Anant Nag @ 75; ನಾ ನಿನ್ನ ಬಿಡಲಾರೆ, ಗೌರಿ ಗಣೇಶ...ನೋಡಲೇ ಬೇಕಾದ ಸಿನಿಮಾಗಳಿದು!
ಕನ್ನಡ ನಾಡಿನ ಹೆಮ್ಮೆಯ ಕಲಾವಿದ, ಹಿರಿಯ ನಟ ಅನಂತ್‌ನಾಗ್ ಭಾನುವಾರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರು 75ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

ಹೆಮ್ಮೆಯ ಕಲಾವಿದ ಅನಂತ್ ನಾಗ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಕುಟುಂಬಸ್ಥರೊಂದಿಗೆ ಸರಳವಾಗಿಆಚರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಮೌನ, ಧ್ಯಾನಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಅವರು ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳ ಆಯ್ಕೆಗಳನ್ನು ಕಡಿಮೆ ಮಾಡಿದ್ದಾರೆ.
ಇತ್ತೀಚೆಗೆ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ಗಾಳಿಪಟ 2’ ಸಿನಿಮಾ ಸೂಪರ್‌ಹಿಟ್ ಆಗಿದೆ. ಇದಲ್ಲದೇ ಹೊಸಬರ ಐದು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಮುಂದಿನ ವರ್ಷ ಅವರು ಚಿತ್ರರಂಗಕ್ಕೆ ಬಂದು 50 ವರ್ಷ ಆಗಲಿದೆ. ಅವರ ಮೊದಲ ಸಿನಿಮಾ 1973ರಲ್ಲಿ ಬಿಡುಗಡೆ ಆಗಿತ್ತು.
ನಾ ನಿನ್ನ ಬಿಡಲಾರೆ, ಬಾರಾ, ಹೆಂಡ್ತಿಗೆ ಹೇಳ್ಬೇಡಿ, ಉದ್ಭವ, ಗೌರಿ ಗಣೇಶ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗಳಿಗೆ ಬೆಸ್ಟ್ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮಿಂಚಿನ ಓಟ, ಹೊಸ ಹೆಸರು, ಅವಸ್ಥೆ, ಗಂಗವ್ವ ಗಂಗಾಮಾಯಿ ಸಿನಿಮಾಗಳನ್ನು ಸಿನಿ ರಸಿಕರು ತಪ್ಪದೆ ವೀಕ್ಷಿಸಬೇಕು. ವಾಸ್ತು ಪ್ರಕಾರ, ಗಾಳಿಪಟ, ಗೂಗ್ಲಿ ಮತ್ತು ಪರಮಾತ್ಮ ಸಿನಿಮಾ ಅಪಾರ ಮೆಚ್ಚುಗೆ ಪಡೆದುಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.