ಪ್ರಿಯಾ ಕೆರ್ವಾಶೆ

ಸಿನಿಮಾಗೆ ಬರೋದು ಬಹುದಿನದ ಕನಸಾಗಿತ್ತಾ?

ಖಂಡಿತಾ ಇಲ್ಲ. ಸಿನಿಮಾಗೆ ಬರಬೇಕು ಅಂದ್ರೆ ತುಂಬ ಟ್ಯಾಲೆಂಟ್‌ ಇರಬೇಕು, ಆ್ಯಕ್ಟಿಂಗ್‌ ಸ್ಕೂಲ್‌ನಲ್ಲಿ ಕಲಿತು ಬಂದಿರಬೇಕು. ಈಸಿಯಾಗಿ ಮಾಡಕ್ಕಾಗಲ್ಲ ಅಂದುಕೊಂಡಿದ್ದೆ. ಆದರೆ ಇದು ನನ್ನ ಅಪ್ಪ ಅಮ್ಮನ ಕನಸಾಗಿತ್ತು.

ಮಗಳು ಸಿನಿಮಾಗೆ ಬರ್ತಾಳೆ ಅಂದ್ರೆ ವಿರೋಧಿಸುವ ಹೆತ್ತವರೇ ಜಾಸ್ತಿ. ನಿಮ್‌ ವಿಚಾರದಲ್ಲಿ ಇದು ಉಲ್ಟಾಆಯ್ತಾ?

ನನ್ನ ಅಪ್ಪ ಅಮ್ಮ ಮೊದಲಿಂದಲೂ ನನ್ನ ಕನಸಿಗೆ ನೀರೆರೆಯುತ್ತಾ ಬಂದಿದ್ದಾರೆ. ನನ್ನ ಆಯ್ಕೆಗಳನ್ನು ಬೆಂಬಲಿಸುತ್ತಾರೆ. ಕಾಲೇಜ್‌ನಲ್ಲಿದ್ದಾಗ ಸ್ಪೋಟ್ಸ್‌ರ್‍ಗೂ ಸಪೋರ್ಟ್‌ ಮಾಡುತ್ತಿದ್ದರು.

ನೀವು ಕ್ರೀಡಾಪಟುವಾ?

ಕಾಲೇಜ್‌ನಲ್ಲಿದ್ದಾಗ ಕಬಡ್ಡಿ, ಕೊಕ್ಕೋ, ಥ್ರೋಬಾಲ್‌, ಬ್ಯಾಡ್ಮಿಂಟನ್‌ ಆಡ್ತಿದ್ದೆ. ಕರಾಟೆ, ಟೆಕ್ವಾಂಡೋನೂ ಗೊತ್ತು.

ನಟಿ ಅಮೂಲ್ಯ ಸಹೋದರಿ ಈಗ ಕಿರುತೆರೆಯ ಖ್ಯಾತ ನಟಿ; ಯಾರು ಗೊತ್ತಾ? 

ಇಲ್ಲಿಗೆ ಬರದಿದ್ರೆ ಸ್ಪೋಟ್ಸ್‌ರ್‍ ಪರ್ಸನ್‌ ಆಗ್ತಿದ್ರಾ?

ಇಲ್ಲ, ನಾನು ಗಗನಸಖಿಯಾಗುವ ಕನಸು ಕಂಡವಳು. ಏರ್‌ಹೋಸ್ಟೆಸ್‌ ಪೋಸ್ಟ್‌ಗೆ ಅರ್ಜಿಯನ್ನೂ ಹಾಕಿದ್ದೆ. ಅಷ್ಟರಲ್ಲಿ ಗೀತಾ ಸೀರಿಯಲ್‌ಗೆ ಕರೆಬಂತು. ಸ್ಪೋಟ್ಸ್‌ರ್‍ ನನಗೆ ಬಹಳ ಇಷ್ಟ. ಕ್ಲಾಸ್‌ ಬೋರ್‌ ಹೊಡೀತಿದ್ರೆ ಬಂಕ್‌ ಮಾಡಿ ಆಡೋಕೆ ಹೋಗ್ತಿದ್ದೆ.

ಡಿಯರ್‌ ಕಣ್ಮಣಿ ಚಿತ್ರದ ಪಾತ್ರದ ಬಗ್ಗೆ ಹೇಳಿ?

