Asianet Suvarna News Asianet Suvarna News

ನಟಿ ಶುತಿ ಹರಿಹರನ್ ಮತ್ತೆ ಪ್ರೆಗ್ನೆಂಟ್?; ಸರೋಗೆಸಿ ಬಗ್ಗೆ ನಟಿ ಹೇಳಿಕೆ ವೈರಲ್

ತಾಯಿ ಹೇಗೆ ಪ್ರೆಗ್ನೆನ್ಸಿ ಫೇಸ್‌ ಎಂಜಾಯ್ ಮಾಡುತ್ತಾರೆ ಅದರ ಪರಿಣಾಮ ಮಕ್ಕಳ ಮೇಲೆ ಬೀರುತ್ತದೆ ಎಂದು ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ. 

Kannada Sruthi Hariharan talks about Body Shaming and pregnancy life vcs
Author
First Published Sep 13, 2023, 1:03 PM IST

ಕನ್ನಡ ಚಿತ್ರರಂಗದ ಅದ್ಭುತ ನಟಿ ಶ್ರುತಿ ಹರಿಹರನ್ ಮತ್ತೆ ದಪ್ಪಗಾಗಿದ್ದಾರೆ ಮತ್ತೆ ಪ್ರೆಗ್ನೆಂಟ್ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೆಡ್‌ಬುಷ್ ಸಿನಿಮಾ ಪ್ರಚಾರದಲ್ಲಿ ಶ್ರುತಿ ಎದುರಿಸುತ್ತಿರುವ ಬಾಡಿ ಶೇಮಿಂಗ್ ಪ್ರಶ್ನೆಗಳ ಬಗ್ಗೆ ಮಾತನಾಡಿದ್ದಾರೆ. 

'ಮಗು ಆದ ಮೇಲೆ ಬಾಡಿಯಲ್ಲಿ ಆಗುವ ಬದಲಾವಣೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮೊದಲಿನಿಂದಲೂ ನನ್ನ ತಲೆಯಲ್ಲಿ ನಾನು ದಪ್ಪನೇ. ಮಗು ಆದ ಮೇಲೆ ನನ್ನ ಯಾವ ಸಿನಿಮಾನೂ ನಾನು ತೆರೆ ಮೇಲೆ ನೋಡಿಲ್ಲ. (ಈ ಸಂದರ್ಶನ ನಂತರ ಹೆಡ್‌ಬುಷ್‌ ರಿಲೀಸ್ ಅಗಿರುವುದು) ನನ್ನ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಅಗುತ್ತಿದೆ ಅದನ್ನು ಸರಿ ಮಾಡಿಕೊಳ್ಳಲು ಹೋರಾಟ ಮಾಡುತ್ತಿರುವೆ ಯಾಕೆ ಬದಲಾಯಿಸಲು ಆಗುತ್ತಿಲ್ಲ ಅಂತ ಚಿಂತೆ ಮಾಡುತ್ತಿರುವೆ. ಅಷ್ಟರಲ್ಲಿ ಸಾಕಷ್ಟು ಜನ ನೀವು ಮತ್ತೆ ಪ್ರೆಗ್ನೆಂಟಾ ಅಥವಾ ಯಾಕೆ ಮತ್ತೆ ದಪ್ಪಗಾಗಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ. ಪ್ರತಿಯೊಬ್ಬ ಹೆಣ್ಣು ಮಕ್ಕಳು ತಮ್ಮ ಪೋಸ್ಟ್‌ಪಾರ್ಟಮ್‌ ಪ್ರೆಗ್ನೆನ್ಸಿನ ಡಿಫರೆಂಟ್ ಆಗಿ ಹ್ಯಾಂಡಲ್ ಮಾಡುತ್ತಾರೆ ಇದು ಸಣ್ಣ ವಿಚಾರವಲ್ಲ' ಎಂದು ಶ್ರುತಿ ಖಾಸಗಿ ವೆಬ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಕೈ ತುಂಬಾ ಬಳೆ, ದೊಡ್ಡ ಮೂಗುತಿ; ನಟಿ Sruthi Hariharan ಹೊಸ ಸೀರೆ ಲುಕ್ ವೈರಲ್!

