ಪ್ರಾರಂಭ ಚಿತ್ರವನ್ನು ಬಿಡುಗಡೆಗೆ ಸಜ್ಜಾಗಿಸಿ, ಮುಗಿಲ್‌ಪೇಟೆಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಮನುರಂಜನ್‌ ರವಿಚಂದ್ರನ್‌. ಬಿಡುಗಡೆಯಾಗಬೇಕಿರುವ ಸಿನಿಮಾ, ಮುಂದಿನ ಚಿತ್ರಗಳ ಕುರಿತು ಮನುರಂಜನ್‌ ಮಾತನಾಡಿದ್ದಾರೆ.

1. ಮುಗಿಲ್‌ಪೇಟೆ ಚಿತ್ರದ ಶೂಟಿಂಗ್‌ ಎಲ್ಲಿವರೆಗೂ ಬಂದಿದೆ?

ಒಂದು ದಿನ ಮಾತ್ರ ಬಾಕಿ ಇದೆ. ಉಳಿದಂತೆ ಎಲ್ಲ ಚಿತ್ರೀಕರಣ ಮುಗಿಸಿ, ಈಗ ಪೋಸ್ಟ್‌ ಪ್ರೊಕಡ್ಷನ್‌ ಹಂತದಲ್ಲಿದೆ. ಬೇರೆ ಬೇರೆ ಕಲಾವಿದರು ತಮ್ಮ ಪಾತ್ರಗಳಿಗೆ ಡಬ್ಬಿಂಗ್‌ ಮಾಡುತ್ತಿದ್ದಾರೆ. ನನ್ನ ಪಾತ್ರಕ್ಕೆ ಕೊನೆಯಲ್ಲಿ ಡಬ್‌ ಮಾಡುವ ಪ್ಲಾನ್‌ ಇದೆ.

ರವಿಚಂದ್ರನ್‌ ಪುತ್ರ ಮನುರಂಜನ್ ಸ್ಯಾಂಡಲ್‌ವುಡ್‌ ಎಂಟ್ರಿಗೆ 5 ವರ್ಷ! 

2. ನಿಮ್ಮ ಸ್ನೇಹಿತರೇ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಹೇಗಿತ್ತು?

ಇದು ನನ್ನದೇ ತಂಡ. ನನ್ನ ಸ್ನೇಹಿತನೇ ನಿರ್ಮಾಪಕ. ಹೀಗಾಗಿ ನಟನೆ ಜತೆಗೆ ಆಗಾಗ ಬೇರೆ ಬೇರೆ ಕೆಲಸಗಳಲ್ಲೂ ತೊಡಗಿಸಿಕೊಳ್ಳುತ್ತಿದೆ. ಪ್ರೊಡಕ್ಷನ್‌ ಕಡೆ ಕೂಡ ನೋಡಿಕೊಳ್ಳುತ್ತಿದ್ದೆ. ಕೆಲವು ದೃಶ್ಯಗಳು ಚೆನ್ನಾಗಿಲ್ಲ ಎಂದುಕೊಂಡಾಗ ಮರು ಚಿತ್ರೀಕರಣ ಮಾಡಿದ್ದೇವೆ. ಲಾಕ್‌ಡೌನ್‌ ಆಗಿ ಸಮಯ ಸಿಕ್ಕಿದ್ದರಿಂದ ಚಿತ್ರಕಥೆಯಲ್ಲಿ ಮತ್ತಷ್ಟುಹೊಸತನಗಳು ತರಲು ಸಾಧ್ಯವಾಯಿತು.

3. ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ಹೇಗಿದೆ ಪ್ರತಿಕ್ರಿಯೆ?

