Asianet Suvarna News Asianet Suvarna News

ಸಿನಿಮಾದುದ್ದಕ್ಕೂ ಅಪ್ಪು ಸಾರ್‌ ಜೊತೆ ನಟಿಸಿದ್ದು ಮರೆಯಲಾಗದ ಅನುಭವ : ಡಾರ್ಲಿಂಗ್‌ ಕೃಷ್ಣ

ಪುನೀತ್ ರಾಜ್‌ಕುಮಾರ್, ತಮಿಳು ನಟ ಪ್ರಭುದೇವ ಅತಿಥಿ ಪಾತ್ರದಲ್ಲಿ ನಟಿಸಿರುವ ಚಿತ್ರ ಲಕ್ಕಿಮ್ಯಾನ್. ಇದರಲ್ಲಿ ನಾಯಕ ಡಾರ್ಲಿಂಗ್ ಕೃಷ್ಣ, ನಾಯಕಿ ಸಂಗೀತಾ ಶೃಂಗೇರಿ. ಸೆ.9ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಲವ್ ಮಾಕ್ಟೇಲ್ 2' ಬಳಿಕ ಕೃಷ್ಣ ಅವರಿಗಿದು ನಿರೀಕ್ಷೆಯ ಸಿನಿಮಾ. ಅವರಲ್ಲಿ ಲಕ್ಕಿಮ್ಯಾನ್ ಅನುಭವಗಳನ್ನು ತೆರೆದಿಟ್ಟಿದ್ದಾರೆ.

Darling Krishna luckyman interview recalls memories with Puneeth Rajkumar vcs
Author
Bengaluru, First Published Aug 22, 2022, 10:04 AM IST

ಪ್ರಿಯಾ ಕೆರ್ವಾಶೆ

ರಿಮೇಕ್‌ ಸಿನಿಮಾದಲ್ಲಿ ಮಾಡುವಾಗ ಒರಿಜಿನಲ್‌ ಪಾತ್ರ ನೋಡ್ತೀರಾ?

ನಮಗೆ ಅದೊಂದು ರೆಫರೆನ್ಸ್‌. ಕಥೆ ಮಾಡ್ಕೊಂಡಾಗ ಅದನ್ನು ಶೇ.100 ತೆರೆ ಮೇಲೆ ತರಲು ಪ್ರಯತ್ನಿಸೋದು ಪ್ರತೀ ನಟನ ಜವಾಬ್ದಾರಿ. ನಾವು ಎಷ್ಟುಡೀಟೇಲಾಗಿ ನೋಡ್ತೀವಿ ಅಷ್ಟುನಮಗೆ ಕಥೆ ಅರ್ಥ ಆಗುತ್ತೆ. ನಾನು ಮೂಲ ಪಾತ್ರ ನೋಡ್ತೀನಿ. ಅದನ್ನು ನನ್ನ ಶೈಲಿಗೆ ಮಾರ್ಪಡಿಸುತ್ತೇನೆ.

ಸ್ವಮೇಕ್‌ ರೀಮೇಕ್‌ ಎರಡರಲ್ಲೂ ನಟಿಸಿದವರು ನೀವು. ನಟನೆಯಲ್ಲಿ ಇವರೆಡರ ವ್ಯತ್ಯಾಸವನ್ನು ಹೇಗೆ ಗುರುತಿಸುತ್ತೀರಿ?

ಒಬ್ರು ಬಂದು ಕತೆ ಹೇಳ್ತಾರೆ ಅಂದುಕೊಳ್ಳಿ. ಸ್ವಮೇಕ್‌ನಲ್ಲಿ ಅದನ್ನು ನಾವು ಕಲ್ಪಿಸಿಕೊಳ್ತೀವಿ. ರಿಮೇಕ್‌ನಲ್ಲಿ ಕಣ್ಣಾರೆ ಕಾಣ್ತೀವಿ. ಮೊದಲನೆಯದರಲ್ಲಿ ನಾವು ವಿಷ್ಯವಲೈಸೇಶನ್‌ ಮಾಡ್ಬೇಕಾಗುತ್ತೆ, ಎರಡನೆಯದರಲ್ಲಿ ಕತೆ ವಿಷ್ಯುವಲೈಸ್‌ ಆಗಿ ಬರುತ್ತೆ.

