Asianet Suvarna News Asianet Suvarna News

Dooradarshana: 80ರ ದಶಕದಲ್ಲಿ ಬದುಕಿದ ಅನುಭವ ಸಿಕ್ಕಿತು: ಅಯನಾ

ಸುಕೇಶ್‌ ಶೆಟ್ಟಿ ನಿರ್ದೇಶನ, ರಾಜೇಶ್‌ ಭಟ್‌ ನಿರ್ಮಾಣದ ಚಿತ್ರ ‘ದೂರದರ್ಶನ’. ಈ ಚಿತ್ರದ ಹಾಡೊಂದು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಚಿತ್ರದ ನಾಯಕಿ ಅಯನಾ ಸಿನಿಮಾ ಬಗ್ಗೆ ತಮ್ಮ ಹಿನ್ನೆಲೆ ಬಗ್ಗೆ ಇಲ್ಲಿ ಮಾತಾಡಿದ್ದಾರೆ.

Dooradarshana Film Actress Ayana Exclusive Interview gvd
Author
First Published Nov 14, 2022, 6:21 AM IST

ಪ್ರಿಯಾ ಕೆರ್ವಾಶೆ

* ನಿಮ್ಮ ಹಿನ್ನೆಲೆ?
ನಾನು ಸಾಫ್ಟ್‌ವೇರ್‌ ಇಂಜಿನಿಯರ್‌. ಭರತನಾಟ್ಯ ಡ್ಯಾನ್ಸರ್‌ ಕೂಡ ಹೌದು. ಎಂ ಎಸ್‌ ಸತ್ಯು ಅವರ ಥಿಯೇಟರ್‌ ಗ್ರೂಪ್‌ನಲ್ಲಿ ಮುಖ್ಯಪಾತ್ರಗಳಲ್ಲಿ ನಟಿಸುತ್ತಿದ್ದೆ. ಸತ್ಯು ಸರ್‌ ವೆಬ್‌ ಸೀರೀಸ್‌ ಮಾಡಬೇಕು ಅಂತ ನನ್ನ ಫೋಟೋಶೂಟ್‌ ಮಾಡಿಸಿದ್ರು. ಅದನ್ನು ಕಾಸರವಳ್ಳಿ ಅವರು ನೋಡಿ ಅವರಿಗದು ಇಷ್ಟವಾಗಿ ಅವರ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರಕ್ಕೆ ನನ್ನನ್ನು ತಗೊಂಡ್ರು. ಆ ಬಳಿಕ ‘ದೂರದರ್ಶನ’ ಸಿನಿಮಾದಲ್ಲಿ ಆಫರ್‌ ಬಂತು.

* ದೂರದರ್ಶನದ ಪಾತ್ರ, ಅದರ ತಯಾರಿ?
‘ದೂರದರ್ಶನ’ ಚಿತ್ರವೂ 1983ಯಲ್ಲಿ ನಡೆಯುವ ಕಥೆ. ನನ್ನದು ಹಳ್ಳಿ ಹುಡುಗಿ ಪಾತ್ರ. ಕೋವಿಡ್‌ ಸಮಯ 2 ತಿಂಗಳು ಮನೆಯಲ್ಲೇ ಕೂತು ರಿಹರ್ಸಲ್‌ ಮಾಡಿದ್ದು. ಕಾಸ್ಟ್ಯೂಮ್‌ನಿಂದ ಹಿಡಿದು ಪ್ರತಿಯೊಂದನ್ನೂ ನಾವೆಲ್ಲ ಟೀಮ್‌ನವರು ಕೂತು ಡಿಸ್‌ಕಸ್‌ ಮಾಡಿ ತಯಾರಿ ಮಾಡಿಕೊಳ್ಳುತ್ತಿದ್ದೆವು.

Kamblihula ನೀವು ಕನ್ನಡದ ಸಾಯಿಪಲ್ಲವಿ ಅಂದ್ರು; ನಾಯಕಿ ಅಶ್ವಿತಾ ಹೆಗ್ಡೆ ಮಾತು

* ಶೂಟಿಂಗ್‌ ಅನುಭವ ಹೇಗಿತ್ತು?
ಈ ಸಿನಿಮಾದಲ್ಲಿರುವ ಇತರರು ನಟನೆಯಲ್ಲಿ ನನಗಿಂತ ಹೆಚ್ಚು ಎಕ್ಸ್‌ಪೀರಿಯನ್ಸ್‌ ಇದ್ದವರು. ಪೃಥ್ವಿ ಅಂಬರ್‌, ಹರಿಣಿ ಶ್ರೀಕಾಂತ್‌ ಸೇರಿ ಎಲ್ಲರಿಂದ ಬಹಳ ಕಲಿಯೋದಿತ್ತು. ಇದು ಒಳ್ಳೆ ಅನುಭವ. 80ರ ದಶಕದ ಸೆಟ್‌ ಹಾಕಲಾಗಿತ್ತು. ಆ ವಾತಾವರಣ ಬಹಳ ಸಹಜವಾಗಿತ್ತು. 80ರ ದಶಕದಲ್ಲೇ ಬದುಕಿದ ಅನುಭವ ಸಿಕ್ಕಿತು. ಆ ಸೆಟ್‌, ಕಾಸ್ಟ್ಯೂಮ್‌, ಮಾತಾಡೋ ರೀತಿ ಎಲ್ಲ 80ರ ದಶಕದಲ್ಲಿದ್ದ ಹಾಗಿತ್ತು.