ನೋಡಿ ಖುಷಿ ಪಡುತ್ತಿದ್ದಾರೆ. ಒಬ್ಬ ನಟನಾಗಿ ನನಗೇ ಸಂತೋಷ ಕೊಟ್ಟಿರುವ ಟೀಸರ್‌. ಟೀಸರ್‌ ನೋಡಿದವರು ನನ್ನ ಮೇಕ್‌ ಓವರ್‌ ಬಗ್ಗೆ ಮಾಡುತ್ತಿದ್ದಾರೆ. ಕೆಲವು ಬರೀ ಆ್ಯಕ್ಷನ್‌ ಇದೆ ಎಂದುಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಎಲ್ಲವೂ ಇದೆ. ಫ್ಯಾಮಿಲಿ ಸೆಂಟಿಮೆಂಟ್‌ ಇರುವ ಸಿನಿಮಾ. ಮೊದಲ ಭಾಗ ಪೂರ್ತಿ ಕಾಮಿಡಿ ಇದೆ. ಆ್ಯಕ್ಷನ್‌ ಇದೆ. ತುಂಬಾ ಪ್ರೀತಿಯಿಂದ ಮಾಡಿರುವ ಸಿನಿಮಾ ಎಂಬುದು ಟೀಸರ್‌ಗೆ ಬಂದಿರುವ ಪ್ರತಿಕ್ರಿಯೆಗಳೇ ಹೇಳುತ್ತವೆ.

4. ಈ ಸಿನಿಮಾ ಮೇಲೆ ನಿಮಗಿರೋ ಭರವಸೆಗಳೇನು?

ಇಲ್ಲಿಯವರೆಗೂ ನಾನು ಮಾಡಿರುವ ನಾಲ್ಕು ಚಿತ್ರಗಳಲ್ಲಿ ಪೈಕಿ ತುಂಬಾ ಭರವಸೆ ಮೂಡಿಸಿದ್ದು, ಪಾಟಿಸಿವ್‌ ಅನಿಸಿದ್ದು ‘ಮುಗಿಲ್‌ಪೇಟೆ’. ಭರತ್‌ ನಾವುಂದ ತುಂಬಾ ಚೆನ್ನಾಗಿ ಕತೆ ಮಾಡಿಕೊಂಡಿದ್ದರು. ಚಿತ್ರದ ಟೈಟಲ್‌, ಹೊಸತನದಿಂದ ಕೂಡಿದ ಶೂಟಿಂಗ್‌ ಸ್ಥಳಗಳು, ಮೇಕಿಂಗ್‌ ಫೀಲ್‌, ಕತೆ...ಇವು ನನಗೆ ಭರವಸೆ ಮೂಡಿಸುತ್ತಿರುವ ಅಂಶಗಳು.

ಮಗನಿಗೆ ಲವ್ವೇ ಆಗಿಲ್ವಂತೆ; ಹುಡುಗಿ ಹುಡುಕ್ತಿದ್ದಾರೆ ರವಿಚಂದ್ರನ್!

5. ಮುಗಿಲ್‌ಪೇಟೆ ಚಿತ್ರದಲ್ಲಿ ಏನಿದೆ?

ಎರಡು ಕುಟುಂಬಗಳಿವೆ. ಈ ಪೈಕಿ ಸಂಬಂಧಗಳಿಗೆ ಬೆಲೆ ಕೊಡದ ಒಂದು ಫ್ಯಾಮಿಲಿ, ಸಂಬಂಧಗಳಿಗೆ ಪ್ರಾಣ ಕೊಡುವ ಮತ್ತೊಂದು ಕುಟುಂಬ. ಹೀಗೆ ಎರಡು ವಿರುದ್ಧ ದಿಕ್ಕಿನಲ್ಲಿ ರೂಪುಗೊಂಡಿರುವ ಕುಟುಂಬಳ ಹುಡುಗ- ಹುಡುಗಿ ಭೇಟಿ ಮಾಡಿದರೆ ಏನಾಗುತ್ತದೆ, ಅವರು ಯಾಕೆ ಭೇಟಿ ಮಾಡುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಬಹುತೇಕ ಕುಟುಂಬಗಳಲ್ಲಿ ನಡೆಯುವ ಸಂಗತಿಗಳು ಇಲ್ಲಿವೆ. ಇದೇ ಕಾರಣಕ್ಕೆ ನಾನು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು.

