನಲ್ಲಿದೆ. ಚಿತ್ರಕ್ಕೆ ಕುಶಾಲ್ ಗೌಡ (Kushal Gowda) ಅವರು ಆ್ಯಕ್ಷನ್​ ಕಟ್ ಹೇಳಿದ್ದು, ಇದಕ್ಕೂ ಮುನ್ನ 'ಕನ್ನಡಕ್ಕಾಗಿ ಒಂದನ್ನು ಒತ್ತಿ' (Kannadakkagi Ondannu Otti) ಚಿತ್ರವನ್ನು ನಿರ್ದೇಶಿಸಿದ್ದರು. 

'ಬಡವ ರಾಸ್ಕಲ್‌' ಹೊಸ ಹಾಡಿನಲ್ಲಿ ಡಾಲಿ ಧನಂಜಯ್‌ ಹೃದಯ ಚೂರಾಯ್ತು

ಇದೊಂದು ಸಸ್ಪೆನ್ಸ್ ಕಥೆ ಹೊಂದಿರುವ ಸಿನಿಮಾ ಎನ್ನಲಾಗಿದ್ದು, ಈಗಾಗಲೇ ಸಿನಿಮಾ ಚಿತ್ರೀಕರಣ ಕೂಡಾ ಆರಂಭವಾಗಿದೆ. ಚಿತ್ರವನ್ನು ಶ್ರೀ ಹರಿ ನಿರ್ಮಿಸುತ್ತಿದ್ದಾರೆ. ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುವಾಗ ನಾನು ಬಹಳ ಯೋಚಿಸುತ್ತೇನೆ. ಅದೇ ರೀತಿ ಈ ಸಿನಿಮಾಗೆ ಒಪ್ಪಿಕೊಳ್ಳುವಾಗ ಸ್ವಲ್ಪ ಭಯ ಇತ್ತು. ಸಿನಿಮಾ ಸ್ಕ್ರಿಪ್ಟ್ ಬಹಳ ಚೆನ್ನಾಗಿದೆ. ಕುಶಾಲ್ ಗೌಡ ನನ್ನ ಬಳಿ ಬಂದು ಕಥೆ ಹೇಳಿದಾಗ ನನಗೆ ಬಹಳ ಹಿಡಿಸಿತು. ಅದಕ್ಕೂ ಮುನ್ನ ಅವರು ಒಂದು ವರ್ಷದ ಕಾಲ ಸ್ಕ್ರಿಪ್ಟ್​ ವರ್ಕ್ ಮಾಡಿದ್ದರು. ಈ ಸಿನಿಮಾಗೆ ನಾನೇ ಬೇಕೆಂದು ಅವರು ಹೇಳಿದ್ದರು. ಚಿತ್ರದ ಮೇಲೆ ಅವರಿಗಿದ್ದ ಪ್ಯಾಷನ್ ನೋಡಿ ಸಿನಿಮಾ ಒಪ್ಪಿಕೊಂಡೆ ಎಂದು ಧನಂಜಯ್ ಹೇಳಿದರು. 

ಬಾಬಾಬುಡನ್ ಗಿರಿ, ಚಿಕ್ಕಮಗಳೂರು, ಕುದುರೆಮುಖ ಸೇರಿದಂತೆ ಅನೇಕ ಸುಂದರ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಅದಿತಿ ಪ್ರಭುದೇವ ಕೂಡಾ ಈ ಚಿತ್ರದ ಕಥೆ ಹಾಗೂ ತಮ್ಮ ಪಾತ್ರವನ್ನು ಬಹಳ ಮೆಚ್ಚಿರುವುದಾಗಿ ಹೇಳಿಕೊಂಡಿದ್ದಾರೆ. 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಿದೆ. 'ಟಗರು', 'ಸಲಗ' ಖ್ಯಾತಿಯ ಮಾಸ್ತಿ (Masti) ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಯಶ್ವಂತ್ ಶೆಟ್ಟಿ, ಹಿರಿಯ ನಟಿ ಭಾವನಾ, ತ್ರಿವೇಣಿ ರಾವ್, ಪ್ರಕಾಶ್ ಬೆಳವಾಡಿ ಹಾಗೂ ಇನ್ನಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಶಂಕರ್ ಅಲಿಯಾಸ್ 'ಬಡವ ರಾಸ್ಕಲ್': ಡಾಲಿ ಧನಂಜಯ್ ಹೊಸ ಅವತಾರ!

ಸದ್ಯ ಧನಂಜಯ್ ಅಭಿನಯದ 'ಬಡವ ರಾಸ್ಕಲ್' (Badava Rascal) ಚಿತ್ರ ಡಿಸೆಂಬರ್ 24 ಕ್ರಿಸ್‌ಮಸ್ (Christmas) ಹಬ್ಬದಂದು ಬಿಡುಗಡೆಯಾಗಲಿದ್ದು, ಮಾನ್ಸೂನ್ ರಾಗ (Monsoon Raga) ಸೇರಿದಂತೆ ಹೆಡ್​ ಬುಷ್ (Head Bush)​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಡಾಲಿ ಧನಂಜಯ್ ಅಭಿನಯದ 'ಹೆಡ್​ ಬುಷ್'​ ಸಿನಿಮಾಕ್ಕೆ ಅಗ್ನಿ ಶ್ರೀಧರ್ ಕತೆ ಬರೆದಿದ್ದು, ಶೂನ್ಯ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಹಾಗೂ ಅಲ್ಲು ಅರ್ಜುನ್ (Allu Arjun) ಅಭಿನಯದ 'ಪುಷ್ಪ' (Pushpa) ಚಿತ್ರದಲ್ಲಿ ಧನಂಜಯ್ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
 

 
 
 
 
 
 
 
 
 
 
 
 
 
 
 

A post shared by Dhananjaya (@dhananjaya_ka)

Follow Us:
Download App:
  • android
  • ios