Asianet Suvarna News Asianet Suvarna News

Anant Nag Interview ಏನೆಂದು ಹೇಳಲಿ ಆನಂದ ಸಂಭ್ರಮ ಇನ್ನೇನಿನ್ನೇನು

ಪ್ರಬುದ್ಧ ಕಲಾವಿದ ಅನಂತ್‌ನಾಗ್‌ ಸೆ.4ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 75ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಒಮ್ಮೊಮ್ಮೆ ಮಾತುಗಳು ಮುತ್ತಿನಂತೆ ಭಾಸವಾಗುವ, ಮತ್ತೊಮ್ಮೆ ಕಟುವಾಗಿ ಯೋಚಿಸುವಂತೆ ಮಾಡುವ ಅಪೂರ್ವ ವಾಗ್ಮಿ ಅನಂತ್‌ನಾಗ್‌ ಅವರ ಜೊತೆ ಮಾತುಕತೆ.

Kannada actor Anant nag talks about 75th birthday celebrations vcs
Author
First Published Sep 5, 2022, 8:28 AM IST

ರಾಜೇಶ್‌ ಶೆಟ್ಟಿ

ಹುಟ್ಟುಹಬ್ಬದ ಸಂದರ್ಭದಲ್ಲಿ ನಿಮ್ಮ ಮನಸ್ಸಿಗೆ ಬರುವುದು ಸಂಭ್ರಮವೋ, ಮೌನವೋ?

ತಮ್ಮ ಶಂಕರನಿಗೆ ದೇವರು ಆಯಸ್ಸು ಕೊಡಲಿಲ್ಲ. ಅಪ್ಪು ಬೇಗ ಹೊರಟುಹೋದ. ನನ್ನ ತಂದೆ, ಚಿಕ್ಕಪ್ಪ 72, 73ನೇ ವಯಸ್ಸಿಗೆ ಹೊರಟುಹೋದರು. ನನಗೆ ಇಷ್ಟುವರ್ಷ ಪ್ರಪಂಚ ನೋಡುವ ಅವಕಾಶ ಕರುಣಿಸಿದ್ದಾನೆ ದೇವರು. ಅಷ್ಟರಲ್ಲಿ ಸಂತೋಷ ಕಾಣುತ್ತೇನೆ. ವಯಸ್ಸಿಗೆ ತಕ್ಕಂತೆ ಘನತೆ, ಗಾಂಭೀರ್ಯದಿಂದ ಇರಬಯಸುತ್ತೇನೆ. ನಾನು ಮಠದಲ್ಲಿ ಬಾಲ್ಯ ಕಳೆದವನು. ಈ ಸಂಸ್ಕಾರ ಇನ್ನೂ ಇದೆ ನನ್ನಲ್ಲಿ. ಹುಟ್ಟಿದವನಿಗೆ ಸಾವು ಖಚಿತ. ವಸ್ತುಗಳು ಇರುವ ಈ ಜಗತ್ತಿನಲ್ಲಿ ಎಲ್ಲವೂ ಅಪೂರ್ಣ. ಪೂರ್ಣತ್ವ ಇರುವುದು ಭಗವಂತನಲ್ಲಿ ಮಾತ್ರ ಎಂಬುದನ್ನು ಧರ್ಮಗ್ರಂಥಗಳು ಹೇಳಿವೆ. ನಾನು ಪಾರಮಾರ್ಥದಿಂದ ಪ್ರಪಂಚಕ್ಕೆ ಬಂದವನು. ಈಗ ಮತ್ತೆ ಪಾರಮಾರ್ಥಕ್ಕೆ ಹೋಗುವ ಯತ್ನದಲ್ಲಿದ್ದೇನೆ. ಆತ್ಮಾವಲೋಕನ ಮಾಡುತ್ತಿದ್ದೇನೆ. ಚಿಂತನ, ಮಂಥನ, ಧ್ಯಾನದಲ್ಲಿ ತೊಡಗಿಕೊಂಡಿದ್ದೇನೆ. ಪ್ರಕೃತಿ ನನಗೆ ಇಷ್ಟುಕೊಟ್ಟಿದೆ. ಪುರಂದರದಾಸರು ಹೇಳಿದಂತೆ ಏನೆಂದು ಹೇಳಲಿ ಆನಂದ ಸಂಭ್ರಮ ಇನ್ನೇನಿನ್ನೇನು ಎಂದು ಹಾಡುವ ಮನಸ್ಸಾಗುತ್ತಿದೆ.