ಡಾಕ್ಟರ್‌ ಪಾತ್ರ. ನನ್ನ ರಿಯಲ್‌ ವಯಸ್ಸಿಗಿಂತ ಹತ್ತು ವರ್ಷ ದೊಡ್ಡವಳಾಗಿರ್ತೀನಿ. ಇದೊಂದು ಫ್ಯಾಮಿಲಿ ಎಂಟರ್‌ಟೈನರ್‌ ಮೂವಿ. ನಿರ್ದೇಶಕಿ ವಿಸ್ಮಯಾ ಗೌಡ ಲುಕ್‌ ಟೆಸ್ಟ್‌ ಮಾಡಿದ ಮರುದಿನವೇ ಓಕೆ ಮಾಡಿದ್ರು. ಜೂನ್‌ನಿಂದ ಶೂಟಿಂಗ್‌ ಶುರುವಾಗಲಿದೆ. ಪಾತ್ರ ಹೇಗೆ ನಿಭಾಯಿಸ್ತೀನೋ ಅನ್ನೋ ಟೆನ್ಶನ್‌ ಇದೆ. ನಟನೆಯಲ್ಲಿ ನನ್ನ ಜೊತೆಗೆ ಕಿಶನ್‌, ಸಾತ್ವಿಕಾ ಇರ್ತಾರೆ.

'ಡಿಯರ್ ಕಣ್ಮಣಿ' ಚಿತ್ರದಲ್ಲಿ ಕಿರುತೆರೆ ನಟಿ ಭವ್ಯಾ ಗೌಡ; ಹೇಗಿರಲಿದೆ ಗೀತಾ ಪಾತ್ರ?

ಮುಂದೆ ಬೋಲ್ಡ್‌ ಪಾತ್ರಕ್ಕೂ ರೆಡಿನಾ?

ಇಲ್ಲಪ್ಪಾ. ನನಗೆ ಹಳ್ಳಿ ಹುಡುಗಿ ಪಾತ್ರ ಬಹಳ ಇಷ್ಟ. ಮುಂದೆ ಸಾಂಪ್ರದಾಯಿಕ ಉಡುಗೆಯಲ್ಲಿರುವ ಹಳ್ಳಿ ಹುಡುಗಿ ಪಾತ್ರ ಸಿಗಲಿ ಅಂತನೇ ಆಶಿಸ್ತೀನಿ.

ನಿಮ್ಮ ಸಿನಿಮಾ ಪ್ರೀತಿ ಬಗ್ಗೆ ಹೇಳಿ?

ಬೆಂಗಳೂರಿನ ಮಲ್ಲೇಶ್ವರಂನಲ್ಲೇ ಹುಟ್ಟಿಬೆಳೆದ ಅಪ್ಪಟ ಕನ್ನಡ ಹುಡುಗಿ ನಾನು. ಯಾವ ಕನ್ನಡ ಸಿನಿಮಾ ಬಂದ್ರೂ ಥಿಯೇಟರ್‌ಗೆ ಹೋಗಿಯೇ ನೋಡ್ತೀನಿ. ಆ್ಯಕ್ಷನ್‌ನಲ್ಲಿ ಯಶ್‌, ಡೈಲಾಗ್‌ನಲ್ಲಿ ದರ್ಶನ್‌, ಡ್ಯಾನ್ಸ್‌ನಲ್ಲಿ ಪುನೀತ್‌ ಸಖತ್‌ ಇಷ್ಟ.

ಸಿನಿಮಾದಲ್ಲಿ ಅವಕಾಶ ಸಿಕ್ತಲ್ಲ, ಸೀರಿಯಲ್‌ ಬಿಡ್ತೀರಾ?

ಖಂಡಿತಾ ಇಲ್ಲ. ಗೀತಾ ಪಾತ್ರವನ್ನು ಕೊನೆ ಮುಟ್ಟಿಸಿಯೇ ತೀರ್ತೀನಿ. ಆ ಪಾತ್ರವನ್ನು ಮತ್ಯಾರಿಗೂ ಬಿಟ್ಟುಕೊಡೋದು ನಂಗಿಷ್ಟಇಲ್ಲ. ಸಿನಿಮಾ, ಸೀರಿಯಲ್‌ ಎರಡನ್ನೂ ಬ್ಯಾಲೆನ್ಸ್‌ ಮಾಡೋದು ನಂಗೆ ಕಷ್ಟಅಲ್ಲ.