ವಿಶ್ವಕ್ಕೆ ಕೊರೋನಾ ಹರಡಿದ ಚೀನಾ ಭಾರಿ ಬೆಲೆ ತೆರಬೇಕಿದೆ; ಎಚ್ಚರಿಕೆ ನೀಡಿದ ಟ್ರಂಪ್!
ಕೊರೋನಾ ವೈರಸ್ ಸೃಷ್ಟಿಗೆ ಚೀನಾ ನೇರ ಕಾರಣ ಎಂದು ವಾಗ್ದಾಳಿ ನಡೆಸಿದ್ದ ಅಮೆರಿಕ ಅಧ್ಯಕ್ಷ ಇದೀಗ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ವಿಶ್ವಕ್ಕೆ ಕೊರೋನಾ ಹರಡಿದ ಚೀನಾ ದುಬಾರಿ ದಂಡ ತೆರಬೇಕು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ವಾಶಿಂಗ್ಟನ್(ಅ.08): ಕೊರೋನಾ ವೈರಸ್ ದೃಢಪಟ್ಟ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇದೀಗ ಚೀನಾ ವಿರುದ್ಧ ಮತ್ತೆ ಕಂಡಾಮಂಡಲವಾಗಿದ್ದಾರೆ. ವಿಶ್ವಕ್ಕೆ ಕೊರೋನಾ ವೈರಸ್ ಹರಡಿದ ಚೀನಾ ಭಾರಿ ದಂಡ ತೆರಬೇಕಾಗಿದೆ ಎಂದು ಎಚ್ಚರಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಮೆಲೇನಿಯಾಗೆ ಕೊರೋನಾ ಪಾಸಿಟಿವ್..!...
ಕೊರೋನಾ ವೈರಸ್ ವಕ್ಕರಿಸಿದ ಬೆನ್ನಲ್ಲೇ ಟ್ರಂಪ್, ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ವುಹಾನ್ ವೈರಸ್, ಚೀನಾ ವೈರಸ್, ಚೀನಾ ಉದ್ದೇಶ ಪೂರ್ವಕವಾಗಿ ವೈರಸ್ ಸೃಷ್ಟಿಸಿದೆ ಎಂದು ಟ್ರಂಪ್ ಆರೋಪಿಸಿದ್ದರು. ಟ್ರಂಪ್ ಆರೋಪವನ್ನು ಚೀನಾ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ತಳ್ಳಿಹಾಕಿತ್ತು. ಇದಾದ ಬಳಿಕ ಚೀನಾ ಕುತಂತ್ರವನ್ನು ಬಯಲು ಮಾಡಿದ ಟ್ರಂಪ್ ಇದೀಗ ಚೀನಾಗೆ ಮುಂಬರವು ಸಂಕಷ್ಟದ ಸುಳಿವು ನೀಡಿದ್ದಾರೆ.
2017ರಲ್ಲಿ ಅಮೆರಿಕಕ್ಕಿಂತ ಭಾರತದಲ್ಲೇ ಹೆಚ್ಚು ತೆರಿಗೆ ಕಟ್ಟಿದ್ದ ಅಧ್ಯಕ್ಷ ಟ್ರಂಪ್!.
ಇದು ಚೀನಾ ಮಾಡಿದ ಅತೀ ದೊಡ್ಡ ತಪ್ಪು, ವಿಶ್ವಕ್ಕೆ ಚೀನಾ ಮಾಡಿದ ದ್ರೋಹವಿದು. ವಿಶ್ವ ಸಂಸ್ಥೆಗೂ ಚೀನಾ ಮೋಸ ಮಾಡಿದೆ. ಸುಳ್ಳುಗಳನ್ನು ಹೇಳುತ್ತಾ ವಿಶ್ವ ಸಂಸ್ಥೆಯನ್ನು ನಂಬಿಸಿದೆ. ಈ ಮೂಲಕ ಕೊರೋನಾದ ಗಂಭೀರತೆಯನ್ನು ವಿಶ್ವಕ್ಕೆ ತಿಳಿಸದೇ ಮುಚ್ಚಿಟ್ಟಿತು. ಕೊರೋನಾ ವಿಚಾರದಲ್ಲಿ ಚೀನಾದಲ್ಲಿ ಪಾರದರ್ಶಕತೆ ಇರಲಿಲ್ಲ. ಇದರಿಂದ ಲಕ್ಷಾಂತರ ಜನರು ಪ್ರಾಣ ಬಿಡುವಂತಾಯಿತು ಎಂದು ಟ್ರಂಪ್ ಹೇಳಿದ್ದಾರೆ.
ಚೀನಾ ಕಾರಣ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ವಿಶ್ವದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ. ಜನರು ಒಂದು ಹೊತ್ತಿನ ಆಹಾರಕ್ಕೂ ಪರದಾಡುವಂತಾಯಿತು. ಇದು ಚೀನಾ ಮಾಡಿದ ಕುತಂತ್ರ. ಚೀನಾ ರೀತಿಯ ಕುತಂತ್ರ ಮಾಡುತ್ತಿರುವುದು ಇದೇ ಮೊದಲಲ್ಲ. ಹೀಗಾಗಿ ಚೀನಾದ ನಡೆಯಿಂದ ಆಶ್ಚರ್ಯವಿಲ್ಲ ಎಂದು ಟ್ರಂಪ್ ಆರೋಪಿಸಿದ್ದಾರೆ.