Kannada actor Anant nag talks about 75th birthday celebrations vcs

ಹೊಸ ಸಿನಿಮಾಗಳು, ಹೊಸ ಆಲೋಚನೆ?

ನನ್ನ ಮೊದಲ ಸಿನಿಮಾ ಬಿಡುಗಡೆಯಾಗಿದ್ದು 1973ರಲ್ಲಿ. ಮುಂದಿನ ವರ್ಷಕ್ಕೆ ನಾನು ಚಿತ್ರರಂಗಕ್ಕೆ ಬಂದು 50 ವರ್ಷ ಆಗುತ್ತದೆ. ಈಗ ಸಿನಿಮಾ ಆಯ್ಕೆ ಸ್ವಲ್ಪ ಕಡಿಮೆ ಮಾಡಿದ್ದೇನೆ. ಅಜಯ್‌ ಸರ್ಪೇಶ್ಕರ್‌ ಅವರ ಮಂಡಲ, ಪುನೀತ್‌ ಶಾಸ್ತ್ರಿ ಅವರ ಮೇಡ್‌ ಇನ್‌ ಬೆಂಗಳೂರು, ರಿಷಿಕಾ ಶರ್ಮಾ ನಿರ್ದೇಶನದ ವಿಜಯಾನಂದ, ಶಿಶಿರ್‌ ರಾಜಮೋಹನ್‌ ಅವರ ಆಬ್ರಕಡಾಬ್ರ, ಸಂಜಯ್‌ ಶರ್ಮಾ ಅವರ ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ ಎಂಬ 5 ಹೊಸ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆ ಸಿನಿಮಾಗಳು ಬಿಡುಗಡೆಗೆ ಬಾಕಿ ಇದೆ. ಈಗ ಮತ್ತೆ ಹಿಂದಿ ಸಿನಿಮಾವೊಂದರ ಆಫರ್‌ ಬಂದಿದೆ. ಸ್ಕಿ್ರಪ್‌್ಟಬಹಳ ಚೆನ್ನಾಗಿದೆ. ಯೋಚನೆ ಮಾಡಿ ಹೇಳುತ್ತೇನೆ ಎಂದಿದ್ದೇನೆ. ಸಾಕಷ್ಟುಸ್ಕಿ್ರಪ್‌್ಟಗಳು ಬರುತ್ತಿವೆ. ನನಗೂ ಸ್ವಲ್ಪ ಹೊಣೆ ಇರುವುದರಿಂದ, ನಿರ್ಮಾಪಕರ ಬಗ್ಗೆ ಯೋಚನೆ ಮಾಡುವುದರಿಂದ ಬಹಳಷ್ಟುಸ್ಕಿ್ರಪ್‌್ಟಗಳನ್ನು ಸ್ವಲ್ಪ ಹೆಚ್ಚಿ ಕೆಲಸ ಮಾಡಿ ಎಂದು ವಾಪಸ್‌ ಕಳುಹಿಸುತ್ತೇನೆ. ಬದಲಾಗಿರುವ ಈ ಸಂದರ್ಭದಲ್ಲಿ ನಿರ್ದೇಶಕರಾಗುವವರು ಸ್ಕಿ್ರಪ್‌್ಟನಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ತುಂಬಾ ಒಳ್ಳೆಯದು.

Anant Nag @ 75; ನಾ ನಿನ್ನ ಬಿಡಲಾರೆ, ಗೌರಿ ಗಣೇಶ...ನೋಡಲೇ ಬೇಕಾದ ಸಿನಿಮಾಗಳಿದು!

ಈ ಪ್ರಯಾಣವನ್ನು ಮೆಲುಕು ಹಾಕುವುದಾದರೆ...