* ಆರ್ಟ್‌ ಸಿನಿಮಾ, ಕಮರ್ಷಿಯಲ್‌ ಸಿನಿಮಾ ನಡುವಿನ ಸೂಕ್ಷ್ಮ ವ್ಯತ್ಯಾಸ ಗಮನಿಸಿದಿರಾ?
ಈ ಎರಡು ಪ್ರಕಾರಗಳೂ ಸಿನಿಮಾ ನೋಡುವವರಿಗೆ ಬಹಳ ಡಿಫರೆಂಟ್‌ ಅನಿಸುತ್ತೆ. ಆದರೆ ನಟಿಯಾಗಿ ನನಗೆ ಅಂಥಾ ವ್ಯತ್ಯಾಸ ಅನಿಸಿಲ್ಲ. ಆರ್ಟ್‌ ಸಿನಿಮಾದಲ್ಲಿ ಶಬ್ದ, ಪ್ರಕೃತಿಗೆ, ಫ್ರೇಮಿಂಗ್‌ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡ್ತಾರೆ. ಮುಖದ ಸೂಕ್ಷ್ಮ ಚಲನೆಯೂ ಮುಖ್ಯವಾಗುತ್ತೆ. ಅದೇ ಕಮರ್ಷಿಯಲ್‌ ಸಿನಿಮಾದಲ್ಲಿ ಮನರಂಜನೆಗೆ ಪ್ರಾಧಾನ್ಯತೆ. ಆ್ಯಕ್ಟರ್‌ ಆಗಿ ನನಗೆ ಎರಡೂ ಪ್ರಕಾರಗಳಲ್ಲಿ ನಟಿಸುವ ಆಸೆ. ಭವಿಷ್ಯದಲ್ಲಿ ಎರಡೂ ಬಗೆಯ ಚಿತ್ರಗಳಲ್ಲಿ ನಟಿಸುವೆ.

* ಚಿತ್ರರಂಗದಲ್ಲಿ ಹೀರೋಗಿರುವ ಪ್ರಾಧಾನ್ಯತೆ ಹೀರೋಯಿನ್‌ಗಿದೆಯಾ?
ಈ ಪ್ರಶ್ನೆಗೆ ಹೀಗೇ ಅಂತ ಉತ್ತರ ಕೊಡೋದು ಕಷ್ಟ. ಆದರೆ ಕನ್ನಡದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬಂದು ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ಬಂತು. ಶ್ರದ್ಧಾ ಶ್ರೀನಾಥ್‌ ನಟನೆಯ ‘ಯೂ ಟರ್ನ್‌’ನಂಥಾ ಸಿನಿಮಾ ಗಳಿಕೆ ಮತ್ತು ಗಮನ ಸೆಳೆಯೋದ್ರಲ್ಲಿ ಸೈ ಅನಿಸಿಕೊಂಡಿತ್ತಲ್ವಾ. ಬೇರೆ ಭಾಷೆಯವರೂ ಇದನ್ನು ಮೆಚ್ಚಿಕೊಂಡರು. ನಾಯಕಿಯರಿಗೆ ನಾಯಕರಷ್ಟೇ ಪ್ರಯಾರಿಟಿ ಇದೆ.

Gandhada Gudi ಸಿನಿಮಾ ಬಗ್ಗೆ ಪುನೀತ್ ಪತ್ನಿ ಮಾತು: ಮೊದಲ ಬಾರಿಗೆ ಅಪ್ಪು ಬಗ್ಗೆ ಸಂದರ್ಶನ ನೀಡಿದ ಅಶ್ವಿನಿ

* ಇಂಥಾ ಪಾತ್ರ ಮಾಡ್ಬೇಬೇಕು ಅನ್ನೋ ಕನಸು?
ನನಗೆ ಐತಿಹಾಸಿಕ ಪಾತ್ರ ಮಾಡೋ ಆಸೆ. ರಮ್ಯಾ ನನ್ನ ಫೇವರಿಟ್‌ ನಟಿ. ಸಿನಿಮಾಕ್ಕೆ ಇತಿಹಾಸದ ಟಚ್‌ ಇದ್ರೆ ಸಖತ್‌ ಆಗಿರುತ್ತೆ ಅಂತ ಅನಿಸುತ್ತೆ. ಈಗ ‘ಪೊನ್ನಿಯಿನ್‌ ಸೆಲ್ವನ್‌’ ಸಿನಿಮಾ ಬಂತಲ್ವಾ, ಆ ಥರ ಸಿನಿಮಾಗಳಲ್ಲಿ ನಟಿಸೋ ಆಸೆ.

Follow Us:
Download App:
  • android
  • ios