Darling Krishna luckyman interview recalls memories with Puneeth Rajkumar vcs

ಇದು ಆಗ್ರ್ಯಾನಿಕ್‌ ನಟನೆಯನ್ನು ಬ್ಲಾಕ್‌ ಮಾಡಲ್ವಾ?

ಇಲ್ಲ. ಪಾತ್ರದ ಬಗ್ಗೆ ಸ್ಪಷ್ಟತೆ ಸಿಗುತ್ತೆ. ಹೀಗೆ ಅರ್ಥವಾದ ಪಾತ್ರವನ್ನು ನಮ್ಮದಾಗಿಸಿಕೊಂಡು ನಟಿಸಬೇಕು.

ಈ ಚಿತ್ರದಲ್ಲಿ ಪುನೀತ್‌ ದೇವರ ಪಾತ್ರದಲ್ಲಿ ನಟಿಸಿದ್ದಾರೆ, ಪ್ರಭುದೇವ ಡ್ಯಾನ್ಸ್‌ ಮಾಡಿದ್ದಾರೆ. ಇಂಥಾ ವಿಶೇಷತೆಗಳುಳ್ಳ ಚಿತ್ರದಲ್ಲಿ ನಟಿಸಿದ ಅನುಭವ?

ಅಪ್ಪು ಸಾರ್‌ ಜೊತೆಗೆ ನಟಿಸೋದು ನನಗೆ ಹೊಸತಲ್ಲ. ನನ್ನ ಕೆರಿಯರ್‌ ಶುರುವಾಗಿದ್ದೇ ಅವರ ‘ಜಾಕಿ’ ಚಿತ್ರದ ಮೂಲಕ. ಅದರಲ್ಲಿ ನಾನು ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿದ್ದೆ. ಮೂರು ಸಿನಿಮಾ ಅವರ ಜೊತೆಗೆ ಮಾಡಿದ್ದೀನಿ. ಆದರೆ ನಾನು ಲೀಡ್‌ ಪಾತ್ರ ಮಾಡುತ್ತಿರುವ ಚಿತ್ರದಲ್ಲಿ ಅವರ ಗೆಸ್ಟ್‌ ಎಪಿಯರೆನ್ಸ್‌ ಬಹಳ ವಿಶೇಷ ಆಗುತ್ತೆ. ಜೊತೆಗೆ ಅವರು ಅತಿಥಿ ಪಾತ್ರದಲ್ಲಿ ನಟಿಸುತ್ತಿರುವ ಮೊದಲ ಸಿನಿಮಾವಿದು. ಅಪ್ಪು ಸಾರ್‌ ನಾನು ತುಂಬ ಇಷ್ಟಪಡುವ ನಟ. ಈ ಚಿತ್ರದುದ್ದಕ್ಕೂ ನಮ್ಮಿಬ್ಬರದ್ದು ಮಾತು, ದೃಶ್ಯಗಳಿವೆ. ಅದು ಬಹಳ ಖುಷಿ ಆಯ್ತು. ಮನಃಪೂರ್ವಕವಾಗಿ ಅಭಿನಯಿಸಿದ ತೃಪ್ತಿ ಸಿಕ್ಕಿತು. ಪ್ರಭುದೇವ ಅವರ ಡ್ಯಾನ್ಸ್‌ ಕೊನೆಯಲ್ಲಿ ಬರುತ್ತೆ. ಅದೂ ಬಹಳ ಚೆನ್ನಾಗಿದೆ.

Puneeth Ranjumar; ಪತಿಯ ಸಿನಿಮಾ ಟೀಸರ್ ಲಾಂಚ್ ಮಾಡಿದ ಅಶ್ವಿನಿ ಪುನೀತ್‌ರಾಜ್ ಕುಮಾರ್

ನಿಮ್ಮ ಪಾತ್ರದ ಬಗ್ಗೆ ಹೇಳೋದಾದ್ರೆ?