ಚಿಕ್ಕಂದಿನಲ್ಲಿ ತಂದೆ ಹೈಸ್ಕೂಲಿಗೆ ಮುಂಬೈಗೆ ಕಳುಹಿಸಿದರು. ನನಗೋ ಮಠದಿಂದ ಮುಂಬೈಗೆ ಹೋಗಲು ಇಷ್ಟವಿರಲಿಲ್ಲ. ಮಠದಲ್ಲೇ ಇರುತ್ತೇನೆ ಎಂದಿದ್ದೆ. ಆದರೆ ಯಾರೂ ಕೇಳಲಿಲ್ಲ. ಮುಂಬೈಗೆ ಹೋದಮೇಲೆ ಏನು ಮಾಡಬೇಕೆಂದು ಸ್ಪಷ್ಟತೆ ಇರಲಿಲ್ಲ. ಅಲ್ಲೊಂಥರಾ ಅಪರಿಚಿತನ ಥರ ಇದ್ದೆ. ದೇಶದ ನಾಯಕರ ಬಗ್ಗೆ ನಮ್ಮ ಹಳ್ಳಿಯಲ್ಲಿ ಚರ್ಚೆ ನಡೆಯುತ್ತಿತ್ತು. ಆದರೆ ಮುಂಬೈಯಲ್ಲಿ ಮಾತ್ರ ಸಿನಿಮಾ ನಾಯಕರ ಬಗ್ಗೆಯೇ ಚರ್ಚೆ ನಡೆಸುವುದು ಕೇಳಿ ಅಚ್ಚರಿಯಾಗಿತ್ತು. ಅಲ್ಲಿದ್ದ ಸಂದರ್ಭದಲ್ಲಿ 1962, 65ರ ಯುದ್ಧ ನಡೆದಿತ್ತು. ಆಗ ಮತ್ತೆ ಬಹುತೇಕರಲ್ಲಿ ದೇಶಪ್ರೇಮ ಜಾಗೃತವಾಗಿತ್ತು. ನನಗೋ ಅಪಾರ ದೇಶಭಕ್ತಿ. ಏರ್‌ಫೋರ್ಸ್‌ ಸೇರಬೇಕೆಂದು ಹೋದೆ. ಎಡಗಣ್ಣು ತೀಕ್ಷ$್ಣವಾಗಿಲ್ಲ, ಆರ್ಮಿಗೋ ನೇವಿಗೋ ಸೇರು ಎಂದರು. ಭಟ್ಕಳದಿಂದ ಮುಂಬೈಗೆ ಸಾಬರಮತಿ-ಶರಾವತಿ ಎಂಬ ಸ್ಟೀಮರ್‌ಗಳು ಓಡಾಡುತ್ತಿದ್ದ ಕಾಲ ಅದು. ಅದನ್ನು ನೋಡಿದ್ದ ನನಗೆ ನೇವಿ ಲೈಫು ಅಷ್ಟುಇಷ್ಟವಾಗಲಿಲ್ಲ. ಆರ್ಮಿಗೆ ಸೇರಲು ಹೋದರೆ ಅದಕ್ಕೆ ಬೇಕಾದಷ್ಟೂದೈಹಿಕ ತೂಕ ನನ್ನಲ್ಲಿ ಇರಲಿಲ್ಲ. ಆ ಸಮಯದಲ್ಲಿಯೇ ಆಕಸ್ಮಿಕವಾಗಿ ರಂಗಭೂಮಿಗೆ ಬಂದೆ. ಅಲ್ಲಿಂದ ಸಿನಿಮಾಗೆ ಬಂದೆ. 1975ರಿಂದ 2000ದವರೆಗೆ ರಾಜಕೀಯದಲ್ಲೂ ಇದ್ದೆ. ಮಂತ್ರಿಯಾದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಟನೆಯಲ್ಲಿ ಭಾಗವಹಿಸುವುದು ಒಳ್ಳೆಯದಲ್ಲ ಎಂದರು. ಸರಿ ಎಂದೆ. ಆ ಸಂದರ್ಭದಲ್ಲಿ ನಾನು ತುಂಬಾ ಮಿಸ್‌ ಮಾಡಿಕೊಂಡಿದ್ದು ನಟನೆಯನ್ನು. ನನ್ನ 50ನೇ ವಯಸ್ಸಿನವರೆಗೆ ಅಷ್ಟೊಂದು ಬದ್ಧತೆಯಿಂದ ನಟಿಸಲು ಸಾಧ್ಯವಾಗಲಿಲ್ಲ. 50ರ ನಂತರ ಬದ್ಧತೆಯಿಂದ ನಟಿಸಿದ್ದೇನೆ. ಪ್ರೇಕ್ಷಕರು, ನಿರ್ದೇಶಕರು, ನಿರ್ಮಾಪಕರು ನನ್ನ ಮೇಲೆ ಅಪಾರ ಪ್ರೀತಿ ತೋರಿದ್ದಾರೆ. ಈ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ನಾನು ಒಂಥರಾ ಞa್ಞ ಟ್ಛ ್ಚಜ್ಟ್ಚಿ್ಠಞsಠಿa್ಞ್ಚಛಿs ಎಂದರೆ ತಪ್ಪಿಲ್ಲ.

Follow Us:
Download App:
  • android
  • ios