2017ರಲ್ಲಿ ಅಮೆರಿಕಕ್ಕಿಂತ ಭಾರತದಲ್ಲೇ ಹೆಚ್ಚು ತೆರಿಗೆ ಕಟ್ಟಿದ್ದ ಅಧ್ಯಕ್ಷ ಟ್ರಂಪ್!
2016 ಮತ್ತು ಅದರ ಮುಂದಿನ ವರ್ಷ ತಲಾ 750 ಡಾಲರ್ (ಅಂದಾಜು 56000 ರು.) ನಷ್ಟುಮಾತ್ರ ಆದಾಯ ತೆರಿಗೆ | 2017ರಲ್ಲಿ ಅಮೆರಿಕಕ್ಕಿಂತ ಭಾರತದಲ್ಲೇ ಹೆಚ್ಚು ತೆರಿಗೆ ಕಟ್ಟಿದ್ದ ಅಧ್ಯಕ್ಷ ಟ್ರಂಪ್!
ವಾಷಿಂಗ್ಟನ್(ಸೆ.29): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾವು ಅಧಿಕಾರಕ್ಕೆ ಬಂದ ವರ್ಷವಾದ 2016 ಮತ್ತು ಅದರ ಮುಂದಿನ ವರ್ಷ ತಲಾ 750 ಡಾಲರ್ (ಅಂದಾಜು 56000 ರು.) ನಷ್ಟುಮಾತ್ರ ಆದಾಯ ತೆರಿಗೆ ಪಾವತಿಸಿದ್ದರು.
ಟ್ರಂಪ್ ಜತೆ ಸೇರಿಕೊಂಡ ಪುಟಿನ್, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಹೆಸರು
ಆದರೆ ಅದೇ ವರ್ಷ ಅವರು ಭಾರತದಲ್ಲಿ 1 ಕೋಟಿ ರು.ಗೂ ಹೆಚ್ಚಿನ ತೆರಿಗೆ ಪಾವತಿಸಿದ್ದರು ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ವರದಿ ಮಮಾಡಿದೆ. ಅಲ್ಲದೆ ಅಧ್ಯಕ್ಷರಾಗುವುದಕ್ಕೂ ಮೊದಲ 15 ವರ್ಷಗಳ ಅವಧಿಯಲ್ಲಿ 10 ವರ್ಷ ಯಾವುದೇ ತೆರಿಗೆಯನ್ನೇ ಪಾವತಿಸಿಲ್ಲ. ಇದಕ್ಕೆ ಕಾರಣವೆಂದರೆ ಅವರು ತಾವು ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೆ ಎಂಬ ಹೆಚ್ಚು ಮಾಹಿತಿ ನೀಡಿದ್ದು ಎಂಬ ಗಂಭೀರ ಆರೋಪವನ್ನು ಪತ್ರಿಕೆ ಮಾಡಿದೆ.
ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ; ಭಾರತ-ಅಮೆರಿಕ ಬಾಂಧವ್ಯ ತೆರೆದಿಟ್ಟ ಮೋದಿ ಬರ್ತಡೆ
ಟ್ರಂಪ್ ಒಡೆತನದ ಕಂಪನಿಗಳು ಭಾರತದಲ್ಲೂ ಕಾರ್ಯನಿರ್ವಹಿಸುತ್ತಿದ್ದು ಅವು ಲೈಸೆನ್ಸ್ ಮಾರಾಟದ ಮೂಲಕ 17 ಕೋಟಿ ರು. ಆದಾಯಗಳಿಸಿದ್ದರು ಎಂದು ಪತ್ರಿಕೆ ವರದಿ ಮಾಡಿದೆ. ಆದರೆ ಈ ಆರೋಪಗಳನ್ನು ಟ್ರಂಪ್ ತಳ್ಳಿಹಾಕಿದ್ದಾರೆ. ‘ನಾನು ನಿಜವಾಗಿಯೂ ತೆರಿಗೆಯನ್ನು ಕಟ್ಟಿದ್ದೇನೆ. ಶೀಘ್ರದಲ್ಲೇ ಅವುಗಳನ್ನು ಬಹಿರಂಗಪಡಿಸುತ್ತೇನೆ’ ಎಂದು ಸುದ್ದಿಗೋಷ್ಠಿಯ ವೇಳೆ ತಿಳಿಸಿದ್ದಾರೆ.