'ನಾಯಕಿಯರು ಮಕ್ಕಳ ಮಾಡಿಕೊಂಡ ಮೇಲೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು ಹಾಗೆ ಹೀಗೆ ಎಂದು ಕಾಮೆಂಟ್ ಮಾಡುತ್ತಾರೆ. ನನ್ನ ಜೀವನದಲ್ಲಿ ಈ ಮಾತುಗಳು ನಿಜವಲ್ಲ..ಕೆಲಸ ಮುಗಿಸಿಕೊಂಡು ನಾನು ವಾಪಸ್‌ ಹೋಗುವುದು ಮಿಡಲ್ ಕ್ಲಾಸ್ ಮನೆಗೆ ಅಡುಗೆ ಮಾಡುವುದು ಪಾತ್ರ ತೊಳೆಯುವುದು ಮತ್ತು ಮನೆ ಕೆಲಸ ಮಾಡುವುದು ನನ್ನ ಕೆಲಸ. ವರ್ಕೌಟ್ ಮಾಡುವುದಕ್ಕೆ ಡಯಟ್ ಮಾಡುವುದಕ್ಕೆ ನಾನು ಎಷ್ಟು ಸಮಯ ಕೊಡಬೇಕು ಅಷ್ಟು ಸಮಯ ಕೊಡಲು ನನಗೆ ಆಗುತ್ತಿಲ್ಲ. ತೆರೆ ಮೇಲೆ ಸಣ್ಣ ಕಾಣಬೇಕು ಎಂದು ಡಯಟ್ ಮಾಡಬೇಕು ಅಂತ ಮನಸ್ಸಿಲ್ಲ ಆದರೆ ನನ್ನ ಆರೋಗ್ಯ ಚೆನ್ನಾಗಿರಬೇಕು ನಾನು ಒಂದೊಳ್ಳೆ ಫಿಟ್ನೆಸ್‌ ರೂಟಿನ್ ಫಾಲೋ ಮಾಡಬೇಕು ಎಂದು ಮನಸ್ಸು ಮಾಡುತ್ತಿರುವೆ' ಎಂದು ಶ್ರುತಿ ಹೇಳಿದ್ದಾರೆ. 

ನಟಿ ಶ್ರುತಿ ಹರಿಹರನ್ ಖಾತೆಯಿಂದ ರಮ್ಯಾಗೆ ಮೆಸೇಜ್‌; ಹ್ಯಾಕ್‌ ಮಾಡಲು ಪ್ರಯತ್ನಿಸಿದ ಕಿಡಿಗೇಡಿಗಳ

ಇನ್ನು ಅನೇಕ ಸ್ಟಾರ್ ನಟಿಯರು ಬಾಡಿ ಬದಲಾವಣೆ ಬೇಡ ಎಂದು ಸರೋಗೆಸಿ (ಕೃತಕ ಗರ್ಭಧಾರಣೆ) ಮೂಲಕ ಮಗು ಮಾಡಿಕೊಳ್ಳುತ್ತಾರೆ ಅದರ ಬಗ್ಗೆ ನಾನು ಯಾವುದೇ ಅಭಿಪ್ರಾಯ ಕೊಡುವುದಿಲ್ಲ ಎಂದು ಶ್ರುತಿ ಒಂದೇ ಮಾತಿನಲ್ಲಿ ಹೇಳಿ ಬಿಟ್ಟರು ಆದರೆ ತಮ್ಮ ಪ್ರೆಗ್ನೆನ್ಸಿ ಜರ್ನಿಯನ್ನು ಎಂಜಾಯ್ ಮಾಡಿದ್ದಾರಂತೆ. ಮೊದಲು ಮೂರು ತಿಂಗಳು ಎಲ್ಲರಿಗೂ ಮಾರ್ನಿಂಗ್ ಸಿಕ್ನೆಸ್‌ ಇದ್ದರೆ ಶ್ರುತಿಗೆ ಇಡೀ ದಿನ ಸಿಕ್ನೆಸ್‌ ಇರುತ್ತಿತ್ತಂತೆ ಅದರ ನಡುವೆಯೂ ನಾತಿಚರಾಮಿ ಸಿನಿಮಾ ಪ್ರಚಾರ ಮಾಡಿದ್ದಾರೆ. ಇನ್ನು 6 ತಿಂಗಳಿಗೆ ಕಾಲಿಡುತ್ತಿದ್ದಂತೆ ಒಂಟಿಯಾಗಿ ಪ್ರಯಾಣ ಮಾಡಲು ಶುರು ಮಾಡಿದ್ದಾರೆ. ನವರಾತ್ರಿ ಸಮಯದಲ್ಲಿ ಪಾಂಡಿಚೆರಿ ಕಡೆ ಪ್ರಯಾಣ ಮಾಡಿದ್ದಾರೆ ಅದಾದ ಮೇಲೆ ತಮ್ಮ ಹುಟ್ಟೂರು ಕೇರಳ ಕಡೆ ಹೋಗಿ ಅಲ್ಲಿ ತಾಯಿ ಜೊತೆ ಪೂಜೆ ಧ್ಯಾನ ಎಂದು ತೊಡಗಿಸಿಕೊಂಡರಂತೆ. ಹೀಗಾಗೆ ಬೇರೆ ಮಕ್ಕಳಿಗೆ ಹೋಲಿಸಿಕೊಂಡರೆ ಶ್ರುತಿ ಹರಿಹರನ್ ಪುತ್ರಿ ತುಂಬಾ ಶಾಂತ ಸ್ವಾಭಾವ ಹೊಂದಿದ್ದಾಳೆ ಏನೇ ರಗಳೆ ಮಾಡಿದ್ದರೂ ಸುಲಭವಾಗಿ ಮ್ಯಾನೇಜ್ ಮಾಡಬಹುದಂತೆ. 

Follow Us:
Download App:
  • android
  • ios