ಗಾಳಿಪಟ 2 ಶೂಟಿಂಗ್‌ನಲ್ಲಿ 90ರ ದಶಕಕ್ಕೆ ಹೋಗಿದ್ದೆ: ಗಣೇಶ್‌

ಜು.2ರಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಹುಟ್ಟು ಹಬ್ಬದ ಸಂಭ್ರಮ. ಈ ವರ್ಷವೂ ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಗಣೇಶ್‌ ಅವರ ಮಾತುಗಳು ಇಲ್ಲಿವೆ.

Happy birthday Ganesh Gaalipata 2 exclusive interview vcs

ಈ ಬಾರಿಯೂ ಅಭಿಮಾನಿಗಳ ಜತೆಗೆ ಹುಟ್ಟು ಹಬ್ಬದ ಸಂಭ್ರಮ ಇಲ್ಲವಲ್ಲಾ?

ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸುದ್ದಿಗಳು ಬರುತ್ತಿವೆ. ಹುಟ್ಟು ಹಬ್ಬದ ಸಡಗರಕ್ಕಿಂತ ಆರೋಗ್ಯ ಮುಖ್ಯ. ಇದರಲ್ಲಿ ಯಾವುದೇ ಗಿಮಿಕ್‌ ಇಲ್ಲ.

ಆದರೆ, ಸಿನಿಮಾ ಗುಂಪಾಗಿ ನೋಡುತ್ತಾರಲ್ಲ?

ಸಿನಿಮಾ ನೋಡುವಾಗಲೂ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಾರೆ. ಸಂಭ್ರಮ ಆಚರಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗಲ್ಲ.

ಹುಟ್ಟು ಹಬ್ಬಕ್ಕಾಗಿ ಚಿತ್ರತಂಡ ಮೂರು ದಿನಗಳ ಮೊದಲೇ ಹಾಡು ತೋರಿಸಿದೆ. ಜಯಂತ್‌ ಕಾಯ್ಕಿಣಿ ಬರೆದಿರುವ ಹಾಡು, ನನ್ನ ಜನ್ಮದಿನಕ್ಕೆ ಅತ್ಯುತ್ತಮ ಗಿಫ್ಟ್‌.

‘ಗಾಳಿಪಟ 2’ ಪಾರ್ಚ್‌ 1 ಇಮೇಜ್‌ಗೆ ಸಮನಾಗಿರುತ್ತದೆಯೇ?

ಒಂದಕ್ಕೊಂದು ನಾನು ಕಂಪೇರ್‌ ಮಾಡಲ್ಲ. ಮೊದಲ ಭಾಗಕ್ಕಿಂತ ಇದಕ್ಕೆ ಮತ್ತಷ್ಟುಶ್ರಮ ಹಾಕಿದ್ದೇವೆ.

ಮತ್ತೆ ಗಾಳಿಪಟ ಹಾರಿಸಲು ಸಜ್ಜು ಭಟ್ರ ಹುಡುಗ್ರು! ಈ ಭಾರಿ ಹೇಗಿರುತ್ತೆ ಗಾಳಿಪಟ-2?

ಪಾರ್ಚ್‌ 2 ಹಿಂದಿನ ಕತೆಗೆ ಹೇಗೆ ಸಂಬಂಧ ಇರುತ್ತದೆ?

ಕತೆಗೆ ಸಂಬಂಧ ಇರಲ್ಲ. ಆದರೆ, ಪಾತ್ರಗಳಿಗೆ ಸಂಬಂಧ ಇರುತ್ತದೆ.

ಕೋವಿಡ್‌ ನಡುವೆ ವಿದೇಶಕ್ಕೆ ಶೂಟಿಂಗ್‌ ಹೋಗಿದ್ದೇಕೆ?

ಕತೆಗೆ ಅಗತ್ಯ ಇತ್ತು. ಚಿತ್ರದಲ್ಲಿರುವ ಮೂರು ಮುಖ್ಯ ಪಾತ್ರಗಳು ಬೇರೆ ಬೇರೆ ಕಡೆಯಿಂದ ಬಂದು ಸೇರಿಕೊಳ್ಳುತ್ತವೆ. ಹಾಗೆ ಸೇರಿಕೊಳ್ಳುವ ಜಾಗ, ಅಲ್ಲಿಂದ ಕತೆ ಹುಟ್ಟಿಕೊಳ್ಳುತ್ತದೆ. ಅದಕ್ಕಾಗಿ ನಾವು ಖಜಕಿಸ್ತಾನಕ್ಕೆ ಹೋಗಿದ್ದು.

'ಗಾಳಿಪಟ ಎಂದರೆ ಎಮೋಷನ್ ಅಂತ ಓದಿದ್ದೆ. ಗಾಳಿಪಟ-2 ಕಥೆ ಕೇಳಿದ ಬಳಿಕ ಹುಚ್ಚು ಹಿಡಿದಿದೆಯಾ ಎಂದು ಕೇಳಿದ್ದೆ'

ಗಾಳಿಪಟ 2 ಚಿತ್ರಕ್ಕೆ 90ರ ದಶಕದ ನಂಟು ಉಂಟಾ?