6. ಪ್ರಾರಂಭ ಸಿನಿಮಾ ಏನಾಯಿತು?

ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಎಲ್ಲವೂ ಮುಗಿದಿದೆ. ಇನ್ನೇನು ಚಿತ್ರಮಂದಿರಗಳಿಗೆ ಆ ಸಿನಿಮಾ ಬರಬೇಕು. ಕೊರೋನಾ ಕಾರಣಕ್ಕೆ ತಡವಾಗುತ್ತಿದೆ.

7. ಮುಗಿಲ್‌ಪೇಟೆ ಹಾಗೂ ಪ್ರಾರಂಭ ಈ ಎರಡು ಚಿತ್ರಗಳಲ್ಲಿ ಯಾವುದು ಮೊದಲು ತೆರೆಗೆ ಬರುತ್ತದೆ?

ಮುಗಿಲ್‌ಪೇಟೆ ಜೂನ್‌ ತಿಂಗಳಲ್ಲಿ ಬರುವ ಸಾಧ್ಯತೆಗಳಿವೆ. ಆದರೆ, ಶೇ.100 ಸೀಟು ಭರ್ತಿಗೆ ಅವಕಾಶ ಇರಬೇಕು. ‘ಪ್ರಾರಂಭ’ ಚಿತ್ರ ಕೂಡ ಕಾಯುತ್ತಿದೆ.

8. ಬೇರೆ ಯಾವ ಕತೆಗಳನ್ನು ಕೇಳುತ್ತಿದ್ದೀರಿ

ಒಂದೆರಡು ಕತೆಗಳು ಕೇಳಿದ್ದೇನೆ. ಯಾವುದೂ ಓಕೆ ಮಾಡಿಲ್ಲ. ಯಾಕೆಂದರೆ ಈ ಎರಡು ಚಿತ್ರಗಳು ತೆರೆಗೆ ಬರಬೇಕು. ನಿರ್ದೇಶಕ ಸೂರಿ ಜತೆ ಸಿನಿಮಾ ಮಾಡುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಸದ್ಯಕ್ಕೆ ಅದೊಂದು ಸುದ್ದಿಯಾಗಿ ಓಡಾಡುತ್ತಿದೆ ಅಷ್ಟೆ.

ಕ್ರೇಜಿ ಸ್ಟಾರ್ ಮನೆ ಸೇರಿತು ದುಬಾರಿ ಕಾರ್‌! 

9. ರವಿಚಂದ್ರನ್‌ ಸೋಷಿಯಲ್‌ ಮೀಡಿಯಾಗಳಿಗೆ ಎಂಟ್ರಿ ಆಗಿದ್ದಾರೆ. ಏನನಿಸುತ್ತಿದೆ?

ನಟನಾಗಿ ನನಗೆ ಖುಷಿ ಕೊಟ್ಟವಿಚಾರ. ಅಪ್ಪ ಏನೇ ಮಾತನಾಡಿದರೂ ತುಂಬಾ ನೇರವಾಗಿ, ಪ್ರಾಮಾಣಿಕವಾಗಿ ಮಾತನಾಡುತ್ತಾರೆ. ಅವರ ಮಾತುಗಳಲ್ಲಿ ನಿಜ ಇರುತ್ತದೆ. ಅವರು ಸಾಮಾಜಿಕ ಜಾಲತಾಣಗಳಿಗೆ ಬಂದಿದ್ದು ಹಬ್ಬ. ಸಿನಿಮಾ, ಜೀವನ, ಸ್ನೇಹ, ಕತೆ... ಎಲ್ಲದರ ಬಗ್ಗೆಯೂ ಮಾತನಾಡುತ್ತಾರೆ. ಕೇಳುವುದಕ್ಕೆ ನಾನೂ ಕಾಯುತ್ತಿದ್ದೇನೆ. ಇದರಿಂದ ಜನಕ್ಕೆ ಹತ್ತಿರವಾಗುತ್ತಿದ್ದಾರೆ.