ತುಂಬ ಅದ್ಭುತವಾದ ಪಾತ್ರ. ನಗಿಸ್ತೀನಿ, ಅಳಿಸ್ತೀನಿ, ಮನರಂಜನೆ ಕೊಡ್ತೀನಿ. ಇದು ಲವ್‌ ಮಾಕ್‌ಟೇಲ್‌ನ ಪಾತ್ರಕ್ಕಿಂತ ಭಿನ್ನ. ಇದರಲ್ಲಿ ಫನ್‌ ಇದೆ. ಮಜಾ ಕೊಡುತ್ತೆ. ಈ ಪಾತ್ರದ ನಿರ್ವಹಣೆ ಚಾಲೆಂಜಿಂಗ್‌ ಆಗಿತ್ತು. ಪ್ರತೀ ಸೀನ್‌ಅನ್ನೂ ತುಂಬಾ ಎನ್‌ಜಾಯ್‌ ಮಾಡಿ ಮಾಡಿದ್ದೇನೆ. ಚಿತ್ರ ಅಷ್ಟುಅದ್ಭುತವಾಗಿದೆ.

ಸೂಪರ್‌ ಹಿಟ್‌ ಸಿನಿಮಾ ಕೊಟ್ಟನಿರ್ದೇಶಕ, ಹೀರೋ ನೀವು. ನಾಗೇಂದ್ರಪ್ರಸಾದ್‌ ಡೈರೆಕ್ಷನ್‌ ಹೇಗನಿಸಿತು?

ರಿಮೇಕ್‌ ಸಿನಿಮಾ ಅಂದಾಗ ಇದರ ಕತೆ ಹೇಗಿದೆ ಅಂತ ನಮಗೆ ಗೊತ್ತಿರುತ್ತೆ. ಅದನ್ನು ಅರಿತು ನಮ್ಮತನದಲ್ಲಿ ನಟಿಸುತ್ತಿರುತ್ತೀವಿ. ಆದರೆ ನಿರ್ದೇಶಕರು ರಿಮೇಕ್‌ ಸಿನಿಮಾ ನೋಡಿರ್ತಾರೆ. ಆ ಹೀರೋ ಪಾತ್ರ ತಲೆಯಲ್ಲಿ ತುಂಬಿರುತ್ತೆ. ಇಲ್ಲಿ ನಾನು ಪಾತ್ರವನ್ನು ನನ್ನ ಥರ ಮಾಡಿದಾಗ ಅವರಿಗೆ ಈ ಪಾತ್ರ ತಾನಂದುಕೊಂಡ ಹಾಗೆ ಬರ್ತಾ ಇಲ್ಲ

ಅನಿಸುತ್ತಿರುತ್ತೆ. ನಾನು ಆರಂಭದಲ್ಲೇ ಈ ಪಾತ್ರವನ್ನು ನನ್ನ ಸ್ಟೈಲಲ್ಲಿ ಮಾಡ್ತೀನಿ ಅಂದಿದ್ದೆ. ಶುರು ಶುರುವಲ್ಲಿ ಅವರಿಗೆ ಕೊಂಚ ಗೊಂದಲವಾಯ್ತು. ಆಮೇಲೆ ಅವರೂ ಎನ್‌ಜಾಯ್‌ ಮಾಡಲಾರಂಭಿಸಿದರು.

ಲಕ್ಕಿಮ್ಯಾನ್‌ನಲ್ಲಿ ದೇವರಾದ ಪುನೀತ್; ಅಪ್ಪು ನೋಡಿ ಫ್ಯಾನ್ಸ್ ಫುಲ್ ಖುಷ್

ನಾಳೆ ಲಿರಿಕಲ್‌ ವೀಡಿಯೋ ರಿಲೀಸ್‌

‘ಲಕ್ಕಿಮ್ಯಾನ್‌’ ಚಿತ್ರದ ಅಪ್ಪು ಅವರನ್ನೊಳಗೊಂಡ ‘ಬಾರೋ ರಾಜ’ ಲಿರಿಕಲ್‌ ವೀಡಿಯೋ ನಾಳೆ (ಆ.23) ಬಿಡುಗಡೆಯಾಗಲಿದೆ. ಎಂಆರ್‌ಟಿ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಈ ವೀಡಿಯೋ ನೋಡಬಹುದು.

Follow Us:
Download App:
  • android
  • ios