ಇಲ್ಲ. ನಾನು ನೋಡಿದ ಏಳುಸುತ್ತಿನ ಕೋಟೆ, ಪ್ರೇಮಲೋಕ, ಹೃದಯಗೀತೆ... ಹೀಗೆ ಆ ದಿನಗಳ ಕ್ಲಾಸಿಕ್‌ ಚಿತ್ರಗಳನ್ನು ಶೂಟ್‌ ಮಾಡಿದ ಜಾಗಗಳಲ್ಲಿ ನಮ್ಮ ‘ಗಾಳಿಪಟ 2’ ಚಿತ್ರಕ್ಕೆ ಶೂಟಿಂಗ್‌ ಮಾಡಿದ್ದು ನನಗೇ ಥ್ರಿಲ್ಲಿಂಗ್‌ ಅನಿಸಿತು. ಡಾ ವಿಷ್ಣುವರ್ಧನ್‌ ಅವರು ಓಡಾಡಿದ ಜಾಗಗಳಲ್ಲಿ ನಾನೇ ಓಡಾಡಿ ಖುಷಿಪಟ್ಟೆ. ನಾವೆಲ್ಲ ಅವರ ಸಿನಿಮಾಗಳನ್ನು ನೋಡಿಕೊಂಡು ಬಂದವರು. ಒಬ್ಬ ಫ್ಯಾನ್‌ ಬಾಯ್‌ ಆಗಿ ನನಗೆ ಅದೆಲ್ಲವೂ ನೆನಪಾಯಿತು.

ಗೋಲ್ಡನ್‌ಸ್ಟಾರ್‌ ಗಣೇಶ್‌ ಹಾಗೂ ನಿರ್ದೇಶಕ ಯೋಗರಾಜ್‌ ಭಟ್‌ ಕಾಂಬಿನೇಶನ್‌ನ ‘ಗಾಳಿಪಟ 2’ ಚಿತ್ರದ ‘ನಾನಾಡದ ಮಾತೆಲ್ಲವ’ ಹಾಡು ಬಿಡುಗಡೆ ಆಗಿದೆ. ಸಾಹಿತ್ಯ ನೀಡಿರುವುದು ಜಯಂತ್‌ ಕಾಯ್ಕಿಣಿ. ಹಾಡಿರುವುದು ಸೋನು ನಿಗಮ್‌. ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದಾರೆ. ಸಂತೋಷ್‌ ರೈ ಪಾತಾಜೆ ಕ್ಯಾಮೆರಾ ಕಣ್ಣು ಹಾಡಿನ ಅಂದವನ್ನು ಹೆಚ್ಚಿಸಿದರೆ, ಪಂಡಿತ್‌ ಅವರ ಕಲಾ ನಿರ್ದೇಶನ ಹಾಡಿಗೊಂದು ಅಚ್ಚುಕಟ್ಟಾದ ಬಣ್ಣ ತುಂಬಿದೆ. ಕುದುರೆಮುಖದ ಹಸಿರು, ನೀರು, ಕಾಡಿನ ಮಧ್ಯೆ ಚಿತ್ರೀಕರಣ ಆಗಿರುವ ಎಲ್ಲರಿಗೂ ಆಪ್ತವಾಗುಂತೆ ಮೂಡಿ ಬಂದಿದೆ. ಜು.2ರಂದು ಗಣೇಶ್‌ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ಹಾಡನ್ನು ಪ್ರದರ್ಶನ ಮಾಡುವ ಮೂಲಕ ಅವರ ಹುಟ್ಟುಹಬ್ಬ ಆಚರಿಸಿದೆ ಚಿತ್ರತಂಡ. ಆನಂದ್‌ ಯೂಟ್ಯೂಬ್‌ನಲ್ಲಿ ಈ ಹಾಡನ್ನು ನೋಡಬಹುದಾಗಿದೆ.

‘ನಾನು ಬರೆಯುವ ಸಾಲುಗಳಿಗೆ ತೆರೆ ಮೇಲೆ ಗಣೇಶ್‌ ಅದ್ಭುತವಾಗಿ ನ್ಯಾಯ ಒದಗಿಸುತ್ತಾರೆ. ಯೋಗರಾಜ್‌ ಭಟ್‌ ಸಿನಿಮಾಗಳಿಗೆ ಹಾಡು ಬರೆಯುವುದು ಎಂದರೆ ಹೊಸ ಉತ್ಸಾಹ ತುಂಬಿಕೊಳ್ಳುತ್ತದೆ’ ಎಂದು ಚಿತ್ರಕ್ಕೆ ಶುಭ ಕೋರಿದ್ದು ಜಯಂತ್‌ ಕಾಯ್ಕಿಣಿ. ‘ಇದು ನೈಜ ಪ್ರೇಮಿಗಳ ಹಾಡು. ಮನಸ್ಸಿಗೆ ಹಿಡಿಸುವ ಮತ್ತು ಆಪ್ತ ಎನಿಸುವ ತುಂಟತನದ ಹಾಡು ಇದು. ಪ್ರೀತಿ, ಪ್ರಪೋಸ್‌, ಶೃಂಗಾರ, ಹುಡುಗಿಯ ಅಂದ, ಪ್ರಕೃತಿಯ ಸೌಂದರ್ಯ, ಜಯಂತ್‌ ಕಾಯ್ಕಿಣಿ ಸಾಹಿತ್ಯ ಇದ್ದರೆ ಯಶಸ್ಸಿಗೆ ಇನ್ನೇನೂ ಬೇಕು ಅನಿಸಲ್ಲ. ನಿರ್ಮಾಪಕ ರಮೇಶ್‌ ರೆಡ್ಡಿ ಯಾವುದಕ್ಕೂ ಕೊರತೆ ಮಾಡದೆ ಕೇಳಿದ್ದೆಲ್ಲ ಕೊಟ್ಟಿದ್ದಕ್ಕೆ ಈ ಹಾಡು ಇಷ್ಟುಅದ್ದೂರಿಯಾಗಿ ಮೂಡಿ ಬಂದಿದೆ’ ಎಂದರು ಗಣೇಶ್‌.

Latest Videos
Follow Us:
Download App:
  • android
  • ios