ಗೆಳೆತನಕ್ಕೆ ಹೊಸ ಭಾಷ್ಯ ಬರೆಯುವ ಸಿನಿಮಾ ನಮ್ಮದು : ವರುಣ್ ರಾಜ್

ವರುಣ್ ರಾಜ್ ಹಾಗೂ ಗೆಳೆಯರ ಹೊಸ ಸಿನಿಮಾ ಕಡಲ ತೀರದ ಭಾರ್ಗವ ಗೆಳೆತನದ ಕತೆ ಹೇಳುತ್ತೆ. ಇವರ ಜೊತೆಗೆ ಭರತ್, ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಮುಖ್ಯಪಾತ್ರದಲ್ಲಿದ್ದಾರೆ. ಪನಾಗ್ ಸೋಮಶೇಖರ್ ನಿರ್ದೇಶಕರು. ಸಿನಿಮಾದ ಕುರಿತ ವರುಣ್ ಮಾತುಗಳು ಇಲ್ಲಿವೆ.

Kannada actor Varun Raj exclusive interview vcs

ನಿತ್ತಿಲೆ

ಶಿವರಾಮ ಕಾರಂತರನ್ನು ಕಡಲ ತೀರದ ಭಾರ್ಗವ ಅಂತ ಕರೀತಾರೆ. ನಿಮ್ ಸಿನಿಮಾ ಅವರ ಕುರಿತಾದದ್ದಾ?

ಖಂಡಿತಾ ಇಲ್ಲ. ನಾವು ಪುರಾಣದಲ್ಲಿ ಬರುವ ವಿಷ್ಣುವಿನ ಆರನೇ ಅವತಾರ ಭಾರ್ಗವ ರಾಮದಿಂದ ಸ್ಪೂರ್ತಿ ಪಡೆದು ಈ ಟೈಟಲ್ ಇಟ್ಟಿದ್ದೇವೆ. ನಾನು ಭಾರ್ಗವ ಪಾತ್ರ ಮಾಡುತ್ತಿದ್ದೇನೆ. ಇದು ಡ್ರಾಮಾ ಜೊತೆಗೆ ಸೈಕಲಾಜಿಕಲ್ ಥ್ರಿಲ್ಲರ್. ಇಲ್ಲಿ ಗೆಳೆತನದ ಕತೆ ಹೇಳ್ತೀವಿ. ಲವ್ ಟ್ರ್ಯಾಕ್ ಸಹ ಇದೆ. ಮಾನಸಿಕ ವೈರುಧ್ಯಗಳನ್ನು ವಿಭಿನ್ನವಾಗಿ ತೆರೆಯ ಮೇಲೆ ತರುವ ಪ್ರಯತ್ನ ನಮ್ಮದು.

ಗೆಳೆತನ ಅಂದಿರಿ, ಹುಡುಗ ಹುಡುಗಿ ಫ್ರೆಂಡ್‌ಶಿಪ್ ಕಥೆನಾ?

ಅದೂ ಹೌದು, ಜೊತೆಗೆ ಹುಡುಗ ಹುಡುಗನ ಮಧ್ಯದ ಫ್ರೆಂಡ್‌ಶಿಪ್ ಕತೆಯೂ ಹೌದು.

ಮುಗಿಲ್‌ಪೇಟೆ ನನಗಿಷ್ಟ; ಮನುರಂಜನ್‌ ರವಿಚಂದ್ರನ್‌ ಸಂದರ್ಶನ! 

ಶೂಟಿಂಗ್ ಮುಗಿದಿದೆಯಾ, ಸಿನಿಮಾ ರಿಲೀಸ್ ಯಾವಾಗ?

ಶೂಟಿಂಗ್, ಪೋಸ್‌ಟ್ ಪ್ರೊಡಕ್ಷನ್ ವರ್ಕ್ ಎಲ್ಲ ಮುಗಿದಿದೆ. ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಕೋವಿಡ್ ಬರದಿದ್ರೆ ಈಗ ರಿಲೀಸ್ ಮಾಡುವ ಪ್ಲಾನ್ ಇತ್ತು. ಮುಂದೆ ಚೆನ್ನಾಗಿ ಪ್ರಚಾರ ಮಾಡಿ ಬಿಗ್ ಸ್ಕ್ರೀನ್‌ಗೆ ಬರುತ್ತೇವೆ.

ಬೋಲ್ಡ್‌ ಪಾತ್ರ ಬೇಡ, ಹಳ್ಳಿ ಹುಡುಗಿ ಆಗ್ಬೇಕು: ಭವ್ಯಾ ಗೌಡ 

ಹೀಗೊಂದು ಸಿನಿಮಾ ಮಾಡಬೇಕು ಅಂತ ಅನಿಸಿದ್ದು ಯಾಕೆ?

ನಮ್ಮ ಮನೆಯನ್ನು ಸಿನಿಮಾ ಶೂಟಿಂಗ್‌ಗೆ ಕೊಟ್ತಿದ್ವಿ. ಚಿಕ್ಕ ವಯಸ್ಸಿಂದಲೇ ಶೂಟಿಂಗ್ ಮಾಡೋದನ್ನುಹತ್ತಿರದಿಂದ ನೋಡುತ್ತಾ ನನ್ನಲ್ಲೂ ಸಿನಿಮಾ ಮಾಡಬೇಕೆಂಬ ತುಡಿತ ಶುರುವಾಯ್ತು. ಕಳೆದ ಎರಡು ವರ್ಷಗಳ ಹಿಂದೆ ನನ್ನ ಫ್ರೆಂಡ್ ಪನಾಗ್ ಸೋಮಶೇಖರ್ ಕಿರುಚಿತ್ರ ಮಾಡುವ ಪ್ರಸ್ತಾಪ ಮುಂದಿಟ್ಟರು. ಆಮೇಲೆ ಮಾಡ್ತಿದ್ರೆ ಫುಲ್ ಲೆನ್‌ತ್ ಸಿನಿಮಾನೇ ಮಾಡೋಣ ಅಂತ ಹೊರಟ್ವಿ. ಒಂದೊಳ್ಳೆ ಕಥೆಯನ್ನಿಟ್ಟು ಈ ಸಿನಿಮಾ ಮಾಡಿದ್ದೀವಿ. ಮುಖ್ಯಪಾತ್ರದಲ್ಲಿ ನನ್ನ ಜೊತೆಗೆ ಭರತ್, ಬಿಗ್‌ಬಾಸ್ ಖ್ಯಾತಿ ಶ್ರುತಿ ಪ್ರಕಾಶ್ ಇದ್ದಾರೆ. ಟೆಕ್ನಿಕಲ್ ಟೀಮ್‌ನಲ್ಲಿ ಅನಿಲ್ ಸಿ ಜೆ ಸಂಗೀತ, ಕೀರ್ತನ್ ಪೂಜಾರಿ ಕ್ಯಾಮರ ವರ್ಕ್ ಇದೆ.

ನಿಮ್ಮ ಹಿನ್ನೆಲೆ ?

ಪೆಟ್ರೋಲ್ ಬಂಕ್ ಓನರ್. ಇಂದಿರಾನಗರದಲ್ಲಿ ಸೆರಾಮಿಕ್ ಪ್ರೊ ಅನ್ನೋ ಕಾರ್ ಡೀಟೇಲಿಂಗ್ ಶಾಪ್ ಇದೆ. ಓದಿರೋದು ಕಾಮರ್ಸ್.
 

Latest Videos
Follow Us:
Download App:
  • android
  • ios